ಬ್ರೇಕಿಂಗ್ ನ್ಯೂಸ್
28-10-25 08:36 pm Mangalore Correspondent ಕರಾವಳಿ
ಮಂಗಳೂರು, ಅ.28: ಮಂಗಳೂರು ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿ ಪಡಿಸಲಾದ ಕದ್ರಿ ಪಾರ್ಕ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಶುಲ್ಕ ವಿಧಿಸಲು ಚಿಂತನೆ ನಡೆದಿದೆ. 12 ಕೋಟಿ ವೆಚ್ಚದಲ್ಲಿ ಈ ರಸ್ತೆಯನ್ನು ಅಭಿವೃದ್ಧಿ ಪಡಿಸಿದ್ದು ಇದೀಗ ಟೋಲ್ ಅಳವಡಿಸಿ ಜನರ ಮೇಲೆ ಹೊರೆ ಹೊರಿಸಲು ಅಧಿಕಾರಿಗಳ ಮಟ್ಟದಲ್ಲಿ ಚಿಂತನೆ ಮಾಡಲಾಗಿದೆ. ಜನವರಿ ತಿಂಗಳಿನಿಂದ ಈ ನೀತಿ ಜಾರಿಗೆ ತರಲು ಸ್ಮಾರ್ಟ್ ಸಿಟಿ ಅಧಿಕಾರಿಗಳು ಯೋಜನೆ ಹಾಕಿದ್ದಾರೆ.
ಕದ್ರಿ ಪಾರ್ಕ್ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಲಾದ ಅಂಗಡಿಗಳನ್ನು ಖಾಸಗಿ ಸಂಸ್ಥೆಗಳು ಒಎಂಡ್‌ಎಂ (ಅಪರೇಟಿಂಗ್ ಆ್ಯಂಡ್ ಮೈಂಟೆನೆನ್ಸ್) ಮಾದರಿಯಲ್ಲಿ ಅಮರ್ ಇನ್‌ಫ್ರಾ ಕಂಪನಿ ಟೆಂಡರ್ ವಹಿಸಿದೆ. ಈ ಸಂಸ್ಥೆಯು ಇಲ್ಲಿನ ಅಂಗಡಿ, ರಸ್ತೆ, ಫುಟ್‌ಪಾತ್, ಪಾರ್ಕಿಂಗ್ ಜಾಗದ ಸ್ವಚ್ಛತೆಯನ್ನು ನಿರ್ವಹಣೆ ಮಾಡಲಿದೆ. ಆದರೆ ಟೆಂಡರ್ ವಹಿಸಿದವರಿಗೆ ನಿರೀಕ್ಷಿತ ಪ್ರಮಾಣದಲ್ಲಿ ಆದಾಯ ಬಾರದಿರುವ ಕಾರಣ ಇದೀಗ ರಸ್ತೆಯ ಇಕ್ಕೆಲಗಳಲ್ಲಿ ಬರುವ ಪಾರ್ಕಿಂಗ್ ವಾಹನಗಳಿಗೆ ಟೋಲ್ ವ್ಯವಸ್ಥೆ ಜಾರಿ ಮಾಡಲು ಪ್ಲಾನ್ ಹಾಕಲಾಗಿದೆ.




ಕದ್ರಿ ರಸ್ತೆ ಎಂಟ್ರಿಯಾಗುವ ಎರಡು ಕಡೆಯಲ್ಲೂ ವೆಹಿಕಲ್ ಬೇ ಇದ್ದು, ಬ್ಯಾರಿಯರ್ ಅಳವಡಿಕೆ ಮಾಡದೆ ರಾಡಾರ್ ಬೇಸ್ ಟೋಲ್ ಮಾದರಿಯ ಅತ್ಯಾಧುನಿಕ ಎಎನ್‌ಪಿಆರ್ (ಅಟೋಮ್ಯಾಟಿಕ್ ನಂಬರ್ ಪ್ಲೇಟ್ ರೀಡರ್) ಕ್ಯಾಮೆರಾ ಅಳವಡಿಸಲಾಗುವುದು. ಇದು ವಾಹನದ ನಂಬರ್ ಪ್ಲೇಟ್ ಇಮೇಜ್‌ನ್ನು ಸೆರೆಹಿಡಿದು ಬಳಿಕ ವಾಹನಗಳ ಫಾಸ್ಟ್ಯಾಗ್‌ಗೆ ಲಿಂಕ್ ಮಾಡುವುದು. ವಾಹನ ಎಂಟ್ರಿಯಾಗಿ 5 ನಿಮಿಷದೊಳಗೆ ಹೊರಗೆ ಹೋದರೆ ಯಾವುದೇ ಶುಲ್ಕವಿರುವುದಿಲ್ಲ. ಅದಕ್ಕಿಂತ ಹೆಚ್ಚಾದರೆ ಆ ವಾಹನಗಳ ಮಾಲೀಕರ ಖಾತೆಯಿಂದ ಕನಿಷ್ಠ 50 ರೂ. ಶುಲ್ಕ ಕಡಿತವಾಗಲಿದೆ.
ಪದುವಾದಿಂದ ಸರ್ಕಿಟ್ ಹೌಸ್ ವರೆಗೆ ಕದ್ರಿ ಪಾರ್ಕ್ ರಸ್ತೆಯಲ್ಲಿ ಸುಮಾರು 100 ವಾಹನಗಳನ್ನು ನಿಲ್ಲಿಸುವ ವ್ಯವಸ್ಥೆಯಿದೆ. ಈ ರಸ್ತೆಯನ್ನು ಬಳಸುವ ಸ್ಥಳೀಯ ನಿವಾಸಿಗಳಿಗೆ ಪಾಸ್ ಅಥವಾ ಇನ್ನಿತರ ವ್ಯವಸ್ಥೆ ಬಗ್ಗೆ ಚಿಂತನೆ ನಡೆಸಲಾಗಿದೆ. ಟೆಂಡರ್ ವಹಿಸಿಕೊಂಡವರು ಸರ್ಕಿಟ್ ಹೌಸ್ ಬಳಿಯ 3 ಅಂಗಡಿಗಳಿಗೆ 1.20 ಲಕ್ಷ ರೂ. ಬಿಡ್ಡಿಂಗ್ ಮಾಡಿದ್ದಾರೆ. ಬೇರೆ ಶಾಪ್‌ಗಳನ್ನು 40 ರಿಂದ 60 ಸಾವಿರ ರೂ.ಗೆ ವಹಿಸಲಾಗಿತ್ತು. ಆದರೆ ವ್ಯಾಪಾರಿಗಳಿಂದ ನಿರೀಕ್ಷಿತ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಅದನ್ನು ಮಾರ್ಪಡಿಸಿ ಈಗ ಸರ್ಕಿಟ್ ಹೌಸ್ ಕಡೆಯಿಂದ ಕದ್ರಿ ಸಂಗೀತ ಕಾರಂಜಿ ಎಂಟ್ರಿ ವರೆಗೆ 20 ಸಾವಿರ ರೂ. ಬಾಡಿಗೆ, 5 ಸಾವಿರ ನಿರ್ವಹಣಾ ವೆಚ್ಚ, 2.50 ಲಕ್ಷ ರೂ. ಮುಂಗಡ ಹಣ ನಿಗದಿಪಡಿಸಲಾಗಿದೆ. 2 ವರ್ಷ ಈ ಅಂಗಡಿಯನ್ನು ವಹಿಸಿಕೊಂಡವರು ಕಡ್ಡಾಯವಾಗಿ ನಡೆಸಬೇಕು. ಕದ್ರಿ ಪಾರ್ಕ್ ಎಂಟ್ರಿಯಿಂದ ಪದುವಾದ ವರೆಗೆ ಅಂಗಡಿಗಳಿಗೆ 15 ಸಾವಿರ ರೂ. ಬಾಡಿಗೆ, 5 ಸಾವಿರ ನಿರ್ವಹಣೆ ವೆಚ್ಚ, 2.50 ಲಕ್ಷ ರೂ. ಮುಂಗಡ ಹಣ ನಿಗದಿಪಡಿಸಲಾಗಿದೆ.
ಕದ್ರಿ ಪಾರ್ಕ್ ರಸ್ತೆಯನ್ನು ಸ್ಮಾರ್ಟ್ ಸಿಟಿ ಅನುದಾನದಲ್ಲಿ ಅಭಿವೃದ್ಧಿಪಡಿಸಿದ್ದು, ಪಾರ್ಕ್ ಪ್ರವೇಶಿಸುವ ಎರಡು ಕಡೆಗಳಲ್ಲೂ ಅತ್ಯಾಧುನಿಕ ಎಎನ್‌ಪಿಆರ್ (ಅಟೋಮ್ಯಾಟಿಕ್ ನಂಬರ್ ಪ್ಲೇಟ್ ರೀಡರ್) ಕ್ಯಾಮೆರಾ ಅಳವಡಿಸಿ ಪಾರ್ಕಿಂಗ್ ಮಾಡುವ ವಾಹನಗಳಿಗೆ ಟೋಲ್ ವಿಧಿಸಲು ತೀರ್ಮಾನಿಸಲಾಗಿದೆ. ವಾಹನದಲ್ಲಿ ಅಳವಡಿಸಲಾದ ಫಾಸ್ಟ್ಯಾಗ್ ಲಿಂಕ್ ಮೂಲಕ ಟೋಲ್ ದರ ಕಡಿತವಾಗಲಿದ್ದು, ಜನವರಿಯಿಂದ ಈ ಯೋಜನೆ ಜಾರಿಯಾಗಲಿದೆ ಎಂದು ಸ್ಮಾರ್ಟ್ ಸಿಟಿ ಮಹಾಪ್ರಬಂಧಕ ಅರುಣ್ ಪ್ರಭಾ ತಿಳಿಸಿದ್ದಾರೆ.
Under the Smart City Project, the Kadri Park Road, developed at a cost of ₹12 crore, may soon see a toll-based parking system come into effect. Authorities are reportedly considering imposing a ₹50 parking fee for vehicles stationed along the road, with implementation likely from January 2026.
28-10-25 10:03 pm
Bangalore Correspondent
ಶಾಸಕಾಂಗ ನಾಯಕರ ಆಯ್ಕೆ ವೇಳೆ 2.5 ವರ್ಷ ಎಂದು ತಿಳಿಸಿ...
28-10-25 07:18 pm
ಆರೆಸ್ಸೆಸ್ ಚಟುವಟಿಕೆ ನಿರ್ಬಂಧಿಸುವ ಸರ್ಕಾರಿ ಸ್ಥಳದ...
28-10-25 03:40 pm
ನವೆಂಬರ್ ಕುತೂಹಲ, ದೆಹಲಿ ಭೇಟಿಗೆ ತೆರಳಿದ ಡಿಕೆಶಿಗೆ...
27-10-25 10:52 pm
ಕಾಂಗ್ರೆಸಿನಲ್ಲಿ ಮತ್ತೊಬ್ಬ ಏಕನಾಥ್ ಶಿಂಧೆ, ಪವಾರ್ ಹ...
27-10-25 10:42 pm
28-10-25 10:23 pm
HK News Desk
ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
Vemuri Kaveri Travels Bus Accident, Fire, Ill...
25-10-25 02:28 pm
28-10-25 08:36 pm
Mangalore Correspondent
ಸ್ಪೀಕರ್ ಕೊಠಡಿ- ಶಾಸಕರ ಭವನ ನವೀಕರಣ ನೆಪದಲ್ಲಿ ಭಾರೀ...
28-10-25 03:36 pm
ಲಾರಿ ಧಾವಂತಕ್ಕೆ ಹೆದ್ದಾರಿ ದಾಟುತ್ತಿದ್ದ ಪಾದಚಾರಿ ಬ...
27-10-25 11:01 pm
ತಾಯಿ- ಮಗಳು ತೆರಳುತ್ತಿದ್ದ ಸ್ಕೂಟರಿಗೆ ಕಾರು ಡಿಕ್ಕಿ...
27-10-25 10:25 pm
ಆಟವಾಡುತ್ತಲೇ ತೆರೆದ ಬಾವಿಗೆ ಬಿದ್ದ ಎರಡು ವರ್ಷದ ಹೆಣ...
27-10-25 10:03 pm
28-10-25 10:48 pm
Mangalore Correspondent
ಕೋಟಿ ರೂ. ಚೀಟಿ ವ್ಯವಹಾರ ಇದೆ, ಹಣ ಸಾಲ ಕೊಟ್ಟರೆ ದುಪ...
27-10-25 05:29 pm
ದುಬೈನಲ್ಲಿ ಕುಳಿತು ಬೆಂಗಳೂರಿನ ಫೈನಾನ್ಸ್ ಕಂಪನಿಗೆ ಕ...
27-10-25 04:04 pm
ಶಬರಿಮಲೆಯಲ್ಲಿ ಕದ್ದ ಚಿನ್ನ ಬಳ್ಳಾರಿ ಜುವೆಲ್ಲರಿಗೆ ಮ...
25-10-25 10:00 pm
SP Arun, Puttur: ಗೋಸಾಗಾಟ ತಡೆದ ಪ್ರಕರಣ ; ಯಾವುದೇ...
25-10-25 02:14 pm