Puttur Krishna Rao, Baby, Pratibha Kulai: ಕೃಷ್ಣ ರಾವ್ ಮದುವೆ ಮಾಡಿಕೊಳ್ಳದಿದ್ದರೆ ಮುಂದಿದೆ ಮಾರಿಹಬ್ಬ! ಏನ್ಮಾಡ್ತೀವಿ ಅಂತ ನೋಡ್ತಿರಿ, ಈ ಜಿಲ್ಲೆಯಲ್ಲಿ ಯಾರೂ ಗಂಡಸರೇ ಇಲ್ವಾ? ಸೋಕಾಲ್ಡ್ ಲೀಡರ್ಸ್ ಎಲ್ಲಿದ್ದೀರಿ, ನೀಚ ರಾಜಕಾರಣಿಗಳು ಯಾಕೆ ತುಟಿ ಬಿಚ್ತಿಲ್ಲ?  

03-10-25 05:59 pm       Mangalore Correspondent   ಕರಾವಳಿ

ಪುತ್ತೂರಿನಲ್ಲಿ ಸಹಪಾಠಿಗೆ ಮಗು ಕರುಣಿಸಿದ ಪ್ರಕರಣದಲ್ಲಿ ಡಿಎನ್ಎ ವರದಿ ಬಂದಿದ್ದು ಕೃಷ್ಣ ರಾವ್ ಅಪ್ಪ ಎಂದು ಸಾಬೀತಾಗಿದೆ. ಮದುವೆ ಮಾಡಿಸುತ್ತೇವೆ, ಕೇಸ್ ಮಾಡೋದು ಬೇಡ ಎಂದು ಹೇಳಿದ್ದ ಹೆತ್ತವರು ಯಾಕೆ ಸುಮ್ಮನೆ ಕುಳಿತಿದ್ದಾರೆ. ಹಿಂದುತ್ವ ಹೆಸರಲ್ಲಿ ಜನರನ್ನು ಸೇರಿಸುವ ಸೋಕಾಲ್ಡ್ ನಾಯಕರು ಎಲ್ಲಿದ್ದಾರೆ. ಈ ಜಿಲ್ಲೆಯಲ್ಲಿ ಯಾರೂ ಗಂಡಸರಿಲ್ಲವೇ..

ಮಂಗಳೂರು, ಅ.3 : ಪುತ್ತೂರಿನಲ್ಲಿ ಸಹಪಾಠಿಗೆ ಮಗು ಕರುಣಿಸಿದ ಪ್ರಕರಣದಲ್ಲಿ ಡಿಎನ್ಎ ವರದಿ ಬಂದಿದ್ದು ಕೃಷ್ಣ ರಾವ್ ಅಪ್ಪ ಎಂದು ಸಾಬೀತಾಗಿದೆ. ಮದುವೆ ಮಾಡಿಸುತ್ತೇವೆ, ಕೇಸ್ ಮಾಡೋದು ಬೇಡ ಎಂದು ಹೇಳಿದ್ದ ಹೆತ್ತವರು ಯಾಕೆ ಸುಮ್ಮನೆ ಕುಳಿತಿದ್ದಾರೆ. ಹಿಂದುತ್ವ ಹೆಸರಲ್ಲಿ ಜನರನ್ನು ಸೇರಿಸುವ ಸೋಕಾಲ್ಡ್ ನಾಯಕರು ಎಲ್ಲಿದ್ದಾರೆ. ಈ ಜಿಲ್ಲೆಯಲ್ಲಿ ಯಾರೂ ಗಂಡಸರಿಲ್ಲವೇ.. ಬೆಂಗಳೂರಿನಿಂದ ಬರುವ ನಂಜುಂಡಿ ಒಬ್ಬರೇ ಗಂಡಸರಾ.. ಯಾಕೆ ನೀಚ ರಾಜಕಾರಣಿಗಳು ಮಾತಾಡುತ್ತಿಲ್ಲ ಎಂದು ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಪ್ರಶ್ನಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಂಜುಂಡಿಯವರು ಎಲ್ಲ ನಾಯಕರ ಮನೆಗಳಿಗೂ ಹೋಗಿ ಸಹಾಯ ಕೇಳಿದ್ದಾರೆ. ಏನೋ ತಪ್ಪಾಗಿದೆ, ಹಿಂದುಗಳೇ ಅಲ್ವಾ. ಮದುವೆ ಮಾಡಿಸಿ ಎಂದು ಗೋಗರೆದಿದ್ದಾರೆ. ಆದರೆ ಯಾರು ಕೂಡ ಈ ಜಿಲ್ಲೆಯಲ್ಲಿ ಗಂಡಸರಿದ್ದೇವೆ ಅಂತ ತೋರಿಸ್ತಿಲ್ಲ. ವಿಶ್ವಕರ್ಮ ಸಮಾಜದ ಹೆಣ್ಣು ಮಗುವಿನ ಪರವಾಗಿ ಬೆಂಗಳೂರಿನಿಂದ ನಂಜುಂಡಿ ಅವರೇ ಬರಬೇಕಾ. ಈ ಸಮಾಜದಲ್ಲಿ ಜಿಲ್ಲೆಯ ಯಾರೂ ನಾಯಕರು ಇಲ್ಲವೇ.. ಯಾಕೆ ಮಾತಾಡುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.

ಕಾನೂನು ಹೋರಾಟ ಒಂದೆಡೆ ನಡೆಯುತ್ತದೆ, ಆದರೆ ನಾವಂತೂ ಸುಮ್ಮನೆ ಬಿಡುವುದಿಲ್ಲ. ನಮ್ಮ ಮಹಿಳಾ ತಂಡ ಒಟ್ಟಾಗಿದ್ದು, ಕೃಷ್ಣ ರಾವ್ ಮನೆಗೆ ನುಗ್ಗಿ ಪ್ರತಿಭಟನೆ ಮಾಡುತ್ತೇವೆ. ಮಹಿಳೆ ಅಬಲೆಯಲ್ಲ, ಏನು ಮಾಡಿದ್ರೂ ಸಮಾಜ ಒಪ್ಪಿಕೊಳ್ಳುತ್ತೆ, ಕಾಸಿದ್ದರೆ ಏನಾದ್ರೂ ಆಗುತ್ತೆ ಅನ್ನೋ ದಾರ್ಷ್ಟ್ಯಕ್ಕೆ ಉತ್ತರ ನೀಡುತ್ತೇವೆ ಎಂದು ಹೇಳಿದ ಪ್ರತಿಭಾ, ನಾನು ಕೂಡ ಮನೆಯವರೊಂದಿಗೆ ಮಾತಾಡಿದ್ದೆ. ಅವನದ್ದೇ ಅಂತ ಸಾಬೀತಾದರೆ ಮದುವೆ ಮಾಡಿಸುತ್ತೇವೆ ಎಂದಿದ್ದರು. ಈಗ ಕೇಸು ಕೋರ್ಟಿನಲ್ಲಿದ್ದು, ಮಗು ಅವನದ್ದೇ ಅನ್ನುವ ಕಾರಣಕ್ಕೆ, ಸಮಾಜಕ್ಕೆ ಸಂದೇಶ ನೀಡುವುದಕ್ಕಾಗಿ ಮದುವೆ ಆಗಲೇಬೇಕು.

ಮದುವೆಯಾದ ಬಳಿಕ ಹೇಗೆ ಇರುತ್ತಾರೆ ಅನ್ನುವುದು ಅವರಿಗೆ ಬಿಟ್ಟದ್ದು. ಹೊಂದಾಣಿಕೆ ಮಾಡಿಕೊಂಡು ಹೋಗುತ್ತಾರೋ ಇಲ್ಲವೋ ಗೊತ್ತಿಲ್ಲ. ಹೊಂದಾಣಿಕೆ ಆಗದೇ ಇದ್ದರೆ ಕಾನೂನು ಪ್ರಕಾರ ನೋಡಿಕೊಳ್ಳಲಿ. ಆದರೆ ಸಮಾಜಕ್ಕೆ ಅವನೇ ಮಗುವಿನ ಅಪ್ಪ. ಹಾಗಾಗಿ ಮದುವೆಯಾಗಿ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಬೇಕಾಗಿದೆ. ಒಂದು ಹೆಣ್ಣು ಮಗಳ ಅಸ್ತಿತ್ವದ ಪ್ರಶ್ನೆಯಾಗಿದೆ, ಒಪ್ಪಿಗೆಯಿಂದ ಲೈಂಗಿಕ ಕ್ರಿಯೆ ಮಾಡಿದ್ದೇನೆ ಎಂದಿದ್ದರಿಂದ ಜಾಮೀನು ಆಗಿದೆ. ಆದರೆ ಮಗು ತನ್ನದೇ, ಮದುವೆಯಾಗಲ್ಲ ಎಂದು ಕೋರ್ಟಿನಲ್ಲಿ ಹೇಳಿದರೆ ಜಾಮೀನು ರದ್ದಾಗುತ್ತದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದನಕ್ಕೆ ಮರ್ಯಾದೆ ಇದೆ, ಹೆಣ್ಣು ಮಕ್ಕಳಿಗೆ ಮರ್ಯಾದೆ ಇಲ್ಲ. ಒಂದ್ವೇಳೆ ಹಿಂದು- ಮುಸ್ಲಿಂ ಆಗುತ್ತಿದ್ದರೆ ಈಗ ಕೆಲವು ಹೆಣ ಬೀಳು ಸ್ಥಿತಿಯಾಗುತ್ತಿತ್ತು. ಬಡ ಹಿಂದುಳಿದ ವರ್ಗದದವರನ್ನು ಎತ್ತಿಕಟ್ಟುವ ಸೋಕಾಲ್ಡ್ ಲೀಡರ್ಸ್ ಈಗ ಎಲ್ಲಿದ್ದಾರೆ. ಬಡ ಹೆಣ್ಮಕ್ಕಳು ರೋಡಿನಲ್ಲಿ ಕುಣಿಯುವುದಕ್ಕೆ ಮಾತ್ರನಾ.. ಹಿಂದು ಸಮಾಜದ ಸ್ವಾಮೀಜಿಗಳು ಯಾಕೆ ಮಾತಾಡಲ್ಲ. ಎಲ್ಲವನ್ನೂ ನೋಡುವ ಸಮಾಜ ಅನ್ನುವುದಿದೆ, ನಾವು ಏನು ಮಾಡುತ್ತೇವೆ ಅಂತ ಮುಂದೆ ನೋಡಿ. ಆತನ ಹೆತ್ತವರಿಗೆ ಸಮಾಜದ ಹೆದರಿಕೆ ಇಲ್ಲ, ಅದನ್ನು ತೋರಿಸುತ್ತೇವೆ ಎಂದು ಪ್ರತಿಭಾ ಕುಳಾಯಿ ಹೇಳಿದರು.

ಪಕ್ಷದಲ್ಲಿ ಹುದ್ದೆ ಇದೆಯೆಂದು ಆಚಾರ್ಯ ಸಮಾಜದವರು ಮಾತಾಡಲ್ವಂತೆ. ನೀವು ಇದೇ ರೀತಿಯಾದರೆ ನಿಮ್ಮನ್ನು ಮುಂದೆ ಯಾರೂ ಮೂಸಿಯೂ ನೋಡುವುದಿಲ್ಲ. ಆ ಹುಡುಗಿಯ ಕುಟುಂಬದ ಪರವಾಗಿ ನಂಜುಂಡಿಯವರು ನಿಂತಿದ್ದಕ್ಕಾಗಿ ಬದುಕಿದ್ದಾರೆ. ಅವರ ಜೊತೆಗೆ ನಿಲ್ಲುವುದಕ್ಕೂ ಸಮಾಜದವರಿಗೆ ಹೆದರಿಕೆ ಇದೆ. ಈಗಲೂ ಹೇಳುತ್ತೇನೆ, ಕೃಷ್ಣ ರಾವ್ ಮದುವೆ ಮಾಡಿಕೊಂಡರೆ ಎಲ್ಲ ಖರ್ಚನ್ನೂ ನಾನು ನೋಡಿಕೊಳ್ಳುತ್ತೇನೆ. ಹುಡುಗಿಗೆ ಏನೆಲ್ಲ ಬೇಕು ಎಲ್ಲವನ್ನೂ ಮಾಡಿಸುತ್ತೇನೆ ಎಂದು ಪ್ರತಿಭಾ ಹೇಳಿದರು.

ಸುದ್ದಿಗೋಷ್ಟಿಯಲ್ಲಿ ವಿಶ್ವಕರ್ಮ ಸಮಾಜದ ಅರ್ಚನಾ, ಹುಡುಗಿ ತಾಯಿ ನಮಿತಾ ಇದ್ದರು.

In a dramatic turn to the Puttur case, DNA results have confirmed that Krishna Rao is the father of his classmate’s child. Backward Classes Commission member Pratibha Kulai lashed out at political and community leaders for remaining silent, questioning, “Are there no men in this district? Why should leaders from Bengaluru alone speak up?”