ನಿಷೇಧಿತ ಪಿಎಫ್ಐ ಸಂಘಟನೆ ಪರವಾಗಿ ಪೋಸ್ಟ್ ; ಮುಸ್ಲಿಂ ಧರ್ಮಗುರು ಸೈಯದ್ ಇಬ್ರಾಹಿಂ ತಂಙಳ್ ಬಂಧನ, ದೇಶದ್ರೋಹ ಕಾಯ್ದೆಯಡಿ ಕೇಸು, ಎನ್ಐಎ ಕೋರ್ಟಿಗೆ ಹಾಜರು 

10-10-25 04:18 pm       Mangalore Correspondent   ಕರಾವಳಿ

ನಿಷೇಧಿತ ಸಂಘಟನೆ ಪಿಎಫ್ಐ ಪರವಾಗಿ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಲ್ಲದೆ, ಸಂಘಟನೆಯನ್ನು ಬಲಪಡಿಸುವ ಉದ್ದೇಶದಿಂದ ಪ್ರಚಾರ ಮಾಡುತ್ತಿದ್ದ ಉಪ್ಪಿನಂಗಡಿ ಮೂಲದ ಮುಸ್ಲಿಂ ಧರ್ಮಗುರು ಸೈಯದ್ ಇಬ್ರಾಹಿಂ ತಂಙಳ್ ಎಂಬುವರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. 

ಮಂಗಳೂರು, ಅ.10 : ನಿಷೇಧಿತ ಸಂಘಟನೆ ಪಿಎಫ್ಐ ಪರವಾಗಿ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಲ್ಲದೆ, ಸಂಘಟನೆಯನ್ನು ಬಲಪಡಿಸುವ ಉದ್ದೇಶದಿಂದ ಪ್ರಚಾರ ಮಾಡುತ್ತಿದ್ದ ಉಪ್ಪಿನಂಗಡಿ ಮೂಲದ ಮುಸ್ಲಿಂ ಧರ್ಮಗುರು ಸೈಯದ್ ಇಬ್ರಾಹಿಂ ತಂಙಳ್ ಎಂಬುವರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. 
     
ಪಿಎಫ್ಐ ಕಾನೂನು ಬಾಹಿರ ಸಂಘಟನೆಯೆಂದು 28-09-2022 ರಂದು ಭಾರತ ಸರ್ಕಾರ ಘೋಷಣೆ ಮಾಡಿತ್ತು. ಇದರ ಅರಿವಿದ್ದರೂ, ಹಳೆಯ ಪಿಎಫ್ಐ ಪ್ರ‌ಮುಖರ ಜೊತೆಗೆ ಸಂಪರ್ಕದಲ್ಲಿದ್ದುಕೊಂಡು ಅ.9ರಂದು ಆರೋಪಿ ಸೈಯ್ಯದ್ ಇಬ್ರಾಹಿಂ ತಂಙಳ್ (55) ಸಾಮಾಜಿಕ ಜಾಲತಾಣ ವಾಟ್ಸ್ ಆಪ್ ಗ್ರೂಪ್ ನಲ್ಲಿ ಕೇಂದ್ರ ಸರಕಾರದಿಂದ ನಿಷೇಧಕ್ಕೊಳಗಾದ ಪಿಎಫ್ ಸಂಘಟನೆಯ ಪರವಾಗಿ ಪೋಸ್ಟ್ ಪ್ರಕಟಿಸಿ, ಸದ್ರಿ ಸಂಘಟನೆಯ ಬಗ್ಗೆ ಸ್ವಯಂ ಪ್ರೇರಿತನಾಗಿ ಪ್ರಚಾರ ಮಾಡಿ ಅಪರಾಧಿಕ ಬಲ ಪ್ರದರ್ಶನದ ಮೂಲಕ ಆತಂಕ ಉಂಟು ಮಾಡಿದ್ದಾನೆ. 

ಸೈಯದ್ ಇಬ್ರಾಹಿಂ ನಿಷೇಧಿತ ಸಂಘಟನೆ ಪರವಾಗಿ ಕೃತ್ಯವೆಸಗಿದ್ದರಿಂದ, ಸ್ವಯಂ ದೂರನ್ನು ಪಡೆದು ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಅ.ಕ್ರ.113/2025 U/s 10 (a), (i), 13, 18 UAPA Act ರಂತೆ ದಾಖಲಾಗಿದೆ. ಆರೋಪಿಯನ್ನು ಮಂಗಳೂರು ನಗರದ ಉರ್ವ ಸ್ಟೋರ್ ಬಳಿಯಿಂದ ವಶಕ್ಕೆ ಪಡೆದು ದಸ್ತಗಿರಿ ಮಾಡಿದ್ದು, ಆತನ ವಶದಲ್ಲಿದ್ದ ಮೊಬೈಲ್ ಫೋನ್ ವಶಕ್ಕೆ ಪಡೆದು ತನಿಖೆಗೆ ಒಳಪಡಸಿರುತ್ತದೆ. ಅ‌.ಪಿಎಫ್10ರಂದು ಸದ್ರಿ ಆರೋಪಿಯನ್ನು 49 ನೇ ಹೆಚ್ಚುವರಿ ಸಿವಿಲ್ ಮತ್ತು ಸತ್ರ ನ್ಯಾಯಲಯ ಮತ್ತು ಎನ್.ಐ.ಎ. ಪ್ರಕರಣಗಳ ವಿಶೇಷ ನ್ಯಾಯಾಲಯ ಬೆಂಗಳೂರು ಇಲ್ಲಿಗೆ ಹಾಜರುಪಡಿಸಿದ್ದು, ಆರೋಪಿಗೆ ಅ.24ರ ವರೆಗೆ ನ್ಯಾಯಾಂಗ ವಶಕ್ಕೆ ನೀಡಿರುತ್ತಾರೆ..

Mangaluru Police have arrested Syed Ibrahim Thangal (55), a Muslim religious leader from Uppinangady, for allegedly posting content on social media supporting the banned organization Popular Front of India (PFI). Despite the central government banning PFI on September 28, 2022, Thangal reportedly maintained contact with former PFI leaders and shared pro-PFI messages in a WhatsApp group on October 9, promoting the organization and causing public unrest.