Jayanth, Chinnayya, Dharmasthala Case: ಚಿನ್ನಯ್ಯ ಆಮಿಷಗಳಿಗೆ ಒಳಗಾಗಿ ದಾರಿ ತಪ್ಪಿಸುತ್ತಿದ್ದಾನೆ, ಮೊದಲು ಸತ್ಯವನ್ನೇ ಹೇಳಿದ್ದ ; ಜಯಂತ್ ಆರೋಪ 

01-10-25 04:45 pm       Mangalore Correspondent   ಕರಾವಳಿ

ಧರ್ಮಸ್ಥಳ ಪ್ರಕರಣದಲ್ಲಿ ದೂರುದಾರ ಚಿನ್ನಯ್ಯ ಆಮಿಷಗಳಿಗೆ ಒಳಗಾಗಿ ದಾರಿ ತಪ್ಪಿದ್ದಾನೆ. ಅವನು ಮೊದಲು ಸತ್ಯವನ್ನೇ ಹೇಳಿದ್ದಾನೆ. ಈಗ ಮಾತ್ರ ದಾರಿ ತಪ್ಪಿಸುವ ಹೇಳಿಕೆ ನೀಡುತ್ತಿದ್ದಾನೆ ಎಂದು ಸೌಜನ್ಯಾ ಪರ ಹೋರಾಟಗಾರ ಜಯಂತ್ ಆರೋಪಿಸಿದ್ದಾರೆ. ‌

ಬೆಳ್ತಂಗಡಿ, ಅ.1: ಧರ್ಮಸ್ಥಳ ಪ್ರಕರಣದಲ್ಲಿ ದೂರುದಾರ ಚಿನ್ನಯ್ಯ ಆಮಿಷಗಳಿಗೆ ಒಳಗಾಗಿ ದಾರಿ ತಪ್ಪಿದ್ದಾನೆ. ಅವನು ಮೊದಲು ಸತ್ಯವನ್ನೇ ಹೇಳಿದ್ದಾನೆ. ಈಗ ಮಾತ್ರ ದಾರಿ ತಪ್ಪಿಸುವ ಹೇಳಿಕೆ ನೀಡುತ್ತಿದ್ದಾನೆ ಎಂದು ಸೌಜನ್ಯಾ ಪರ ಹೋರಾಟಗಾರ ಜಯಂತ್ ಆರೋಪಿಸಿದ್ದಾರೆ. ‌

ಚಿನ್ನಯ್ಯನಿಗೆ ಸಹಕರಿಸಲು ನಮ್ಮ ವಕೀಲರು ಸಿದ್ಧರಿದ್ದರೂ, ಅವನೇ ಸರಕಾರಿ ವಕೀಲರು ಸಾಕು ಎಂದು ಹೇಳುತ್ತಿದ್ದಾನೆ. ಆತನ ಆರಂಭದ ಹೇಳಿಕೆಗೂ, ಈಗಿನ ಹೇಳಿಕೆಗೂ ವ್ಯತ್ಯಾಸ ಬರ್ತಾ ಇದೆ ಎಂದು ಜಯಂತ ಟಿ. ಹೇಳಿದ್ದು ಚರ್ಚೆಗೆ ಗ್ರಾಸವಾಗಿದೆ. ಧರ್ಮಸ್ಥಳ ಗ್ರಾಮದ ಜಾಗವೊಂದರ ಸರ್ವೆ ಕುರಿತು ಅರ್ಜಿ ಸಲ್ಲಿಸಿದ್ದು ಈ ಬಗ್ಗೆ ಮಾಹಿತಿ ಪಡೆಯಲು ತಾಲೂಕು ಕಚೇರಿಗೆ ಬಂದ ಸಂದರ್ಭ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಸುಜಾತಾ ಭಟ್ ವಿಚಾರದಲ್ಲಿ ಯಾವುದೇ ಷಡ್ಯಂತ್ರ ನಡೆಸಿಲ್ಲ. ನಾನು, ಮಟ್ಟಣ್ಣವರ್ ಅವರ ಬಳಿ ಹೋದದ್ದು ಸತ್ಯ. ಆದರೆ ಅವರಿಗೆ ನಿಜ ವಿಚಾರ ಮೊದಲೇ ಹೇಳಬಹುದಿತ್ತು. ಈ ಪ್ರಕರಣದ ಎಸ್ ಐಟಿ ತನಿಖೆ ನಡೆಯಬಹುದೆಂಬ ವಿಚಾರ ಅವರಿಗೆ ಗೊತ್ತಿರಲಿಲ್ಲ ಎಂದು ಹೇಳಿದರು.

ಊರಿನ ಕೆಲವರು ನಮ್ಮದು ಷಡ್ಯಂತ್ರ ಎಂದು ಹೇಳುತ್ತಿದ್ದಾರೆ. ಆದರೆ ಇದು ಎಸ್ಐಟಿ ತನಿಖೆಯಿಂದ ತಿಳಿದು ಬರಬೇಕಿದ್ದು, ಇದಕ್ಕೆ ಉನ್ನತ ಅಧಿಕಾರಿಗಳೇ ಉತ್ತರಿಸಬೇಕಾಗಿದೆ. ಮುಂದಿನ ಆರು ತಿಂಗಳಲ್ಲಿ ಸತ್ಯ ಹೊರಗೆ ಬಂದೇ ಬರುತ್ತದೆ. ನನಗೆ ಬಂಧನದ ಬಗ್ಗೆ ಯಾವುದೇ ಭೀತಿ ಇಲ್ಲ. ಬಂಧನವಾದರೆ ಎಲ್ಲಾ ಸತ್ಯ ಹೊರಗೆ ಬರುತ್ತದೆ. ನಮ್ಮದು ನ್ಯಾಯಕ್ಕಾಗಿ ಹೋರಾಟ. ಕಾನೂನಿನ ಅರಿವಿಲ್ಲದೆ ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸಲು ಸಿದ್ಧ. ಎಸ್ಐಟಿ ತನಿಖೆ ಉತ್ತಮವಾಗಿ ನಡೆಯುತ್ತಿದ್ದು ಇದಕ್ಕೆ ಪರಸ್ಪರ ಸಹಕಾರ ಅಗತ್ಯವಾಗಿದೆ ಎಂದರು.

In the ongoing Dharmasthala case, activist Jayant, supporting Soujanya’s side, alleged that complainant Chinnayya has been misled by temptations and is now giving contradictory statements. Jayant said Chinnayya initially spoke the truth, but his recent claims appear misleading. Speaking to the media at Belthangady taluk office, Jayant denied any conspiracy in the Sujatha Bhat matter and asserted that the SIT investigation will reveal the facts. He added that he has no fear of arrest, as the truth will eventually come out within six months. Emphasizing that their fight is for justice, Jayant said if any mistakes were made without legal awareness, he is ready to face consequences, while urging full cooperation with the SIT probe.