ಬ್ರೇಕಿಂಗ್ ನ್ಯೂಸ್
01-10-25 11:00 pm Mangalore Correspondent ಕರಾವಳಿ
ಮಂಗಳೂರು, ಅ.1 : ಕಾಂಗ್ರೆಸ್ ಮುಖಂಡ ಮಿಥುನ್ ರೈ ನೇತೃತ್ವದಲ್ಲಿ ನಗರದ ಕರಾವಳಿ ಉತ್ಸವದಲ್ಲಿ ನಡೆಯುತ್ತಿರುವ ಹತ್ತನೇ ವರ್ಷದ ಪಿಲಿನಲಿಕೆ ಸ್ಪರ್ಧಾ ಕಾರ್ಯಕ್ರಮಕ್ಕೆ ಭಾರೀ ಸಂಖ್ಯೆಯಲ್ಲಿ ಸೆಲೆಬ್ರಿಟಿಗಳು ಮತ್ತು ಭಾರೀ ಸಂಖ್ಯೆಯ ಜನರು ಸೇರಿದ್ದಾರೆ. ಮತ ಭೇದ ಇಲ್ಲದೆ ಜನರು ಆಗಮಿಸಿದ್ದು ಬಂದು ಸೇರಿದ್ದು ವಿಶೇಷ.
ಕನ್ನಡ ಚಿತ್ರರಂಗದ ಖ್ಯಾತ ನಟ ಕಿಚ್ಚ ಸುದೀಪ್ ಮೊದಲ ಬಾರಿಗೆ ಪಿಲಿನಲಿಕೆ ಉತ್ಸವಕ್ಕೆ ಬಂದಿದ್ದು ಇಷ್ಟೊಂದು ಜನ ಸೇರ್ತಾರೆ, ಹುಲಿ ವೇಷದಲ್ಲಿ ಇಂಥದ್ದೊಂದು ಕಾರ್ಯಕ್ರಮ ಆಗುತ್ತೆ ಎಂದು ತಿಳಿದಿರಲಿಲ್ಲ. ಹುಲಿ ವೇಷ ನೋಡಲು ಬಂದಿದ್ದು ನನಗೂ ಖುಷಿಯಾಯ್ತು ಎಂದು ಹೇಳಿದರು. ಸುದೀಪ್ ಕೆಲಹೊತ್ತು ಕಾರ್ಯಕ್ರಮದಲ್ಲಿದ್ದು ಬಳಿಕ ನಿರ್ಗಮಿಸಿದರು.





ಅದೇ ವೇಳೆಗೆ, ಬಾಲಿವುಡ್ ಸೂಪರ್ ಸ್ಟಾರ್ ಸುನಿಲ್ ಶೆಟ್ಟಿ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಸುನಿಲ್ ಶೆಟ್ಟಿ ಪ್ರತಿ ವರ್ಷವೂ ಪಿಲಿನಲಿಕೆ ಉತ್ಸವಕ್ಕೆ ಬರುತ್ತಿದ್ದು ತುಳುನಾಡಿನ ಜನಪದ ಸ್ಪರ್ಧೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಸುನಿಲ್ ಶೆಟ್ಟಿ ಜೊತೆಗೆ ತುಳು ಸಿನಿಮಾ ಇಂಡಸ್ಟ್ರಿಯ ರೂಪೇಶ್ ಕೂಡ ಇದ್ದರು. ರೂಪೇಶ್ ಶೆಟ್ಟಿ ನಿರ್ದೇಶನದಲ್ಲಿ ಸುನಿಲ್ ಶೆಟ್ಟಿ ನಟನೆಯ ಜೈ ಎನ್ನುವ ತುಳು ಸಿನಿಮಾ ತಯಾರಾಗುತ್ತಿದ್ದು ಇದೇ ನವೆಂಬರ್ 11ಕ್ಕೆ ಬಿಡುಗಡೆಯಾಗಲಿದೆ ಎಂದು ಇದೇ ವೇಳೆ ಪ್ರಕಟಿಸಿದರು. ರೂಪೇಶ್ ಮಾತನಾಡಿ, ಸುನಿಲ್ ಶೆಟ್ಟಿಯಂಥ ಅಗ್ರಮಾನ್ಯರು ನಮ್ಮ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನುವುದೇ ನನ್ನ ಭಾಗ್ಯ. ಇದಕ್ಕೆ ಕಾರಣವಾಗಿದ್ದು ಮಿಥುನ್ ರೈ. ಸುನಿಲಣ್ಣರನ್ನು ಕರೆಸಿದ್ದು ನನ್ನ ಚಿತ್ರದಲ್ಲಿ ನಟಿಸುವಂತೆ ಮಾಡಿದ್ದು ಮಿಥುನ್ ರೈ. ಇದಕ್ಕಾಗಿ ಈ ಪಿಲಿನಲಿಕೆ ಉತ್ಸವ ಕಾರಣ, ನಾನು ಆಭಾರಿಯಾಗಿದ್ದೇನೆ ಎಂದು ಹೇಳಿದರು.
ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಪುತ್ರ, ಕನ್ನಡ ಚಿತ್ರರಂಗದ ಭರವಸೆಯ ಕಲಾವಿದ ಝಾಯೇದ್ ಖಾನ್ ಆಗಮಿಸಿದ್ದರು. ಸುನಿಲ್ ಶೆಟ್ಟಿ ಜೊತೆಗೆ ವೇದಿಕೆಯಲ್ಲಿ ಕುಳಿತು ಸೋಮೇಶ್ವರ ಫ್ರೆಂಡ್ಸ್ ತಂಡದ ಹುಲಿವೇಷಗಳ ಕುಣಿತ ವೀಕ್ಷಿಸಿದರು. ಅದ್ದೂರಿ ಕುಣಿತ, ಸಣ್ಣ ಮರಿ ಹುಲಿಯ ಚಾಲಾಕಿತನಕ್ಕೆ ಮನಸೋತ ಝಾಯೇದ್ ಖಾನ್, ವೇದಿಕೆಯಿಂದಲೇ ತನ್ನ ವೈಯಕ್ತಿಕ ನೆಲೆಯಲ್ಲಿ ಎರಡು ಲಕ್ಷ ಬಹುಮಾನ ಘೋಷಿಸಿದರು. ಅಲ್ಲದೆ, ಮರಿ ಹುಲಿ ಹಾಕಿದ ಕಲಾವಿದನಿಗೆ 50 ಸಾವಿರ ತನ್ನ ಕಿರು ಕಾಣಿಕೆ ಎಂದು ಹೇಳಿ ಕಲಾವಿದರನ್ನು ಹುರಿದುಂಬಿಸಿದರು.
ಮಂಗಳೂರು ಮೂಲದ ಬಾಲಿವುಡ್ ನಟಿ ಪೂಜಾ ಹೆಗ್ಡೆ ತುಳುವಿನಲ್ಲೇ ಮಾತನಾಡಿ, ಹುಲಿ ವೇಷದ ಬಗ್ಗೆ ತನ್ನ ಪ್ರೀತಿಯನ್ನು ಹೇಳಿಕೊಂಡರು. ಮಂಗಳೂರಿನವರೇ ಆದ ಸಂಗೀತ ನಿರ್ದೇಶಕ ಗುರುಕಿರಣ್ ಪ್ರತಿ ವರ್ಷವೂ ಬರುತ್ತಿದ್ದು, ಸುನಿಲ್ ಶೆಟ್ಟಿಯನ್ನು ನೋಡಿ ನನಗೂ ಇವರೇ ಗುರುಗಳು. ಮ್ಯೂಸಿಕ್ ಮಾಡು ಅಂತ ಪ್ರೋತ್ಸಾಹಿಸಿದ್ದು ಇವರೇ. ಅದರಿಂದಾಗಿ ಮ್ಯೂಸಿಕ್ ಮಾಡುವಂತಾಯ್ತು ಎಂದು ಹೇಳುತ್ತ ಪಿಲಿ ನಲಿಕೆ ಆಯೋಜಿಸಿದ ಮಿಥುನ್ ರೈಗೆ ಧನ್ಯವಾದ ಹೇಳಿದರು. ಅಲ್ಲದೆ, ಹುಲಿ ವೇಷ ಕುಣಿತವನ್ನು ಮುಂದಿನ ಬಾರಿ ಬೆಂಗಳೂರಿನಲ್ಲಿ ಮಾಡುತ್ತೇವೆ, ಈ ಬಾರಿ ಹಂಪಿಯಲ್ಲಿ ಮಾಡಿಸಿದ್ದೆ. ಭಾರೀ ಪ್ರತಿಕ್ರಿಯೆ ಬಂದಿತ್ತು ಎಂದು ಹೇಳಿದರು.
ಸು ಫ್ರಂ ಸೋ ಖ್ಯಾತಿಯ ರಾಜ್ ಬಿ ಶೆಟ್ಟಿ, ನಿರ್ದೇಶಕ ಜೆಪಿ ತುಮ್ಮಿನಾಡು ಆಗಮಿಸಿದ್ದರು. ತುಳುನಾಡಿನ ಜನಪದಕ್ಕೆ ನಾವು ತಲೆ ತಗ್ಗಿಸಬೇಕು. ಇಲ್ಲಿ ಜನ ಸೇರಿದ್ದು ಯಾವುದೇ ಸಿನಿಮಾ ನಟರನ್ನು ನೋಡಲು ಅಲ್ಲ. ಹುಲಿಗಳನ್ನು ನೋಡಲು ಬಂದಿದ್ದಾರೆ. ನಮ್ಮ ಸಂಸ್ಕೃತಿಗೆ ಪೆಟ್ಟು ಬಿದ್ದಿದೆ ಅಂತಾರೆ, ಆದರೆ ವರ್ಷದಿಂದ ವರ್ಷಕ್ಕೆ ನಮ್ಮ ಸಂಸ್ಕೃತಿ ಜಗತ್ತಿನೆತ್ತರಕ್ಕೆ ಏರುತ್ತಿದೆ ಎಂದರು.
ಕ್ರಿಕೆಟ್ ತಾರೆ ಅಜಿಂಕ್ಯ ರಹಾನೆ ಸಂಜೆ ವೇಳೆಗೆ ಬೇಗ ಬಂದು ಹೋದರೆ, ಆರ್ ಸಿಬಿ ತಂಡದ ಜಯೇಶ್ ಶರ್ಮಾ ರಾತ್ರಿ ಬಂದಿದ್ದರು. ಅವರಿಬ್ಬರೂ ಇಲ್ಲಿನ ಜನಪದ ಕಲೆಯಾದ ಹುಲಿವೇಷಗಳನ್ನು ತದೇಕ ಚಿತ್ತದಿಂದ ನೋಡುತ್ತಲೆ ಇದ್ದರು.
ಕಾರ್ಯಕ್ರಮಕ್ಕೆ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್, ಸಂಸದ ಕ್ಯಾ.ಬ್ರಿಜೇಶ್ ಚೌಟ, ಎಂ.ಎನ್. ರಾಜೇಂದ್ರ ಕುಮಾರ್, ರಮಾನಾಥ ರೈ ಸೇರಿದಂತೆ ಹಲವಾರು ಗಣ್ಯರು ಆಗಮಿಸಿದ್ದರು. ಡಿಸಿಎಂ ಡಿಕೆ ಶಿವಕುಮಾರ್ ಹೈದರಾಬಾದ್ ಕಾರ್ಯಕ್ರಮ ಮುಗಿಸಿ ಮಂಗಳೂರು ಬರುವಾಗ ತಡವಾಗಿತ್ತು. ರಾತ್ರಿ 11.20 ಗಂಟೆಯ ವೇಳೆಗೆ ಮಂಗಳೂರು ಪಿಲಿನಲಿಕೆ ಉತ್ಸವಕ್ಕೆ ತಲುಪಿದ್ದಾರೆ.
The 10th edition of the Pilinalike (Tiger Dance) Festival in Mangaluru turned into a grand celebration with a glittering lineup of celebrities, film stars, sports icons, and political leaders joining thousands of spectators.
17-12-25 12:45 pm
Bangalore Correspondent
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
ದೆಹಲಿಯಲ್ಲು ಹೈಕಮಾಂಡ್ ಡಿನ್ನರ್ ಮೀಟಿಂಗ್ ; ಡಿಸಿಎಂ...
15-12-25 02:23 pm
17-12-25 01:38 pm
HK News Desk
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
ಪ್ರೇಕ್ಷಕ ಯುವಕನ ತಲೆಗೆ ಮರದ ಗುರಾಣಿಯಿಂದ ಹೊಡೆದ ತೈಯ...
15-12-25 08:09 pm
16-12-25 10:25 pm
Mangalore Correspondent
Bride Missing, Mangalore: ಬೇರೆ ಲವ್ ಇದೆಯೆಂದರೂ...
16-12-25 08:53 pm
ಕೇರಳಕ್ಕೆ ನಾಲ್ಕು ಲಕ್ಷ ಮೌಲ್ಯದ ಎಂಡಿಎಂ ಡ್ರಗ್ಸ್ ಸಾ...
16-12-25 05:24 pm
ಕೊರಗ ಸಮುದಾಯದಲ್ಲಿ ಮೊಟ್ಟಮೊದಲ ವೈದ್ಯಕೀಯ ಪದವಿ ಪಡೆದ...
16-12-25 04:26 pm
ಆವರಣ ಗೋಡೆ ಕಾಮಗಾರಿ ವೇಳೆ ಗುಡ್ಡ ಕುಸಿತ ; ಮಣ್ಣಿನಡಿ...
16-12-25 01:23 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm