ಬ್ರೇಕಿಂಗ್ ನ್ಯೂಸ್
05-02-25 10:43 pm Mangalore Correspondent ಕರಾವಳಿ
ಮಂಗಳೂರು, ಫೆ.5: ಸುಳಿವೇ ಇಲ್ಲದಿದ್ದರೂ ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣವನ್ನು ಮಂಗಳೂರು ಪೊಲೀಸರು ಭೇದಿಸಿದ್ದು ಇಡೀ ರಾಜ್ಯದ ಗಮನ ಸೆಳೆದಿತ್ತು. ಕೇವಲ ಸಿಸಿಟಿವಿಯನ್ನೇ ಬೆನ್ನತ್ತಿ ದರೋಡೆಗೆ ಬಳಸಿದ್ದ ಫಿಯೆಟ್ ಕಾರಿನ ನಿಜಬಣ್ಣ ಪತ್ತೆ ಮಾಡಿ, ಅದೇ ಕಾರಿನಲ್ಲಿ ತಮಿಳುನಾಡು ತಲುಪಿದ್ದ ಆರೋಪಿಗಳನ್ನು ಅವರಲ್ಲಿ ತಲುಪುವಷ್ಟರಲ್ಲೇ ಪೊಲೀಸರು ಹೆಡೆಮುರಿ ಕಟ್ಟಿದ್ದರು. ಪೊಲೀಸರ ಕರಾರುವಾಕ್ ಕಾರ್ಯಾಚರಣೆ, ಮಿಂಚಿನ ವೇಗದಲ್ಲಿ ಬೆನ್ನು ಹತ್ತಿದ್ದರಿಂದ ಆರೋಪಿಗಳ ಸಹಿತ ಕೇಜಿಗಟ್ಟಲೆ ಚಿನ್ನವೂ ಪೊಲೀಸರ ಕೈಸೇರಿತ್ತು. ಪತ್ತೆ ಕಾರ್ಯದಲ್ಲಿ ಸ್ವಲ್ಪ ಎಡವಟ್ಟು ಆಗುತ್ತಿದ್ದರೂ, ದರೋಡೆಗೈದಿದ್ದ ಪೂರ್ತಿ ಚಿನ್ನವಂತೂ ಸಿಗುವುದಕ್ಕೆ ಸಾಧ್ಯವೇ ಇರಲಿಲ್ಲ.
ಇಂತಹದ್ದೇ ಬ್ಯಾಂಕ್ ದರೋಡೆಯೊಂದು ಸುಮಾರು ಹತ್ತು ವರ್ಷಗಳ ಹಿಂದೆ ಮಂಗಳೂರಿನಲ್ಲಿ ನಡೆದಿತ್ತು. ಆದರೆ ಅಂದಿನ ಪೊಲೀಸರ ನಿರ್ಲಕ್ಷ್ಯದಿಂದಲೋ, ಸರಿಯಾದ ಸುಳಿವು ಸಿಗದೇ ಇದ್ದುದರಿಂದಲೋ ಏನೋ ಆ ದರೋಡೆ ಪ್ರಕರಣ ಪತ್ತೆಯಾಗಲೇ ಇಲ್ಲ. ಮುಲ್ಕಿ ಪೊಲೀಸರು ಒಂದೇ ವರ್ಷದಲ್ಲಿ ಪತ್ತೆಯಾಗದ ಪ್ರಕರಣ ಎಂದು ಫೈಲ್ ಕ್ಲೋಸ್ ಮಾಡಿದ್ದರು. ಅದು 2015ರ ನವೆಂಬರ್ 20ರ ಶುಕ್ರವಾರ ನಡುರಾತ್ರಿ ಕಿನ್ನಿಗೋಳಿಯಲ್ಲಿ ನಡೆದಿದ್ದ ದರೋಡೆ ಪ್ರಕರಣ. ಎಸ್.ಕೆ. ಗೋಲ್ಡ್ ಸ್ಮಿತ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಬ್ಯಾಂಕ್ ಸೊಸೈಟಿಯ ಕಿನ್ನಿಗೋಳಿ ಶಾಖೆಯಿಂದ 4.63 ಕೋಟಿ, ಅಂದ್ರೆ ಸುಮಾರು 20 ಕೆಜಿ ಗಿಂತ ಹೆಚ್ಚು ಮೌಲ್ಯದ ಚಿನ್ನಾಭರಣ ಮತ್ತು 3.55 ಲಕ್ಷ ನಗದು ಮೊತ್ತವನ್ನು ಆಗಂತುಕರು ಹೊತ್ತೊಯ್ದಿದ್ದರು.
ಬ್ಯಾಂಕ್ ಕಚೇರಿಯಲ್ಲಿ ಸೆಕ್ಯುರಿಟಿ ಇಲ್ಲದಿರುವುದು ಮತ್ತು ರಾಶಿಗಟ್ಟಲೆ ಚಿನ್ನವನ್ನು ಲಾಕರಿನಲ್ಲಿ ಇಟ್ಟಿದ್ದ ಮಾಹಿತಿ ಇದ್ದವರೇ ದರೋಡೆ ಮಾಡಿದ್ದರು. ಮೊದಲ ಮಹಡಿಯಲ್ಲಿದ್ದ ಸೊಸೈಟಿಗೆ ಕಳ್ಳರು ಕಟ್ಟಡದ ಹಿಂಭಾಗದ ಮೂಲಕ ನುಗ್ಗಿದ್ದರು. ಹಿಂಭಾಗದಲ್ಲಿ ಶೀಟ್ ಹಾಕಿ ಕಟ್ಟಡ ನಿರ್ಮಾಣ ಮಾಡುತ್ತಿದ್ದ ಜಾಗದಿಂದಲೇ ಒಳನುಗ್ಗಿದ್ದ ಕಳ್ಳರು ಅಲ್ಲಿಂದಲೇ ಕಟ್ಟಡದ ಮೇಲ್ಭಾಗಕ್ಕೆ ಹೋಗಿದ್ದರು. ಆನಂತರ, ಬ್ಯಾಂಕಿನ ಮುಂಭಾಗದ ಶಟರ್ ಮುರಿದು ಕಳ್ಳರು ನುಗ್ಗಿದ್ದರು. ಕಚೇರಿ ಒಳಗಡೆ ಇದ್ದ ಮೂರು ಲಾಕರ್ ಗಳಲ್ಲಿ ದೊಡ್ಡದಿದ್ದುದನ್ನು ಒಡೆದು ಅದರಲ್ಲಿದ್ದ ಚಿನ್ನವನ್ನು ಮತ್ತು ನಗದು ಹಣವನ್ನು ಲಪಟಾಯಿಸಿದ್ದರು. ಜೊತೆಗೆ, ಅಲ್ಲಿದ್ದ ಸಿಸಿಟಿವಿಯ ಡಿವಿಆರ್ ಅನ್ನೂ ಜೊತೆಗೆ ಹೊತ್ತೊಯ್ದಿದ್ದರು. ಹೀಗಾಗಿ ವೃತ್ತಿಪರ ಕಳ್ಳರೇ ಈ ಕೃತ್ಯವನ್ನೂ ಮಾಡಿದ್ದರು ಅನ್ನೋದು ಮೇಲ್ನೋಟಕ್ಕೆ ತಿಳಿದುಬಂದಿತ್ತು.
ಪೊಲೀಸರ ತನಿಖೆಯಲ್ಲಿ ಬ್ಯಾಂಕಿಗೆ ಸೆಕ್ಯುರಿಟಿ ಇಲ್ಲದಿರುವುದರ ಲಾಭ ಪಡೆದು, ಸೈರನ್ ಆಗುವ ವೈರನ್ನೇ ಕಳ್ಳರು ಕಟ್ ಮಾಡಿರುವುದು ಮತ್ತು ವಿದ್ಯುತ್ ಸಂಪರ್ಕದ ಮೈನ್ ಸ್ವಿಚ್ ಅನ್ನು ಆಫ್ ಮಾಡಿರುವುದು ಪತ್ತೆಯಾಗಿತ್ತು. ಮರುದಿನ ಶನಿವಾರ ಬೆಳಗ್ಗೆ ಬ್ಯಾಂಕ್ ಕಟ್ಟಡದ ಬಳಿಯ ಗೋಡೌನ್ ಮಾಲಕರು ಬಂದಾಗಲೇ, ಬ್ಯಾಂಕ್ ಶಟರ್ ಎಳೆದಿದ್ದುದನ್ನು ನೋಡಿ ಕಳ್ಳರ ಕೃತ್ಯ ಬೆಳಕಿಗೆ ಬಂದಿತ್ತು. ಬ್ಯಾಂಕಿಗೆ ಕಳ್ಳರು ನುಗ್ಗಿರುವುದನ್ನು ತಿಳಿದು ಹಲವಾರು ಗ್ರಾಹಕರು ತಮ್ಮ ಚಿನ್ನ ಹೋಯ್ತು ಎಂದು ಬ್ಯಾಂಕ್ ಕಚೇರಿಯತ್ತ ದೌಡಾಯಿಸಿದ್ದರು. ಸ್ಥಳಕ್ಕೆ ಬಂದ ಪೊಲೀಸ್ ಇನ್ಸ್ ಪೆಕ್ಟರ್ ದಿವಾಕರ್ ಮತ್ತು ಎಸ್ಐ ವಾಮನ ಸಾಲ್ಯಾನ್, ನಿಮ್ಮ ಚಿನ್ನಕ್ಕೆ ಇನ್ಶೂರೆನ್ಸ್ ಭದ್ರತೆ ಇದೆ, ಚಿಂತೆ ಮಾಡಬೇಕಾಗಿಲ್ಲ. ಸೋಮವಾರ ನಿಮ್ಮ ಚಿನ್ನದ ದಾಖಲೆ ಜೊತೆಗೆ ಬಂದು ಬ್ಯಾಂಕ್ ಕಚೇರಿಯಲ್ಲಿ ವಿಮೆ ಪಡೆಯುವ ಬಗ್ಗೆ ವಿಚಾರಿಸಿ ಎಂದು ಹೇಳಿ ಸಾಗಹಾಕಿದ್ದರು.
ಮ್ಯಾಚ್ ಬಾಕ್ಸ್ ಹಿಂದಿತ್ತಾ ಕರಿನೆರಳು ?
ಪೊಲೀಸರು ಸ್ಥಳ ತನಿಖೆ ನಡೆಸಿದ ಸಂದರ್ಭದಲ್ಲಿ ಬೆಂಕಿ ಪೊಟ್ಟಣ (ಮ್ಯಾಚ್ ಬಾಕ್ಸ್) ಒಂದು ಪತ್ತೆಯಾಗಿತ್ತು. ಅದರಲ್ಲಿ ತಮಿಳಿನಲ್ಲಿ ಬರೆದ ಲೇಬಲ್ ಇದ್ದುದರಿಂದ ಕಳ್ಳರು ತಮಿಳುನಾಡಿವರು ಇದ್ದಿರಬಹುದು ಎನ್ನುವ ಅನುಮಾನವೂ ಬಂದಿತ್ತು. ಆದರೆ ಪೊಲೀಸರು ಈ ಕುರಿತು ತನಿಖೆ ನಡೆಸಿದರೂ, ಅದು ತನಿಖೆಯ ದಿಕ್ಕು ತಪ್ಪಿಸಲು ಆರೋಪಿಗಳು ಮಾಡಿದ್ದ ಉಪಾಯವೂ ಇರಬಹುದು ಎಂದು ನಿರ್ಲಕ್ಷ್ಯ ಮಾಡಿದ್ದರು. ವಿಧಿ ವಿಜ್ಞಾನ ತಜ್ಞರು, ಶ್ವಾನದಳ ಬಂದು ತಪಾಸಣೆ ನಡೆಸಿದರೂ ಆ ದಿನ ರಾತ್ರಿಯಲ್ಲಿ ಜೋರಾಗಿ ಮಳೆ ಬಂದಿದ್ದರಿಂದ ತನಿಖೆಗೆ ಸಹಾಯ ಆಗಬಲ್ಲ ಸುಳಿವು ಸಿಕ್ಕಿರಲಿಲ್ಲ.
ಆಗ ಮಂಗಳೂರು ಪೊಲೀಸ್ ಕಮಿಷನರ್ ಹುದ್ದೆಯಲ್ಲಿ ಐಪಿಎಸ್ ಅಧಿಕಾರಿ ಮುರುಗನ್ ಇದ್ದರು. ಡಿಸಿಪಿಗಳಾದ ಶಾಂತರಾಜು, ಸಂಜೀವ ಪಾಟೀಲ್, ಎಸಿಪಿ ಮದನ್ ಗಾಂವ್ಕರ್ ಸ್ಥಳಕ್ಕೆ ಭೇಟಿ ನೀಡಿ ತಮ್ಮಷ್ಟಕ್ಕೇ ಹಿಂತಿರುಗಿದ್ದರು. ಇತ್ತ ಸೊಸೈಟಿಯಿಂದ ಕಳವಾದ ಚಿನ್ನಕ್ಕೆ ವಿಮೆ ಭದ್ರತೆ ಇದ್ದುದರಿಂದ ದರೋಡೆ ಪ್ರಕರಣ ಪತ್ತೆ ಮಾಡಲೇಬೇಕು ಅನ್ನುವ ನಿಟ್ಟಿನಲ್ಲಿ ಪೊಲೀಸರು ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಬ್ಯಾಂಕ್ ಆಡಳಿತವೂ ದರೋಡೆ ಪತ್ತೆಗಾಗಿ ಪೊಲೀಸರ ಮೇಲೆ ಒತ್ತಡವನ್ನೂ ಹೇರಿರಲಿಲ್ಲ.
ದರೋಡೆ ಬೆನ್ನು ಹತ್ತಲಿಲ್ಲ ಯಾಕೆ ?
ಕೋಟೆಕಾರು ಸಹಕಾರಿ ಬ್ಯಾಂಕಿನಲ್ಲಿ ತಮಿಳುನಾಡು ಮೂಲದ ಮುಂಬೈ ನಟೋರಿಯಸ್ ಗ್ಯಾಂಗಿನವರು ಶಾಮೀಲಾಗಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಹತ್ತು ವರ್ಷಗಳ ಹಿಂದೆಯೂ ಕಿನ್ನಿಗೋಳಿ ಎಸ್.ಕೆ ಗೋಲ್ಡ್ ಸ್ಮಿತ್ ಸೊಸೈಟಿಯಿಂದ ದರೋಡೆ ನಡೆಸಿದ್ದ ಪ್ರಕರಣದಲ್ಲಿ ತಮಿಳುನಾಡು ಮೂಲದ ನಟೋರಿಯಸ್ ಕಳ್ಳರದ್ದೇ ಕೈವಾಡ ಇದ್ದಿರಲೂ ಬಹುದು. ಉಳ್ಳಾಲ ಠಾಣೆ ವ್ಯಾಪ್ತಿಯ ಕೆ.ಸಿ ರೋಡ್ ನಲ್ಲಿ ದರೋಡೆ ಕೃತ್ಯ ನಡೆದಿದ್ದರೂ, ಸುರತ್ಕಲ್, ಕಂಕನಾಡಿ, ಮಂಗಳೂರಿನ ಪ್ರಮುಖ ಠಾಣೆಗಳ ಇನ್ಸ್ ಪೆಕ್ಟರ್ ಮತ್ತು ಸಿಬಂದಿ ಕೃತ್ಯದ ಹಿಂದೆ ಬಿದ್ದ ರೀತಿ ಅಂದು ಬೆನ್ನು ಹತ್ತಿರಲಿಲ್ಲ. ಕೇರಳ ಗಡಿಭಾಗ ಕೆ.ಸಿ. ರೋಡ್ ನಲ್ಲಿ ದರೋಡೆ ಕೃತ್ಯ ನಡೆದ ಬೆನ್ನಲ್ಲೇ ಆರೋಪಿಗಳು ಬಳಸಿದ್ದ ಫಿಯೇಟ್ ಕಾರು ಎಲ್ಲಿಂದ ಬಂದಿತ್ತು ಅನ್ನುವ ಬಗ್ಗೆ ಸುರತ್ಕಲ್ ಇನ್ಸ್ ಪೆಕ್ಟರ್ ತಲೆಕೆಡಿಸಿಕೊಂಡಿದ್ದರಿಂದ ಕಾರ್ಯಾಚರಣೆಗೆ ವೇಗ ಸಿಕ್ಕಿತ್ತು.
ಈಗಿನ ಲೆಕ್ಕದಲ್ಲಿ ಅತಿದೊಡ್ಡ ಪ್ರಕರಣ
ಕಿನ್ನಿಗೋಳಿ ಪ್ರಕರಣದಲ್ಲಿ ಹತ್ತು ವರ್ಷಗಳ ಹಿಂದೆ ಅಂದಾಜು 5 ಕೋಟಿ ಮೌಲ್ಯದ ಚಿನ್ನ ಕಳವಾಗಿತ್ತು. ಈಗಿನ ಲೆಕ್ಕದಲ್ಲಿ 18 ಕೋಟಿ ಮೌಲ್ಯದ ಚಿನ್ನ ಆಗಿರಬಹುದು. ಅಂದರೆ, ರಾಜ್ಯದ ಅತಿದೊಡ್ಡ ದರೋಡೆ ಪ್ರಕರಣವನ್ನು ಪೊಲೀಸರು ಪತ್ತೆಯಾಗದ ಪಟ್ಟಿಗೆ ಸೇರಿಸಿ ಕೈತೊಳೆದು ಬಿಟ್ಟಿದ್ದಾರೆ. ಒಂದು ತಿಂಗಳ ಹಿಂದೆ ಸಿಂಗಾರಿ ಬೀಡಿ ಮಾಲಕ ಸುಲೇಮಾನ್ ಹಾಜಿಯ ಮನೆಗೆ ಇಡಿ ಸೋಗಿನಲ್ಲಿ ನುಗ್ಗಿದ್ದ ದರೋಡೆಕೋರರು ಕೆಲವಾರು ಕೋಟಿ ನಗದು ಹಣವನ್ನು ಹೊತ್ತೊಯ್ದಿದ್ದರು. ಮಾಹಿತಿ ಪ್ರಕಾರ, ಹಾಜಿಯವರ ಸಂಬಂಧಿಕರೇ ಪ್ರಕರಣದಲ್ಲಿ ಶಾಮೀಲಾತಿ ಹೊಂದಿದ್ದಾರೆ ಎನ್ನಲಾಗುತ್ತಿದೆ. ಪೊಲೀಸರು ಒಂದಿಬ್ಬರು ಕೇರಳ ಮೂಲದವರನ್ನು ಹಿಡಿದಿದ್ದು ಬಿಟ್ಟರೆ, ಪ್ರಮುಖ ಆರೋಪಿಗಳನ್ನು ಬಂಧನ ಮಾಡಿಲ್ಲ. ದರೋಡೆಗೈದ ಕೋಟ್ಯಂತರ ಹಣವನ್ನೂ ಪತ್ತೆ ಮಾಡಿದ ಬಗ್ಗೆ ಇನ್ನೂ ಮಾಹಿತಿ ನೀಡಿಲ್ಲ. ಪೊಲೀಸರು ಯಾವುದೇ ಪ್ರಕರಣದಲ್ಲಿ ಕ್ಯಾಲ್ಕುಲೇಟರ್ ವೇಗದಲ್ಲಿ ಅಲರ್ಟ್ ಆಗಿ ಲೆಕ್ಕ ಹಾಕಿದರೆ ಮಾತ್ರ ಪತ್ತೆ ಸಾಧ್ಯ ಎನ್ನುವುದಕ್ಕೆ ಕೋಟೆಕಾರು ದರೋಡೆ ಪ್ರಕರಣವೇ ಸಾಕ್ಷಿ.
Thieves broke into the SKG Cooperative Bank in Kinnigoli, located under the Mulky police limits, on the intervening night of Friday, November 20, and Saturday, November 21. They decamped with gold worth ₹4.63 crore and ₹3.55 lakh in cash. Despite nearly nine years of investigation, this robbery remains unsolved, raising questions about potential connections to the Kotekar robbery in Mangalore.
20-07-25 08:35 pm
Bangalore Correspondent
ವಾಲ್ಮೀಕಿ ನಿಗಮ ಹಗರಣ ರೀತಿಯಲ್ಲೇ ಮತ್ತೊಂದು ಹಗರಣ ;...
20-07-25 07:55 pm
Dharmasthala SIT Case, Parameshwar: ಎಸ್ಐಟಿ ರ...
20-07-25 04:24 pm
Rcb, Bangalore: ಪೊಲೀಸರು 'ಆರ್ಸಿಬಿ ಸೇವಕರು' ಎಂಬ...
19-07-25 03:05 pm
ಎಲ್ಲ ಶಾಸಕರ ಕ್ಷೇತ್ರದ ಅಭಿವೃದ್ಧಿಗೆ ತಲಾ 50 ಕೋಟಿ ಅ...
18-07-25 10:59 pm
20-07-25 04:47 pm
HK News Desk
Kerala Nurse Yemen; ನರ್ಸ್ ನಿಮಿಷಾ ಉಳಿವಿಗೆ ಗಲ್ಫ...
16-07-25 09:58 pm
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
21-07-25 04:03 am
Mangaluru Correspondent
Mangalore Bantwal Rural PSI, Suicide: ಬಂಟ್ವಾಳ...
20-07-25 10:35 pm
Dharmasthala Case, SIT, Pronab Mohanty: ಧರ್ಮಸ...
20-07-25 03:06 pm
MRPL, MP Brijesh Chowta, Mangalore: MRPL ಹಸಿರ...
19-07-25 10:01 pm
Mangalore, Derlakatte Raid: ನಿಯಮ ಉಲ್ಲಂಘಿಸಿ ಕಾ...
19-07-25 07:18 pm
20-07-25 08:52 pm
HK News Desk
ಅಮೆರಿಕ, ಕೆನಡಾದಿಂದಲೂ ವಿದೇಶಿ ಫಂಡ್, ಯುವತಿಯರೇ ಟಾರ...
20-07-25 12:16 pm
Fraudster Roshan Saldanha, Fraud: ಬಹುಕೋಟಿ ವಂಚ...
19-07-25 09:25 pm
Mangalore Conman Roshan Saldanha Arrest: ಚಾಲಾ...
19-07-25 12:26 pm
Mangalore crime, cyber crime: ಮುಂಬೈ ಪೊಲೀಸ್ ಅಧ...
18-07-25 12:40 pm