ಬ್ರೇಕಿಂಗ್ ನ್ಯೂಸ್
26-07-25 10:05 pm Mangalore Correspondent ಕರಾವಳಿ
ಮಂಗಳೂರು, ಜುಲೈ 26 : ಧರ್ಮಸ್ಥಳದಲ್ಲಿ ನೂರಾರು ಹೆಣಗಳನ್ನು ಹೂತಿದ್ದೇನೆಂದು ಹೇಳಿಕೆ ನೀಡಿ ಸಂಚಲನ ಮೂಡಿಸಿದ್ದ ವ್ಯಕ್ತಿಯನ್ನು ಎಸ್ಐಟಿ ತಂಡದ ಅಧಿಕಾರಿಗಳು ಮಂಗಳೂರಿನಲ್ಲಿ ಸುದೀರ್ಘ 9 ಗಂಟೆ ಕಾಲ ವಿಚಾರಣೆಗೆ ಒಳಪಡಿಸಿದ್ದಾರೆ.
ನಗರದ ಮಲ್ಲಿಕಟ್ಟೆಯ ಐಬಿಯಲ್ಲಿ ಎಸ್ಐಟಿ ತಂಡದ ಡಿಐಜಿ ಎಂ.ಎನ್ ಅನುಚೇತ್ ಮತ್ತು ಎಸ್ಪಿ ಜಿತೇಂದ್ರ ದಯಾಮ ಅವರು ವಿಚಾರಣೆ ನಡೆಸಿದ್ದಾರೆ. ಶನಿವಾರ ಬೆಳಗ್ಗೆ 10.30ರ ವೇಳೆಗೆ ತನ್ನ ವಕೀಲರ ಜೊತೆಗೆ ಟ್ಯಾಕ್ಸಿ ಕಾರಿನಲ್ಲಿ ಮುಸುಕು ಹಾಕ್ಕೊಂಡಿದ್ದ ವ್ಯಕ್ತಿ ವಿಚಾರಣೆಗೆ ಬಂದಿದ್ದು, ಮುಸುಕು ಹಾಕ್ಕೊಂಡೇ ಐಬಿ ಬಂಗಲೆಯ ಒಳಗಡೆ ತೆರಳಿದ್ದಾರೆ.
ಕಟ್ಟಡದ ಹೊರಗಡೆ ಕಾದಿದ್ದ ಮಾಧ್ಯಮದವರನ್ನು ಅದಕ್ಕೂ ಮೊದಲೇ ಪೊಲೀಸರು ಐಬಿ ಬಂಗಲೆಯ ಗೇಟ್ ಹೊರಭಾಗಕ್ಕೆ ಕಳುಹಿಸಿದ್ದರು. ಹೀಗಾಗಿ ಮುಸುಕುಧಾರಿ ವ್ಯಕ್ತಿ ಕಾರಿನಲ್ಲಿ ಹೊರಗಿನಿಂದ ಒಳಗಡೆ ಹೋಗುವುದಷ್ಟೇ ಅಲ್ಲಿದ್ದ ಪತ್ರಕರ್ತರ ಕ್ಯಾಮರಾ ಕಣ್ಣಿಗೆ ಸೆರೆಯಾಗಿತ್ತು. ಆನಂತರ, ವಿಚಾರಣೆ ಮುಗಿಸಿ ಹೊರಬರುತ್ತಾರೆಂದು ಕಾದರೂ ಹೊರಗಡೆ ಬರಲಿಲ್ಲ. ಐಬಿ ಬಂಗಲೆಯ ಒಳಗೆ ಹೊರಗಿನಿಂದಲೇ ಊಟ, ತಿಂಡಿ ತರಿಸಿಕೊಂಡಿದ್ದಾರೆ.
ಸಂಜೆ 7.30ರ ವೇಳೆಗೆ ಮುಸುಕುಧಾರಿ ವ್ಯಕ್ತಿ ಮತ್ತು ಆತನ ಜೊತೆಗಿದ್ದ ವಕೀಲರು ವಿಚಾರಣೆ ಮುಗಿಸಿ ಹಿಂದಕ್ಕೆ ತೆರಳಿದ್ದಾರೆ. ಅಂದಾಜು ಸುದೀರ್ಘ 9 ಗಂಟೆ ಕಾಲ ವಿಚಾರಣೆ ನಡೆಸಿದ್ದು, ಹೆಣಗಳನ್ನು ಹೂತು ಹಾಕಿದ್ದು, ಅದಕ್ಕೆ ಕಾರಣವಾದ ಅಂಶಗಳು, ಯಾವಾಗೆಲ್ಲ ಹೆಣಗಳನ್ನು ಹೂಳಲಾಗಿತ್ತು, ಅದು ಯಾರದ್ದಿತ್ತು ಇತ್ಯಾದಿ ವಿಚಾರಗಳ ಕುರಿತು ವಿಚಾರಣೆ ವೇಳೆ ಮಾಹಿತಿಗಳನ್ನು ಸಂಗ್ರಹಿಸಿರುವ ಸಾಧ್ಯತೆಯಿದೆ. ಆದರೆ ಈ ಬಗ್ಗೆ ಜೊತೆಗಿದ್ದ ವಕೀಲರಾಗಲೀ, ಪೊಲೀಸ್ ಅಧಿಕಾರಿಗಳಾಗಲೀ ಮಾಹಿತಿ ಬಿಟ್ಟುಕೊಟ್ಟಿಲ್ಲ. ಶುಕ್ರವಾರ ರಾತ್ರಿ ಧರ್ಮಸ್ಥಳ ಠಾಣೆಗೆ ತೆರಳಿದ್ದ ಎಸ್ಪಿ ಜಿತೇಂದ್ರ ದಯಾಮ ಅವರು ಪ್ರಕರಣ ಕುರಿತ ಫೈಲ್ ಗಳನ್ನು ಪಡೆದಿದ್ದು, ರಾತ್ರಿಯೇ ಅಲ್ಲಿಂದ ತೆರಳಿದ್ದರು. ಈ ನಡುವೆ, ಎಸ್ಐಟಿ ತಂಡಕ್ಕೆ ಬೆಳ್ತಂಗಡಿ ಪೊಲೀಸ್ ಠಾಣೆ ಪಕ್ಕದಲ್ಲಿ ಕಚೇರಿ ತೆರೆದಿದ್ದು ಅದಿನ್ನೂ ಆರಂಭವಾಗಿಲ್ಲ.
The man who recently triggered a sensation by claiming to have buried hundreds of bodies in Dharmasthala was subjected to an intense 9-hour interrogation by the Special Investigation Team (SIT) in Mangaluru on Saturday. The questioning took place at the IB Guest House in Mallikatte, where DIG M.N. Anucheth and SP Jitendra Dayama of the SIT conducted the probe
26-07-25 02:00 pm
HK News Desk
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
Rameshwaram Cafe Pongal Worm: ರಾಮೇಶ್ವರ ಕೆಫೆಯ...
24-07-25 10:52 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
26-07-25 10:41 pm
Mangalore Correspondent
Mangalore, Dharmasthala Case, SIT, whistle bl...
26-07-25 10:05 pm
ಧರ್ಮಸ್ಥಳ ಎಸ್ಐಟಿ ತಂಡದಿಂದ ಮತ್ತೊಬ್ಬರು ಹೊರಕ್ಕೆ ;...
26-07-25 08:20 pm
Mangalore Rajashree Jayaraj Poojary Death: ಬಹ...
26-07-25 04:38 pm
India’s Largest Job Fair ‘Alva’s Pragati 2025...
26-07-25 11:37 am
26-07-25 09:35 pm
HK News Desk
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm
ದೇಶದಲ್ಲಿ ಅಲ್ ಖೈದಾ ಉಗ್ರವಾದಿ ಗುಂಪಿಗೆ ಯುವಜನರ ಸೇರ...
24-07-25 12:01 pm
Hyderabad, Udupi, Crime: ಹೈದರಾಬಾದಿನಲ್ಲಿ ರಿಯಲ್...
23-07-25 04:49 pm
ಟೆಲಿಗ್ರಾಮ್ ಆ್ಯಪ್ನಲ್ಲಿ ಹೂಡಿಕೆ ಮೇಲೆ ಕಮಿಷನ್ ; ಆ...
23-07-25 03:25 pm