ಬ್ರೇಕಿಂಗ್ ನ್ಯೂಸ್
            
                        15-07-25 10:40 pm Mangalore Correspondent ಕರಾವಳಿ
            ಮಂಗಳೂರು, ಜುಲೈ 15 : ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದ ಅನನ್ಯಾ ಭಟ್ ಎಂಬ ಹುಡುಗಿ 2003ರಲ್ಲಿ ತನ್ನ ಗೆಳತಿಯರ ಜೊತೆಗೆ ಧರ್ಮಸ್ಥಳಕ್ಕೆ ಹೋಗಿದ್ದವಳು ನಿಗೂಢ ನಾಪತ್ತೆಯಾದ ಬಗ್ಗೆ ಆಕೆಯ ತಾಯಿ ಎರಡು ದಶಕದ ಬಳಿಕ ದಕ್ಷಿಣ ಕನ್ನಡ ಎಸ್ಪಿ ಅರುಣ್ ಅವರನ್ನು ಭೇಟಿಯಾಗಿ ದೂರು ನೀಡಿದ್ದಾರೆ. ದೂರು ನೀಡಿರುವುದನ್ನು ಎಸ್ಪಿ ಡಾ.ಅರುಣ್ ದೃಢಪಡಿಸಿದ್ದು, ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ತನ್ನ ಮಗಳು ಕಾಣೆಯಾದ ಬಗ್ಗೆ ತಾಯಿ ಮಾಧ್ಯಮವೊಂದಕ್ಕೆ ಮಾತನಾಡಿರುವುದು ಜಾಲತಾಣದಲ್ಲಿ ವೈರಲ್ ಆಗಿದೆ. ತನ್ನ ಮಗಳು ಅನನ್ಯಾ ಭಟ್ ಮಣಿಪಾಲದಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದಳು. 2003ರಲ್ಲಿ ಒಂದು ದಿನ ತನ್ನ ಧರ್ಮಸ್ಥಳದ ಗೆಳತಿಯರೊಂದಿಗೆ ಅಲ್ಲಿಗೆ ತೆರಳಿದ್ದಳು. ಸಂಜೆಯ ಹೊತ್ತಿಗೆ ಇತರ ಇಬ್ಬರು ನಾವು ಮನೆಯಿಂದ ಬಟ್ಟೆ ತಗೊಂಡು ಬರ್ತೀವಿ ಎಂದು ಹೇಳಿ ಇವಳನ್ನು ದೇವಸ್ಥಾನ ಬಳಿ ನಿಲ್ಲಿಸಿ ತೆರಳಿದ್ದರು. ಆದರೆ ಹಿಂತಿರುಗಿ ಬರುವಾಗ ಇವಳು ಇರಲಿಲ್ಲ. ಕೂಡಲೇ ಗೆಳತಿ ನನಗೆ ಕರೆ ಮಾಡಿ, ನಾಪತ್ತೆ ವಿಚಾರವನ್ನು ತಿಳಿಸಿದ್ದಳು.


ನಾನು ಆಬಳಿಕ ಧರ್ಮಸ್ಥಳ ಠಾಣೆಗೂ ತೆರಳಿದ್ದೆ, ಆದರೆ ದೂರು ಸ್ವೀಕರಿಸಿರಲಿಲ್ಲ. ದೇವಸ್ಥಾನ ಬಳಿ ಹೋದಾಗ ಅಲ್ಲಿದ್ದವರು ಬೈದು ಬೆದರಿಸಿ ಕಳಿಸಿದ್ದರು. ಆನಂತರ ಒಮ್ಮೆ ಹೋಗಿದ್ದಾಗ ನಾಲ್ಕು ಜನ ಸೇರಿ ಕೋಣೆಯಲ್ಲಿ ಕೂಡಿ ಹಾಕಿ ಹಲ್ಲೆ ಮಾಡಿದ್ದರು. ಈ ಬಗ್ಗೆ ಇನ್ನೆಂದೂ ಬಾಯಿ ತೆಗೆಯಬಾರದು ಎಂದಿದ್ದರು. ಆನಂತರ ಒಮ್ಮೆ ತೀವ್ರ ರೀತಿ ಹೊಡೆದು ಹಾಕಿದ್ದರಿಂದ ಕೋಮಾಕ್ಕೆ ಹೋಗಿದ್ದೆ. ಆಬಳಿಕ ಕೋಮಾದಿಂದ ಸಮಸ್ಥಿತಿಗೆ ಬಂದರೂ ಮಗಳ ಆಸೆಯನ್ನು ಕೈಬಿಟ್ಟಿದ್ದೆ. ಕೊಲ್ಕತ್ತಾದಲ್ಲಿ ಸಿಬಿಐ ಕಚೇರಿಯಲ್ಲಿ ಆಗ ಸ್ಟೆನೋ ಗ್ರಾಫರ್ ಆಗಿದ್ದೆ. 9 ವರ್ಷ ಕೆಲಸ ಮಾಡಿ ವಿಆರ್ ಎಸ್ ಕೊಟ್ಟು ಬಂದಿದ್ದೆ. ಮಗಳೇ ಇಲ್ಲ. ಯಾರಿಗಾಗಿ ಬದುಕೋದು ಅಂತಾಗಿತ್ತು.
ಆದರೆ ನನ್ನ ಮಗಳು ಎಲ್ಲಿದ್ದಾಳೆಂದು ಸುಳಿವು ಸಿಗೋದು ಕಷ್ಟ. ಸೌಜನ್ಯಾ ಮತ್ತು ಆನೆ ಮಾವುತನ ಸಾವು ಪ್ರಕರಣ ಜೀವಂತವಾಗಿದೆ. ಅದರಲ್ಲಾದರೂ ನ್ಯಾಯ ಸಿಕ್ಕರೆ ಈ ರೀತಿ ದುರಂತ ಸಾವನ್ನಪ್ಪಿದ ಎಲ್ಲರಿಗೂ ಶಾಂತಿ ಸಿಕ್ಕೀತು ಎಂದು ವೃದ್ಧ ತಾಯಿ ಕಣ್ಣೀರು ಹಾಕಿದ್ದಾರೆ.
            
            
            In a heartbreaking turn of events, a mother has approached the Superintendent of Police in Dakshina Kannada, seeking justice for her daughter who mysteriously went missing over two decades ago. Ananya Bhat, a medical student in Manipal at the time, disappeared during a visit to Dharmasthala in 2003. Her mother has now officially filed a complaint with SP Dr. Arun, who has confirmed that an FIR has been registered at the Dharmasthala Police Station and an investigation will follow.
    
            
             03-11-25 05:17 pm
                        
            
                  
                Bangalore Correspondent    
            
                    
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
    
            
             03-11-25 01:13 pm
                        
            
                  
                HK News Desk    
            
                    
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
    
            
             03-11-25 10:47 pm
                        
            
                  
                Mangalore Correspondent    
            
                    
ಡಿ.27 ರಂದು 9ನೇ ವರ್ಷದ ಮಂಗಳೂರು ಕಂಬಳ ; ಈ ಬಾರಿ ’ನ...
03-11-25 05:20 pm
ಸಸಿಹಿತ್ಲು ಬೀಚ್ ನಲ್ಲಿ ನೀರಾಟಕ್ಕಿಳಿದು ಬೆಂಗಳೂರಿನ...
03-11-25 12:37 pm
ಧರ್ಮಸ್ಥಳ ಪ್ರಕರಣ ; ಗುರುತು ಪತ್ತೆಯಾಗದ 38 ಪ್ರಕರಣಗ...
02-11-25 10:23 pm
ಮಂಗಳೂರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟಕ್ಕೆ ತೆ...
02-11-25 06:57 pm
    
            
             03-11-25 12:33 pm
                        
            
                  
                Mangalore Correspondent    
            
                    
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm