Mangalore, Ullal Nethravathi Bridge: ಉಳ್ಳಾಲ ನೇತ್ರಾವತಿ ಸೇತುವೆ ಮೇ 3ಕ್ಕೆ ಓಪನ್ ; ಎರಡು ದಿನ ವಿಸ್ತರಣೆಗೆ ಜಿಲ್ಲಾಧಿಕಾರಿ ಒಪ್ಪಿಗೆ

29-04-25 05:45 pm       Mangalore Correspondent   ಕರಾವಳಿ

ಉಳ್ಳಾಲದ ನೇತ್ರಾವತಿ ಸೇತುವೆಯಲ್ಲಿ ವಾಹನ ಸಂಚಾರ ಮುಕ್ತಗೊಳಿಸಲು ಇನ್ನೆರಡು ದಿನ ಕಾಯಬೇಕಾಗಿದೆ. ಎಪ್ರಿಲ್ 1ರಿಂದ 30ರ ವರೆಗೆ ಒಂದು ಬದಿಯ ಸೇತುವೆಯಲ್ಲಿ ಸಂಚಾರ ಸ್ಥಗಿತಗೊಳಿಸಿ ದುರಸ್ತಿ ನಡೆಸಲಾಗಿತ್ತು. ಇದೀಗ ದುರಸ್ತಿ ಕಾರ್ಯ ಮುಗಿದಿದ್ದು, ಮೇ 3ರಂದು ಬೆಳಗ್ಗಿನಿಂದ ಸಂಪೂರ್ಣ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಹೈವೇ ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳೂರು, ಎ.29 : ಉಳ್ಳಾಲದ ನೇತ್ರಾವತಿ ಸೇತುವೆಯಲ್ಲಿ ವಾಹನ ಸಂಚಾರ ಮುಕ್ತಗೊಳಿಸಲು ಇನ್ನೆರಡು ದಿನ ಕಾಯಬೇಕಾಗಿದೆ. ಎಪ್ರಿಲ್ 1ರಿಂದ 30ರ ವರೆಗೆ ಒಂದು ಬದಿಯ ಸೇತುವೆಯಲ್ಲಿ ಸಂಚಾರ ಸ್ಥಗಿತಗೊಳಿಸಿ ದುರಸ್ತಿ ನಡೆಸಲಾಗಿತ್ತು. ಇದೀಗ ದುರಸ್ತಿ ಕಾರ್ಯ ಮುಗಿದಿದ್ದು, ಮೇ 3ರಂದು ಬೆಳಗ್ಗಿನಿಂದ ಸಂಪೂರ್ಣ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಹೈವೇ ಅಧಿಕಾರಿಗಳು ತಿಳಿಸಿದ್ದಾರೆ.

ತೊಕ್ಕೊಟ್ಟಿನಿಂದ ಮಂಗಳೂರಿನ ಕಡೆಗೆ ಬರುವ ಸೇತುವೆಯಲ್ಲಿ ಒಟ್ಟು 24 ಪಿಲ್ಲರ್ ಗಳಿದ್ದು 12 ಕಡೆಗಳಲ್ಲಿ ಬೇರಿಂಗ್ ಅಳವಡಿಸಲಾಗಿದೆ. ಬೇರಿಂಗ್ ಅಳವಡಿಸುವುದು ಸೂಕ್ಷ್ಮ ಕೆಲಸವಾಗಿದ್ದು, ಪಿಲ್ಲರ್ ಕಂಬದ ಮೇಲ್ಭಾಗದಲ್ಲಿ ಹೋಗಿ ಇಬ್ಬರಿಗಷ್ಟೇ ದುರಸ್ತಿ ನಿರ್ವಹಿಸಲು ಸಾಧ್ಯವಾಗುತ್ತದೆ. ಹಾಗಾಗಿ ಒಂದು ತಿಂಗಳು ಸಮಯ ಬೇಕಾಯಿತು. ಕೊನೆಯ ಬೇರಿಂಗ್ ಎಪ್ರಿಲ್ 28ರಂದು ಅಳವಡಿಸಲಾಗಿದ್ದು, ಅದರ ಕ್ಯೂರಿಂಗ್ ಆಗಲು ನಾಲ್ಕು ದಿನ ಬೇಕಾಗುತ್ತದೆ. ಅದಕ್ಕಾಗಿ ಸಂಚಾರ ಸ್ಥಗಿತ ಆದೇಶ ಎರಡು ದಿನ ವಿಸ್ತರಿಸಲು ಜಿಲ್ಲಾಧಿಕಾರಿಗೆ ಬರೆದಿದ್ದು ಅನುಮತಿ ನೀಡಿದ್ದಾರೆ. ಮೇ 2ರಂದು ಸಂಜೆಯ ವೇಳೆಗೆ ಸಂಚಾರಕ್ಕೆ ಮುಕ್ತಗೊಳಿಸುತ್ತಿದ್ದು, 3ರಿಂದ ಪೂರ್ತಿಯಾಗಿ ಮುಕ್ತ ಮಾಡುತ್ತೇವೆ ಎಂದು ಕಾಮಗಾರಿ ನಿರ್ವಹಿಸಿದ ಮುಂಬೈ ಮೂಲದ ಕಂಪನಿಯ ಇಂಜಿನಿಯರ್ ಅಜಯ್ ಮಾಹಿತಿ ನೀಡಿದ್ದಾರೆ.

ಉಳ್ಳಾಲದಿಂದ ಮಂಗಳೂರು ಸಂಪರ್ಕಿಸುವ ನೇತ್ರಾವತಿಯಲ್ಲಿ ಎರಡು ಸೇತುವೆಗಳಿದ್ದು, ಒಂದರಲ್ಲಿ ದುರಸ್ತಿ ಕಾರ್ಯ ಇದ್ದುದರಿಂದ ಎಪ್ರಿಲ್ ತಿಂಗಳು ಪೂರ್ತಿಯಾಗಿ ಸಂಚಾರ ಬಂದ್ ಮಾಡಲಾಗಿತ್ತು. ಹೀಗಾಗಿ ಒಂದೇ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ಟ್ರಾಫಿಕ್ ಜಾಮ್ ನೊಂದಿಗೆ ಸಾಗಬೇಕಾಗಿತ್ತು. ಇದರಿಂದಾಗಿ ತುರ್ತಾಗಿ ಸಂಚರಿಸಬೇಕಿದ್ದವರು ತುಂಬಾನೇ ಪ್ರಯಾಸ ಪಟ್ಟಿದ್ದರು. ಇದೀಗ ಎಪ್ರಿಲ್ 30ರ ಗಡುವು ಮತ್ತೆರಡು ದಿನಕ್ಕೆ ವಿಸ್ತರಣೆಯಾಗಿದ್ದು, ಮೇ 3ರ ವೇಳೆಗೆ ವಾಹನ ಸಂಚಾರಕ್ಕೆ ಅನುಮತಿ ಸಿಗುವ ನಿರೀಕ್ಷೆಯಿದೆ.

The much-awaited Ullal Nethravathi Bridge is set to be inaugurated on May 3, bringing relief to commuters traveling between Mangaluru and Ullal. The district administration has granted a two-day extension to the project contractor to complete the final touches before the official opening.