Mangalore, Hate speech, BJP MLA Harish Poonja; ಅಯೋಧ್ಯೆಯಲ್ಲಿ ಮಂದಿರ ಕಟ್ಟಲು 500 ವರ್ಷ, ತೆಕ್ಕಾರಿನಲ್ಲಿ ಟಿಪ್ಪು ಒಡೆದ ದೇವಸ್ಥಾನ ಕಟ್ಟಲು ಇಷ್ಟು ವರ್ಷ ಬೇಕಾಯಿತು ; ಮುಸ್ಲಿಮರಲ್ಲೂ 73 ಜಾತಿಗಳಿವೆ, ನಮಗೆ ಮಾತ್ರ ತಿಳಿದಿಲ್ಲ, ಎಷ್ಟು ಪೆಟ್ಟು ಕೊಟ್ಟರೂ ಹಿಂದು ಏಳಲ್ಲ..!  

04-05-25 08:49 pm       Mangalore Correspondent   ಕರಾವಳಿ

ನಮ್ಮ ಹಿಂದು ಸಮಾಜ ಎದ್ದು ನಿಲ್ಲುವುದಕ್ಕೆ ಸಣ್ಣ ಬೆತ್ತ ಸಾಕಾಗದು. ನಾಗರ ಬೆತ್ತದಲ್ಲಿ ಹತ್ತು ಪೆಟ್ಟು ಕೊಟ್ಟರೂ ಹಿಂದು ಮಲಗಿದವ ಏಳಲ್ಲ.

ಬೆಳ್ತಂಗಡಿ, ಮೇ.4: ನಮ್ಮ ಹಿಂದು ಸಮಾಜ ಎದ್ದು ನಿಲ್ಲುವುದಕ್ಕೆ ಸಣ್ಣ ಬೆತ್ತ ಸಾಕಾಗದು. ನಾಗರ ಬೆತ್ತದಲ್ಲಿ ಹತ್ತು ಪೆಟ್ಟು ಕೊಟ್ಟರೂ ಹಿಂದು ಮಲಗಿದವ ಏಳಲ್ಲ. ಅಯೋಧ್ಯೆಯಲ್ಲಿ ಮುಸ್ಲಿಂ ರಾಜರ ಕಾಲದಲ್ಲಿ ಬಾಬ್ರಿ ಮಸೀದಿ ಸ್ಥಾಪನೆಯಾಗಿದ್ದು ಮತ್ತೆ ಅಲ್ಲಿ ರಾಮಮಂದಿರ ಮಾಡಲು 500 ವರ್ಷ ಬೇಕಾಯಿತು. ಅಷ್ಟರ ವರೆಗೂ ನಾವು ಕಾದೆವು. ಅಯೋಧ್ಯೆ ರಾಮ ಹುಟ್ಟಿದ ಜಾಗ ಎನ್ನುವುದು ನಮಗೆ ತಿಳಿದಿದ್ದರೂ ನಾವಲ್ಲಿ ಮಂದಿರ ಕಟ್ಟುವುದಕ್ಕೆ ಉದಾಸೀನ ತೋರಿದೆವು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೇಳಿದ್ದಾರೆ.

ಬೆಳ್ತಂಗಡಿ ತಾಲೂಕಿನ ತೆಕ್ಕಾರಿನ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶ ಕಾರ್ಯಕ್ರಮದಲ್ಲಿ ಮಾತನಾಡಿದ ಹರೀಶ್ ಪೂಂಜ, ತೆಕ್ಕಾರಿನಲ್ಲಿ ಟಿಪ್ಪು ಬರುವುದಕ್ಕಿಂತ ಮುಂಚೆ ಮುಸ್ಲಿಮರು ಇಲ್ಲದಾಗಲೂ ಗೋಪಾಲಕೃಷ್ಣ ದೇವರ ಪೂಜೆ ಆಗುತ್ತಿತ್ತು. ಟಿಪ್ಪು ಬಂದ ಬಳಿಕ ದೇವಸ್ಥಾನ ಪುಡಿಯಾಗಿ, ಮುಸ್ಲಿಮರು ಒಂದೆರಡು ಸಂಖ್ಯೆಯಲ್ಲಿದ್ದರೂ ಮತ್ತೆ ದೇವಸ್ಥಾನ ಆಗಲಿಲ್ಲ. ನಮ್ಮ ಜನರಿಗೆ ಇಲ್ಲೊಂದು ದೇವಸ್ಥಾನ ಮಾಡಬೇಕೆಂದು ಅನಿಸಲಿಲ್ಲ. ಅದಕ್ಕೆ 2025ರ ವರೆಗೂ ಕಾಯಬೇಕಾಯಿತು. ಈಗ ದೇವಸ್ಥಾನ ಎದ್ದು ನಿಲ್ಲಲು ಗೋಪಾಲಕೃಷ್ಣ ದೇವರ ಪ್ರೇರಣೆಯೇ ಕಾರಣ ಅಂತ ಹೇಳುತ್ತೇನೆ.

ಆದರೆ ನಾವೆಂದೂ ಇತಿಹಾಸ ಮರೆಯಬಾರದು. ಈಗ ತೆಕ್ಕಾರಿನಲ್ಲಿ 1200ರಷ್ಟು ಮುಸ್ಲಿಂ ಸಂಖ್ಯೆ ಇರಬಹುದು. ಇನ್ನು ಹತ್ತು ವರ್ಷ ಹೋದರೆ ಮುಸ್ಲಿಮರ ಸಂಖ್ಯೆ 600 ಆಗಲ್ಲ, ಹತ್ತು ಸಾವಿರ ಆಗಬಹುದು. ಹಾಗಂತ, ಇಲ್ಲಿರುವ 200ರಷ್ಟು ಹಿಂದುಗಳು ಗೋಪಾಲಕೃಷ್ಣ ದೇವರ ಆರಾಧನೆ ಬಿಡಬಾರದು. ಬಿಡಲಿಕ್ಕಿಲ್ಲ ಎನ್ನುವ ನಂಬಿಕೆ ನನಗಿದೆ. ಈಗ ಎಲ್ಲರೂ ಸೇರಿ ಒಂದೆರಡು ಕೋಟಿ ಖರ್ಚು ಮಾಡಿ ಬ್ರಹ್ಮಕಲಶ ಮಾಡಿದ್ದಾರೆ. ಆದರೆ ಇಲ್ಲಿ ಸೇರಿದವರು, ಕಾರ್ಯಕ್ರಮಕ್ಕೆ ಬಂದ ಉದ್ಯಮಿಗಳೆಲ್ಲ ನಿತ್ಯಪೂಜೆಗೆ ಬರಕ್ಕಾಗಲ್ಲ. ನಿತ್ಯಪೂಜೆಗೆ ಬರಬೇಕಾದವರು ತೆಕ್ಕಾರಿನ ಜನರು ಮಾತ್ರ. ಇಲ್ಲಿ ಅರ್ಚಕರು ಎರಡು ಹೊತ್ತು ಪೂಜೆ ಮಾಡಲು ನಿರ್ಧರಿಸಿದ್ದಾರೆ. ಅವರು ಮಾತ್ರ ಪೂಜೆಗೆ ಬರೋದಾದ್ರೆ ಈ ದೇವಸ್ಥಾನ ನಮಗೆ ಬೇಕಾ ಎಂಬ ಪ್ರಶ್ನೆ ಹಾಕಬೇಕಾಗುತ್ತದೆ.

ದೇವಸ್ಥಾನಕ್ಕೆ ನಾವು ವಾರದಲ್ಲಿ ಯಾವ ದಿನ ಹೋಗಬೇಕು ಎಂದು ನಿರ್ಧಾರ ಮಾಡಬೇಕು. ಪ್ರತಿ ದಿನವೂ ಜನರು ಬರಬೇಕು. ಆಗಮಾತ್ರ ಈ ದೇವಸ್ಥಾನ ಸಾವಿರ ವರ್ಷ ಉಳಿಯಬಹುದು. ನಿತ್ಯಪೂಜೆ ದೇವಸ್ಥಾನದಲ್ಲಿ ನಡೆಯಬೇಕು, ಅದರ ಜೊತೆಗೆ ಗಂಟೆ ಜಾಗಟೆಯೂ ಕೇಳಬೇಕು, ನಾವು ಇದಕ್ಕಾಗಿ ಸಂಕಲ್ಪ ಪೂರ್ವಕವಾಗಿ ದೇವಸ್ಥಾನಕ್ಕೆ ಬರಬೇಕು ಎನ್ನುವುದು ನನ್ನ ಪ್ರಾರ್ಥನೆ. ನನ್ನ ಮಾತು ಕಹಿಯೆಂದು ಅನಿಸಬಹುದು. ಆದರೆ ಇದನ್ನು ಹೇಳಲೇಬೇಕಾಗಿದೆ.

ಹಿಂದುಗಳಲ್ಲಿ ಮಾತ್ರ ಅಲ್ಲ, ಮುಸ್ಲಿಮರಲ್ಲಿಯೂ ಜಾತಿ ಇದೆ. ಸಿದ್ದರಾಮಯ್ಯ ಮಾತ್ರ ಮುಸ್ಲಿಮರಲ್ಲಿ ಜಾತಿ ಗಣತಿ ಮಾಡಿಸಿದರೂ ಅವರಲ್ಲಿ ಜಾತಿ ಇದೆಯಂದು ಹೇಳಲಿಲ್ಲ. ನಮಗೆ ಅವರಲ್ಲಿ ಇಬ್ರಾಹಿಂ, ಅಬ್ದುಲ್ಲ ಅಂತ ಮಾತ್ರ ಗೊತ್ತು. ಅವರೆಲ್ಲ ಮುಸ್ಲಿಮರು ಅಂತಷ್ಟೇ ಗೊತ್ತಿರೋದು. ಆದರೆ ಮುಸ್ಲಿಮರಲ್ಲಿಯೂ 70-73 ಜಾತಿಗಳಿವೆ ಅನ್ನುವುದು ಅಂಕಿ ಅಂಶ ಹೇಳುತ್ತದೆ. ನಮಗೆ ಮಾತ್ರ ಗೊತ್ತಿಲ್ಲ. ಹಿಂದುಗಳಲ್ಲಿ ಮಾತ್ರ ಅವ ಭಟ್ಟ, ಇವ ಶೆಟ್ಟಿ, ಪೂಜಾರಿ, ಗೌಡ ಅಂತ ಪ್ರತ್ಯೇಕ ಭಾವನೆ ಬೆಳೆಸಿಕೊಂಡಿದ್ದೇವೆ. ಮುಸ್ಲಿಮರ ರೀತಿಯಲ್ಲೇ ನಾವು ಹಿಂದು, ನಾವೆಲ್ಲ ಒಂದು, ನಾವು ಒಟ್ಟಿಗಿದ್ದರೆ ಮಾತ್ರ ದೇವಸ್ಥಾನ ಎನ್ನುವ ಭಾವನೆ ನಮ್ಮಲ್ಲಿ ಜಾಗೃತ ಆಗಿರಬೇಕು ಎಂದು ಹರೀಶ್ ಪೂಂಜ ಕಿವಿಮಾತು ಹೇಳಿದ್ದಾರೆ.

ಶಾಸಕ ಹರೀಶ್ ಪೂಂಜ ಆಡಿರುವ ಮಾತಿನ ಬಗ್ಗೆ ಕಾಂಗ್ರೆಸಿನ ಮುಸ್ಲಿಮ್ ಮುಖಂಡರು ಕಿಡಿಕಾರಿದ್ದು, ಪೊಲೀಸ್ ದೂರು ನೀಡಿದ್ದಾರೆ. ಇದರಂತೆ, ಬೆಳ್ತಂಗಡಿ ಠಾಣೆಯಲ್ಲಿ ಶಾಸಕ ಪೂಂಜ ಮುಸ್ಲಿಮರಿಗೆ ಅವಮಾನ ಮಾಡಿದ್ದಾರೆಂದು ಎಫ್ಐಆರ್ ದಾಖಲಾಗಿದೆ.

Belthangady MLA Harish Poonja has been booked for hate speech against Muslims amid the communal unrest in Mangaluru sparked by two unconnected killings in quick succession. Harish Poonja has been booked by the Uppinangady police under Sections 196 (promoting enmity) and 353(2) (spreading rumours that promote enmity through electronic media) of the Bharatiya Nyaya Sanhita (BNS) after a man named MS Ibrahim Musliyar filed a complaint.