Mangalore, Terror Attack, Doctor Post: ಹೈಲ್ಯಾಂಡ್ ಆಸ್ಪತ್ರೆ ವೈದ್ಯೆಯ ಕಮೆಂಟ್ ಗೂಢಾರ್ಥ ಏನು? ಹಿಂದು ವಿರೋಧಿಯೇ? ದೇಶ ವಿರೋಧಿಯೇ..? ಜಾಲತಾಣದಲ್ಲಿ ವೈರಲ್ ! 

27-04-25 11:09 pm       Mangalore Correspondent   ಕರಾವಳಿ

ನಗರದ ಹೈಲ್ಯಾಂಡ್ ಆಸ್ಪತ್ರೆಯ ವೈದ್ಯೆಯೊಬ್ಬರು ತಮ್ಮ ಎಕ್ಸ್ ಜಾಲತಾಣದಲ್ಲಿ ಭಾರತ ಮತ್ತು ಹಿಂದುಗಳನ್ನು ದ್ವೇಷಿಸುತ್ತೇನೆ ಎಂಬ ರೀತಿ ಕಮೆಂಟ್ ಮಾಡಿರುವುದಾಗಿ ಜಾಲತಾಣದಲ್ಲಿ ಸ್ಕ್ರೀನ್ ಶಾಟ್ ವೈರಲ್ ಆಗಿದ್ದು, ಹಿಂದು ಸಂಘಟನೆಗಳ ಆಕ್ಷೇಪಕ್ಕೆ ಕಾರಣವಾಗಿದೆ.

ಮಂಗಳೂರು, ಎ.27 : ನಗರದ ಹೈಲ್ಯಾಂಡ್ ಆಸ್ಪತ್ರೆಯ ವೈದ್ಯೆಯೊಬ್ಬರು ತಮ್ಮ ಎಕ್ಸ್ ಜಾಲತಾಣದಲ್ಲಿ ಭಾರತ ಮತ್ತು ಹಿಂದುಗಳನ್ನು ದ್ವೇಷಿಸುತ್ತೇನೆ ಎಂಬ ರೀತಿ ಕಮೆಂಟ್ ಮಾಡಿರುವುದಾಗಿ ಜಾಲತಾಣದಲ್ಲಿ ಸ್ಕ್ರೀನ್ ಶಾಟ್ ವೈರಲ್ ಆಗಿದ್ದು, ಹಿಂದು ಸಂಘಟನೆಗಳ ಆಕ್ಷೇಪಕ್ಕೆ ಕಾರಣವಾಗಿದೆ.

ಎಕ್ಸ್ ಖಾತೆಯಲ್ಲಿ ಆಕೆ ಕಮೆಂಟ್ ಹಾಕಿರುವ ಸ್ಕ್ರೀನ್ ಶಾಟನ್ನು ವಿಶ್ವ ಹಿಂದು ಪರಿಷತ್ ಮುಖಂಡ ಶರಣ್ ಪಂಪ್ವೆಲ್ ತಮ್ಮ ಫೇಸ್ಬುಕ್ ನಲ್ಲಿ ಹಾಕಿದ್ದು, ಈ ಬಗ್ಗೆ ಮಂಗಳೂರು ಪೊಲೀಸರು ಕ್ರಮ ಜರುಗಿಸಬೇಕೆಂದು ಆಗ್ರಹ ಮಾಡಿದ್ದಾರೆ. ಕಾಶ್ಮೀರದ ಭಯೋತ್ಪಾದಕ ದಾಳಿಯಲ್ಲಿ ಹಿಂದುಗಳನ್ನು ಗುರಿಯಾಗಿಸಿ ಉಗ್ರರು ಗುಂಡು ಹಾರಿಸಿದ್ದು ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ. ಈ ಬಗ್ಗೆ ಪಾಕಿಸ್ತಾನಿ ಉಗ್ರರ ವಿರುದ್ಧ ಕ್ರಮ ಜರುಗಿಸಬೇಕೆಂದು ದೇಶಾದ್ಯಂತ ಆಗ್ರಹ ಕೇಳಿಬರುತ್ತಿದೆ. ಇದರ ಬಗ್ಗೆ ಪರ- ವಿರೋಧ ಚರ್ಚೆಯೂ ನಡೆಯುತ್ತಿದ್ದು, ಈ ಹೊತ್ತಿನಲ್ಲೇ ಮಂಗಳೂರಿನ ವೈದ್ಯೆ ಆಕ್ಷೇಪಾರ್ಹ ಕಮೆಂಟ್ ಹಾಕಿದ್ದಾರೆಂದು ಜಾಲತಾಣದಲ್ಲಿ ವೈರಲ್ ಮಾಡಲಾಗಿದೆ. 

Help stinky hindus behind me (ನನ್ನ ಹಿಂದೆ ಬಿದ್ದಿರುವ ಕೊಳಕು ಹಿಂದುಗಳಿಗೆ ಸಹಾಯ ಮಾಡಿ) ಎಂದು ಯಾರದ್ದೋ ಕಮೆಂಟಿಗೆ ಪ್ರತಿಕ್ರಿಯೆಯಾಗಿ ವೈದ್ಯೆ ಉತ್ತರ ನೀಡಿರುವಂತಿದೆ. ಮತ್ತೊಂದು ಕಮೆಂಟಿನಲ್ಲಿ am I Indian? Yes. Do I Hate India? Yes.. (ನಾನು ಭಾರತೀಯಳಾ..? ಹೌದು.. ನಾನು ಭಾರತವನ್ನು ದ್ವೇಷಿಸುತ್ತೀನಾ? ಹೌದು..) ಎಂದು ಪೋಸ್ಟ್ ಹಾಕಿದ್ದಾರೆ. ಮೇಲ್ನೋಟಕ್ಕೆ ಹಿಂದು ವಿರೋಧಿ ಕಮೆಂಟ್, ದೇಶ ವಿರೋಧಿ ಎಂದು ತೋರಿದರೂ, ಇದರ ವಾಕ್ಯಾರ್ಥ ನೇರವಾಗಿ ಆ ರೀತಿಯ ಭಾವನೆ ಬಿಂಬಿಸುತ್ತಿಲ್ಲ. ತನ್ನ ಹಿಂದೆ ಬಿದ್ದು ಕಮೆಂಟ್ ಹಾಕುತ್ತಿರುವವರನ್ನು ಮಾತ್ರ ಕೊಳಕು, ಕೆಟ್ಟ ಹಿಂದುಗಳೆಂದು ಈಕೆ ಜರೆದಿದ್ದಾರೆ. ಇನ್ನೊಂದು ವಾಕ್ಯದಲ್ಲಿ ನಾನು ಭಾರತವನ್ನು ದ್ವೇಷಿಸುತ್ತೀನಾ ಎಂದು ಕೇಳಿ ಹೌದು ಎಂದು ಹೇಳಿ ಅಪಾರ್ಥಕ್ಕೆ ಎಡೆ ಮಾಡಿದ್ದಾರೆ. 

ಪರ- ವಿರೋಧ ಹೇಳಿಕೆಯ ಪೂರ್ತಿ ಕಮೆಂಟ್ ನೋಡಿದರೆ ಇದರ ಹಿಂದಿನ ಭಾವಾರ್ಥ ತಿಳಿಯಬಹುದು. ಈ ಬಗ್ಗೆ ಜಾಲತಾಣದಲ್ಲಿ ಮಾತ್ರ ಇದನ್ನೇ ಅನುವಾದಿಸಿ (ಕಾಪಾಡಿ, ಕೊಳಕು ಹಿಂದುಗಳು ನನ್ನ ಹಿಂದೆ ಇದ್ದಾರೆ ಮತ್ತು ಹೌದು ನಾನು ಭಾರತೀಯಳು. ಹೌದು ನಾನು ಭಾರತವನ್ನು ದ್ವೇಷಿಸುತ್ತೇನೆ) ಬರೆಯಲಾಗಿದೆ. ಇದನ್ನು ವೈರಲ್ ಮಾಡಲಾಗಿದ್ದು ಪೊಲೀಸರು ಕ್ರಮ ಜರುಗಿಸಬೇಕೆಂದು ಸಂಘಟನೆ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ.

A recent statement by a doctor in Mangalore on twitter has ignited a heated debate, with accusations ranging from anti-Hindu sentiments to anti-national rhetoric. Fact Check by Headline Karnataka.