ಬ್ರೇಕಿಂಗ್ ನ್ಯೂಸ್
22-10-25 04:30 pm Mangalore Correspondent ಕರಾವಳಿ
ಮಂಗಳೂರು, ಅ.22 : ಉಸಿರು ಕಟ್ಟುವ (ಅಸ್ತಮಾ) ಸಮಸ್ಯೆ ಹೊಂದಿದ್ದ ಕಾಸರಗೋಡು ಜಿಲ್ಲೆಯ ಕುಂಬಳೆಯ 70 ವರ್ಷದ ವೃದ್ಧ ವ್ಯಕ್ತಿಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆತರಲಾಗಿತ್ತು. ಪರೀಕ್ಷೆ ನಡೆಸಿದ ವೈದ್ಯರು ವ್ಯಕ್ತಿ ಸಾವನ್ನಪ್ಪಿದ್ದಾರೆಂದು ಘೋಷಿಸಿದ್ದು ಮನೆಮಂದಿ ಆಂಬುಲೆನ್ಸ್ ನಲ್ಲೇ ಮರಳಿ ಕರೆದೊಯ್ದಿದ್ದರು. ಆದರೆ ಆಂಬುಲೆನ್ಸ್ ಮನೆ ತಲುಪುವ ಮೊದಲೇ ವ್ಯಕ್ತಿ ಕಾಲು ಅಲ್ಲಾಡಿಸಿ ತಾನಿನ್ನೂ ಜೀವ ಇದ್ದೇನೆಂದು ತೋರಿಸಿದ್ದು ಕುಟುಂಬಸ್ಥರನ್ನು ಅಚ್ಚರಿಗೆ ಕೆಡವಿದ್ದಾರೆ.
ಕುಂಬಳೆ ಸಮೀಪದ ಕೋಟೆಕಾರು ಕಂಚಿಕಟ್ಟೆಯ ನಿವಾಸಿ ರಮಾನಾಥ ಗಟ್ಟಿ(70) ಸತ್ತಿದ್ದಾರೆಂದು ಘೋಷಿಸಲ್ಪಟ್ಟು ಮತ್ತೆ ಬದುಕಿದವರು. ಗಟ್ಟಿಯವರಿಗೆ ಹಿಂದಿನಿಂದಲೂ ಅಸ್ತಮಾ ಕಾಯಿಲೆ ಇತ್ತು. ಮಳೆಗಾಲದಲ್ಲಿ ಉಸಿರು ಕಟ್ಟುವ ಸಮಸ್ಯೆ ಇದ್ದುದರಿಂದ ಕೃತಕ ಉಸಿರಾಟಕ್ಕೆ ಮನೆಯಲ್ಲೇ ವ್ಯವಸ್ಥೆ ಮಾಡಲಾಗಿತ್ತು. ಆದರೆ ಕೆಲವು ದಿನಗಳಿಂದ ಮಳೆ ತೀವ್ರಗೊಂಡಿದ್ದು ಮತ್ತು ಮಳೆಯಿಂದಾಗಿ ಕರೆಂಟ್ ಕೈಕೊಡುತ್ತಿದ್ದುದರಿಂದ ಗಟ್ಟಿಯವರ ಸ್ಥಿತಿ ಬಿಗಡಾಯಿಸಿತ್ತು.
ಹೀಗಾಗಿ ಮನೆಯವರು ಎರಡು ದಿನಗಳ ಹಿಂದೆ ನೇರವಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಗಟ್ಟಿಯವರನ್ನು ಕರೆತಂದಿದ್ದರು. ಅಲ್ಲಿ ಪರೀಕ್ಷೆ ನಡೆಸಿದ ವೈದ್ಯರು, ಇವರ ಸ್ಥಿತಿ ಗಂಭೀರ ಇದೆ, ಖಾಸಗಿ ಆಸ್ಪತ್ರೆಗೆ ಒಯ್ದರೆ ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ. ಅದರಂತೆ ದೇರಳಕಟ್ಟೆಯ ಕೆ.ಎಸ್ ಹೆಗ್ಡೆ ಆಸ್ಪತ್ರೆಗೆ ಕರೆದೊಯ್ದಿದ್ದರು. ರಾತ್ರಿಯಾಗಿದ್ದರಿಂದ ಪರೀಕ್ಷಿಸಿದ ಡ್ಯೂಟಿ ಡಾಕ್ಟರ್ ಇವರ ಸ್ಥಿತಿ ಸೀರಿಯಸ್ ಇದೆ, ಹೇಳಲಿಕ್ಕಾಗಲ್ಲ. ನೀವು ಬೇರೆಲ್ಲಾದರೂ ಕರೆದುಕೊಂಡು ಹೋಗುವುದಾದರೆ ಹೋಗಬಹುದು. ನಾವು ಗ್ಯಾರಂಟಿ ಕೊಡುವುದಿಲ್ಲ ಎಂದಿದ್ದಾರೆ.
ಇದರಿಂದ ಬೇಸತ್ತ ಕುಟುಂಬ ಸದಸ್ಯರು ಅಲ್ಲಿಯೇ ಪಕ್ಕದಲ್ಲಿದ್ದ ಯೇನಪೋಯ ಆಸ್ಪತ್ರೆಗೆ ಒಯ್ದಿದ್ದಾರೆ. ಅಲ್ಲಿ ಪರೀಕ್ಷೆ ನಡೆಸಿದ ಡ್ಯೂಟಿ ವೈದ್ಯರೊಬ್ಬರು ರಮಾನಾಥ ಗಟ್ಟಿ ಸಾವನ್ನಪ್ಪಿದ್ದಾರೆಂದು ತಿಳಿಸಿದ್ದಾರೆ. ಅ.19ರಂದು ರಾತ್ರಿ ಘಟನೆ ನಡೆದಿದ್ದು, ನೀವು ಶವವನ್ನು ಮರಳಿ ಮನೆಗೆ ಒಯ್ಯಬಹುದು ಎಂದು ತಿಳಿಸಿದ್ದಾರೆ. ರಾತ್ರಿಯೇ ಒಯ್ಯದಿದ್ದರೆ ಶವಾಗಾರದಲ್ಲಿ ಇಡಬೇಕು. ಅಲ್ಲಿಟ್ಟರೆ ಮತ್ತೆ ಬಿಲ್ ಆಗುತ್ತದೆ ಎಂದು ಮನೆಮಂದಿ ರಾತ್ರಿಯೇ ಶವವನ್ನು ಮನೆಗೆ ಒಯ್ಯಲು ಆಂಬುಲೆನ್ಸ್ ರೆಡಿ ಮಾಡಿದರು. ಶವಕ್ಕೆ ಬಿಳಿ ವಸ್ತ್ರ ತೊಡಿಸಿ ಆಂಬುಲೆನ್ಸ್ ಹೊರಟಿದ್ದು ಮನೆಯ ಪರಿಸರದಲ್ಲಿ ರಾತ್ರಿಯೇ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿತ್ತು. ಹಾಗಾಗಿ, ಪರಿಸರದ ಜನರು ತುರ್ತಾಗಿ ಅಂತ್ಯಕ್ರಿಯೆಗೆ ತಯಾರಿ ನಡೆಸಿದ್ದರು.
ಆದರೆ ಆಂಬುಲೆನ್ಸ್ ಕುಂಬಳೆ ಹೆದ್ದಾರಿ ತಲುಪುವ ಮೊದಲೇ ಸತ್ತಿದ್ದಾರೆಂದು ಘೋಷಿತರಾಗಿದ್ದ ರಮಾನಾಥ ಗಟ್ಟಿಯವರ ಕಾಲು ಅಲುಗಾಡಿತ್ತು. ಜೊತೆಗಿದ್ದವರು ಗಮನಿಸಿ ಮುಖದ ವಸ್ತ್ರ ತೆಗೆದು ನೋಡಿದ್ದಾರೆ. ಅರೆ, ಜೀವ ಇದ್ದಾರೆಂದು ತಿಳಿದು ನೇರವಾಗಿ ಕಾಸರಗೋಡು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಕೃತಕ ಉಸಿರಾಟ ಜೋಡಿಸಿದ್ದು, ವೈದ್ಯರು ಐಸಿಯುನಲ್ಲಿ ಇರಿಸಿದ್ದಾರೆ. ಇದಾಗಿ ಎರಡು ದಿನ ಕಳೆದಿದ್ದು ಗಟ್ಟಿಯವರ ಸ್ಥಿತಿ ಯಥಾಸ್ಥಿತಿ ಇದೆಯಂತೆ. ಸತ್ತಿದ್ದಾರೆಂದು ತಿಳಿದು ಮನೆಯ ಪರಿಸರದಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಿದವರು ರಮಾನಾಥ ಗಟ್ಟಿಯವರ ಆಯುಷ್ಯ ಗಟ್ಟಿಯಿದೆ ಎಂದು ಮಾತನಾಡಿಕೊಂಡಿದ್ದಾರೆ. ಕಂಚಿಕಟ್ಟೆಯಲ್ಲಿ ಮೂಲ ತರವಾಡು ಹೊಂದಿರುವ ಮಂಗಳೂರಿನ ಗಟ್ಟಿ ಸಮಾಜದ ವ್ಯಕ್ತಿಯೊಬ್ಬರು ಈ ಮಾಹಿತಿ ಹಂಚಿಕೊಂಡಿದ್ದಾರೆ.
In a shocking turn of events, a 70-year-old man from Kumbla in Kasaragod, who was declared dead by doctors at a private hospital in Deralakatte, Mangaluru, was found alive while being taken home for his final rites.
13-11-25 08:33 pm
HK News Desk
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
15-11-25 12:06 pm
HK News Desk
ಬಿಹಾರ ಫಲಿತಾಂಶ ; ‘ಛೋಟೇ ಸರ್ಕಾರ್’ ಖ್ಯಾತಿಯ ಅನಂತ್...
14-11-25 09:10 pm
ಬಿಹಾರದಲ್ಲಿ ಎನ್ ಡಿಎ ಕ್ಲೀನ್ ಸ್ವೀಪ್ ಜಯಭೇರಿ ; 190...
14-11-25 11:50 am
ದೆಹಲಿ ಸ್ಫೋಟ ಪ್ರಕರಣ ; ಕಾನ್ಪುರ ವೈದ್ಯಕೀಯ ವಿದ್ಯಾರ...
13-11-25 10:56 pm
ಇಬ್ಬರು ಉಗ್ರರ ಡೈರಿ ಪತ್ತೆ ; ಮಹತ್ತರ ಮಾಹಿತಿ ಬಹಿರಂ...
13-11-25 08:41 pm
15-11-25 02:47 pm
Mangalore Correspondent
ಬಿಹಾರದಲ್ಲಿ ಚುನಾವಣೆ ಮುನ್ನ ಹತ್ತು ಸಾವಿರ ಕೊಟ್ಟು ಮ...
15-11-25 01:51 pm
ಬಿ.ಸಿ. ರೋಡ್ ಬಳಿ ಭೀಕರ ಅಪಘಾತ ; ಉಡುಪಿ ಕೃಷ್ಣ ಮಠಕ್...
15-11-25 12:12 pm
Kumapal Dog Attack, Ullal, Mangalore: ಕುಂಪಲ ಬ...
14-11-25 11:01 pm
Kumpala, Dog, Crime, Mangalore: ಬೀದಿ ನಾಯಿಗಳ ದ...
14-11-25 10:10 pm
14-11-25 05:32 pm
HK News Desk
Ullal News, Animal Attack, Crime, Kumpala: ಕಣ...
14-11-25 11:16 am
ಮಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್ ವಂಚನೆ ಹೆಚ್ಚಳ ; ಮ...
13-11-25 10:09 pm
Sexual Harassment in Anekal: ಸ್ಕ್ಯಾನಿಂಗ್ ವೇಳ...
13-11-25 10:00 pm
ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾ...
12-11-25 12:32 pm