Wild Elephant Attack, Dharmasthala: ಧರ್ಮಸ್ಥಳ ಬಳಿಯ ಸೌತಡ್ಕದಲ್ಲಿ ಕಾಡಾನೆ ದಾಳಿ ; ನಡೆದು ಹೋಗುತ್ತಿದ್ದ ವ್ಯಕ್ತಿ ಸ್ಥಳದಲ್ಲೇ ಸಾವು 

17-07-25 04:14 pm       Mangalore Correspondent   ಕರಾವಳಿ

ಧರ್ಮಸ್ಥಳ ಬಳಿಯ ಕೊಕ್ಕಡ ಗ್ರಾಮದ ಸೌತಡ್ಕ ಗುಂಡಿ ಎಂಬಲ್ಲಿ ವ್ಯಕ್ತಿಯೊಬ್ಬರು ನಡೆದುಕೊಂಡು ಹೋಗುತ್ತಿದ್ದಾಗ ಕಾಡಾನೆ ದಾಳಿ ನಡೆಸಿದ್ದು ಸದ್ರಿ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 

ಬೆಳ್ತಂಗಡಿ, ಜುಲೈ 17 : ಧರ್ಮಸ್ಥಳ ಬಳಿಯ ಕೊಕ್ಕಡ ಗ್ರಾಮದ ಸೌತಡ್ಕ ಗುಂಡಿ ಎಂಬಲ್ಲಿ ವ್ಯಕ್ತಿಯೊಬ್ಬರು ನಡೆದುಕೊಂಡು ಹೋಗುತ್ತಿದ್ದಾಗ ಕಾಡಾನೆ ದಾಳಿ ನಡೆಸಿದ್ದು ಸದ್ರಿ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 

ಗುರುವಾರ (ಇಂದು) ಬೆಳಗ್ಗೆ 11ರಿಂದ 12 ಗಂಟೆಯ ನಡುವೆ ಘಟನೆ ನಡೆದಿದೆ. ಸೌತಡ್ಕ ನಿವಾಸಿ ಬಾಲಕೃಷ್ಣ ಶೆಟ್ಟಿ (60) ಮೃತರು. ಇವರು ಸೌತಡ್ಕ ಬಳಿಯ ಗೇರು ಪ್ಲಾಂಟೇಷನ್ ಬಳಿಯಿಂದ ನಡೆದುಕೊಂಡು ಹೋಗುತ್ತಿದ್ದಾಗ ಎರಡು ಕಾಡಾನೆಗಳಿದ್ದವು.‌ ಅದನ್ನು ದೂರಕ್ಕೆ ಅಟ್ಟಲು ಯತ್ನಿಸಿದಾಗ ಒಂದು ಕಾಡಾನೆ ಬಂದು ನೇರವಾಗಿ ದಾಳಿ ನಡೆಸಿದೆ.‌ ಘಟನೆಯಲ್ಲಿ ಬಾಲಕೃಷ್ಣ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. 

ಮೃತದೇಹವನ್ನು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಘಟನಾ ಸ್ಥಳಕ್ಕೆ ಧರ್ಮಸ್ಥಳ ಠಾಣಾ ಪೊಲೀಸರು, ಅರಣ್ಯಾಧಿಕಾರಿಗಳು ಹಾಗೂ ಸ್ಥಳೀಯ ಗ್ರಾಮ ಪಂಚಾಯತ್ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಈ ಬಗ್ಗೆ ದೂರನ್ನು ಸ್ವೀಕರಿಸಿ ಧರ್ಮಸ್ಥಳ ಠಾಣೆಯಲ್ಲಿ ಮುಂದಿನ ಕಾನೂನುಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

In a tragic incident near Dharmasthala, a man was killed on the spot after being attacked by a wild elephant in Sauthadka, located in Kokkada village.