ಬ್ರೇಕಿಂಗ್ ನ್ಯೂಸ್
03-02-25 07:38 pm Mangalore Correspondent ಕರಾವಳಿ
ಮಂಗಳೂರು, ಫೆ.3 : ವಿಧಾನ ಸೌಧದಲ್ಲಿ ನಾಯಿಗಳ ಹಾವಳಿ ಮಿತಿ ಮೀರಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಅಧಿಕಾರಿಗಳ ಸಭೆಯನ್ನು ಶೀಘ್ರದಲ್ಲಿ ಕರೆಯಲಿದ್ದೇನೆ. ಇದಕ್ಕೆ ಪ್ರಾಣಿ ದಯಾ ಸಂಘದವರನ್ನೂ ಕರೆಸುತ್ತೇನೆ ಎಂದು ವಿಧಾನಸಭೆ ಅಧ್ಯಕ್ಷ ಯು.ಟಿ ಖಾದರ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ ಸಂದರ್ಭದಲ್ಲಿ ಎದುರಾದ ಪ್ರಶ್ನೆಗೆ, ವಿಧಾನಸೌಧ ಬಳಿ ಹಿಂದಿನಿಂದಲೂ ನಾಯಿಗಳ ಹಾವಳಿ ಇದೆ. ವಿಧಾನಸೌಧ ಬಳಿ ಇರುವ ನಾಯಿಗಳ ಬಗ್ಗೆ ಸಾರ್ವಜನಿಕರಲ್ಲಿ ಭಿನ್ನ ಅಭಿಪ್ರಾಯಗಳಿವೆ. ಕೆಲವರು ನಾಯಿಯಿಂದ ಯಾವುದೇ ಸಮಸ್ಯೆ ಇಲ್ಲವೆಂದರೆ, ಇನ್ನು ಕೆಲವರು ನಾಯಿಗಳಿಂದ ಸಮಸ್ಯೆ ಆಗುತ್ತದೆ ಎನ್ನುತ್ತಾರೆ. ಬೆಳಗ್ಗಿನ ಸಮಯದಲ್ಲಿ ನಾಯಿಗಳು ವಾಕಿಂಗ್ ಬರುವವರಿಗೂ ತೊಂದರೆ ಕೊಡುತ್ತವೆ ಎಂಬ ಅಭಿಪ್ರಾಯವಿದೆ. ಶಾಸಕರನ್ನಾದರೂ ಹೊರಗೆ ಹಾಕಬಹುದು, ನಾಯಿಗಳನ್ನು ಹೊರ ಹಾಕೋದು ಕಷ್ಟವಾಗಿದೆ. ಅಲ್ಲಿಯೇ ಬೀಡು ಬಿಟ್ಟಿದ್ದು, ಇವುಗಳ ಹಾವಳಿಯನ್ನು ತಡೆಯಲು ಕ್ರಮ ಕೈಗೊಳ್ಳಲಿದ್ದೇನೆ ಎಂದರು.
ವಿಧಾನಸೌಧಕ್ಕೆ ಶಾಶ್ವತ ಲೈಟಿಂಗ್ ವ್ಯವಸ್ಥೆ
ವಿಧಾನಸೌಧಕ್ಕೆ ಶಾಶ್ವತ ಲೈಟಿಂಗ್ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ. ಗಣರಾಜ್ಯೋತ್ಸವ, ರಾಜ್ಯೋತ್ಸವ ಮುಂತಾದ ಸಂದರ್ಭದಲ್ಲಿ ತಾತ್ಕಾಲಿಕ ಲೈಟಿಂಗ್ ವ್ಯವಸ್ಥೆ ಮಾಡಲಾಗುತ್ತಿತ್ತು. ತಾತ್ಕಾಲಿಕ ವ್ಯವಸ್ಥೆಗೂ ಲಕ್ಷಾಂತ ರೂ. ಖರ್ಚಾಗುತ್ತಿತ್ತು. ಶಾಶ್ವತ ವ್ಯವಸ್ಥೆ ಮಾಡಿ, ಅದನ್ನು ನಿರ್ವಹಣೆಗೆ ಕೊಡಲು ನಿರ್ಧರಿಸಲಾಗಿದೆ. ಮುಂದೆ ವಿಶೇಷ ದಿನಗಳಲ್ಲಿ ಮತ್ತು ಶನಿವಾರ, ಆದಿತ್ಯವಾರ ಸಂಜೆಯ ಬಳಿಕ ಲೈಟಿಂಗ್ ಮೂಲಕ ವಿಧಾನಸೌಧವನ್ನು ಆಕರ್ಷಕವಾಗಿಸಲು ಪ್ರಯತ್ನ ಮಾಡಲಾಗುವುದು ಎಂದರು.
ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನರಿಂಗಾನ ಕಂಬಳದ ಸಭೆಯಲ್ಲಿ ಖಾದರ್ ಅವರಿಗೆ ಸ್ಪೀಕರ್ ಸ್ಥಾನ ಇಷ್ಟವಿರಲಿಲ್ಲ ಎಂದು ಹೇಳಿದ್ದಕ್ಕೆ ಪ್ರತಿಕ್ರಿಯೆ ಕೇಳಿದಾಗ, ನನಗೆ ಯಾವುದೇ ಸ್ಥಾನದಲ್ಲಾದರೂ ತೃಪ್ತಿ ಇದೆ. ಅಧಿಕಾರ ಇದ್ದರೂ, ಇಲ್ಲದಿದ್ದರೂ ತೃಪ್ತಿ ಇರುತ್ತೆ. ನಾನೀಗ ಸ್ಪೀಕರ್ ಆಗಿದ್ದು ಪಕ್ಷದ, ನಾಯಕರ ಹಂಗಿಲ್ಲ. ನನಗೆ ನಾನೇ ಹೈಕಮಾಂಡ್ ಎಂದರು.
ಫೆ.27ರಿಂದ ವಿಧಾನಸೌಧದಲ್ಲಿ ಬುಕ್ ಫೆಸ್ಟ್, ಲಿಟ್ ಫೆಸ್ಟ್
ವಿಧಾನಸೌಧದಲ್ಲಿ ಮೊದಲ ಬಾರಿಗೆ ಬುಕ್ ಫೆಸ್ಟಿವಲ್ ಮತ್ತು ಲಿಟ್ ಫೆಸ್ಟಿವಲ್ ಆಯೋಜಿಸುವ ಬಗ್ಗೆ ಚಿಂತನೆ ಮಾಡಲಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಫೆಬ್ರವರಿ 27 ರಿಂದ ಮಾರ್ಚ್ 3ರ ವರೆಗೆ ವಿಧಾನಸೌಧದ ಆವರಣದಲ್ಲಿ ಬುಕ್ ಫೆಸ್ಟಿವಲ್ ಮತ್ತು ಲಿಟ್ ಫೆಸ್ಟಿವಲ್ ಹಾಗೂ ಫುಡ್ ಫೆಸ್ಟಿವಲ್ ನಡೆಸಲಾಗುವುದು. ಸುಮಾರು 150 ಖಾಸಗಿ, ಸರಕಾರಿ ಸಂಸ್ಥೆಗಳ ಪುಸ್ತಕ ಪ್ರದರ್ಶನ ಮಾಡಲಾಗುವುದು. ಸಾಹಿತಿಗಳನ್ನು ಕರೆಸಿ ಚರ್ಚೆಗಳನ್ನು ನಡೆಸಲಾಗುವುದು. ಇದನ್ನು ನೋಡಲು ಬರುವ ಆಸಕ್ತರಿಗಾಗಿ ಫುಡ್ ಫೆಸ್ಟ್ ನಡೆಸಲಾಗುವುದು.
ಕಾರ್ಯಕ್ರಮದಲ್ಲಿ ಓರ್ವ ಸಾಹಿತಿಗೆ ಪ್ರಶಸ್ತಿಯನ್ನು ನೀಡಲಾಗುವುದು. ಮುಂದೆ ಪ್ರತಿ ವರ್ಷವೂ ಇದು ನಡೆಯುವಂತೆ ವ್ಯವಸ್ಥೆ ಮಾಡಲಾಗುವುದು ಎಂದರು. ಕಾರ್ಯಕ್ರಮಕ್ಕೆ ಲೋಗೋ ಮತ್ತು ಹೆಸರು ಸೂಚಿಸಿದವರಿಗೆ ಪ್ರಶಸ್ತಿ ನೀಡಲಾಗುವುದು. ಇದಕ್ಕಾಗಿ ಸಾರ್ವಜನಿಕರು secy_kla_kar@nic.in ಅಥವಾ 9448108798 ವಾಟ್ಸಪ್ ನಂಬರ್ ಗೆ ಹೆಸರು, ಲೋಗೋ ಕಳುಹಿಸುವಂತೆ ವಿನಂತಿಸಲಾಗಿದೆ. ಬುಕ್ ಸ್ಟಾಲ್ ನಿಂದ ಎಲ್ಲ ಶಾಸಕರಿಗೆ 3 ಲಕ್ಷ ರೂ. ವರೆಗೆ ಪುಸ್ತಕ ಖರೀದಿಗೆ ಶಾಸಕ ನಿಧಿಯನ್ನು ಬಳಸಲು ಅವಕಾಶ ಇರುತ್ತದೆ. ಅನುದಾನದಿಂದ ಪುಸ್ತಕ ಖರೀದಿಸಿ ಶಾಸಕರು ತಮ್ಮ ಕ್ಷೇತ್ರದ ಲೈಬ್ರರಿಗೆ ನೀಡಬಹುದಾಗಿದೆ ಎಂದರು.
Talking to reporters, Mr. Khader said there are a good number of dogs on the Vidhana Soudha premises. There were complaints by legislators of the problems caused by dogs when they were on morning walk. There were also instances of dogs damaging the carpet laid for ceremonial events.
14-05-25 05:16 pm
Bangalore Correspondent
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
14-05-25 11:08 pm
HK News Desk
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ, ದೇಶವಿರೋಧಿ ಪೋಸ್ಟ್...
14-05-25 04:45 pm
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
14-05-25 08:05 pm
Mangalore Correspondent
Lokayuta, Arrest, Bantwal, Mangalore: ಗಂಡನ ಪಿ...
14-05-25 06:33 pm
Harish Injadi, President of Kukke Subrahmanya...
14-05-25 01:42 pm
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
14-05-25 10:22 pm
HK News Desk
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm