ಬ್ರೇಕಿಂಗ್ ನ್ಯೂಸ್
            
                        21-07-25 06:42 pm Mangalore Correspondent ಕರಾವಳಿ
            ಬೆಳ್ತಂಗಡಿ, ಜುಲೈ 21 : ಹೆಣ ಹೂತ ಪ್ರಕರಣ ಬಗ್ಗೆ ಎಸ್ಐಟಿ ರಚನೆಯಾಗುತ್ತಿದ್ದಂತೆ ಧರ್ಮಸ್ಥಳ ಸುದ್ದಿಯ ಕೇಂದ್ರ ಬಿಂದುವಾಗಿದೆ. ಇದರ ನಡುವಲ್ಲೇ ಕಲಬುರ್ಗಿಯಿಂದ ಪಾದಯಾತ್ರೆಯಲ್ಲಿ ಬಂದಿದ್ದೇವೆ ಎಂದು ಹೇಳಿಕೊಂಡು ಧರ್ಮಸ್ಥಳಕ್ಕೆ ಹತ್ತಕ್ಕೂ ಹೆಚ್ಚು ಮಂದಿ ಯುವಕರು ಬಂದಿದ್ದು, ಇವರನ್ನು ಸ್ಥಳೀಯರು ಅಡ್ಡಗಟ್ಟಿದ್ದು ಭಾರೀ ಹೈಡ್ರಾಮಾಕ್ಕೆ ಸಾಕ್ಷಿಯಾಯಿತು.
ಫೇಸ್ಬುಕ್ ಇನ್ನಿತರ ಜಾಲತಾಣಗಳಲ್ಲಿ ಕಬ್ಜಾ ಶರಣ್ (ರುದ್ರಪ್ಪ ಶರಣಪ್ಪ) ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ತನ್ನ ಸಂಗಡಿಗರ ಜೊತೆಗೆ ಧರ್ಮಸ್ಥಳಕ್ಕೆ ಬಂದಿದ್ದು, ಸ್ಥಳೀಯರು ಉಜಿರೆಯಲ್ಲೇ ಅಡ್ಡಗಟ್ಟಿದ್ದಾರೆ. ಆನಂತರ, ವಾಗ್ವಾದ ನಡೆದು ಯುವಕರು ಧರ್ಮಸ್ಥಳಕ್ಕೆ ತಲುಪುತ್ತಿದ್ದಂತೆ ಸ್ಥಳೀಯ ಗ್ರಾಮಸ್ಥರು 50ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಸೇರಿದ್ದು ಅಡ್ಡ ಹಾಕಿದ್ದಾರೆ. ಈ ವೇಳೆ, ನೀನು ನಕಲಿ ದೇವಮಾನವ ಎಂದು ನಮ್ಮ ಹೆಗ್ಗಡೆಯವರನ್ನು ಕರೆದಿದ್ದೀಯಾ. ಜಾಲತಾಣದಲ್ಲಿ ವಿಡಿಯೋ ಮಾಡಿಕೊಂಡು ಈಗ ಧರ್ಮಸ್ಥಳಕ್ಕೆ ಯಾಕೆ ಬಂದಿದ್ದೀಯಾ, ನಾವು ನಿಮಗೆ ಒಳಗೆ ಬಿಡೋದಿಲ್ಲ ಎಂದು ಜೋರು ಮಾಡಿದ್ದಾರೆ.








ಈ ವೇಳೆ, ಕಲಬುರಗಿಯ ಯುವಕರು ಮತ್ತು ಸ್ಥಳೀಯರ ನಡುವೆ ವಾಗ್ವಾದ ನಡೆದಿದ್ದು, ನಾವು ಹೆಗ್ಗಡೆಯವರನ್ನು ನಕಲಿ ದೇವಮಾನವ ಎಂದು ಕರೆದಿಲ್ಲ. ಯಾರು ತಪ್ಪು ಮಾಡಿದ್ದಾರೋ ಅವರನ್ನು ಉದ್ದೇಶಿಸಿ ಹೇಳಿದ್ದು. ಸೌಜನ್ಯಾಗೆ ನ್ಯಾಯ ಸಿಗಬೇಕೆಂದು ಧರ್ಮಸ್ಥಳ ಮಂಜುನಾಥ ಸ್ವಾಮಿ, ಅಣ್ಣಪ್ಪ ಸ್ವಾಮಿಯಲ್ಲಿ ಬೇಡಿಕೊಳ್ಳಲು ಬಂದಿದ್ದೇವೆ. ನೀವು ನಮ್ಮನ್ನು ತಡೆಯಬೇಡಿ, ನಾವು ಪ್ರತಿಭಟನೆ ಮಾಡುವುದಿಲ್ಲ. ಕೇವಲ ದರ್ಶನ ಮಾಡಿಕೊಂಡು ಹೋಗುತ್ತೇವೆ ಎಂದು ಹೇಳಿದ್ದಾನೆ. ಆದರೆ ಸ್ಥಳೀಯರು ಅದಕ್ಕೊಪ್ಪದೆ, ನೀನು ನಕಲಿ ಅಂತ ಹೇಳ್ಕೊಂಡು ಧರ್ಮಸ್ಥಳಕ್ಕೆ ಬಂದಿದ್ದೀಯಾ, ಗೋವಾಕ್ಕೆ ಹೋಗಿಲ್ಲ. ಇಲ್ಲಿ ಬಂದ ಮೇಲೆ ಇಲ್ಲಿನವರನ್ನೇ ಹೇಳಿದ್ದು ಅಲ್ವಾ. ಹಾಗೆ ಹೇಳಿಲ್ಲ ಅಂದ್ರೆ ಹೆಗ್ಗಡೆಯವರನ್ನು ಉದ್ದೇಶಿಸಿ ಹೇಳಿಲ್ಲ ಅಂತ ಲೈವ್ ವಿಡಿಯೋ ಮಾಡಿ ಕ್ಷಮೆ ಕೇಳು. ಹಾಗಾದ್ರೆ ಬಿಡುತ್ತೇವೆ, ನೀನು ಆ ರೀತಿ ಹೇಳಿರುವ ವಿಡಿಯೋಗಳು ನಿನ್ನ ಇನ್ ಸ್ಟಾದಲ್ಲೇ ಇದೆಯಲ್ವಾ ಎಂದು ಸವಾಲು ಹಾಕಿದ್ದಾರೆ.
ಆದರೆ ಕಬ್ಜಾ ಶರಣ್ ಕ್ಷಮೆ ಕೇಳಿ ವಿಡಿಯೋ ಮಾಡಲು ನಿರಾಕರಿಸಿದ್ದಾನೆ. ಕೊನೆಗೆ, ಧರ್ಮಸ್ಥಳ ಪೊಲೀಸರು ಮತ್ತು ಸ್ಥಳೀಯರು ಯುವಕರನ್ನು ಅಡ್ಡಹಾಕಿ, ಧರ್ಮಸ್ಥಳ ಗೇಟ್ ಒಳಗೆ ಪ್ರವೇಶ ಮಾಡದಂತೆ ತಡೆದಿದ್ದಾರೆ. ಆನಂತರ, ಕಲಬುರಗಿ ಯುವಕರು ಧರ್ಮಸ್ಥಳ ಠಾಣೆಗೆ ತೆರಳಿ ದೂರು ನೀಡಲು ಹೋದರೆ, ಸ್ಥಳೀಯರು ಅವರ ಹಿಂದೆಯೇ ಜೋರು ಮಾಡುತ್ತ ತೆರಳಿದ್ದಾರೆ. ಈ ವೇಳೆ, ಪೊಲೀಸರು ಗಲಾಟೆ ಆಗದಂತೆ ನೋಡಿಕೊಂಡಿದ್ದು, ಎರಡೂ ಕಡೆಯವರ ದೂರು ಆಲಿಸಿ ಕಲಬುರ್ಗಿ ಮೂಲದ ಯುವಕರಿಗೆ ರಕ್ಷಣೆ ನೀಡಿದ್ದಾರೆ. ಎರಡೂ ಕಡೆಯವರ ದೂರನ್ನು ಪಡೆದು ಕೇಸು ದಾಖಲಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.
            
            
            Amid the ongoing controversy surrounding the alleged human burial case and the formation of a Special Investigation Team (SIT), Dharmasthala became the epicenter of yet another dramatic episode on Sunday. A group of over ten youths claiming to be on a padayatra (pilgrimage) from Kalaburagi arrived in Dharmasthala but were stopped by local residents at Ujire. The group, allegedly led by a social media figure known as Kabza Sharan (real name Rudrappa Sharanappa), had earlier posted videos on Facebook and other platforms referring to a prominent figure as a “fake godman.” This triggered widespread outrage among the local community.
    
            
             03-11-25 05:17 pm
                        
            
                  
                Bangalore Correspondent    
            
                    
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
    
            
             03-11-25 01:13 pm
                        
            
                  
                HK News Desk    
            
                    
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
    
            
             03-11-25 10:47 pm
                        
            
                  
                Mangalore Correspondent    
            
                    
ಡಿ.27 ರಂದು 9ನೇ ವರ್ಷದ ಮಂಗಳೂರು ಕಂಬಳ ; ಈ ಬಾರಿ ’ನ...
03-11-25 05:20 pm
ಸಸಿಹಿತ್ಲು ಬೀಚ್ ನಲ್ಲಿ ನೀರಾಟಕ್ಕಿಳಿದು ಬೆಂಗಳೂರಿನ...
03-11-25 12:37 pm
ಧರ್ಮಸ್ಥಳ ಪ್ರಕರಣ ; ಗುರುತು ಪತ್ತೆಯಾಗದ 38 ಪ್ರಕರಣಗ...
02-11-25 10:23 pm
ಮಂಗಳೂರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟಕ್ಕೆ ತೆ...
02-11-25 06:57 pm
    
            
             03-11-25 12:33 pm
                        
            
                  
                Mangalore Correspondent    
            
                    
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm