ಬ್ರೇಕಿಂಗ್ ನ್ಯೂಸ್
31-01-25 09:49 pm Mangaluru Correspondent ಕರಾವಳಿ
ಉಳ್ಳಾಲ, ಜ.31: ಉಳ್ಳಾಲ ನಗರಸಭೆಯಲ್ಲಿ ಗ್ರಂಥಾಲಯ ನಿರ್ಮಾಣಕ್ಕೆಂದು ಹಳೆಯ ಕಟ್ಟಡ ಕೆಡವಿದ ಸಂದರ್ಭದಲ್ಲಿ ದ್ವಿಚಕ್ರ ವಾಹನಗಳ ಪಾರ್ಕಿಂಗ್ ಗೆಂದು ಅಳವಡಿಸಲಾಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಸಿಲಿಕಾನ್ ಶೀಟ್ ಗಳನ್ನ ಕಳವುಗೈದ ಪ್ರಕರಣವನ್ನ ನಗರಸಭೆ ಆಡಳಿತವು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದು, ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ವಿಪಕ್ಷ ಸದಸ್ಯರ ಗದ್ದಲಕ್ಕೆ ಮಣಿದ ನಗರಸಭೆ ಆಡಳಿತವು ಶೀಟ್ ಕಳವು ಪ್ರಕರಣದ ತನಿಖೆಗೆ ಏಳು ನಗರಸದಸ್ಯರನ್ನೊಳಗೊಂಡ ಸದನ ಸಮಿತಿಯನ್ನು ರಚಿಸಿದೆ.
ಕಳೆದ ನವೆಂಬರ್ ತಿಂಗಳಲ್ಲಿ ನಗರಸಭೆ ಆವರಣದಲ್ಲಿ ಅಳವಡಿಸಲಾಗಿದ್ದ ಲಕ್ಷಾಂತರ ರೂಪಾಯಿ ಬೆಲೆಬಾಳುವ ಸಿಲಿಕಾನ್ ಶೀಟ್ ಮತ್ತು ಬೃಹತ್ ಗಾತ್ರದ ಆಂಗ್ಲರ್ ಗಳನ್ನ ಯಾವುದೇ ಟೆಂಡರ್ ಪ್ರಕ್ರಿಯೆ ನಡೆಸದೆ ಕದ್ದೊಯ್ಯಲಾಗಿತ್ತು. ಉಳ್ಳಾಲ ನಗರಸಭೆಯಲ್ಲಿ ಈ ಹಿಂದೆ ನಡೆದಿದ್ದ ಎರಡು ಸಾಮಾನ್ಯ ಸಭೆಯಲ್ಲೂ ಶೀಟ್ ಕಳವಿನ ವಿಚಾರ ಪ್ರಸ್ತಾಪಗೊಂಡು ಪ್ರಕರಣದ ತನಿಖೆಗೆ ಸದನ ಸಮಿತಿ ನೇಮಿಸುವಂತೆ ವಿಪಕ್ಷ ಸದಸ್ಯರು ಆಗ್ರಹಿಸಿದ್ದರು.
ಗುರುವಾರ ನಡೆದ ಸಾಮಾನ್ಯ ಸಭೆಯಲ್ಲೂ ಶೀಟ್ ಕಳವು ಪ್ರಕರಣದ ವಿಚಾರವನ್ನ ಬಿಜೆಪಿ ವಿಪಕ್ಷ ನಾಯಕಿ ರೇಷ್ಮ ಅವರು ಪ್ರಸ್ತಾಪಿಸಿದ್ದಾರೆ. ನಗರಸಭೆಗೆ ಸೇರಿರುವ ಅಮೂಲ್ಯ ಸೊತ್ತುಗಳನ್ನ ಕದ್ದೊಯ್ದವರು ಯಾರು? ಅದು ಎಲ್ಲಿದೆ ಎಂದು ಪ್ರಶ್ನಿಸಿದರು. ವಿಪಕ್ಷ ನಾಯಕಿಯ ಪ್ರಶ್ನೆಗೆ ಉತ್ತರಿಸಿದ ನಗರಸಭೆ ಪೌರಾಯುಕ್ತ ಮತ್ತಡಿ, ಸೀಲಿಂಗ್ ಶೀಟು ಕಳವಾಗಿಲ್ಲ. ಕೊಂಡು ಹೋದವರು ಅದನ್ನ ಹಾಗೆಯೇ ವಾಪಸ್ ತಂದಿಟ್ಟಿದ್ದಾರೆಂದು ಪ್ರತ್ಯುತ್ತರಿಸಿ ಅಡ್ಡಗೋಡೆಯಲ್ಲಿ ದೀಪ ಇಟ್ಟಿದ್ದಾರೆ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಸದಸ್ಯೆ ನಮಿತಾ ಗಟ್ಟಿ ಹಾಗೂ ಎಸ್ಡಿಪಿಐನ ಅಸ್ಗರ್ ಅವರು ಲಕ್ಷಾಂತರ ಮೌಲ್ಯದ ಸಿಲಿಕಾನ್ ಸಿಲಿಂಗ್ ಶೀಟುಗಳನ್ನ ಟೆಂಡರ್ ಆಗದೇ ಕೊಂಡು ಹೋದವರು ಯಾರು?ಇನ್ನೂ ಸಮಿತಿ ರಚಿಸಿ ಪ್ರಕರಣದ ತನಿಖೆ ಯಾಕೆ ನಡೆಸಲಿಲ್ಲ ಎಂದು ಪ್ರಶ್ನಿಸಿದಾಗ ಸಭೆಯಲ್ಲಿ ವ್ಯಾಪಕ ಗದ್ದಲ ಉಂಟಾಯಿತು.
ಈ ವೇಳೆ ನಗರಸಭೆಯ ಕಿರಿಯ ಅಭಿಯಂತರ ತುಳಸಿದಾಸ್ ಅವರು ತಗಡು ಶೀಟು ಒಂದು ಕಟ್ಟಡದಲ್ಲಿ ಇದೆ. ಸುರಕ್ಷತೆ ದೃಷ್ಟಿಯಿಂದ ಒಂದೆಡೆ ಶೇಖರಿಸಿ ಇಟ್ಟಿದ್ದೇವೆ. ನಗರಸಭೆ ಸೊತ್ತನ್ನು ಯಾರೂ ಕೊಂಡು ಹೋಗಿಲ್ಲ ಎಂದು ಸಬೂಬು ನೀಡಲು ಯತ್ನಿಸಿದರು. ಕಿರಿಯ ಅಭಿಯಂತರರ ಸಬೂಬಿಗೂ ಮಣಿಯದ ವಿಪಕ್ಷ ಸದಸ್ಯರು ಕಳವಾದ ಸೊತ್ತಿನ ಮೌಲ್ಯ ಆರು ಲಕ್ಷದ್ದಾಗಿದೆ. ಇದನ್ನು ಆಡಳಿತಾರೂಢ ಪಕ್ಷದ ಮಹಿಳಾ ಸದಸ್ಯೆ ಕೊಂಡು ಹೋಗಿರುವುದಾಗಿ ಆರೋಪಿಸಿದರಲ್ಲದೇ ತನಿಖೆಗಾಗಿ ಸಮಿತಿ ರಚಿಸಲೇಬೇಕೆಂದು ಪಟ್ಟು ಹಿಡಿದರು.
ಗದ್ದಲಕ್ಕೆ ಮಣಿದ ಆಡಳಿತ, ತನಿಖೆಗೆ ಸಮಿತಿ ರಚನೆ ;
ಸೀಲಿಂಗ್ ಶೀಟು ಕಳ್ಳತನ ಪ್ರಕರಣದ ತನಿಖೆಗೆ ಸದನ ಸಮಿತಿ ರಚನೆ ಮಾಡುವಂತೆ ವಿಪಕ್ಷ ಸದಸ್ಯರು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಆಡಳಿತ ಮತ್ತು ವಿಪಕ್ಷ ಸದಸ್ಯರನ್ನೊಳಗೊಂಡ ಏಳು ಮಂದಿಯ ಸದನ ಸಮಿತಿಯನ್ನ ರಚಿಸಲಾಯಿತು. ಆಡಳಿತಾರೂಢ ಕಾಂಗ್ರೆಸ್ ಪಕ್ಷದ ನಗರ ಸದಸ್ಯ ಅಯೂಬ್ ಮಂಚಿಲ ಅವರು ಸದನ ಸಮಿತಿ ಸದಸ್ಯರ ಹೆಸರು ಸೂಚಿಸಿದರು.
ಸುಪ್ರೀಂ ಕೋರ್ಟಿಗೆ ಹೋಗ್ತೇನೆ, ಜೆಡಿಎಸ್ ಸದಸ್ಯ ಎಚ್ಚರಿಕೆ ;
ಜೆಡಿಎಸ್ ನಗರ ಸದಸ್ಯ ದಿನಕರ್ ಉಳ್ಳಾಲ್ ಮಾತನಾಡಿ ಪ್ರಕರಣದ ತನಿಖೆಗೆ ಸದನ ಸಮಿತಿ ರಚನೆ ಆಗಿದೆ. ಸಮಿತಿ ಸದಸ್ಯರು ಕಳವು ಪ್ರಕರಣದ ತನಿಖೆಯನ್ನ ಹೇಗೆ, ಯಾವ ರೀತಿ ಮಾಡುತ್ತಾರೆ ಎಂದು ನೋಡುತ್ತೇನೆ. ನಗರಸಭೆಯ ಸೀಲಿಂಗ್ ಶೀಟ್ ಕಳವು ಪ್ರಕರಣದ ವಿಚಾರದಲ್ಲಿ ನ್ಯಾಯಕ್ಕಾಗಿ ನಾನು ಸುಪ್ರೀಂ ಕೋರ್ಟ್ ವರೆಗೆ ಹೋಗುತ್ತೇನೆಂದು ದಿನಕರ ಉಳ್ಳಾಲ್ ಸಭೆಯಲ್ಲಿ ಎಚ್ಚರಿಸಿದರು.
Mangalore Steel sheets stealing case at Ullal Panchyath, committee formed after fight among members
18-02-25 10:25 pm
Bangalore Correspondent
Mysuru Suicide, online Gambling, Betting: ಐಪಿ...
18-02-25 02:59 pm
Mandya crime, Boy Shoot brothers: ಕಳ್ಳ ಪೊಲೀಸ್...
17-02-25 01:38 pm
Amazon Web Services, Bangalore, Adarsh Builde...
17-02-25 10:43 am
ಸಂಘ ಪರಿವಾರದವರು ಬುರ್ಖಾ ಹಾಕಿಕೊಂಡು ಗಲಾಟೆ ಮಾಡೋಕೆ...
16-02-25 06:44 pm
18-02-25 10:49 pm
HK News Desk
Hindu idols Bishop House, Pala diocese, Kera...
18-02-25 10:45 pm
DK Shivakumar, Kasaragod, congress: ಕೇರಳದ ಕಾಂ...
17-02-25 10:42 pm
New Rules 2025; FASTag ಹೊಸ ನಿಯಮ ಜಾರಿ ; ಬ್ಯಾ...
17-02-25 08:23 pm
Delhi Railway station stampede, 18 Dead: ದೆಹಲ...
16-02-25 01:04 pm
18-02-25 12:36 pm
Mangalore Correspondent
Dinesh Gundurao, Munner katipalla, Sand Mafia...
17-02-25 10:56 pm
Sterlite Power, Protest, 400kv Power, Mangalo...
17-02-25 09:20 pm
Mangalore, Dinesh Gundurao, Mines Krishnaveni...
17-02-25 09:14 pm
Mangalore, KDP Meeting, Dinesh Gundurao, MLA...
17-02-25 01:41 pm
18-02-25 07:19 pm
Mangalore Correspondent
Madikeri police, Fake Scheme, Mangalore crime...
18-02-25 06:04 pm
Mangalore Crime, Surathkal, Car: ಮದುವೆ ಸಮಾರಂಭ...
18-02-25 12:11 pm
Mysuru family suicide, Crime: ಮೈಸೂರು ; ಅಪಾರ್ಟ...
17-02-25 12:49 pm
Shivamogga crime, Kidnap, Blackmail: ಹೋಟೆಲ್ ಗ...
17-02-25 12:05 pm