ಬ್ರೇಕಿಂಗ್ ನ್ಯೂಸ್
11-02-25 07:44 pm Mangalore Correspondent ಕರಾವಳಿ
ಉಳ್ಳಾಲ, ಫೆ.11: ಸಾಕು ನಾಯಿಗಳಿಗೇ ಐಷಾರಾಮಿ ಗೂಡನ್ನ ಕಟ್ಟಿಕೊಡುವ ಹಿಂದೂ ಬಾಂಧವರು ನೆರೆಮನೆಯ ಅಶಕ್ತನಿಗೊಂದು ಮನೆಯನ್ನ ಕಟ್ಟಿ ಕೊಡಲಾರರೇ..? ಸಮಾಜಕ್ಕೋಸ್ಕರವೇ ಬದುಕಿ ಎಂದು ಕಳೆದ ನೂರು ವರುಷಗಳಲ್ಲಿ ಸಂಘ ಶಿಕ್ಷಣವು ನಮಗೆಲ್ಲರಿಗೂ ಪಾಠ ಕಲಿಸಿಕೊಟ್ಟಿದೆ. ಸ್ವಧರ್ಮೀಯರ ಜಟಿಲ ಸಮಸ್ಯೆಗಳನ್ನ ಹಿಂದೂ ಸಮಾಜ ಬಾಂಧವರು ಪರಿಹರಿಸೋದೆ ಜೀವನದ ಸಾರ್ಥಕತೆ ಆಗಿದೆ. ಹಿಂದೂ ಸಮಾಜವು ಜಗತ್ತಿಗೇ ಒಲಿತನ್ನು ಮಾಡಿದೆಯೇ ಹೊರತು ನಮ್ಮವರಿಗೇ ಕೆಡುಕನ್ನು ಮಾಡಲು ಸಾಧ್ಯವೇ..? ಸಂತೋಷ್ ಬೋಳಿಯಾರ್ ಅವರು ದೇವಕಿ ಮುಗೇರ ಅವರಿಗೆ ಮನೆ ಕಟ್ಟಿಕೊಡುವ ಮೂಲಕ ಸಂಘದ ಪ್ರೇರಣೆ, ಚಿಂತನೆಯಂತೆಯೇ ಸಮಾಜಕ್ಕೆ ಮಾದರಿಯಾಗುವ ಸಾರ್ಥಕ ಕಾರ್ಯ ಮಾಡಿದ್ದಾರೆ ಎಂದು ಆರ್ ಎಸ್ಎಸ್ ಹಿರಿಯ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ಉಳ್ಳಾಲ ತಾಲೂಕಿನ ಪಜೀರು ಗ್ರಾಮದ ತದ್ಮ ಎಂಬಲ್ಲಿ ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿ. ಇದರ ನಿಕಟಪೂರ್ವ ಅಧ್ಯಕ್ಷರು, ಬಿಜೆಪಿ ಮುಖಂಡರಾಗಿರುವ ಸಂತೋಷ್ ಕುಮಾರ್ ರೈ ಬೋಳಿಯಾರ್ ಅವರ ಮುತುವರ್ಜಿಯಿಂದ ಅಶಕ್ತ ಮಹಿಳೆ ದೇವಕಿ ಮುಗೇರ ಅವರಿಗೆ ಪಜೀರಿನ ಗ್ರಾಮ ವಿಕಾಸ ಸಮಿತಿಯಿಂದ ಸಂಘ ಶತಾಬ್ಧಿ ನಿಮಿತ್ತ ಸೇವಾ ಬಸ್ತಿಯಲ್ಲಿ ನಿರ್ಮಾಣಗೊಂಡ 'ನಮೋ ಕುಟೀರ' ಎಂಬ ಸುಸಜ್ಜಿತ ನೂತನ ಮನೆಯ ಕೀಲಿ ಕೈಯನ್ನು ಫಲಾನುಭವಿ ಕುಟುಂಬಕ್ಕೆ ಸೋಮವಾರ ನಡೆದ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಹಸ್ತಾಂತರಿಸಿ ಅವರು ಮಾತನಾಡಿದರು.
ಸಮಾಜಕ್ಕೋಸ್ಕರ ತಮ್ಮನ್ನ ಅರ್ಪಣೆ ಮಾಡಿದವರನ್ನ ಸಮಾಜವೇ ಗುರುತಿಸುತ್ತದೆ. ವಿಭಿನ್ನ ಸಂಸ್ಕೃತಿಯ ನಮ್ಮ ದೇಶ ನೆಲೆ ನಿಂತಿರುವುದು ಧರ್ಮದ ಆಧಾರದಲ್ಲಿ. ತ್ಯಾಗ ಸೇವೆಯೇ ಇಲ್ಲಿಯ ಮೂಲವಾಗಿದೆ. ಭಾರತದ ಈ ನೆಲದಲ್ಲಿ ಹಿಂದೂ ಆಗಿ ಹುಟ್ಟಿರುವುದು ಪುಣ್ಯದ ಫಲ. ಆದ್ದರಿಂದ ಸಮಾಜದ ಸಂಕಷ್ಟಕ್ಕೆ ಜತೆಯಾಗಿ ಸ್ಪಂದಿಸೋಣ ಎಂದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಪ್ರಾಂತ ಸಹ ಕಾರ್ಯವಾಹ ಪ್ರಕಾಶ್ ಪಿ.ಎಸ್ ಮಾತನಾಡಿ ಮನೆ ಎಂಬುದು ಕೇವಲ ಕಟ್ಟಡ ಅಲ್ಲ. ಹಣವಿದ್ದರೆ ದೊಡ್ಡದಾಗಿ ಬಂಗಲೆ ಅಥವಾ ಅರಮನೆಯನ್ನೇ ಕಟ್ಟಬಹುದಾದರೂ ಅವೆಲ್ಲವೂ ಮನೆ ಆಗಲು ಸಾಧ್ಯವಿಲ್ಲ. ಮನೆಯಲ್ಲಿ ಮಕ್ಕಳಿಗೆ ಸಂಸ್ಕಾರದ ಪಾಠವನ್ನ ತಾಯಿಯೇ ಕಲಿಸುವುದರ ಮೂಲಕ ಮನೆಯು ವಿದ್ಯಾಲಯ ಆಗಬೇಕು. ಮನೆ ಮಂದಿಯೆಲ್ಲರೂ ಜೊತೆಯಲ್ಲೇ ಸೇರಿ ದೇವರ ಮುಂದೆ ಐದು ನಿಮಿಷ ಕುಳಿತು ಜಪಿಸುವ ಮೂಲಕ ಮನೆಯನ್ನೇ ದೇವಾಲಯವಾಗಿಸಬೇಕು. ಅತಿಥಿಗಳು ಬರುವಾಗ ಜಾತಿ ಮತ ನೋಡದೆ ಸ್ವಾಗತಿಸುವ ಆದರಾಲಯ ನಮ್ಮ ಮನೆ ಆಗಬೇಕು. ಸಮಾಜಕ್ಕೆ ಕೈಲಾದಷ್ಟು ಸಹಾಯ ಮಾಡಿ ಮನೆಯನ್ನ ಸೇವಾಲಯ ಮಾಡಬೇಕೆಂದು ಕರೆ ನೀಡಿದರು.
ಬಿಜೆಪಿ ಮುಖಂಡ ಸಂತೋಷ್ ಕುಮಾರ್ ರೈ ಬೋಳಿಯಾರ್ ಮಾತನಾಡಿ ಯಾವುದೇ ಶಿಫಾರಸು ಇಲ್ಲದೆ ಸಂಘದ ಸೂಚನೆಯಂತೆ ಅಶಕ್ತ ಮಹಿಳೆ ದೇವಕಿ ಅವರ ಕುಟುಂಬಕ್ಕೆ ಮನೆ ನಿರ್ಮಿಸಲಾಗಿದೆ. ದೇವಕಿಯವರು ನನ್ನ ಹುಟ್ಟುಹಬ್ಬದ ದಿನದಂದೇ ಮನೆಗೆ ಬಂದು ತನ್ನ ಮಗಳಿಗೆ ನೆಂಟಸ್ತಿಗೆ ಬರುತ್ತಿದ್ದು ಮುರುಕಲು ಬಿದ್ದಿರುವ ಮನೆಯ ಸ್ಥಿತಿ ನೋಡಿ ಹಿಂದೆ ಹೋಗುತ್ತಿದ್ದಾರೆ ಎಂದು ಅಳಲು ತೋಡಿದ್ದು, ಮನೆಯನ್ನ ದುರಸ್ತಿ ಮಾಡುವಂತೆ ಕೋರಿದ್ದರು. ದೇವಕಿ ಅವರಿಗೆ ನೂತನ ಮನೆಯನ್ನೇ ನಿರ್ಮಿಸುವ ಬಗ್ಗೆ ಅಂದೇ ಸಂಕಲ್ಪ ಮಾಡಿದ್ದು, ಮನೆ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸಗೈದ ಮೂರೇ ತಿಂಗಳಲ್ಲಿ ಸುಸಜ್ಜಿತ ಸುಂದರ ಗೃಹ ನಿರ್ಮಾಣವಾಗಿದೆ. ಮನೆ ನಿರ್ಮಾಣಕ್ಕೆ ಗುತ್ತಿಗೆದಾರ ಜಯರಾಮ್ ಶೆಟ್ಟಿ ಅವರ ಕೊಡುಗೆ ಶ್ಲಾಘನೀಯ. ಇಂದು ದೇವಕಿಯವರ ಮೊಗದಲ್ಲಿ ಆನಂದ ಭಾಷ್ಪವನ್ನ ನೋಡಿ ನನ್ನ ಜನ್ಮ ಸಾರ್ಥಕವೆನಿಸಿದೆ ಎಂದರು.
ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ವೇದವ್ಯಾಸ ಕಾಮತ್, ಮುಗೇರ ಸಂಘದ ರಾಜ್ಯಾಧ್ಯಕ್ಷ ನಂದರಾಜ್ ಸಂಕೇಶ್ವರ, ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್, ಕಿಶೋರ್ ಕುಮಾರ್ ಪುತ್ತೂರು, ಕೈರಂಗಳ ಶಾರದಾ ಗಣಪತಿ ವಿದ್ಯಾಕೇಂದ್ರದ ಸಂಚಾಲಕ ರಾಜಾರಾಂ ಭಟ್, ಸುಳ್ಯ ಶಾಸಕರಾದ ಭಾಗೀರಥಿ ಮುರುಳ್ಯ, ನಾರ್ಯಗುತ್ತುವಿನ ಗಡಿಕಾರರಾದ ಪದ್ಮನಾಭ ರೈ ಯಾನೆ ಮಂಜು ಭಂಡಾರಿ, ಮುಗೇರ ಸಂಘದ ಪುತ್ತೂರು ತಾಲೂಕು ಅಧ್ಯಕ್ಷ ಸುಂದರ, ಉಳ್ಳಾಲ ತಾಲೂಕು ಅಧ್ಯಕ್ಷರಾದ ನಾಗೇಶ್ ಉಳ್ಳಾಲ್, ಮಂಗಳೂರು ತಾಲೂಕು ಅಧ್ಯಕ್ಷರಾದ ಸೀತಾರಾಮ ಕೊಂಚಾಡಿ, ಹಿರಿಯರಾದ ಸೇಸಪ್ಪ ಟೈಲರ್, ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ, ಗುತ್ತಿಗೆದಾರರ ಜಯಂತ್ ಶೆಟ್ಟಿ ಕಂಬಳಪದವು, ರವಿ ರೈ ಪಜೀರು ಮೊದಲಾದವರು ಉಪಸ್ಥಿತರಿದ್ದರು.
Doctor kalladka bhat inaugurates house for the disabled women at ullal in Mangalore. People can build luxury homes for the dogs but no house for the disabled women he added.
20-07-25 08:35 pm
Bangalore Correspondent
ವಾಲ್ಮೀಕಿ ನಿಗಮ ಹಗರಣ ರೀತಿಯಲ್ಲೇ ಮತ್ತೊಂದು ಹಗರಣ ;...
20-07-25 07:55 pm
Dharmasthala SIT Case, Parameshwar: ಎಸ್ಐಟಿ ರ...
20-07-25 04:24 pm
Rcb, Bangalore: ಪೊಲೀಸರು 'ಆರ್ಸಿಬಿ ಸೇವಕರು' ಎಂಬ...
19-07-25 03:05 pm
ಎಲ್ಲ ಶಾಸಕರ ಕ್ಷೇತ್ರದ ಅಭಿವೃದ್ಧಿಗೆ ತಲಾ 50 ಕೋಟಿ ಅ...
18-07-25 10:59 pm
20-07-25 04:47 pm
HK News Desk
Kerala Nurse Yemen; ನರ್ಸ್ ನಿಮಿಷಾ ಉಳಿವಿಗೆ ಗಲ್ಫ...
16-07-25 09:58 pm
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
21-07-25 04:03 am
Mangaluru Correspondent
Mangalore Bantwal Rural PSI, Suicide: ಬಂಟ್ವಾಳ...
20-07-25 10:35 pm
Dharmasthala Case, SIT, Pronab Mohanty: ಧರ್ಮಸ...
20-07-25 03:06 pm
MRPL, MP Brijesh Chowta, Mangalore: MRPL ಹಸಿರ...
19-07-25 10:01 pm
Mangalore, Derlakatte Raid: ನಿಯಮ ಉಲ್ಲಂಘಿಸಿ ಕಾ...
19-07-25 07:18 pm
20-07-25 08:52 pm
HK News Desk
ಅಮೆರಿಕ, ಕೆನಡಾದಿಂದಲೂ ವಿದೇಶಿ ಫಂಡ್, ಯುವತಿಯರೇ ಟಾರ...
20-07-25 12:16 pm
Fraudster Roshan Saldanha, Fraud: ಬಹುಕೋಟಿ ವಂಚ...
19-07-25 09:25 pm
Mangalore Conman Roshan Saldanha Arrest: ಚಾಲಾ...
19-07-25 12:26 pm
Mangalore crime, cyber crime: ಮುಂಬೈ ಪೊಲೀಸ್ ಅಧ...
18-07-25 12:40 pm