ಬ್ರೇಕಿಂಗ್ ನ್ಯೂಸ್
29-04-25 11:38 am Mangalore Correspondent ಕರಾವಳಿ
ಮಂಗಳೂರು, ಎ.29 : ಜಾಲತಾಣದಲ್ಲಿ ದೇಶ ವಿರೋಧಿ ಪೋಸ್ಟ್ ಹಾಕಿದ್ದ ಆರೋಪದಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದ ಮಹಿಳಾ ವೈದ್ಯೆಯನ್ನು ನಗರದ ಹೈಲ್ಯಾಂಡ್ ಆಸ್ಪತ್ರೆ ಸೇವೆಯಿಂದ ತೆರವು ಮಾಡಿದೆ. ಹಿಂದುಗಳ ಬಗ್ಗೆ ಮತ್ತು ದೇಶದ ವಿರುದ್ಧವಾಗಿ ಅರ್ಥ ಬರುವ ರೀತಿಯಲ್ಲಿ ವೈದ್ಯೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದರು.
ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಯ ಮಹಿಳಾ ವೈದ್ಯೆಯೊಬ್ಬರು ವಿವಾದಾತ್ಮಕ ಪೋಸ್ಟ್ ಹಾಕಿದ್ದರು. HELP STINKY HINDUS BEHIMD ME ( ನನ್ನ ಹಿಂದೆ ಬಿದ್ದಿರುವ ಕೊಳಕು ಹಿಂದೂಗಳಿಗೆ ಸಹಾಯ ಮಾಡಿ) ಮತ್ತು ಚರ್ಚೆಯ ನಡುವೆ ಟೀಕೆಗೆ ಉತ್ತರವಾಗಿ AM I INDIAN ? YES, DO I HATE INDIA ? YES, (ನಾನೂ ಭಾರತೀಯಳೇ, ನಾನು ಭಾರತವನ್ನು ದ್ವೇಷಿಸುತ್ತೇನೆ, ಹೌದು) ಎಂಬ ವಾಕ್ಯಗಳನ್ನು ಬರೆದು ಹಾಕಿದ್ದರು.
ಹೀಗೆಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಅಫೀಫ ಫಾತೀಮಾ ಎಂಬ ಮಹಿಳಾ ವೈದ್ಯೆಯ ವಿರುದ್ಧ ಕ್ರಮಕ್ಕೆ ಆಗ್ರಹ ಕೇಳಿಬಂದಿತ್ತು. ವಿವಾದಾತ್ಮಕ ಪೋಸ್ಟ್ ವಿರುದ್ಧ ಆಕ್ರೋಶ ಭುಗಿಲೆದ್ದಿದ್ದರಿಂದ ಹೈಲ್ಯಾಂಡ್ ಆಸ್ಪತ್ರೆಯ ಆಡಳಿತ ಮಂಡಳಿ ಅಫೀಫಾ ಅವರನ್ನು ಆಸ್ಪತ್ರೆಯಿಂದ ವಜಾಗೊಳಿಸಿದೆ.
ಇದಲ್ಲದೆ, ವಿವಾದಾತ್ಮಕ ಪೋಸ್ಟ್ ಹಿನ್ನೆಲೆಯಲ್ಲಿ ಹೈಲ್ಯಾಂಡ್ ಆಸ್ಪತ್ರೆ ಹೆಚ್.ಆರ್ ಅಧಿಕಾರಿ ಮಹಮ್ಮದ್ ಅಸ್ಲಾಂ ಅವರು ಅಫೀಫಾ ವಿರುದ್ದ ಪೊಲೀಸ್ ದೂರು ನೀಡಿದ್ದು ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. BNS ಕಲಂ 196(1)(a), 353(2) ಅಡಿಯಲ್ಲಿ FIR ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
A doctor working at Highland Hospital has been dismissed from service following allegations of sharing an anti-national post on social media. The action was taken after the post went viral and drew sharp criticism from various quarters.
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
18-09-25 02:42 pm
Mangalore Correspondent
ಜಾತಿ ಗಣತಿ ಮೊದಲೇ ಮನೆಗಳಿಗೆ ಸ್ಟಿಕ್ಕರ್ ಅಂಟಿಸಿ ಗೊಂ...
18-09-25 02:19 pm
Dharmasthala: ಬಂಗ್ಲೆಗುಡ್ಡೆ ಕಾಡಿನಲ್ಲಿ 9 ಕಡೆ ಮನ...
17-09-25 11:05 pm
Mahesh Shetty Timarodi, Arms, FIR: ಮಹೇಶ್ ಶೆಟ್...
17-09-25 10:37 pm
Poonja International Hotel, Prabhakar Poonja...
17-09-25 10:06 pm
18-09-25 11:44 am
HK News Desk
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm