Bindu Jewellery Mangalore: ಮಂಗಳೂರಿನಲ್ಲಿ 'ಬಿಂದು ಜ್ಯುವೆಲ್ಲರಿ' ನೂತನ ಮಳಿಗೆ ಶುಭಾರಂಭ ; ಬಿಂದು ಕರ್ನಾಟಕದ ಎರಡನೇ ಶೋರೂಂ, 'ಮೈ ಬ್ಲೂ ಡೈಮಂಡ್', 'ಲೈಟ್ ವೈಟ್ ಜ್ಯುವೆಲ್ಲರಿ' ಎಂಬ ಹೊಸ ಬ್ರಾಂಡ್ 

19-10-25 07:19 pm       Mangalore Correspondent   ಕರಾವಳಿ

ಚಿನ್ನಾಭರಣ ಕ್ಷೇತ್ರದಲ್ಲಿ ನಲವತ್ತು ವರ್ಷಗಳಿಂದ ಪ್ರಸಿದ್ಧಿಯಾಗಿ ಕೇರಳದ ಜನರ ಮನೆಮಾತಾಗಿರುವ 'ಬಿಂದು ಜ್ಯುವೆಲ್ಲರಿ' ಮಂಗಳೂರು ಶಾಖೆಯನ್ನು ರಾಮಕೃಷ್ಣ ಆಶ್ರಮದ ಸ್ವಾಮಿ ಯುಗೇಶನಾಂದ  ಸ್ವಾಮೀಜಿ ದೀಪ ಬೆಳಗಿಸಿ ಉದ್ಘಾಟಿಸಿದರು. ಶಾಸಕ ವೇದವ್ಯಾಸ ಕಾಮತ್, ಯು.ಟಿ. ಇಫ್ತಿಕಾರ್ ಫರೀದ್, ಕೆನರಾ ಚೇಂಬರ್ ಅಧ್ಯಕ್ಷ ಪಿ.ಬಿ. ಅಹಮದ್ ಮುದಸರ್, ಪಾಲುದಾರರಾದ ಶೋಭನಾ ಉಪಸ್ಥಿತರಿದ್ದರು. 

ಮಂಗಳೂರು, ಆ.19 :  ಚಿನ್ನಾಭರಣ ಕ್ಷೇತ್ರದಲ್ಲಿ ನಲವತ್ತು ವರ್ಷಗಳಿಂದ ಪ್ರಸಿದ್ಧಿಯಾಗಿ ಕೇರಳದ ಜನರ ಮನೆಮಾತಾಗಿರುವ 'ಬಿಂದು ಜ್ಯುವೆಲ್ಲರಿ' ಮಂಗಳೂರು ಶಾಖೆಯನ್ನು ರಾಮಕೃಷ್ಣ ಆಶ್ರಮದ ಸ್ವಾಮಿ ಯುಗೇಶನಾಂದ  ಸ್ವಾಮೀಜಿ ದೀಪ ಬೆಳಗಿಸಿ ಉದ್ಘಾಟಿಸಿದರು. ಶಾಸಕ ವೇದವ್ಯಾಸ ಕಾಮತ್, ಯು.ಟಿ. ಇಫ್ತಿಕಾರ್ ಫರೀದ್, ಕೆನರಾ ಚೇಂಬರ್ ಅಧ್ಯಕ್ಷ ಪಿ.ಬಿ. ಅಹಮದ್ ಮುದಸರ್, ಪಾಲುದಾರರಾದ ಶೋಭನಾ ಉಪಸ್ಥಿತರಿದ್ದರು. 

ಖ್ಯಾತ ನಟಿ ಸ್ನೇಹ ಪ್ರಸನ್ನ ಕಾರ್ಯಕ್ರಮದಲ್ಲಿ

ಮಾತನಾಡಿ, ಬಿಂದು ಸಂಸ್ಥೆಯ ಚಿನ್ನಾಭರಣಗಳ ಸಂಗ್ರಹ ಅದ್ಭುತವಾಗಿದೆ. ವಾಣಿಜ್ಯ ನಗರಿ ಮಂಗಳೂರಿನಲ್ಲಿ ಹೊಸ ಶಾಖೆ ಆರಂಭಿಸಿದ ಸಂಸ್ಥೆಯನ್ನು ವೈಯಕ್ತಿಕವಾಗಿ ಅಭಿನಂದಿಸುತ್ತೇನೆ ಎಂದು ಶುಭ ಹಾರೈಸಿದರು. ಇದೆ ವೇಳೆ  ಬಿಂದು ಸಂಸ್ಥೆಯ ಉತ್ಪನ್ನಗಳಾದ 'ಮೈ ಬ್ಲೂ ಡೈಮಂಡ್' ಹಾಗೂ 'ಸ್ವರ್ಣ ಬಿಂದು ಸಿಎಸ್ ಆರ್' ಎಂಬ ಲೋಗೋವನ್ನು ನಟಿ ಸ್ನೇಹ ಪ್ರಸನ್ನ ಬಿಡುಗಡೆಗೊಳಿಸಿದರು. 

ಬಿಂದು ಜ್ಯುವೆಲ್ಲರಿ ಸಂಸ್ಥೆಯ ಮಾಲಕರಾದ ಅಭಿಲಾಷ್ ಕೆ.ವಿ. ಹಾಗೂ ಡಾ| ಅಜಿತೇಶ್ ಕೆ.ವಿ, ಮತ್ತು ಕುಟುಂಬ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನಟರಾದ ಶೋಧನ್ ಶೆಟ್ಟಿ, ಅನೀಶ್ ಉಪಸ್ಥಿತರಿದ್ದರು. ಬಿಂದು ಶೋರೂಂನಲ್ಲಿ ವಿಶೇಷವಾಗಿ 'ಲೈಟ್ ವೈಟ್ ಜ್ಯುವೆಲ್ಲರಿ' ಎಂಬ ಬ್ರಾಂಡ್ ಗ್ರಾಹಕರಿಗೆ ವಿಶೇಷ ದರದಲ್ಲಿ ದೊರೆಯಲಿದೆ. ಡೈಮಂಡ್ ವಿಭಾಗದಲ್ಲೂ ಅತ್ಯಾಧುನಿಕ ಆಭರಣಗಳ ಸಂಗ್ರಹ ದೊರೆಯಲಿದೆ.

ಬಿಂದು ಜ್ಯುವೆಲ್ಲರಿ- ಶುದ್ಧತೆ, ಶ್ರೇಷ್ಠತೆಯ ಸಂಕೇತ

ಚಿನ್ನದ ಪರಿಶುದ್ಧತೆ, ಶ್ರೇಷ್ಠತೆ ಹಾಗೂ ನಂಬಿಕೆಯ ವಾಗ್ದಾನದೊಂದಿಗೆ ಬಿಂದು ಜ್ಯುವೆಲ್ಲರಿ ಕೇರಳ, ಕರ್ನಾಟಕದಲ್ಲಿ ಒಂದು ಭವ್ಯ ಪರಂಪರೆಯನ್ನು ಹುಟ್ಟುಹಾಕಿದೆ. ಇದೇ ಕಾರಣದಿಂದ ಪ್ರಗತಿ ಹಾಗೂ ಪರಂಪರೆಯೊಂದಿಗೆ ಬೆಳೆಯುತ್ತಿರುವ ವಾಣಿಜ್ಯ ನಗರಿ ಮಂಗಳೂರಿನಲ್ಲಿ ಹೊಸ ಶಾಖೆ ಆರಂಭಿಸಲಾಗಿದೆ. ಸಂಸ್ಕೃತಿ ಹಾಗೂ ವ್ಯಾಪಾರವನ್ನು ಒಟ್ಟಾಗಿ ಬೆಸೆದಿರುವ ಬಿಂದು ಸಂಸ್ಥೆಯು ಕಲಾತ್ಮಕ ಪರಂಪರೆ, ವೈವಿಧ್ಯಮಯ ವಿನ್ಯಾಸಗಳು ಹಾಗೂ ನಂಬಿಕೆಯ ವಾಗ್ದಾನದೊಂದಿಗೆ ಗ್ರಾಹಕರ ಬಳಿಗೆ ಬರುತ್ತಿದೆ ಎಂದು ಸಂಸ್ಥೆಯ ಮಾಲಕ ಅಭಿಲಾಷ್ ಕೆ.ವಿ. ಇದೇ ವೇಳೆ ಅಭಿಪ್ರಾಯ ವ್ಯಕ್ತಪಡಿಸಿದರು. 

ಕೇರಳದಲ್ಲಿ ಜನಪ್ರಿಯವಾಗಿರುವ ನಮ್ಮ ಸಂಸ್ಥೆಯು ಕೆಲವು ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಶಾಖೆ ಆರಂಭಿಸಿತ್ತು. ಮಂಗಳೂರಿನ ನೂತನ ಶಾಖೆಯಲ್ಲಿ ವಜ್ರ ಹಾಗೂ ಚಿನ್ನಾಭರಣಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಅಲ್ಲದೆ, ಬಿಂದು ಜುವೆಲ್ಲರಿಯಿಂದ 'ಅಕ್ಷಯ ನಿಧಿ' ಮತ್ತು 'ಸ್ವರ್ಣ ಬಿಂದು' ಮಾಸಿಕ ಉಳಿತಾಯ ಯೋಜನೆಯನ್ನು ಮಂಗಳೂರಿನಲ್ಲಿಯೂ ಪರಿಚಯಿಸಲಾಗಿದೆ. ಯೋಜನೆ ಮೂಲಕ ಗ್ರಾಹಕರು ಬೋನಸ್ ಮತ್ತು ಇತರ ಲಾಭಗಳನ್ನು ಸಹ ಪಡೆಯಬಹುದು ಎಂದು ಅಭಿಲಾಷ್ ಕೆ.ವಿ. ಹೇಳಿದರು.‌ ಇದೇ ಸಂದರ್ಭ ಬಿಂದು ಜ್ಯುವೆಲ್ಲರಿ ಹಿರಿಯ ವ್ಯವಸ್ಥಾಪಕ ಸುನಿಲ್ ರಾಜ್ ಶೆಟ್ಟಿ, ಪ್ರಮುಖರಾದ ಸಂತೋಷ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Bindu Jewellery, a renowned brand with over four decades of legacy in Kerala’s gold industry, inaugurated its new showroom in Mangaluru. The ceremony was inaugurated by Swami Yugeshananda of Ramakrishna Ashram, in the presence of MLA Vedavyas Kamath, U.T. Iftikhar Fareed, Canara Chamber President P.B. Ahmad Mudassar, and partner Shobhana.