ಬ್ರೇಕಿಂಗ್ ನ್ಯೂಸ್
 
            
                        08-10-25 10:09 pm Mangalore Correspondent ಕರಾವಳಿ
 
            ಉಳ್ಳಾಲ, ಅ.8 : ಉಳ್ಳಾಲದ ಕೋಟೆಪುರದ ಮೀನಿನ ಆಹಾರ ತಯಾರಿಕ ಸಂಸ್ಕರಣಾ ಘಟಕ (ಗೋದಾಮು)ದಲ್ಲಿ ಬುಧವಾರ ಸಂಜೆ ಬೆಂಕಿ ಕಾಣಿಸಿಕೊಂಡಿದ್ದು , ಗೋದಾಮು ಬೆಂಕಿಗೆ ಆಹುತಿಯಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಸಮೀಪದ ಫ್ಯಾಕ್ಟರಿಯ ಬಾಯ್ಲರ್ಗೂ ಬೆಂಕಿ ವ್ಯಾಪಿಸಿದ್ದು ಸ್ಥಳೀಯರು ಸಮಯ ಪ್ರಜ್ಞೆ ಮೆರೆದು ಬೆಂಕಿ ನಂದಿಸಿದ ಪರಿಣಾಮ ಭಾರೀ ಪ್ರಮಾಣದ ಅವಘಡ ತಪ್ಪಿದೆ.
ಎಚ್.ಕೆ.ಖಾದರ್ ಎಂಬವರಿಗೆ ಸೇರಿದ ಎಂಎಂಪಿ ಫಿಶ್ ಮೀಲ್ ಫ್ಯಾಕ್ಟರಿ ಗೋದಾಮಿನಲ್ಲಿ ಬೆಂಕಿ ಅವಘಡ ನಡೆದಿದೆ. ಸಂಜೆ ವೇಳೆ ಗೋದಾಮಿನ ಒಳಗಡೆ ಕಾಣಿಸಿಕೊಂಡ ಬೆಂಕಿ ಏಕಾಏಕಿ ವ್ಯಾಪಿಸಿದೆ. ಬೆಂಕಿಯ ಕೆನ್ನಾಲಿಗೆ ಗೋದಾಮಿನ ಹೊರಕ್ಕೂ ವ್ಯಾಪಿಸಿದ್ದು ಸಮೀಪದ ಫಿಶ್ ಮೀಲ್ ಫ್ಯಾಕ್ಟರಿಯ ಬಾಯ್ಲರ್ಗೆ ತಗಲುವಷ್ಟರಲ್ಲಿ ಸಮಯ ಪ್ರಜ್ಞೆ ಮೆರೆದ ಸ್ಥಳೀಯರು ನೀರು ಎರಚಿ ಬೆಂಕಿಯ ಕೆನ್ನಾಲಿಗೆಯನ್ನ ತಹಬದಿಗೆ ತಂದಿದ್ದಾರೆ. ಬಾಯ್ಲರ್ ಗೆ ಬೆಂಕಿ ತಗಲುತ್ತಿದ್ದರೆ ಅದು ಸ್ಫೋಟಗೊಂಡು ಸ್ಥಳೀಯ ನಿವಾಸಿಗಳ ಮಾರಣಹೋಮವೇ ನಡೆಯುತ್ತಿತ್ತೆಂದು ಸ್ಥಳೀಯರು ದೂರಿದ್ದಾರೆ. ತುಂಬಾ ಹೊತ್ತಿನ ಬಳಿಕ ಮಂಗಳೂರಿನಿಂದ ಅಗ್ನಿಶಾಮಕ ದಳದ ವಾಹನ ಬಂದು ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದೆ.






ಕೋಟೆಪುರದ ಜನನಿಬಿಡ ಪ್ರದೇಶದಲ್ಲಿ ಸಾಸಿವೆ ಬೀಳಲೂ ಅವಕಾಶವಿಲ್ಲದಂತೆ ಒಂದೇ ಕಡೆಯಲ್ಲಿ ಹದಿನಾಲ್ಕು ಫ್ಯಾಕ್ಟರಿಗಳು ನಿಯಮಗಳನ್ನ ಉಲ್ಲಂಘಿಸಿ ಕಾರ್ಯಾಚರಿಸುತ್ತಿದ್ದು ಸರಿಯಾದ ಮೂಲಭೂತ ವ್ಯವಸ್ಥೆಗಳನ್ನೂ ಕಲ್ಪಿಸಲಾಗಿಲ್ಲ. ಜನನಿಬಿಡ ಪ್ರದೇಶಗಳಲ್ಲಿ ಸಾರ್ವಜನಿಕರನ್ನು ಅಪಾಯದಲ್ಲಿರಿಸಿ ಫಿಶ್ ಮೀಲ್ ಘಟಕಗಳು ಕಾರ‍್ಯಾಚರಿಸುತ್ತಿದ್ದರೂ, ಅಧಿಕಾರಿಗಳು ಮೌನ ವಹಿಸಿದ್ದಾರೆ. ನಿಯಮಗಳನ್ನ ಉಲ್ಲಂಘಿಸಿ ಕೋಟ್ಯಂತರ ರೂಪಾಯಿ ವ್ಯವಹಾರ ನಡೆಸುವ ಫಿಶ್ ಫುಡ್ ಮತ್ತು ಆಯಿಲ್ ಮಿಲ್ ಸೇರಿ ಒಟ್ಟು ಹದಿನಾಲ್ಕು ಫ್ಯಾಕ್ಟರಿಗಳಲ್ಲಿ ಕನಿಷ್ಟ ಸುರಕ್ಷತಾ ಕ್ರಮಗಳನ್ನೇ ಅನುಸರಿಸುತ್ತಿಲ್ಲ. ಆಂಬ್ಯುಲೆನ್ಸ್, ಅಗ್ನಿಶಾಮಕ ವಾಹನಗಳೂ ಸ್ಥಳದಲ್ಲಿಲ್ಲ. ಘಟನೆ ಸಂಭವಿಸಿದಾಗ ಮಂಗಳೂರಿನಿಂದಲೇ ತುರ್ತು ವಾಹನಗಳು ಇಲ್ಲಿಗೆ ಬರಬೇಕಾಗಿದೆ. ಸ್ವಲ್ಪ ಎಚ್ಚರಿಕೆ ತಪ್ಪಿದರೂ ಪ್ರದೇಶದ ನೂರಾರು ಮನೆಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ.
ನಿಯಮ ಉಲ್ಲಂಘಿಸಿ ಕಾರ್ಯಾಚರಿಸುತ್ತಿರುವ ಫಿಶ್ ಮೀಲ್ ಫ್ಯಾಕ್ಟರಿಗಳಿಗೆ ಸಾಗುವ ಲಾರಿಗಳು ಮೀನಿನ ತ್ಯಾಜ್ಯವನ್ನ ರಸ್ತೆಗೆ ಸುರಿಸಿ ಪ್ರದೇಶವನ್ನ ಗಬ್ಬು ನಾರಿಸುತ್ತಿರುವ ಬಗ್ಗೆ ಹೆಡ್ ಲೈನ್ ಕರ್ನಾಟಕ ವರದಿ ಮಾಡಿತ್ತು. ಇಷ್ಟಲ್ಲದೆ ಫ್ಯಾಕ್ಟರಿಗಳಿಗೆ ಮಂಗಳೂರು ಮತ್ತು ಕೇರಳದಿಂದ ದಿವಸಕ್ಕೆ ಇನ್ನೂರಕ್ಕೂ ಅಧಿಕ ಕಂಟೇನರ್ ಇನ್ನಿತರ ಲಾರಿಗಳು ಸಾಗುತ್ತಿದ್ದು ರಸ್ತೆಯಲ್ಲೇ ಕೆಟ್ಟು ನಿಂತಿದ್ದರಿಂದ 3-4 ದಿನದ ವರೆಗೂ ಉಳ್ಳಾಲದ ರಾಜರಸ್ತೆ ಹಾಗೂ ತೊಕ್ಕೊಟ್ಟು ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡು ವಾಹನ ಸವಾರರು ಆಕ್ರೋಶಗೊಂಡಿದ್ದರು. ಹೆಡ್ ಲೈನ್ ಕರ್ನಾಟಕ ವರದಿಗೆ ಸ್ಫಂದಿಸಿದ ಡಿಸಿಪಿ ರವಿಶಂಕರ್ ಅವರು ಟ್ರಾಫಿಕ್ ಪೊಲೀಸರ ಮೂಲಕ ತ್ಯಾಜ್ಯವನ್ನ ರಸ್ತೆಗೆ ಹರಿಸುವ ಲಾರಿಗಳ ವಿರುದ್ಧ ಕ್ರಮಕ್ಕೆ ಸೂಚನೆ ನೀಡಿದ್ದಾರೆ.
 
            
            
            A major fire broke out on Wednesday evening at a fish meal processing unit warehouse in Kotepura, Ullal, causing heavy property damage worth several lakhs. The fire, which started inside the warehouse owned by H.K. Khader’s MMP Fish Meal Factory, quickly spread toward a nearby factory boiler.
 
    
            
             30-10-25 11:00 pm
                        
            
                  
                Bangalore Correspondent    
            
                    
 
    ನಟ ಪ್ರಕಾಶ್ ರಾಜ್, ರಾಜೇಂದ್ರ ಚೆನ್ನಿ, ಜಕರಿಯಾ ಜೋಕಟ...
30-10-25 07:25 pm
 
    ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ; ನ.5ರಂದು ಮತ್ತೊಂದ...
30-10-25 06:22 pm
 
    ಸಿದ್ದರಾಮಯ್ಯ ಅವರೇ ಐದು ವರ್ಷಗಳಿಗೆ ಮುಖ್ಯಮಂತ್ರಿಯೆಂ...
30-10-25 04:34 pm
 
    ಬೆಂಗಳೂರು ; ಕಾರಿನ ಮಿರ್ರ್ಗೆ ಬೈಕ್ ಟಚ್ ಆಗಿದ್ದ...
29-10-25 09:12 pm
 
    
            
             30-10-25 03:20 pm
                        
            
                  
                HK News Desk    
            
                    
 
    ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
 
    ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
 
    ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
 
    ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
 
    
            
             30-10-25 11:16 pm
                        
            
                  
                Mangalore Correspondent    
            
                    
 
    ಧರ್ಮಸ್ಥಳ ಪ್ರಕರಣ ; ಮಹೇಶ್ ಶೆಟ್ಟಿ ತಿಮರೋಡಿ ತಂಡಕ್ಕ...
30-10-25 08:06 pm
 
    ರಸ್ತೆ ಗುಂಡಿ ಮುಚ್ಚಿಸಲು ಹಣವಿಲ್ಲದ ಸರ್ಕಾರಕ್ಕೆ ಶಾಸ...
30-10-25 07:28 pm
 
    ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮದುವೆಗೆ ಬರುತ್ತಿದ್ದ ಟೆ...
30-10-25 03:23 pm
 
    ನವೆಂಬರ್ 28ರಂದು ಉಡುಪಿ ಶ್ರೀಕೃಷ್ಣ ಮಠಕ್ಕೆ ಪ್ರಧಾನಿ...
30-10-25 11:28 am
 
    
            
             29-10-25 10:43 pm
                        
            
                  
                Mangalore Correspondent    
            
                    
 
    ಪ್ರೇಯಸಿಗಾಗಿ ಕಳ್ಳತನಕ್ಕಿಳಿದ ಲವ್ವರ್ ; 40 ಲಕ್ಷ ಮ...
29-10-25 10:09 pm
 
    ವಿಷನ್ ಇಂಡಿಯಾ ಹೆಸರಲ್ಲಿ ನಕಲಿ ಲಕ್ಕಿ ಸ್ಕೀಮ್ ; ಪುತ...
29-10-25 02:53 pm
 
    ಪುತ್ತೂರು ಮೂರ್ತೆದಾರರ ಸಹಕಾರಿ ಸಂಘಕ್ಕೆ 101 ಗ್ರಾಮ್...
29-10-25 02:33 pm
 
    ಕೇರಳ ಮೂಲದ ಗಲ್ಫ್ ಉದ್ಯಮಿಗೆ ಹನಿಟ್ರ್ಯಾಪ್ ; ಬಂಧನಕ್...
28-10-25 10:48 pm