Rani Abbakka, Mamata Ballal, Mangalore: ಐನೂರು ವರ್ಷಗಳ ಹಿಂದೆಯೇ ಪೋರ್ಚುಗೀಸರ ಹುಟ್ಟಡಗಿಸಿದ ಅಬ್ಬಕ್ಕಳಿಗೆ ರಾಷ್ಟ್ರೀಯ ಮಾನ್ಯತೆ ಸಿಕ್ಕಿಲ್ಲ ; ರಾಣಿ ಅಬ್ಬಕ್ಕ ವಂಶಸ್ಥೆ ಮಮತಾ ಬಳ್ಳಾಲ್ ಖೇದ 

23-02-25 01:12 pm       Bangalore Correspondent   ಕರಾವಳಿ

ಭಾರತದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ಉಳ್ಳಾಲದ ವೀರರಾಣಿ ಅಬ್ಬಕ್ಕ 500 ವರ್ಷಗಳ ಹಿಂದೆಯೇ ತುಳುನಾಡಿನಲ್ಲಿ ಆಳ್ವಿಕೆ ನಡೆಸಿದ್ದಲ್ಲದೆ, ಪೋರ್ಚುಗೀಸರ ಹುಟ್ಟಡಗಿಸಿದ್ದರು. ಅಂತಹ ಕೆಚ್ಚೆದೆಯ ರಾಣಿ ಅಬ್ಬಕ್ಕಳಿಗೆ ಈ ದೇಶದಲ್ಲಿ 200 ವರ್ಷಗಳ ಹಿಂದೆ ಆಳ್ವಿಕೆ ನಡೆಸಿದ ರಾಣಿಯರಂತೆ ರಾಷ್ಟ್ರ ಮಟ್ಟದಲ್ಲಿ ಪ್ರಚಾರ, ಸ್ಥಾನಮಾನ ಸಿಗಲಿಲ್ಲ ಎಂದು ಅಬ್ಬಕ್ಕ ವಂಶಸ್ಥರು, ಮೂಡಬಿದಿರೆಯ ಚೌಟರ ಅರಮನೆಯ ಮಮತಾ ಬಳ್ಳಾಲ್ ಖೇದ ವ್ಯಕ್ತಪಡಿಸಿದರು.

ಉಳ್ಳಾಲ, ಫೆ.23: ಭಾರತದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ಉಳ್ಳಾಲದ ವೀರರಾಣಿ ಅಬ್ಬಕ್ಕ 500 ವರ್ಷಗಳ ಹಿಂದೆಯೇ ತುಳುನಾಡಿನಲ್ಲಿ ಆಳ್ವಿಕೆ ನಡೆಸಿದ್ದಲ್ಲದೆ, ಪೋರ್ಚುಗೀಸರ ಹುಟ್ಟಡಗಿಸಿದ್ದರು. ಅಂತಹ ಕೆಚ್ಚೆದೆಯ ರಾಣಿ ಅಬ್ಬಕ್ಕಳಿಗೆ ಈ ದೇಶದಲ್ಲಿ 200 ವರ್ಷಗಳ ಹಿಂದೆ ಆಳ್ವಿಕೆ ನಡೆಸಿದ ರಾಣಿಯರಂತೆ ರಾಷ್ಟ್ರ ಮಟ್ಟದಲ್ಲಿ ಪ್ರಚಾರ, ಸ್ಥಾನಮಾನ ಸಿಗಲಿಲ್ಲ ಎಂದು ಅಬ್ಬಕ್ಕ ವಂಶಸ್ಥರು, ಮೂಡಬಿದಿರೆಯ ಚೌಟರ ಅರಮನೆಯ ಮಮತಾ ಬಳ್ಳಾಲ್ ಖೇದ ವ್ಯಕ್ತಪಡಿಸಿದರು.

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮತ್ತು ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಆಶ್ರಯದಲ್ಲಿ ಉಳ್ಳಾಲ ನಗರಸಭೆ ಆವರಣದಲ್ಲಿರುವ ಮಹಾತ್ಮ ಗಾಂಧಿ ರಂಗಮಂದಿರದಲ್ಲಿ ಶನಿವಾರ ನಡೆದ 28ನೇ ವರ್ಷದ ವೀರರಾಣಿ ಅಬ್ಬಕ್ಕ ಉತ್ಸವವನ್ನ ಉದ್ಘಾಟಿಸಿ ಅವರು ಮಾತನಾಡಿದರು. ಹಲವು ದಶಕಗಳ ಹಿಂದಿನಿಂದಲೂ ಇತರ ರಾಣಿಯರ ಕುರಿತಾಗಿ ಸಿಕ್ಕಂತೆ ಪುಸ್ತಕ ರೂಪದಲ್ಲಿ ರಾಣಿ ಅಬ್ಬಕ್ಕಳಿಗೆ ಪ್ರಚಾರ ಸಿಗಲಿಲ್ಲ. ಹಾಗಿದ್ದರೂ ಕಳೆದ ಎರಡು ದಶಕಗಳಿಂದ ಉಳ್ಳಾಲ ರಾಣಿ ಅಬ್ಬಕ್ಕ ಉತ್ಸವ ಸಮಿತಿಯಿಂದ ಪುಸ್ತಕ, ಯಕ್ಷಗಾನ, ನಾಟಕ, ಸಿಡಿ, ಕಾರ್ಯಗಾರ, ಅಧ್ಯಯನ ಪೀಠ, ನೌಕೆಯೊಂದಕ್ಕೆ ರಾಣಿ ಅಬ್ಬಕ್ಕಳ ಹೆಸರಿಡುವ ಮೂಲಕ ಹೆಚ್ಚಿನ ಪ್ರಚಾರ ನೀಡುವ ಪ್ರಯತ್ನ ನಡೆದಿದೆ. ಬೆಂಗಳೂರು ಕಟ್ಟಿದ ಕೆಂಪೇಗೌಡರ ಹೆಸರನ್ನ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಟ್ಟ ರೀತಿಯಲ್ಲೇ, ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ರಾಣಿ ಅಬ್ಬಕ್ಕಳ ಹೆಸರಿಡಬೇಕೆಂದು ಇಂಗಿತ ವ್ಯಕ್ತಪಡಿಸಿದರು.

ಸಂಸದ ಕ್ಯಾ.ಬೃಜೇಶ್ ಚೌಟ ಮಾತನಾಡಿ ಅಬ್ಬಕ್ಕ ಉತ್ಸವವು ಕೇವಲ ಒಂದು ದಿನಕ್ಕೆ ಸೀಮಿತವಾಗದೆ ದೇಶಪ್ರೇಮವನ್ನ ಮೊಳಗಿಸುವ ಕಾರ್ಯಕ್ರಮಗಳೊಂದಿಗೆ ವಿಶೇಷವಾಗಿ ಮೂಡಿಬರುವಂತೆ ಮಾಡಲು ಉತ್ಸವ ಸಮಿತಿ ಜೊತೆ ನಿಂತು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆಂದು ಹೇಳಿದರು.

ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಮಾತನಾಡಿ ಅಬ್ಬಕ್ಕ ಉತ್ಸವ ಸಮಿತಿಯ ಕಾರ್ಯವೈಖರಿ ಮನ ಗೆದ್ದಿದ್ದು ಅಬ್ಬಕ್ಕ ಉತ್ಸವ ಆಚರಣೆಗೆ ಮುಂದಿನ ವರ್ಷದಿಂದ 10 ಲಕ್ಷ ರೂ. ಪ್ರತೀ ವರ್ಷ ಪ್ರಾಧಿಕಾರದಿಂದ ಮಂಜೂರು ಮಾಡುವುದಾಗಿ ಹಾಗೂ ಅಬ್ಬಕ್ಕ ಸಂಕಥನದ 2000 ಪ್ರತಿಗಳನ್ನ ಮರು ಮುದ್ರಿಸಿ ಕೊಡುವುದಾಗಿ ಹೇಳಿದರು. ಪ್ರತೀ ವರುಷ ಪ್ರಾಧಿಕಾರದ ವತಿಯಿಂದ ರಾಜ್ಯ ಕಂಡ ಮಹಾನುಭಾವರ ಹೆಸರಲ್ಲಿ ಒಂದು ಲಕ್ಷ ರೂಪಾಯಿ ಪ್ರೋತ್ಸಾಹ ಧನದೊಂದಿಗೆ ಮೂರು ಪ್ರಶಸ್ತಿಗಳನ್ನ ನೀಡುತ್ತಿದ್ದೇವೆ. ಮುಂದೆ ಅಬ್ಬಕ್ಕ ರಾಣಿಯ ಹೆಸರಲ್ಲೂ ಸಾಧಕ ಹೆಣ್ಮಕ್ಕಳಿಗೆ ಒಂದು ಲಕ್ಷ ರೂಪಾಯಿ ಪ್ರೋತ್ಸಾಹ ಧನದೊಂದಿಗೆ ಪ್ರಶಸ್ತಿಯನ್ನ ನೀಡುವ ಬಗ್ಗೆ ನಿರ್ಣಯ ತೆಗೆದುಕೊಳ್ಳುತ್ತೇವೆಂದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಸಾಹಿತ್ಯ ಕ್ಷೇತ್ರದ ಸಾಧಕಿ ಕ್ಯಾಥರೀನ್ ರೊಡ್ರಿಗಸ್, ಸಮಾಜ ಸೇವೆಯ ಸಾಧಕಿ ಸುವಾಸಿನಿ ಜೆ. ಬಬ್ಬುಕಟ್ಟೆ ಅವರಿಗೆ ಅಬ್ಬಕ್ಕ ಪ್ರಶಸ್ತಿಯನ್ನು ಪ್ರದಾನಿಸಲಾಯಿತು. ಉಳ್ಳಾಲ ನಗರಸಭೆಯ ಉಪಾಧ್ಯಕ್ಷೆ ಸಪ್ನ ಹರೀಶ್ ಅಧ್ಯಕ್ಷತೆ ವಹಿಸಿ ವಿವಿಧ ಗೋಷ್ಠಿಗಳನ್ನು ಉದ್ಘಾಟಿಸಿದರು. ದಿ ಮೈಸೂರು ಎಲೆಕ್ಟ್ರಿಕಲ್ಸ್ ಇಂಡಸ್ಟ್ರೀಸ್ ಲಿ.ನ ನಿಕಟಪೂರ್ವ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ರಾಜ್ಯ ಅಲೆಮಾರಿ ಅರೆ ಅಲೆಮಾರಿ ನಿಗಮದ ನಿಕಟಪೂರ್ವ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಅಬ್ಬಕ್ಕ ಉತ್ಸವ ಸಮಿತಿ ಅಧ್ಯಕ್ಷ ದಿನಕರ್ ಉಳ್ಳಾಲ್ ಮೊದಲಾದವರು ಉಪಸ್ಥಿತರಿದ್ದರು.

In a significant bid to bring attention to the historic town of Abbakkali, which was established by Portuguese explorers five centuries ago, local descendant Mamata Ballal Kheda is advocating for national recognition of its rich heritage. Despite its deep-rooted history and connection to Rani Abbakka, a celebrated figure in Indian history known for her brave resistance against colonial powers, Abbakkali has remained largely overlooked on the national stage.