ಬ್ರೇಕಿಂಗ್ ನ್ಯೂಸ್
05-02-25 06:46 pm Mangalore Correspondent ಕರಾವಳಿ
ಪುತ್ತೂರು, ಫೆ.5: ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಹಿಂಭಾಗದ ಕೆರೆಯ ಬಳಿಯಿದ್ದ ಬಿಜೆಪಿ ಮುಖಂಡ ರಾಜೇಶ್ ಬನ್ನೂರು ಅವರಿಗೆ ಸೇರಿದ್ದು ಎನ್ನಲಾದ ಕಟ್ಟಡವನ್ನು ನಿನ್ನೆ ತಡರಾತ್ರಿ ಯಾರೋ ಜೆಸಿಬಿ ತಂದು ನೆಲಸಮ ಮಾಡಿದ್ದು, ಘಟನೆ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ದೇವಸ್ಥಾನದ ಆವರಣದಲ್ಲಿ ವಿಶಾಲ ರಸ್ತೆ ನಿರ್ಮಿಸುವುದಕ್ಕಾಗಿ ರಾಜ್ಯ ಸರ್ಕಾರದಿಂದ ಎರಡು ಕೋಟಿ ಬಿಡುಗಡೆ ಮಾಡಲಾಗಿದ್ದು, ಅದರಂತೆ, ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ದೇವಸ್ಥಾನ ಹಿಂಭಾಗದಲ್ಲಿ ಹಳೆಯ ಅನಧಿಕೃತ ಕಟ್ಟಡಗಳಿದ್ದು ಅದಕ್ಕೆ ಯಾವುದೇ ದಾಖಲೆ ಪತ್ರಗಳು ಇರಲಿಲ್ಲ. ಅದರಲ್ಲೊಂದು ರಾಜೇಶ್ ಬನ್ನೂರು ಸೇರಿದ್ದ ಕಟ್ಟಡವೂ ಆಗಿದ್ದು, ಅಲ್ಲಿ ಜನವಸತಿ ಇರಲಿಲ್ಲ. ತಗಡು ಶೀಟು ಮತ್ತು ಹಂಚಿನ ಕಟ್ಟಡವಾಗಿದ್ದು, ರಾತ್ರಿ ವೇಳೆ ಬೀದಿ ನಾಯಿಗಳು ಆಶ್ರಯ ಪಡೆಯುತ್ತಿದ್ದವು. ಹಗಲಿನಲ್ಲಿ ಪತ್ರಿಕಾ ಏಜಂಟರೊಬ್ಬರು ಪತ್ರಿಕೆಗಳನ್ನಿಟ್ಟು ಮಾರಾಟ ಮಾಡುತ್ತಿದ್ದರು.
ಅಲ್ಲಿದ್ದ ಏಳೆಂಟು ಕಟ್ಟಡಗಳನ್ನು ತೆರವುಗೊಳಿಸಲು ದೇವಸ್ಥಾನ ಕಡೆಯವರು ಮಾತುಕತೆ ನಡೆಸಿದ್ದರು. ಬಿಜೆಪಿ ಮುಖಂಡ ರಾಜೇಶ್ ಬನ್ನೂರು ಕೋರ್ಟಿಗೆ ಹೋಗಿ ಸ್ಟೇ ತರಲು ಯತ್ನಿಸಿದ್ದರೂ, ಸೂಕ್ತ ದಾಖಲೆ ಪತ್ರ ಇಲ್ಲದ ಕಾರಣ ಸಾಧ್ಯವಾಗಿರಲಿಲ್ಲ. ಈ ನಡುವೆ, ಅವರ ಪರ ವಕೀಲರೊಬ್ಬರು ದೇವಸ್ಥಾನ ಪ್ರಮುಖರನ್ನು ಭೇಟಿಯಾಗಿ ಹಣಕ್ಕಾಗಿ ಡಿಮ್ಯಾಂಡ್ ಮಾಡಿದ್ದರು ಎನ್ನಲಾಗಿದೆ. ಇದೇ ವೇಳೆ ಕೆಲವು ಮನೆಗಳವರು ತಮ್ಮ ಕಟ್ಟಡವನ್ನು ದೇವಸ್ಥಾನಕ್ಕೆ ಬಿಟ್ಟುಕೊಡಲು ಒಪ್ಪಿದ್ದರು. ಇದರ ನಡುವೆಯೇ ನಿನ್ನೆ ರಾತ್ರಿ ವಿವಾದಿತ ಕಟ್ಟಡವನ್ನು ನೆಲಸಮಗೊಳಿಸಲಾಗಿದೆ. ಸದ್ರಿ ಘಟನೆ ವಿವಾದಕ್ಕೀಡಾಗುತ್ತಿದ್ದಂತೆ ಬಿಜೆಪಿ ಪ್ರಮುಖರು ಖಂಡಿಸಿದ್ದು, ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ದೇವಸ್ಥಾನದ ಅಭಿವೃದ್ಧಿಗೆ ನಾವು ಬೆಂಬಲ ಇದ್ದೇವೆ, ರಾತ್ರೋರಾತ್ರಿ ಬಂದು ಕಟ್ಟಡವನ್ನು ನಾಶಗೊಳಿಸುವ ಅಗತ್ಯ ಏನಿತ್ತು. ಅಲ್ಲಿದ್ದ ನಾಯಿ ಮರಿಗಳು ಸತ್ತು ಹೋಗಿವೆ. ಅಶೋಕ್ ರೈ ಇಷ್ಟು ಕೀಳು ಮಟ್ಟಕ್ಕೆ ಇಳಿಯುತ್ತಾರೆಂದು ತಿಳಿದಿರಲಿಲ್ಲ, ಈ ಕೃತ್ಯ ಯಾರು ಮಾಡಿದ್ದಾರೋ, ಅವರ ಮೇಲೆ ಪೊಲೀಸರು ಪ್ರಕರಣ ದಾಖಲಿಸಬೇಕು ಎಂದು ಎಂಎಲ್ಸಿ ಕಿಶೋರ್ ಕುಮಾರ್ ಆಗ್ರಹ ಮಾಡಿದ್ದಾರೆ. ಇದಲ್ಲದೆ, ಆ ಮನೆಯಲ್ಲಿ 30 ಗ್ರಾಮ್ ನಷ್ಟು ಬಂಗಾರ ಇತ್ತು. ರಾಜೇಶ್ ಬನ್ನೂರು ಅವರ ಕುಟುಂಬಕ್ಕೆ ಸೇರಿದ್ದ ಮನೆಯಾಗಿತ್ತು. ಬಂಗಾರವನ್ನು ಮುಸುಕುಧಾರಿಗಳು ದರೋಡೆ ಮಾಡಿದ್ದಾರೆ. ಇದರ ಹಿಂದೆ ಶಾಸಕ ಅಶೋಕ್ ರೈ ಮತ್ತು ದೇವಸ್ಥಾನದ ಟ್ರಸ್ಟಿಗಳೇ ಇದ್ದಾರೆ. 20 ವರ್ಷಗಳ ಹಿಂದಿನ ಗೂಂಡಾ ರಾಜಕೀಯವನ್ನು ಮತ್ತೆ ತಂದಿದ್ದಾರೆ ಎಂದು ಬಿಜೆಪಿ ಪ್ರಮುಖರು ಆರೋಪ ಮಾಡಿದ್ದಾರೆ. ಕೆಲಹೊತ್ತು ಪೊಲೀಸ್ ಅಧಿಕಾರಿಗಳ ಜೊತೆಗೆ ಬಿಜೆಪಿ ನಾಯಕರು ವಾಗ್ವಾದ ಮಾಡಿದ್ದು ಹೈಡ್ರಾಮಾ ನಡೆಸಿದ್ದಾರೆ.
ಆನಂತರ, ಘಟನಾ ಸ್ಥಳಕ್ಕೆ ಆಗಮಿಸಿದ ಶಾಸಕ ಅಶೋಕ್ ರೈ ಮಾಧ್ಯಮದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಈ ಕೃತ್ಯವನ್ನು ಯಾರು ಮಾಡಿದ್ದಾರೋ ಗೊತ್ತಿಲ್ಲ. ಆದರೆ ದೇವಸ್ಥಾನಕ್ಕೆ ಒಳ್ಳೆದೇ ಆಗಿದೆ. ನಾವು ಯಾಕೆ ಇದರ ಬಗ್ಗೆ ದೂರು ಕೊಡಬೇಕು. ಆ ಕಟ್ಟಡದಲ್ಲಿ ಯಾರೂ ವಾಸ ಇರಲಿಲ್ಲ. ಕೆಲವು ನಾಯಿಗಳು ಮಾತ್ರ ಇದ್ದವು. ರಾಜೇಶ್ ಬನ್ನೂರು ಅವರನ್ನು ಸಂಪರ್ಕಿಸಿದ್ದು ಕಟ್ಟಡ ಬಿಟ್ಟುಕೊಡಲು ಕೇಳಿದ್ದೆವು. ಆದರೆ ಅವರು ಮಾತುಕತೆಗೆ ಬಾರದೆ, ವಕೀಲರನ್ನು ಕಳಿಸಿ ದೊಡ್ಡ ಮೊತ್ತ ಕೇಳಿದ್ದರು. ಅಲ್ಲಿದ್ದ ಅನಧಿಕೃತ ಕಟ್ಟಡಗಳನ್ನು ಒಡೆದು ಹಾಕುತ್ತೇವೆಂದು ದುಬೈ, ಬೆಹರಿನ್ನಿಂದ ಫೋನ್ ಮಾಡ್ತಿದ್ದರು. ಈಗ ಯಾರೋ ಒಡೆದು ಹಾಕಿದ್ದಾರೆ.
ದಾಖಲೆ ಇದ್ದರೆ ಕೋರ್ಟಿಗೆ ಹೋಗಲಿ ; ರೈ
ರಾಜೇಶ್ ಬನ್ನೂರು ಅವರಲ್ಲಿ ಜಾಗದ ಹಕ್ಕುಪತ್ರ, ದಾಖಲೆಗಳಿದ್ದರೆ ಕೋರ್ಟಿಗೆ ಹೋಗಲಿ. ಈಗಲೂ ಹೋಗಿ ಸ್ಟೇ ತರಬಹುದು. 50-60 ವರ್ಷಗಳ ಹಿಂದೆ ಅವರ ಪೂರ್ವಜರಿಗೆ ಜಾಗ ಕೊಟ್ಟಿದ್ದು ಇರಬಹುದು. 30-40 ವರ್ಷಗಳಲ್ಲಿ ಏಳೆಂಟು ಕಟ್ಟಡಗಳಲ್ಲಿದ್ದವರು ಬಾಡಿಗೆ ಕೊಟ್ಟು ಸಂಪಾದನೆ ಮಾಡಿದ್ದಾರೆ. ಕೇಸು ಮಾಡಿದವರೂ ಈಗ ಜಾಗ ದೇವಸ್ಥಾನಕ್ಕೆ ಬಿಟ್ಟುಕೊಟ್ಟಿದ್ದಾರೆ. ಬಿಜೆಪಿಯವರು ಯಾವ ಮುಖ ಇಟ್ಟುಕೊಂಡು ಪ್ರತಿಭಟನೆ ಮಾಡುತ್ತಾರೆ. ಅವರ ಹಿಂದುತ್ವ ಎಂಥದ್ದು ಅಂತ ಎಲ್ಲರಿಗೂ ಗೊತ್ತಿದೆ. ಅವರಿಗಂತೂ ಅಭಿವೃದ್ಧಿ ಕೆಲಸ ಮಾಡಲು ಆಗಿಲ್ಲ. ಈಗ ಯಾಕೆ ಅಡ್ಡಿ ಬರುತ್ತಿದ್ದಾರೆ, ಪುತ್ತೂರಿನ ಜನತೆ ದೇವಸ್ಥಾನದ ಅಭಿವೃದ್ಧಿ ಕೆಲಸ ತಪ್ಪೆಂದು ಹೇಳಲಿ. ಇಲ್ಲಿಗೇ ಕೆಲಸ ನಿಲ್ಲಿಸುತ್ತೇವೆ ಎಂದು ಅಶೋಕ್ ರೈ ಹೇಳಿದರು.
ಬಿಜೆಪಿ ದೂರು ದಾಖಲಿಸಿದ ಪೊಲೀಸರು
ಸಂಜೆಯ ವೇಳೆಗೆ, ಬಿಜೆಪಿ ಪ್ರಮುಖರ ದೂರನ್ನು ಪಡೆದುಕೊಂಡ ಪುತ್ತೂರು ಪೊಲೀಸರು ದೇವಸ್ಥಾನದ ಕಮಿಟಿ ಅಧ್ಯಕ್ಷ ಈಶ್ವರ ಭಟ್ ಪಂಜಿಗದ್ದೆ, ಟ್ರಸ್ಟಿ ವಿನಯ ಸುವರ್ಣ ಸೇರಿದಂತೆ ಮತ್ತಿತರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಎರಡು ದಿನಗಳ ಹಿಂದೆ ಉಜಿರೆಯ ವ್ಯಕ್ತಿಯೊಬ್ಬರಿಗೆ ಸೇರಿದ್ದ ಇದರ ಪಕ್ಕದಲ್ಲೇ ಇದ್ದ ಕಟ್ಟಡದ ಮೇಲೆ ಮರವೊಂದು ಬಿದ್ದು ಜಖಂ ಆಗಿತ್ತು. ಆ ಕಟ್ಟಡವೂ ಖಾಲಿಯೇ ಇತ್ತು. ದೇವಸ್ಥಾನ ರಸ್ತೆ ಅಭಿವೃದ್ಧಿಗೆ ಇವೆರಡು ಕಟ್ಟಡಗಳು ಅಡ್ಡಿಯಾಗಿದ್ದವು, ದೇವಸ್ಥಾನ ಕಮಿಟಿಯಿಂದ ಪರಿಹಾರ ಸಿಗಬೇಕು ಎಂದು ಇವರಿಬ್ಬರು ಪರೋಕ್ಷ ಒತ್ತಡ ಹೇರಿದ್ದರು. ಇದೀಗ ವಿವಾದಕ್ಕೊಳಗಾಗಿದ್ದ ಎರಡೂ ಕಟ್ಟಡಗಳು ನೆಲಸಮಗೊಂಡಿದ್ದು, ರಸ್ತೆ ಅಭಿವೃದ್ಧಿ ಕೆಲಸಕ್ಕೆ ಹಾದಿ ಸುಗಮ ಆದಂತಾಗಿದೆ.
A complaint has been filed against MLA Ashok Kumar Rai and Eshwar Bhat Panjigudde, President of the Sri Mahalingeshwara Temple Management Committee, accusing them of unlawfully demolishing a rented property located on temple-owned land. The complainant, Vijay Raghavendra, son of the late Jayashree Holla, submitted the grievance to the Superintendent of Police, Dakshina Kannada.
05-02-25 06:39 pm
HK News Desk
Santosh Lad, PM Modi: ಪ್ರಧಾನಿ ಮೋದಿ ಒಬ್ಬ ಮನುಷ್...
05-02-25 04:44 pm
ಮೈಕ್ರೋ ಫೈನಾನ್ಸ್ ಕಿರುಕುಳ ; ರಾಜ್ಯದಲ್ಲಿ ಒಂದೇ ದಿನ...
05-02-25 12:29 pm
Haveri Nurse, Feviquick; ಬಾಲಕನ ಕೆನ್ನೆಯ ಗಾಯಕ್ಕ...
04-02-25 11:32 pm
Bangalore RTO, Luxury car tax: ತೆರಿಗೆ ಪಾವತಿಸದ...
04-02-25 11:04 pm
04-02-25 10:49 pm
HK News Desk
Rashtrapati Bhavan, Poonam Gupta; ಜಗತ್ತಿನ ಎರಡ...
04-02-25 05:34 pm
Rail projects, Budget, Karnataka: ರೈಲ್ವೇಗೆ 2....
03-02-25 11:01 pm
Conspiracy, Kumbh stampede: ಮಹಾ ಕುಂಭಮೇಳದಲ್ಲಿ...
03-02-25 02:57 pm
NHAI fined toll tax: ಅಂಗವಿಕಲ ಮಹಿಳೆಗೆ 40 ರೂ. ಟ...
01-02-25 09:51 pm
05-02-25 07:32 pm
Mangalore Correspondent
Puttur News, Demolish, Ashok Rai: ಬಿಜೆಪಿ ಮುಖಂ...
05-02-25 06:46 pm
Mangalore gun misfire, congress, chittaranjan...
04-02-25 07:47 pm
U T Khader, Mangalore: ವಿಧಾನಸೌಧಕ್ಕೆ ನಾಯಿ ಕಾಟ...
03-02-25 07:38 pm
Mangalore coast Gaurd, NMPT: ತಿಳಿನೀಲ ಸಮುದ್ರದಲ...
02-02-25 09:49 pm
05-02-25 04:29 pm
Bangalore Correspondent
Ullal Police Station, Mangalore, Crime: ಪಿಎಸ್...
03-02-25 05:46 pm
Bangalore honeytrap case, Crime: ಮದುವೆಗೆ ವಧು...
02-02-25 09:00 pm
Mangalore Crime, Bantwal Toll, Kodikere Gang:...
01-02-25 10:11 pm
Attack on Bus, Hassan, Crime: ಬೆಂಗಳೂರಿನಿಂದ ಮಂ...
31-01-25 10:22 am