ಬ್ರೇಕಿಂಗ್ ನ್ಯೂಸ್
28-07-25 10:51 am Mangalore Correspondent ಕರಾವಳಿ
ಸುಳ್ಯ, ಜುಲೈ 28 : ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ ಚತ್ರಪ್ಪಾಡಿ ಎಂಬಲ್ಲಿ ಜುಲೈ 27ರಂದು ಬೀಸಿದ ಭಾರೀ ಗಾಳಿ ಮಳೆಯಿಂದ ವೃದ್ದೆಯೊಬ್ಬರ ಮೇಲೆ ಮರ ಬಿದ್ದು ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ಸಂಭವಿಸಿದೆ.
ಮೃತರನ್ನು ದಿ. ಗೋಪಾಲ ಭಂಡಾರಿ ಅವರ ಪತ್ನಿ ರುಕ್ಮಿಣಿ (62) ಎಂದು ಗುರುತ್ತಿಸಲಾಗಿದೆ. ರುಕ್ಮಿಣಿ ಅವರು ಮನೆಯಲ್ಲಿ ಒಬ್ಬರೇ ಇರುತ್ತಿದ್ದರು. ಮುಂಜಾನೆ ಮನೆಯ ಹೊರಗಡೆ ಕೆಲಸ ನಿರತರಾಗಿದ್ದಾಗ ಬಲವಾದ ಗಾಳಿ ಮತ್ತು ಮಳೆಯಿಂದಾಗಿ ಮನೆ ಸಮೀಪದ ಮರದ ಒಂದು ಭಾಗ (ಗೆಲ್ಲು) ತುಂಡಾಗಿ ಅವರ ಮೇಲೆ ಬಿದ್ದಿದೆ. ಪರಿಣಾಮವಾಗಿ ರುಕ್ಮಿಣಿಯವರು ಮರದಡಿಯಲ್ಲಿ ಸಿಲುಕಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಸ್ಥಳೀಯರು ಘಟನೆಯ ವಿಚಾರ ತಿಳಿದು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಹಲವು ಕಡೆಗಳಲ್ಲಿ ಅಪಾರ ಹಾನಿ:
ಸುಳ್ಯ ತಾಲೂಕಿನಾದ್ಯಂತ ಭಾರಿ ಗಾಳಿ-ಮಳೆಗೆ ಮೆಸ್ಕಾಂಗೆ ಅಪಾರ ನಷ್ಟ ಸಂಭವಿಸಿದೆ. ತಾಲೂಕಿನ ವಿವಿಧೆಡೆ ಮರ ಬಿದ್ದು ನೂರಕ್ಕೂ ಅಧಿಕ ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ವಿದ್ಯುತ್ ಪೂರೈಕೆಯಲ್ಲಿ ವ್ಯಾಪಕ ವ್ಯತ್ಯಯ ಉಂಟಾಗಿದೆ. ಮರ, ಮರದ ಗೆಲ್ಲು ಬಿದ್ದ ಪರಿಣಾಮ ಸುಮಾರು 30 ಹೆಚ್.ಟಿ. ಕಂಬಗಳು, 75ರಷ್ಟು ಎಲ್.ಟಿ. ಕಂಬಗಳು ಸೇರಿದಂತೆ ಒಟ್ಟು 105 ವಿದ್ಯುತ್ ಕಂಬಗಳು ಹಾಗೂ 3 ವಿದ್ಯುತ್ ಪರಿವರ್ತಕಗಳು ಹಾನಿಗೊಂಡಿದೆ.
ಉರುಳುತ್ತಿವೆ ಮರಗಳು:
ಮೆಸ್ಕಾಂ ವತಿಯಿಂದ ವಿದ್ಯುತ್ ಲೈನ್ ದುರಸ್ತಿ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ. ಗಾಳಿಮಳೆಗೆ ನಡುಗಲ್ಲು- ಹರಿಹರ ರಸ್ತೆಯ ಕೊರಂಬಟ ಎಂಬಲ್ಲಿ ರಸ್ತೆಗೆ ಮರ ಬಿದ್ದು ಸಂಚಾರಕ್ಕೆ ತಡೆ ಉಂಟಾಯಿತು. ನಾಲ್ಕೂರು ಗ್ರಾಮದ ಹಾಲೆಮಜಲು, ಹುಲ್ಲುಕುಮೇರಿ, ಚಿಡ್ಕ ದೇರಪ್ಪಜ್ಜನಮನೆ, ಹೊಸಹಳ್ಳಿ ಪ್ರದೇಶಗಳಲ್ಲಿ ಭಾರಿ ಗಾಳಿ - ಮಳೆಗೆ ಮರ ಬಿದ್ದು ಹಾಗೂ ಗಾಳಿಗೆ ಅಡಿಕೆ ಮರಗಳು ಧರೆಗುರುಳಿ ನಷ್ಟ ಸಂಭವಿಸಿದೆ.
ತುಂಬಿ ಹರಿಯುತ್ತಿದೆ ಪಯಸ್ವಿನಿ,ಕುಮಾರಧಾರಾ:
ಅಮರಪಡ್ನೂರು ಗ್ರಾಮದ ಮೂಡೆಕಲ್ಲು ಎಂಬಲ್ಲಿ ಮರ ಬಿದ್ದು ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು, ರಸ್ತೆ ತಡೆ ಉಂಟಾಯಿತು. ಸುಳ್ಯದ ಪಯಸ್ವಿನಿ, ಬೆಳ್ಳಾರೆಯ ಗೌರಿ ಹೊಳೆಗಳು, ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ನದಿ ಸೇರಿದಂತೆ ತೋಡು, ಹಳ್ಳಗಳು ತುಂಬಿ ಹರಿಯುತ್ತಿದೆ. ಸುಳ್ಯ ನಗರ, ಬೆಳ್ಳಾರೆ, ನಿಂತಿಕಲ್ಲು ಗುತ್ತಿಗಾರು, ಜಾಲ್ಲೂರು, ಸಂಪಾಜೆ, ಕೊಲ್ಲಮೊಗ್ರು ಭಾಗಗಳಲ್ಲೂ ಧಾರಾಕಾರ ಮಳೆ ಮುಂದುವರಿದಿದೆ.
ಮನೆ ಮೇಲೆ ಬಿದ್ದ ಸಾಗುವಾನಿ ಮರ:
ಮೆಟ್ಟಿನಡ್ಕ ಎಂಬಲ್ಲಿ ಮನೆಗೆ ಮರ ಬಿದ್ದು ಮನೆ ಬಹುತೇಕ ಧ್ವಂಸವಾಗಿದೆ. ನಾಲ್ಕೂರು ಗ್ರಾಮದ ಅಮೆ ಮನೆ ಸುಧೀರ್ ಅವರ ಮನೆಗೆ ಸಾಗುವಾನಿ ಮರ ಬಿದ್ದು ಮನೆ ಸಂಪೂರ್ಣ ಧ್ವಂಸಗೊಂಡಿರುತ್ತದೆ. ಮನೆಯಲ್ಲಿದ್ದ ಅವರ ಸಹೋದರ ಕುಶಾಲಪ್ಪ ಅವರ ಹಣೆಯ ಭಾಗಕ್ಕೆ ಮತ್ತು ತುಟಿಗೆ ಗಾಯವಾಗಿದ್ದು ಇನುಳಿದಂತೆ ಇತರ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
A severe thunderstorm accompanied by strong winds in Sullia taluk caused widespread damage on July 27, including the tragic death of an elderly woman in the village of Chathrappadi, Nalakooru.
28-07-25 11:07 am
HK News Desk
Raichur Building Fall: ರಾಯಚೂರಿನಲ್ಲಿ ಚರಂಡಿ ಬ್ಲ...
27-07-25 01:09 pm
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
28-07-25 12:28 pm
HK News Desk
Israel, Arabic Language: ಇಸ್ರೇಲ್ ಸೈನಿಕರಿಗೆ ಇಸ...
26-07-25 03:31 pm
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
28-07-25 03:53 pm
Mangalore Correspondent
ಕಾಸಿಲ್ಲದೇ ಕನ್ಯಾಕುಮಾರಿ ಯಾತ್ರೆ ; ಜನಮನ ಸೆಳೆದ ಮಂಗ...
28-07-25 01:14 pm
Sullia, Rain, Mangalore Death: ಸುಳ್ಯದಲ್ಲಿ ಮಳೆ...
28-07-25 10:51 am
Mangalore Kodakkena Restaurant owner Suicide:...
27-07-25 09:58 pm
Mangalore Police, Ravi Pujari: ಮಂಗಳೂರಿನ ಬಿಲ್ಡ...
27-07-25 08:56 pm
27-07-25 08:39 pm
Mangalore Correspondent
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm
Bangalore Murder, Two Children Killed, Crime:...
27-07-25 03:26 pm
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm