ಬ್ರೇಕಿಂಗ್ ನ್ಯೂಸ್
17-02-25 09:14 pm Mangalore Correspondent ಕರಾವಳಿ
ಮಂಗಳೂರು, ಫೆ.17: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ಹೆಚ್ಚುತ್ತಿದ್ದು, ಇದಕ್ಕೆಲ್ಲ ಗಣಿ ಇಲಾಖೆಯ ಅಧಿಕಾರಿಗಳ ವೈಫಲ್ಯವೇ ಕಾರಣ ಎಂದು ಕೆಡಿಪಿ ಸಭೆಯಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಗಣಿ ಇಲಾಖೆಯ ಹಿರಿಯ ಅಧಿಕಾರಿ ಕೃಷ್ಣವೇಣಿ ವಿರುದ್ಧ ಹರಿಹಾಯ್ದ ಪ್ರಸಂಗ ನಡೆದಿದೆ. ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರೂ ಜವಾಬ್ದಾರಿಯಿಂದ ಕೆಲಸ ಮಾಡಿ ಎಂದು ಗದರಿದ್ದಾರೆ.
ಸಭೆಯ ಅಜೆಂಡಾದಲ್ಲಿ ಮರಳುಗಾರಿಕೆ ವಿಚಾರ ಬಂದಾಗ ಎದ್ದು ನಿಂತ ಎಂಎಲ್ಸಿ ಐವಾನ್ ಡಿಸೋಜ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿಆರ್ ಝೆಡ್ ಮತ್ತು ನಾನ್ ಸಿಆರ್ ಝೆಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆ ಬಗ್ಗೆ ಸ್ಪಷ್ಟ ನೀತಿ ಇಲ್ಲದೇ ಇರುವುದರಿಂದ ಬೇಕಾಬಿಟ್ಟಿಯಾಗಿ ಮರಳು ತೆಗೆಯುತ್ತಿದ್ದಾರೆ. ಕೆಲವು ಕಡೆ ನದಿಗಳ ಮಧ್ಯದ ನಡುಗಡ್ಡೆಯನ್ನೇ ಅಗೆಯುತ್ತಿದ್ದಾರೆ. ಇದಕ್ಕೆಲ್ಲ ಪೊಲೀಸರು ಮತ್ತು ಗಣಿ ಇಲಾಖೆಯ ನಿರ್ಲಕ್ಷ್ಯ ನೀತಿಯೇ ಕಾರಣ ಎಂದು ಆರೋಪ ಮಾಡಿದರು. ಇದಕ್ಕೆ ಉಸ್ತುವಾರಿ ದಿನೇಶ್ ಗುಂಡೂರಾವ್, ಗಣಿ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಪ್ರತಿಕ್ರಿಯೆ ಕೇಳಿದರು. ಏನಮ್ಮಾ, ಯಾಕೆ ಈ ರೀತಿ ಆಗುತ್ತಿದೆ ಎಂದು ಕೇಳಿದಾಗ, ನಮ್ಮಲ್ಲಿ ಸಿಬಂದಿ ಕೊರತೆ ಇದೆ, ಆದಾಗ್ಯೂ ಕೆಲವು ಕಡೆ ದಾಳಿ ಮಾಡಿದ್ದೇವೆ, ಸಿಸಿಟಿವಿ ಇಲ್ಲದ ಕಡೆ ಪೊಲೀಸರ ಸಹಾಯ ಕೇಳಿದ್ದೇವೆ. ಸರಿಯಾದ ಸ್ಪಂದನೆ ಸಿಕ್ಕಿಲ್ಲ ಎಂದು ಸಮಜಾಯಿಷಿ ನೀಡಲೆತ್ನಿಸಿದರು.
ಈ ವೇಳೆ, ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಪ್ರತಿಕ್ರಿಯಿಸಿ, ಮರಳುಗಾರಿಕೆ ವಿಚಾರದಲ್ಲಿ ನಮಗೆ ನೇರವಾಗಿ ಕ್ರಮ ಕೈಗೊಳ್ಳುವುದಕ್ಕೆ ಬರುವುದಿಲ್ಲ. ಗಣಿ ಇಲಾಖೆಯವರು ರೆಫರ್ ಮಾಡಿದರೆ ಅಥವಾ ಸ್ಥಳೀಯರು ದೂರು ನೀಡಿದರೆ ಮಾತ್ರ ದಾಳಿ ಮಾಡಬಹುದು. ಸಿಸಿಟಿವಿ ಹಾಕುವುದು ನಮ್ಮ ಕೆಲಸ ಅಲ್ಲ. ಗಣಿ ಇಲಾಖೆಯವರೇ ಮಾಡಬೇಕು. ಪೊಲೀಸರ ಸಹಾಯ ಕೇಳಿದ್ದರೆ ಖಂಡಿತ ಜೊತೆಗೆ ಬರುತ್ತಿದ್ದರು ಎಂದು ಉಸ್ತುವಾರಿಗೆ ಉತ್ತರ ನೀಡಿದರು. ಇದೇ ವೇಳೆ, ವಿಭಾಗೀಯ ಜಂಟಿ ಆಯುಕ್ತರಾಗಿ ಉಪಸ್ಥಿತರಿದ್ದ ತುಳಸಿ ಮದ್ದಿನೇನಿ ಪ್ರತಿಕ್ರಿಯಿಸಿ, ಅಕ್ರಮ ಮರಳುಗಾರಿಕೆ ತಡೆಯುವುದು ಗಣಿ ಇಲಾಖೆ ಜವಾಬ್ದಾರಿ. ಅದನ್ನು ಬೇರೆಯವರ ತಲೆಗೆ ಹಾಕುವುದು, ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಬೇಡ. ನಿರ್ದಿಷ್ಟ ಪ್ರಕರಣಗಳಿದ್ದರೆ ಉಲ್ಲೇಖಿಸಿ ಎಂದರು. ಈ ನಡುವೆ, ನಾನ್ ಸಿಆರ್ ಝೆಡ್ ಪ್ರದೇಶದಲ್ಲಿ ಪಂಚಾಯಿತಿಗಳಿಗೆ ಪರ್ಮಿಶನ್ ಕೊಟ್ಟರೆ ಸ್ಥಳೀಯವಾಗಿ ಸಮಸ್ಯೆ ಬಗೆಹರಿಸಬಹುದು ಎಂದು ಶಾಸಕ ಹರೀಶ್ ಪೂಂಜ ಸಲಹೆಯನ್ನು ಯಾರೂ ಪರಿಗಣಿಸಲಿಲ್ಲ.
ಹೋಗಲಿ, ಅಕ್ರಮ ಮರಳುಗಾರಿಕೆ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದೀರಾ, ಅಥವಾ ನನ್ನ ಗಮನಕ್ಕೇನಾದರೂ ತಂದಿದ್ದೀರಾ.. ಎಂದು ಉಸ್ತುವಾರಿ ಸಚಿವರು, ಗಣಿ ಇಲಾಖೆ ಅಧಿಕಾರಿಯನ್ನು ಪ್ರಶ್ನೆ ಮಾಡಿದರು. ನಾವು ಜಿಲ್ಲಾಧಿಕಾರಿ ಗಮನಕ್ಕೂ ತಂದಿದ್ದೇವೆ, ಸಿಸಿಟಿವಿ ನಿರ್ವಹಣೆ ಇಲ್ಲ ಎಂಬ ಬಗ್ಗೆಯೂ ತಿಳಿಸಿದ್ದೇವೆ ಎಂದು ಹೇಳಲು ಹೋದಾಗ, ಸಿಟ್ಟಿಗೆದ್ದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ನಿಮ್ಮ ಜವಾಬ್ದಾರಿ ಏನಮ್ಮಾ.. ನೀವೊಬ್ಬರು ಜಿಲ್ಲಾ ಮಟ್ಟದ ಅಧಿಕಾರಿಯಾಗಿದ್ದು ಬೇರೆ ಇಲಾಖೆಯವರು ಸ್ಪಂದಿಸಿಲ್ಲ. ಸಿಸಿಟಿವಿ ಮೆಂಟೇನೆನ್ಸ್ ಇಲ್ಲವೆಂದು ಯಾರಿಗೇಳುತ್ತೀರಿ. ಅದು ಸರಿಯಾಗಿಲ್ಲ ಅಂದರೆ ರಿಪೋರ್ಟ್ ಮಾಡಬೇಕಿತ್ತು. ಮಾಡಿದ್ದೀರಾ ಎಂದು ಗರಂ ಆಗಿಯೇ ಪ್ರಶ್ನೆ ಮಾಡಿದರು. ಅಧಿಕಾರಿ ಉತ್ತರದಿಂದ ಅಸಮಾಧಾನಗೊಂಡ ಉಸ್ತುವಾರಿ, ನೀವು ಅವರು ಸರಿ ಇಲ್ಲ, ಇವರು ಸರಿ ಇಲ್ಲ. ನೀವು ಮಾತ್ರ ಸರಿ ಇದ್ದೀರಿ ಅಂತ ಹೇಳುತ್ತಿದ್ದೀರಾ.. ಅಧಿಕಪ್ರಸಂಗಿತನ ಮಾಡೋದು ಬಿಡಿ. ನಿಮ್ಮ ಜವಾಬ್ದಾರಿ ಏನು, ಎಷ್ಟು ರೈಡ್ ಮಾಡಿದ್ದೀರಿ, ಎಷ್ಟು ಕೇಸ್ ಬುಕ್ ಮಾಡಿದ್ದೀರಿ. ಎಲ್ಲೆಲ್ಲ ಅಕ್ರಮ ಆಗುತ್ತಿದೆ ಎಂದು ವಿಡಿಯೋ ವಿತ್ ಕಂಪ್ಲೇಂಟ್ ಮಾಡಿದ್ದೀರಾ ಎಂದು ಜೋರು ಮಾಡಿದರು.
60 ಕಡೆ ಸಿಸಿಟಿವಿ ಹಾಕಲು ಹೇಳಿದ್ದೇವೆ, ಈವರೆಗೆ 42 ಕೇಸ್ ಬುಕ್ ಮಾಡಿದ್ದೀವಿ ಎನ್ನುತ್ತ ಮತ್ತೆ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಉತ್ತರವನ್ನಷ್ಟೇ ಕೃಷ್ಣವೇಣಿ ನೀಡಿದರು. ಆದಾಯಕ್ಕಿಂತ ಹೆಚ್ಚು ಆಸ್ತಿ ಮಾಡಿದ್ದಾರೆಂದು ಇದೇ ಅಧಿಕಾರಿ ಮೇಲೆ ಇತ್ತೀಚೆಗೆ ಲೋಕಾಯುಕ್ತ ದಾಳಿಯಾಗಿತ್ತು. ಈ ವೇಳೆ ಹತ್ತು ಕೋಟಿಗೂ ಹೆಚ್ಚು ಆಸ್ತಿ ಹೊಂದಿರುವುದು ಬೆಳಕಿಗೆ ಬಂದಿತ್ತು. ಕೆಡಿಪಿ ಸಭೆಗೂ ಮುನ್ನ ಇಂಥ ಅಧಿಕಾರಿಯನ್ನು ಗಣಿ ಇಲಾಖೆಯಲ್ಲಿ ಉಳಿಸಿಕೊಂಡಿದ್ದೀರಲ್ವಾ ಎಂದು ಪತ್ರಕರ್ತರು ಉಸ್ತುವಾರಿ ಸಚಿವರಲ್ಲಿ ಪ್ರಶ್ನೆ ಮಾಡಿದ್ದರು. ಈ ಬಗ್ಗೆ ಗಣಿ ಇಲಾಖೆಯ ಸಚಿವರಲ್ಲಿ ಮಾತನಾಡುತ್ತೇನೆ ಎಂದು ಹೇಳಿದ್ದರು.
ಕೆಡಿಪಿ ಸಭೆಯಲ್ಲೂ ಜಿಲ್ಲಾಧಿಕಾರಿ ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳು ಗಣಿ ಇಲಾಖೆಯ ಅಧಿಕಾರಿ ಬಗ್ಗೆಯೇ ಗರಂ ಮಾತುಗಳನ್ನಾಡಿದರೂ ಉಸ್ತುವಾರಿ ಸಚಿವರು ಅಧಿಕಾರಿ ವಿರುದ್ಧ ಯಾವುದೇ ನಿರ್ಣಯ ಅಂಗೀಕರಿಸಲಿಲ್ಲ. ಅಕ್ರಮ ಮರಳುಗಾರಿಕೆ ನಿಲ್ಲಿಸಲು ಟಾಸ್ಕ್ ಫೋರ್ಸ್ ರಚನೆ ಬಗ್ಗೆಯೂ ಹೇಳಲಿಲ್ಲ. ಶಾಸಕರಾದ ರಾಜೇಶ್ ನಾಯ್ಕ್, ವೇದವ್ಯಾಸ ಕಾಮತ್, ಹರೀಶ್ ಪೂಂಜ, ಐವಾನ್ಧ ಡಿಸೋಜ, ನಂಜಯ ಸರ್ಜಿ, ಕಿಶೋರ್ ಕುಮಾರ್ ಉಪಸ್ಥಿತರಿದ್ದರು.
In charge Minister Dinesh Gundurao slams Mines and Geology Department Officer of Krishnaveni over poor work at KDP Meeting and for blaming police department over non stop illegal mining in Mangalore.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm