ಬ್ರೇಕಿಂಗ್ ನ್ಯೂಸ್
10-02-25 10:34 pm Mangalore Correspondent ಕರಾವಳಿ
ಮಂಗಳೂರು, ಫೆ.10: ನೀವು ಕಾರ್ಗಿಲ್ ಯುದ್ಧದ ಬಗ್ಗೆ ಕೇಳಿರಬಹುದು. ಪರ್ವತಗಳ ಮೇಲ್ಭಾಗದಲ್ಲಿ ಅಡಗಿದ್ದ ಪಾಕಿಸ್ತಾನಿ ಸೈನಿಕರು ಭಾರತೀಯ ಸೈನಿಕರತ್ತ ಗುಂಡು ಹಾರಿಸಿದ್ದರು. ಶಿಖರಗಳ ಬುಡದಲ್ಲಿದ್ದ ಭಾರತೀಯ ಸೈನಿಕರಿಗೆ ದೇಹದಲ್ಲಿ ಕಸುವಿದ್ದರೂ, ತಿರುಗಿ ಹೊಡೆಯೋದು ಕಷ್ಟವಾಗಿತ್ತು. ಇಂಥ ಹೊತ್ತಲ್ಲಿ ಸ್ವತಃ ಮೆಷಿನ್ ಗನ್ ಹೊತ್ತ ಡ್ರೋಣ್ ಆಕಾಶದಿಂದಲೇ ನೇರವಾಗಿ ಶತ್ರುವಿನತ್ತ ಅಟ್ಯಾಕ್ ಮಾಡಿದರೆ ಹೇಗಿರಬೇಡ. ನೂರು ಸೈನಿಕರು ಮಾಡುವ ಕೆಲಸವನ್ನು ಒಂದು ಡ್ರೋಣ್ ಕ್ಷಣಾರ್ಧದಲ್ಲಿ ಮಾಡಿ ಮುಗಿಸಿರುತ್ತಿತ್ತು.
ಹೌದು.. ಮುಂದುವರಿದ ದೇಶಗಳಲ್ಲಿ ಇರುವ ಇಂಥ ತಂತ್ರಜ್ಞಾನ ನಮಗೂ ಬೇಕು ಅನ್ನುವ ಆಕಾಂಕ್ಷೆ ಭಾರತೀಯ ಸೈನಿಕರಲ್ಲೂ ಇತ್ತು. ಆದರೆ ಅದನ್ನು ದೊರಕಿಸುವುದು ಸುಲಭದ ಮಾತಾಗಿರಲಿಲ್ಲ. ವಿಶ್ವಸಂಸ್ಥೆಯ ಕೇಂದ್ರ ಸ್ಥಾನ ಜಿನೇವಾದಲ್ಲಿ ಐದು ವರ್ಷಗಳ ಕೆಲಸ ಮಾಡಿ, ರಕ್ಷಣಾ ತಂತ್ರಜ್ಞಾನ, ಮುಂಚೂಣಿ ದೇಶಗಳ ಯುದ್ಧ ತಾಂತ್ರಿಕತೆ ಬಗ್ಗೆ ತಿಳಿದುಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮೂಲದ ಯುವಕ ಕೋನಾರ್ಕ್ ರೈ, ಭಾರತದ ಸೈನಿಕರ ಆಕಾಂಕ್ಷೆಯನ್ನು ಕಡೆಗೂ ಈಡೇರಿಸಿದ್ದಾರೆ.
ಸುಮಾರು ಎಂಟು ಕೇಜಿಯಷ್ಟು ಭಾರದ ಮೆಷಿನ್ ಗನ್ ಮತ್ತಿತರ ಶಸ್ತ್ರಾಸ್ತ್ರಗಳನ್ನು ಹೊತ್ತು ಸಾಗುವುದಲ್ಲದೆ, ಸೂಚನೆ ಕೊಟ್ಟರೆ ಆಟೋಮೆಟಿಕ್ ಆಗಿ ಫೈರ್ ಮಾಡಬಲ್ಲ ಡ್ರೋಣ್ ಒಂದನ್ನು ಕೋನಾರ್ಕ್ ರೈ ಆವಿಷ್ಕರಿಸಿದ್ದಾರೆ. ಗುಜರಾತಿನ ಗಾಂಧಿ ನಗರದಲ್ಲಿ ರುದ್ರಂ ಡೈನಾಮಿಕ್ ಪ್ರೈ. ಲಿಮಿಟೆಡ್ ಹೆಸರಿನಲ್ಲಿ ತನ್ನದೇ ಆದ ಕಂಪನಿಯನ್ನು ಹುಟ್ಟುಹಾಕಿರುವ ಕೋನಾರ್ಕ್ ರೈ, ಭಾರತೀಯ ಸೈನಿಕರ ಅಗತ್ಯ ಅರಿತು ಅವರಿಗೆ ತಕ್ಕುದಾದ ಡ್ರೋಣ್ ಒಂದನ್ನು ತಯಾರಿಸಿದ್ದಾರೆ. ಕಳೆದ ಜನವರಿಯಲ್ಲಿ ಮಧ್ಯಪ್ರದೇಶದ ಆರ್ಮಿ ಬೇಸ್ ನಲ್ಲಿ ಇದರ ಡೆಮೋ ತೋರಿಸಲಾಗಿದ್ದು, ಯಶಸ್ವಿಯಾಗಿದೆ. ಮುಂದೆ ಕಾಶ್ಮೀರದಲ್ಲಿ ಟ್ರಯಲ್ ನಡೆಸಲಾಗುವುದು. ಸಕ್ಸಸ್ ಆದರೆ ಭಾರತೀಯ ಸೇನೆಗಾಗಿ ಇದನ್ನು ತಯಾರಿಸಿ ಕೊಡಲಾಗುವುದು ಎಂದು ಕೋನಾರ್ಕ್ ರೈ ಹೆಡ್ ಲೈನ್ ಕರ್ನಾಟಕಕ್ಕೆ ಮಾಹಿತಿ ನೀಡಿದ್ದಾರೆ.
ಈ ಡ್ರೋಣ್ ತಯಾರಿಸಲು ಎರಡು ವರ್ಷ ಕಾಲ 25 ಇಂಜಿನಿಯರಿಂಗ್ ಪದವೀಧರರು ಕೆಲಸ ಮಾಡಿದ್ದಾರೆ. ಐಐಟಿ ಮದ್ರಾಸ್ ಮತ್ತು ದೇಶದ ವಿವಿಧೆಡೆಯ ಇಂಜಿನಿಯರಿಂಗ್ ಕಾಲೇಜುಗಳ ಪದವೀಧರರು ಇದರಲ್ಲಿ ತೊಡಗಿಸಿದ್ದಾರೆ. ಸದ್ಯಕ್ಕೆ ಎರಡು ಕೇಜಿಯ ಸಬ್ ಮೆಶಿನ್ ಗನ್ – ಅಶ್ಮಿಯನ್ನು ಅಳವಡಿಸಿ ಆಟೊಮೆಟಿಕ್ ಫೈರ್ ಮಾಡುವ ರೀತಿ ಅಭಿವೃದ್ಧಿ ಪಡಿಸಲಾಗಿದೆ. ಎಂಟು ಕೇಜಿ ಭಾರದ ಗನ್ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ವಿದೇಶಗಳ ಮೆಷಿನ್ ಗನ್ 8-10 ಕೇಜಿ ಭಾರ ಹೊಂದಿರುತ್ತದೆ. ಎಕೆ 47 ಗನ್ನನ್ನೂ ಇದಕ್ಕೆ ಅಳವಡಿಸಬಹುದು. ಡ್ರೋಣ್ ಸ್ಪೀಡ್ 30 ಕಿಮೀ ಇರಲಿದ್ದು, 100 ಮೀಟರ್ ದೂರದಿಂದ ಗುರಿಯನ್ನು ಹೊಡೆಯಬಲ್ಲದು. ಒಮ್ಮೆ ಬ್ಯಾಟರಿ ಹಾಕಿದರೆ ಒಂದು ಗಂಟೆ ಕಾಲ ಹಾರಾಡುತ್ತದೆ. ಒಬ್ಬನೇ ಸೈನಿಕ ಹೊತ್ತುಕೊಂಡು ಸಾಗಬಹುದಾಗಿದ್ದು, ಅಗತ್ಯ ಎನಿಸಿದಲ್ಲಿ ಮೆಷಿನ್ ಗನ್ ಬಳಸಿ ಫೈರ್ ಮಾಡಬಹುದು.
ಮುಂಬೈನಲ್ಲಿ ತಾಜ್ ಹೊಟೇಲ್ ದಾಳಿಯಂತಹ ಸನ್ನಿವೇಶದಲ್ಲಿ ಇಂತಹ ಡ್ರೋಣ್ ಹೆಚ್ಚು ಉಪಯುಕ್ತ. ಕಾಡಿನಲ್ಲಿ ಅವಿತುಕೊಂಡು ಯುದ್ಧ ಮಾಡುವ ನಕ್ಸಲರ ವಿರುದ್ಧ ದಾಳಿಗೂ ಪ್ರಯೋಜನಕಾರಿ. ಪರ್ವತಗಳ ಎಡೆಯಲ್ಲಿ ಕುಳಿತು, ಅವುಗಳ ತುದಿಯಲ್ಲಿ ನಿಂತು ದಾಳಿ ಮಾಡುತ್ತಿದ್ದರೂ ಡ್ರೋಣ್ ಬಳಕೆ ಹೆಚ್ಚು ಸೂಕ್ತವಾಗುತ್ತದೆ. ಯುಕ್ರೇನ್ - ರಷ್ಯಾ ಯುದ್ಧದಲ್ಲಿ ಡ್ರೋಣ್ ಬಳಕೆ ಹೆಚ್ಚಾಗಿ ನಡೆದಿತ್ತು. ನಮ್ಮ ಸೈನಿಕರೇ ಇಂಥದ್ದೊಂದು ತಂತ್ರಜ್ಞಾನ ಬೇಕೆಂದು ಹೇಳುತ್ತಿದ್ದರು. ಆ ಕಾರಣದಿಂದ ನಾವು ಇಂಜಿನಿಯರ್ ಪದವೀಧರರನ್ನು ಒಟ್ಟು ಸೇರಿಸಿ ಡ್ರೋಣ್ ಆವಿಷ್ಕಾರ ಮಾಡಿದ್ದೇವೆ ಎನ್ನುತ್ತಾರೆ, ಕೋನಾರ್ಕ್.
ಅಂದಹಾಗೆ, ಕೋನಾರ್ಕ್ ರೈ ಇಂಜಿನಿಯರಿಂಗ್ ಪದವಿ ಪಡೆದವರಲ್ಲ. ಪುತ್ತೂರಿನ ತಿಂಗಳಾಡಿ ಗ್ರಾಮ ಇವರ ಊರು. ಕ್ಯಾಂಪ್ಕೋ ಸಂಸ್ಥೆಯಲ್ಲಿ ಈ ಹಿಂದೆ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಪ್ರಮೋದ್ ಕುಮಾರ್ ರೈ- ಶೋಭಾ ರೈ ದಂಪತಿಯ ಪುತ್ರನಾಗಿರುವ ಕೋನಾರ್ಕ್, ವಿಟ್ಲದ ಅಳಿಕೆ ಸತ್ಯಸಾಯಿ ಶಾಲೆಯಲ್ಲಿ ಹೈಸ್ಕೂಲ್, ಪುತ್ತೂರು ಸೈಂಟ್ ವಿಕ್ಟರಿ ಶಾಲೆಯಲ್ಲಿ ಪ್ರೈಮರಿ, ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಪಿಯುಸಿ ತೇರ್ಗಡೆಗೊಂಡು ಆಲ್ ಇಂಡಿಯಾ ಎಂಟ್ರೇನ್ಸ್ ಪರೀಕ್ಷೆ ಬರೆದು ಗುಜರಾತ್ ನೇಶನಲ್ ಲಾ ಯುನಿವರ್ಸಿಟಿಯಲ್ಲಿ 2010ರಲ್ಲಿ ಎಲ್ಎಲ್ ಬಿ ಪೂರೈಸಿದ್ದರು. ಆನಂತರ, ಕ್ಯಾಂಪಸ್ ಸೆಲೆಕ್ಷನ್ನಲ್ಲಿ ಯುಎನ್ಓ ಸಂಸ್ಥೆಗೆ ಆಯ್ಕೆಗೊಂಡಿದ್ದರು.
ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಐದು ವರ್ಷ ಕೆಲಸ ಪೂರೈಸಿದ್ದ ಕೋನಾರ್ಕ್ ಅಲ್ಲಿನ ಕೆಲಸ ಬಿಟ್ಟು ಕೇಂದ್ರ ಗೃಹ ಸಚಿವಾಲಯದಡಿ ಗುತ್ತಿಗೆ ಪಡೆದಿದ್ದರು. ಎರಡು ವರ್ಷಗಳಿಂದ ಎಲ್ಲವನ್ನೂ ಬಿಟ್ಟು ತನ್ನದೇ ಆದ ಕಂಪನಿಯನ್ನು ಸ್ಥಾಪಿಸಿ ಭಾರತೀಯ ಸೇನೆ, ಪರಿಸರ ಕಾಳಜಿಯ ಕೆಲಸಗಳಲ್ಲಿ ತೊಡಗಿಸಿದ್ದಾರೆ. ಈ ಹಿಂದೆ ರುದ್ರಂ ಕಂಪನಿಯಲ್ಲಿ ಆಟೊಮೆಟಿಕ್ ಬೋಟ್ ಒಂದನ್ನು ತಯಾರಿಸಿದ್ದರು. ಈ ಬೋಟ್ ನದಿ, ಸಮುದ್ರದಲ್ಲಿ ತೇಲುವ ಪ್ಲಾಸ್ಟಿಕ್ ಇನ್ನಿತರ ತ್ಯಾಜ್ಯಗಳನ್ನು ತಾನಾಗಿಯೇ ಸಂಗ್ರಹಿಸಿ ತರುವ ಸಾಮರ್ಥ್ಯ ಹೊಂದಿದೆ. ವಾರಣಾಸಿಯಲ್ಲಿ ಗಂಗಾ ನದಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹೆಕ್ಕಲು ಇದೇ ಬೋಟ್ ಬಳಸಲಾಗಿತ್ತು. ನದಿಗೆ ಆಯಿಲ್ ಬಿದ್ದರೂ, ಕ್ಲೀನಿಂಗ್ ಮಾಡಬಲ್ಲ ತಂತ್ರಜ್ಞಾನ ಈ ಬೋಟಿನಲ್ಲಿದೆ. ಆಧುನಿಕ ರೀತಿಯ ಚಿಂತನೆ ಜೊತೆಗೆ ಆಧುನಿಕ ತಂತ್ರಜ್ಞಾನ ಒಡಗೂಡಿದರೆ ಅಸಾಧ್ಯವಾದುದನ್ನೂ ಸಾಧಿಸಬಹುದು ಎನ್ನುವುದಕ್ಕೆ ಕೋನಾರ್ಕ್ ಸಾಧನೆಯೇ ಸಾಕ್ಷಿ.
A young innovator from Puttur has designed a drone capable of carrying a single person and equipped with a machine gun, which has been handed over to the Indian Army. The highly advanced and precise drone has been developed by Konark Rai, a resident of Kajemaru, Thingaladi, in Puttur taluk.
13-03-25 02:56 pm
HK News Desk
Karwar, Honnavar, Cow Slaughter, Crime; ಗರ್ಭ...
13-03-25 12:32 pm
Madikeri Earthquake: ಮಡಿಕೇರಿಯಲ್ಲಿ ಲಘು ಭೂಕಂಪನ...
13-03-25 11:57 am
Pramod Muthalik, Love Jihad: ವೇಶ್ಯಾವಾಟಿಕೆ, ಭಯ...
12-03-25 03:51 pm
Mangalore Chakravarti Sulibele, Prakash Raj:...
11-03-25 06:19 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
13-03-25 09:20 pm
Mangalore Correspondent
PFI, Mangalore Crime, Police: ಪಿಎಫ್ಐ ಮುಖಂಡರಿಗ...
13-03-25 08:46 pm
Mangalore News, crime, Suicide: ಉತ್ತರ ಪ್ರದೇಶ...
13-03-25 10:08 am
Mangalore rain, Heat wave: ಮಂಗಳೂರು ನಗರಕ್ಕೆ ಸಿ...
12-03-25 11:10 pm
Diganth Missing case, Reunite with family: 17...
12-03-25 10:16 pm
13-03-25 06:44 pm
Mangalore Correspondent
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm
Bangalore Suicide, Bank Staff, Crime; ಹಿರಿಯ ಅ...
09-03-25 03:06 pm