ಬ್ರೇಕಿಂಗ್ ನ್ಯೂಸ್
02-02-25 09:49 pm Mangalore Correspondent ಕರಾವಳಿ
ಮಂಗಳೂರು, ಫೆ.2: ಭಾರತೀಯ ಕೋಸ್ಟ್ ಗಾರ್ಡ್ 49ನೇ ಸ್ಥಾಪನಾ ದಿನಾಚರಣೆ ಅಂಗವಾಗಿ ಮಂಗಳೂರಿನ ಕೋಸ್ಟ್ ಗಾರ್ಡ್ ಡಿವಿಶನ್ ವತಿಯಿಂದ ಅಣಕು ಕಾರ್ಯಾಚರಣೆ ಮತ್ತು ರಕ್ಷಣಾ ಇಲಾಖೆಯ ನಾಲ್ಕನೇ ಅಂಗದ ಶಕ್ತಿ ಪ್ರದರ್ಶನ ಕಾರ್ಯಕ್ರಮ ನಡೆಯಿತು. ಪಣಂಬೂರು ಕಡಲ ತೀರದಿಂದ 40 ಕಿಮೀ ದೂರದ ಸಮುದ್ರ ಮಧ್ಯೆ ಕೋಸ್ಟ್ ಗಾರ್ಡ್ ಕವಾಯತು ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸ್ಪೀಕರ್ ಯುಟಿ ಖಾದರ್ ಕೂಡ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಸಂದರ್ಭದಲ್ಲಿ ರಾಜ್ಯಪಾಲರ ಜೊತೆಗೆ ಉಪಸ್ಥಿತರಿದ್ದರು. ಆನಂತರ, ಸಮುದ್ರ ಮಧ್ಯಕ್ಕೆ ಹೋಗಲು ವಿಳಂಬವಾಗುತ್ತದೆ ಎಂದು ಪಣಂಬೂರು ಎನ್ ಎಂಪಿಟಿ ಬಳಿಯಿಂದಲೇ ತುರ್ತಾಗಿ ನಿರ್ಗಮಿಸಿದ್ದರು. ಕಾರ್ಯಕ್ರಮಕ್ಕೆ ಮಂಗಳೂರಿನ ಮಾಧ್ಯಮ ಪ್ರತಿನಿಧಿಗಳು, ದಕ್ಷಿಣ ಕನ್ನಡ ಜಿಲ್ಲಾಡಳಿತ, ಎಂಆರ್ ಪಿಎಲ್, ಎಂಸಿಎಫ್ ಇನ್ನಿತರ ಸಂಸ್ಥೆಗಳ ಪ್ರತಿನಿಧಿಗಳು, ಅವರ ಕುಟುಂಬಸ್ಥರನ್ನು ಆಹ್ವಾನಿಸಿತ್ತು.
ಐಸಿಜಿಎಸ್ ವರಾಹ ಕೋಸ್ಟ್ ಗಾರ್ಡ್ ಹಡಗಿನಲ್ಲಿ ಎಲ್ಲರನ್ನೂ ಸಮುದ್ರ ಮಧ್ಯಕ್ಕೆ ಒಯ್ಯಲಾಗಿತ್ತು. ಅಂದಾಜು 20 ನಾಟಿಕಲ್ಸ್ ಮೈಲ್ ದೂರದಲ್ಲಿ ಕಾರವಾರದಿಂದ ಬಂದಿದ್ದ ಸಾವಿತ್ರಿಬಾಯಿ ಫುಲೆ ಮತ್ತು ಕೊಚ್ಚಿಯಿಂದ ಸಾಕ್ಷ್ಯಂ ಹೆಸರಿನ ಕೋಸ್ಟ್ ಗಾರ್ಡ್ ಹಡಗುಗಳು ಬಂದಿದ್ದವು. ಇದಲ್ಲದೆ, ಫಾಸ್ಟ್ ಪೆಟ್ರೋಲ್ ವೆಸಲ್ಸ್, ಗಂಟೆಗೆ 80 ಕಿಮೀ ವೇಗದಲ್ಲಿ ಓಡುವ ಇಂಟರ್ ಸೆಪ್ಟ್ ಬೋಟ್ ವೆಸಲ್ಸ್ ಕೂಡ ಇದ್ದವು. ಅಲ್ಲಿ ತಲುಪುತ್ತಿದ್ದಂತೆ ವರಾಹ ಹಡಗಿನಿಂದ ಒಂದು ಬದಿಯಲ್ಲಿ ಕೋಸ್ಟ್ ಗಾರ್ಡ್ ಸಿಬಂದಿ ಇಂಟರ್ ಸೆಪ್ಟ್ ಬೋಟ್ ಸಹಿತ ಸಮುದ್ರಕ್ಕಿಳಿದರು. ಆನಂತರ, ಸಮುದ್ರ ಮಧ್ಯೆ ಅದರಿಂದ ನೀರಿಗಿಳಿದ ಕೋಸ್ಟ್ ಗಾರ್ಡ್ ಯೋಧರೊಬ್ಬರು ನೀರಿನಿಂದಲೇ ವಿರೋಧಿ ಪಡೆಯತ್ತ ಶೂಟ್ ಮಾಡುವ ರೀತಿ ಕಸರತ್ತು ತೋರಿಸಿದರು.
ಇದೇ ವೇಳೆ, ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಕೂಡ ಆಗಮಿಸಿ ನಾಲ್ಕೈದು ಬಾರಿ ಹಡಗಿನ ಸುತ್ತ ತಿರುಗುತ್ತಾ ಬಳಿಕ ಸಮುದ್ರಕ್ಕೆ ಟಚ್ ಆಗುವಷ್ಟು 15 ಅಡಿ ಎತ್ತರದ ವರೆಗೂ ಬಂದು ನಿಂತಿತು. ಅದರಿಂದ ಕೋಸ್ಟ್ ಗಾರ್ಡ್ ಯೋಧ ನೀರಿಗಿಳಿದು ಕೈಯಲ್ಲಿದ್ದ ಸಿಡಿ ತಲೆಯನ್ನು ಎಸೆದು ತೋರಿಸಿದರು. ಆನಂತರ, ವಿರೋಧಿಗಳನ್ನು ಮಟ್ಟ ಹಾಕಲು ಹಡಗಿನಿಂದ ಸಿಡಿ ತಲೆ ಹಾರಿಸುವುದು, ಸಣ್ಣ ಮಾದರಿಯ ಸಿಡಿ ಗುಂಡು ಹಾರಿಸುವುದನ್ನೂ ತೋರಿಸಲಾಯಿತು. ಕ್ಷಿಪಣಿ ಮಾದರಿಯ ಸಿಡಿ ತಲೆಯನ್ನು ಕೆಲವು ಕಿಮೀ ದೂರಕ್ಕೆ ಹಾರಿಸುವ ಶಕ್ತಿ ಪ್ರದರ್ಶನವನ್ನೂ ಮಾಡಿದರು. ಒಟ್ಟು ನಾಲ್ಕೈದು ಗಂಟೆಗಳ ಕಾಲ ಶಕ್ತಿ ಪ್ರದರ್ಶನ, ಅಣಕು ಕಾರ್ಯಾಚರಣೆಗಳು ನಡೆದವು.
ಕಾರ್ಯಕ್ರಮ ನೋಡಲು ಬಂದಿದ್ದ ಸಾರ್ವಜನಿಕರು ಕೋಸ್ಟ್ ಗಾರ್ಡ್ ಪಡೆಯ ಸಾಹಸ ಕಾರ್ಯವನ್ನು ಹತ್ತಿರದಿಂದ ನೋಡಿ ಖುಷಿ ಪಟ್ಟರು. ಮಂಗಳೂರಿನ ಶ್ರೀನಿವಾಸ ಯುನಿವರ್ಸಿಟಿಯ ರಿಜಿಸ್ಟ್ರಾರ್ ಡಾ.ಅಜಯ್ ಮಾಧ್ಯಮಕ್ಕೆ ಪ್ರತಿಕ್ರಿಯಿಸುತ್ತ, ಕೋಸ್ಟ್ ಗಾರ್ಡ್ ಪಡೆಯ ಸಾಹಸವನ್ನು ಕಣ್ಣಾರೆ ಕಾಣುವ ಯೋಗ ಸಿಕ್ಕಿತು. ನಾವು ಕುಟುಂಬ ಸಮೇತ ಪ್ರದರ್ಶನ ನೋಡಲು ಬಂದಿದ್ದೆವು. ಭಾರೀ ಆಕರ್ಷಕವಾಗಿತ್ತು. ಯೋಧರು ಸಮುದ್ರ ಮಧ್ಯೆ ನಡೆಸುವ ಸಾಹಸ ಬೇರೆಲ್ಲೂ ನೋಡಲು ಸಿಗುವುದಿಲ್ಲ ಎಂದು ಹೇಳಿದರು.
ನಾಲ್ಕು ಮಾದರಿಯ ಹಡಗು ಮತ್ತು ಬೋಟ್ ಗಳಲ್ಲಿ ಸುಮಾರು 400 ಮಂದಿ ಕೋಸ್ಟ್ ಗಾರ್ಡ್ ಸಿಬಂದಿ ಪಾಲ್ಗೊಂಡಿದ್ದಾರೆ. 1977 ರ ಫೆ.1ರಂದು ಕೋಸ್ಟ್ ಗಾರ್ಡ್ ಸ್ಥಾಪನೆ ಮಾಡಿದ್ದು ಪ್ರತಿ ವರ್ಷವೂ ಈ ದಿನವನ್ನು ಕೋಸ್ಟ್ ಗಾರ್ಡ್ ಡೇಯಾಗಿ ಆಚರಿಸುತ್ತೇವೆ. ಮುಂದಿನ ವರ್ಷ 50ನೇ ವರ್ಷದ ರೈಸಿಂಗ್ ಡೇಯನ್ನು ಆಚರಿಸಿಕೊಳ್ಳಲಿದ್ದೇವೆ. ಪ್ರತಿ ವರ್ಷವೂ ಈ ಸಂದರ್ಭದಲ್ಲಿ 3-4 ದಿನ ಕಾರ್ಯಕ್ರಮ ಏರ್ಪಡಿಸುತ್ತೇವೆ. ದೇಶದ ಎಲ್ಲ ಕೋಸ್ಟ್ ಗಾರ್ಡ್ ಡಿವಿಶನ್ ಗಳಲ್ಲೂ ಕಾರ್ಯಕ್ರಮ ನಡೆಯುತ್ತದೆ ಎಂದು ಕಮಾಂಡೆಂಟ್ ಕೆ.ವಿ ಬೋನಿಮೋನ್ ಮಾಹಿತಿ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಜಿಲ್ಲಾಡಳಿತದ ಪ್ರಮುಖ ಅಧಿಕಾರಿಗಳು, ಮಂಗಳೂರಿನ ಪೊಲೀಸ್ ಪ್ರಮುಖರು, ಕೋಸ್ಟ್ ಗಾರ್ಡ್ ಮಂಗಳೂರು ಡಿವಿಶನ್ ಮುಖ್ಯಸ್ಥ ಡಿಐಜಿ ಪ್ರವೀಣ್ ಕುಮಾರ್ ಮಿಶ್ರಾ, ಕಮಾಂಡಿಂಗ್ ಆಫೀಸರ್ ಡಿಐಜಿ ಶಾನವಾಜ್ ಇದ್ದರು.
ಮಾಧ್ಯಮ ಕರೆಸಿ ಅಧಿಕಾರಿಗಳ ಕಟ್ಟುನಿಟ್ಟು
ಮಾಧ್ಯಮ ಪ್ರತಿನಿಧಿಗಳನ್ನು ಪ್ರತಿ ವರ್ಷವೂ ಕೋಸ್ಟ್ ಗಾರ್ಡ್ ಡೇ ಕಾರ್ಯಕ್ರಮಕ್ಕೆ ಕರೆಸಲಾಗುತ್ತದೆ. ಆದರೆ ಮಾಧ್ಯಮಕ್ಕೆ ಸ್ಥಳದಲ್ಲಿ ಮಾಹಿತಿ ನೀಡುವುದಾಗಲೀ, ಸಮುದ್ರ ಮಧ್ಯೆ ಕವಾಯತು ನಡೆಸುವಾಗ ಚಿತ್ರೀಕರಣಕ್ಕಾಗಲೀ ವ್ಯವಸ್ಥೆ ಮಾಡಲಿಲ್ಲ. ಭದ್ರತೆ ದೃಷ್ಟಿಯಿಂದ ತಪಾಸಣೆ ನಡೆಸುವುದು ಸೂಕ್ತವೇ ಆದರೂ, ಹಡಗಿನ ಪ್ರವೇಶದ ಬಳಿಕವೂ ಒಳಗಡೆ ನಿರ್ಬಂಧ ವಿಧಿಸಿದ್ದಕ್ಕೆ ಆಕ್ಷೇಪ ಕೇಳಿಬಂತು. ಬೆಳ್ಳಂಬೆಳಗ್ಗೆ ಕರೆಸಿಕೊಂಡರೂ, ಸರಿಯಾದ ಉಪಾಹಾರದ ವ್ಯವಸ್ಥೆಯನ್ನೂ ಮಾಡದೆ ನಿರ್ಲಕ್ಷ್ಯ ವಹಿಸಿದ್ದು ಮಾಧ್ಯಮ ಪ್ರತಿನಿಧಿಗಳ ಆಕ್ರೋಶಕ್ಕೆ ಕಾರಣವಾಯಿತು. ರಾಜ್ಯಪಾಲರು ಉತ್ಸವ ಮೂರ್ತಿಯಂತೆ ಕಾರ್ಯಕ್ರಮಕ್ಕೂ, ಸೇರಿದ್ದ ಸಾರ್ವಜನಿಕರು ಮತ್ತು ಮಾಧ್ಯಮ ತಂಡಕ್ಕೆ ಸಂಬಂಧವೇ ಇಲ್ಲ ಎನ್ನುವಂತೆ ಹಡಗಿನ ಒಳಗಡೆ ಕುಳಿತಿದ್ದರೆ, ಇತರೇ ಅಧಿಕಾರಿ ವರ್ಗದವರೂ ಹಡಗಿನ ಒಳಗಿನಿಂದ ಹೊರಗೆ ಬರಲಿಲ್ಲ.
Karnataka Governor witnesses Coast Guard mock drill at NMPT in Mangalore, 6 ships, helicopter, 400 personnel take part. The Indian Coast Guard conducted a mock drill, "Day at Sea", near the New Mangaluru Port in the Arabian Sea on Sunday, February 2.
18-02-25 10:25 pm
Bangalore Correspondent
Mysuru Suicide, online Gambling, Betting: ಐಪಿ...
18-02-25 02:59 pm
Mandya crime, Boy Shoot brothers: ಕಳ್ಳ ಪೊಲೀಸ್...
17-02-25 01:38 pm
Amazon Web Services, Bangalore, Adarsh Builde...
17-02-25 10:43 am
ಸಂಘ ಪರಿವಾರದವರು ಬುರ್ಖಾ ಹಾಕಿಕೊಂಡು ಗಲಾಟೆ ಮಾಡೋಕೆ...
16-02-25 06:44 pm
18-02-25 10:49 pm
HK News Desk
Hindu idols Bishop House, Pala diocese, Kera...
18-02-25 10:45 pm
DK Shivakumar, Kasaragod, congress: ಕೇರಳದ ಕಾಂ...
17-02-25 10:42 pm
New Rules 2025; FASTag ಹೊಸ ನಿಯಮ ಜಾರಿ ; ಬ್ಯಾ...
17-02-25 08:23 pm
Delhi Railway station stampede, 18 Dead: ದೆಹಲ...
16-02-25 01:04 pm
18-02-25 12:36 pm
Mangalore Correspondent
Dinesh Gundurao, Munner katipalla, Sand Mafia...
17-02-25 10:56 pm
Sterlite Power, Protest, 400kv Power, Mangalo...
17-02-25 09:20 pm
Mangalore, Dinesh Gundurao, Mines Krishnaveni...
17-02-25 09:14 pm
Mangalore, KDP Meeting, Dinesh Gundurao, MLA...
17-02-25 01:41 pm
18-02-25 07:19 pm
Mangalore Correspondent
Madikeri police, Fake Scheme, Mangalore crime...
18-02-25 06:04 pm
Mangalore Crime, Surathkal, Car: ಮದುವೆ ಸಮಾರಂಭ...
18-02-25 12:11 pm
Mysuru family suicide, Crime: ಮೈಸೂರು ; ಅಪಾರ್ಟ...
17-02-25 12:49 pm
Shivamogga crime, Kidnap, Blackmail: ಹೋಟೆಲ್ ಗ...
17-02-25 12:05 pm