ಬ್ರೇಕಿಂಗ್ ನ್ಯೂಸ್
27-07-25 09:58 pm Mangalore Correspondent ಕರಾವಳಿ
ಮಂಗಳೂರು, ಜುಲೈ.27: ಮಂಗಳೂರಿನಲ್ಲಿ ಹೊಟೇಲ್ ಉದ್ಯಮಿಯಾಗಿದ್ದ ಮರೋಳಿ ಮೂಲದ ನಿತಿನ್ ಪೂಜಾರಿ (42) ದಿಢೀರ್ ಆತ್ಮಹತ್ಯೆ ಮಾಡಿಕೊಂಡಿದ್ದು ಆತನ ಗೆಳೆಯರನ್ನು ಇನ್ನಿಲ್ಲದಂತೆ ಕಾಡಿತ್ತು. ಆ ಮನುಷ್ಯ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯೇ ಅಲ್ಲ, ಇದರಲ್ಲಿ ಏನೋ ಆಗಿರಬೇಕು ಎನ್ನುವ ಮಾತುಗಳು ಹರಿದಾಡಿದ್ದವು. ಬರ್ಕೆ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ಎಂದೇ ದಾಖಲಾಗಿದ್ದು, ಪೊಲೀಸರು ತನಿಖೆಯನ್ನೂ ನಡೆಸಿದ್ದಾರೆ. ಇದೇ ವೇಳೆ, ಯುವಕನ ಆತ್ಮಹತ್ಯೆಗೆ ವಯಸ್ಸು ಮಾಗಿದ ಮಹಿಳೆಯೊಬ್ಬಳ ಸಂಗ ಕಾರಣವಾಯ್ತಾ ಎನ್ನುವ ವಿಚಾರ ಚರ್ಚೆಗೀಡಾಗಿದೆ.
ನಿತಿನ್ ಸುವರ್ಣ ಈ ಹಿಂದೆ ಬಿಜೆಪಿಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದವರು. ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಆಪ್ತನಾಗಿಯೂ ಓಡಾಡಿಕೊಂಡಿದ್ದರು. ಒಂದು ವರ್ಷದಿಂದ ಮಂಗಳೂರಿನ ಕದ್ರಿ ಕಂಬ್ಳ ಬಳಿಯಲ್ಲಿ ಕೊಡಕ್ಕೆನ ಹೆಸರಿನ ಹೊಟೇಲ್ ಉದ್ಯಮವನ್ನೂ ಆರಂಭಿಸಿದ ಬಳಿಕ ಪಕ್ಷದ ಚಟುವಟಿಕೆಯಿಂದ ದೂರವಾಗಿದ್ದರು. ಇದರ ನಡುವಲ್ಲೇ ಹೊಸತಾಗಿ ಕಾರೊಂದನ್ನು ಖರೀದಿಸಿದ್ದು, ಅದರಲ್ಲಿ ಸುತ್ತಾಟವನ್ನೂ ಮಾಡಿಕೊಂಡಿದ್ದರು. ಆದರೆ ಹೀಗಿರುವಾಗಲೇ ನಲ್ವತ್ತು ಕಳೆದ ಮಹಿಳೆಯೊಬ್ಬಳು ಗಂಟು ಬಿದ್ದಿದ್ದು ಸ್ನೇಹ, ಪ್ರೀತಿ ಮದುವೆಯಾಗುವ ಹಂತಕ್ಕೆ ಬಂದಿತ್ತು. ಮದುವೆಯಾಗೋ ಮೊದಲೇ ಇವರು ಲಿವಿಂಗ್ ಟುಗೆದರ್ ಆರಂಭಿಸಿದ್ದು ಮಣ್ಣಗುಡ್ಡದಲ್ಲಿ ಫ್ಲಾಟ್ ಖರೀದಿಸಿ ಜೊತೆಯಾಗೇ ನೆಲೆಸಿದ್ದರು.
ಮೊನ್ನೆ ಜುಲೈ 21ರಂದು ರಾತ್ರಿ ಮಣ್ಣಗುಡ್ಡದ ಫ್ಲಾಟ್ ನಲ್ಲಿ ನಿತಿನ್ ಸಾವಿಗೀಡಾದ ಸಂದರ್ಭದಲ್ಲಿ ಈ ಮಹಿಳೆಯೂ ಮನೆಯಲ್ಲಿದ್ದಳು. ವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿದ್ದಾರೆಂದು ಮಹಿಳೆಯೇ ಹೊಟೇಲ್ ಸಿಬಂದಿಗೆ ಕರೆ ಮಾಡಿದ್ದು, ಆನಂತರ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಆಸ್ಪತ್ರೆ ತಲುಪುವಷ್ಟರಲ್ಲೇ ನಿತಿನ್ ಸಾವನ್ನಪ್ಪಿದ್ದರು. ನಿತಿನ್ ಸಾವಿಗೇನು ಕಾರಣ, ಯಾವ ವಿಷ ಸೇವನೆಯಾಗಿತ್ತು ಎನ್ನೋದು ವೈದ್ಯರಿಗೂ ತಿಳಿದಿರಲಿಲ್ಲ. ಸಾಮಾನ್ಯವಾಗಿ ವಿಷ ಸೇವಿಸಿದರೂ ಕೂಡಲೇ ಆಸ್ಪತ್ರೆ ಸೇರಿಸಿದರೆ ಎಷ್ಟು ಗಂಭೀರ ಇದ್ದರೂ ಒಂದೆರಡು ದಿನ ಇರುತ್ತಾರೆ. ನಿತಿನ್ ಕೆಲ ಹೊತ್ತಿನಲ್ಲೇ ಸಾವು ಕಂಡಿದ್ದರಿಂದ ಗಂಭೀರ ವಿಷ ಕಾರಣವಾ ಎನ್ನುವ ಸಂಶಯ ಕೇಳಿಬಂದಿತ್ತು.
ಪೊಲೀಸರ ಮಾಹಿತಿ ಪ್ರಕಾರ, ನಿತಿನ್ ಸಾವಿಗೆ ಸೈನೇಡ್ ಸೇವನೆ ಮಾಡಿದ್ದೇ ಕಾರಣ ಅನ್ನುವ ಅಂಶ ತಿಳಿದುಬಂದಿದೆ. ಆದರೆ ಸೈನೇಡ್ ಎನ್ನುವ ವಿಷ ಸುಲಭದಲ್ಲಿ ಸಿಗುವಂಥದ್ದಲ್ಲ. ಈ ವಿಷ ಹೇಗೆ ಸಿಕ್ಕಿತ್ತು ಎನ್ನೋದು ಇನ್ನೂ ಗೊತ್ತಾಗಿಲ್ಲ. ನಿತಿನ್ ಜೊತೆ ಸೇರಿದ್ದ ಮಹಿಳೆ ಈ ಹಿಂದೆ ಕೆಲವು ಕಡೆ ಪಿಜಿ ನಡೆಸುತ್ತಿದ್ದರು. ಯಾವಾಗ ಈ ಮಹಿಳೆಯ ಸಂಗ ಹೆಚ್ಚಾಗಿತ್ತೋ ಆತನ ಗೆಳೆಯರು ನಿತಿನ್ ಅವರಿಂದ ದೂರ ಸರಿದಿದ್ದರಂತೆ. ನಿತಿನ್ ಪಾಲಿಗೆ ಮಹಿಳೆಯೇ ಎಲ್ಲ ಎನ್ನುವಂತೆ ಸುತ್ತಾಟ ಜೋರಾಗಿತ್ತು. ಕಾರಿನಲ್ಲಿ ಸುತ್ತಾಟ, ಹೊಟೇಲಿನಲ್ಲು ಮಹಿಳೆಯದ್ದೇ ಕಾರುಬಾರು ಇತ್ತು ಎಂಬುದನ್ನು ನಿತಿನ್ ಆಪ್ತರು ಹೇಳುತ್ತಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ಮಹಿಳೆ ತನ್ನ ಜಾಲತಾಣದಲ್ಲಿ ನಿತಿನ್ ಜೊತೆಗೆ ಸುತ್ತಾಟದ ಹಲವಾರು ವಿಡಿಯೋ, ಪೋಟೋಗಳನ್ನು ಹಂಚಿಕೊಂಡಿದ್ದರು.
ಆತನಿಗೆ ಸಾಯುವಷ್ಟರ ಮಟ್ಟಿಗೆ ಸಾಲವೂ ಇರಲಿಲ್ಲ, ಹಣ ಕೇಳಿದರೆ ಕೊಡುವಷ್ಟು ಆಪ್ತ ಗೆಳೆಯರೂ ಇದ್ದರು. ನಿತಿನ್ ಸಾವಿನಲ್ಲಿ ಇನ್ನೇನೋ ಆಗಿದೆ. ಆ ಮಹಿಳೆಗೆ ಈ ಹಿಂದೆಯೂ 2-3 ಗಂಡಂದಿರು ಇದ್ದರು. ಮಕ್ಕಳೂ ಇದ್ದಾರೆ. ಮದುವೆಯೇ ಆಗಿರದ ಯುವಕ ನಿತಿನ್ ಆಕೆಯ ಜೊತೆಗೆ ಯಾಕೆ ಹೋಗಿದ್ದನೋ ಗೊತ್ತಿಲ್ಲ. ಹೊಟೇಲ್ ವ್ಯವಹಾರವೂ ಚೆನ್ನಾಗಿಯೇ ಇತ್ತು ಎಂದು ಗೆಳೆಯರು ಹೇಳುತ್ತಾರೆ.
ಆದರೆ ಪೊಲೀಸರಲ್ಲಿ ಕೇಳಿದರೆ, ಅಂಥ ಅನುಮಾನದ ದೂರು ನಮಗೆ ಬಂದಿಲ್ಲ ಎನ್ನುತ್ತಾರೆ. ಯಾರಾದ್ರೂ ಮಾಹಿತಿ ಇದ್ದರೆ ಬಂದು ತಿಳಿಸಿದರೆ ತನಿಖೆ ನಡೆಸುತ್ತೇವೆ. ಸಾವಿನ ಸಂದರ್ಭದಲ್ಲಿ ತಂದೆ, ತಾಯಿಯೂ ಜೊತೆಗಿದ್ದರು. ದೂರಿನಲ್ಲಿಯೂ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿಲ್ಲ. ಮಹಿಳೆಯ ಜೊತೆಗೆ ಮದುವೆ ಫಿಕ್ಸ್ ಆಗಿತ್ತು ಎನ್ನುವ ಮಾಹಿತಿ ಇದೆ, ಅಷ್ಟಕ್ಕೇ ಅನುಮಾನ ಪಡುವುದಕ್ಕೆ ಆಗುವುದಿಲ್ಲ ಎಂದು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ತಿಳಿಸಿದ್ದಾರೆ. ಸೈನೇಡ್ ಎನ್ನುವುದು ಅತಿ ಭಯಂಕರ ವಿಷವಾಗಿದ್ದು, ಚಿಟಿಕೆ ಮಾತ್ರವೂ ನಾಲಗೆ ತಲುಪಿದರೂ ಕೆಲವೇ ಕ್ಷಣದಲ್ಲಿ ಮರಣ ಸಂಭವಿಸುತ್ತದೆ. ಹೀಗಾಗಿ ಅಂಥ ವಿಷವನ್ನೇ ನಿತಿನ್ ತೆಗೆದುಕೊಂಡಿದ್ದರೇ ಅಥವಾ ಯಾರಿಂದಲೋ ಪ್ರಾಶನ ಆಗಿದೆಯೋ ಎನ್ನುವುದು ಗೊತ್ತಾಗಿಲ್ಲ.
The sudden death of 42-year-old hotelier Nithin Poojary owner of Kodakkena Family Restaurant Kadri a resident of Maroli and former BJP worker, has left his close friends shocked and deeply suspicious. Though initially registered as a suicide by Barke Police, the circumstances surrounding his death have raised numerous unanswered questions.
01-09-25 10:53 pm
Bangalore Correspondent
Karnataka Police, Warning to Social Media Use...
01-09-25 06:59 pm
ಎಸ್.ಐ.ಟಿ ರಚನೆ ಮಾಡಿದಾಗಲೇ ಬಿಜೆಪಿ ಯಾಕೆ ವಿರೋಧ ಮಾಡ...
01-09-25 05:03 pm
Yadagiri, Raid, Heart Attack: ಯಾದಗಿರಿ ; ಇಸ್ಪೀ...
01-09-25 04:55 pm
Sujatha Bhat, Latest News, Dharmasthala: ಚಿನ್...
01-09-25 01:25 pm
01-09-25 01:06 pm
HK News Desk
ಮೋದಿ ಜಪಾನ್ ಪ್ರವಾಸದಲ್ಲಿ 13 ಒಪ್ಪಂದಗಳಿಗೆ ಸಹಿ ; ರ...
31-08-25 01:32 pm
Kannur Blast ; ಕಣ್ಣೂರಿನ ಮನೆಯಲ್ಲಿ ಭಾರೀ ಸ್ಫೋಟ ;...
31-08-25 01:04 pm
ಟ್ರಂಪ್ ಸುಂಕ ನೀತಿ ಕಾನೂನುಬಾಹಿರ ; ಅಮೆರಿಕದ ಫೆಡರಲ್...
31-08-25 12:00 pm
ಹಿಮಂತ ಬಿಸ್ವ ಶರ್ಮಗೆ ಟಿಕೆಟ್ ಕೊಡಬೇಡಿ ಎಂದು ಸೋನಿಯಾ...
30-08-25 06:44 pm
01-09-25 10:01 pm
Mangalore Correspondent
ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಸೌ...
01-09-25 05:05 pm
Mangalore Pothole, Accident, Video Viral: ಕೆಪ...
31-08-25 10:34 pm
Ullal, Mangalore, UT Khader: ಹಡಿಲು ಬಿದ್ದ ಗದ್ದ...
31-08-25 08:20 pm
“Mangaluru’s Biggest Heart Care Offer: Indian...
31-08-25 01:56 pm
01-09-25 09:21 pm
Udupi Correspondent
ಹೌಸಿಂಗ್ ಫೈನಾನ್ಸ್ ಹೆಸರಲ್ಲಿ ಬ್ಯಾಂಕ್ ಸಿಬಂದಿಯಿಂದಲ...
01-09-25 03:07 pm
Mangalore Crime, Konaje Police, Raid, Liquor:...
01-09-25 01:58 pm
Mangalore Crime, Falnir Attack: ಪೊಲೀಸರಿಗೆ ಭಾರ...
31-08-25 10:55 pm
Mangalore Court, Sexual Abuse: ಮೂರೂವರೆ ವರ್ಷದ...
30-08-25 03:22 pm