ಬ್ರೇಕಿಂಗ್ ನ್ಯೂಸ್
29-10-25 06:55 pm Mangalore Correspondent ಕರಾವಳಿ
ಮಂಗಳೂರು, ಅ.29 : ಸಾಮಾನ್ಯರಿಗೆ ಕೊಳಲನ್ನು ಊದಿ ಅದರಿಂದ ಸ್ವರ ಎಬ್ಬಿಸುವುದೇ ದೊಡ್ಡ ಸಾಹಸ. ಇಂಥದ್ದರಲ್ಲಿ ಮಂಗಳೂರಿನ ಯುವಕನೊಬ್ಬ ಈಜು ಕೊಳದಲ್ಲಿ ಅಂಗಾತ ಮಲಗಿ ಈಜಾಡುತ್ತಲೇ ಕೊಳಲನ್ನು ನುಡಿಸುತ್ತ ವಿಶ್ವದಾಖಲೆ ಬರೆದಿದ್ದಾರೆ. ಕೊಳಲಿಗೆ ನೀರು ಹೊಕ್ಕದಂತೆ ತನ್ನ ಮುಖವನ್ನು ನೀರಿನ ಮೇಲಿಟ್ಟುಕೊಂಡೇ 750 ಮೀಟರ್ ಉದ್ದಕ್ಕೆ ಈಜುತ್ತಲೇ ಸುಮಾರು 20 ನಿಮಿಷ ಕಾಲ ಕೊಳಲು ಊದಿ ಮನಸೂರೆಗೊಂಡಿದ್ದಾನೆ.
ಮಂಗಳೂರಿನ ಪ್ರತಿಷ್ಠಿತ ಸಂತ ಅಲೋಶಿಯಸ್ ಪರಿಗಣಿತ ವಿಶ್ವ ವಿದ್ಯಾಲಯದ ಈಜು ಕೊಳದಲ್ಲಿ ರೂಬನ್ ಜೇಸನ್ ಮಚಾದೋ ಎನ್ನುವ ಅಭಿಜ್ಞಾತ ಸಂಗೀತ ಕಲಾವಿದ ಯಾರೂ ಮಾಡದ ಹೊಸ ದಾಖಲೆ ಸ್ಥಾಪಿಸಿದ್ದಾರೆ. 75 ಮೀಟರ್ ಉದ್ದಗಲದ ಈಜು ಕೊಳವನ್ನು ಕೊಳಲಿನೊಂದಿಗೆ ಈಜಾಡುತ್ತಲೇ ಆರು ಬಾರಿ ಸುತ್ತು ಹಾಕಿದ್ದಾರೆ. ತಾನು ನೀರಿನಲ್ಲಿ ಇದ್ದೇನೆಂಬ ಪರಿವೆಯೇ ಇಲ್ಲದೆ ತದೇಕ ಚಿತ್ತದಿಂದ ಕೊಳಲನ್ನು ಸುಶ್ರಾವ್ಯವಾಗಿ ನುಡಿಸುತ್ತ ಸಾಗಿದ್ದಾರೆ.






ಅಂದಹಾಗೆ, ರೂಬನ್ ಮಚಾದೋ ಅವರು ಈ ಹಿಂದೆ ಅಲೋಶಿಯಸ್ ಪದವಿ ಕಾಲೇಜಿನಲ್ಲಿ ಜರ್ನಲಿಸಂ ಉಪನ್ಯಾಸಕರಾಗಿದ್ದವರು. ಈಗ ಉಪನ್ಯಾಸಕ ವೃತ್ತಿಯನ್ನು ಬಿಟ್ಟು ಪೂರ್ಣಕಾಲಿಕವಾಗಿ ಸಂಗೀತಕಾರನಾಗಿದ್ದಾರೆ. ಕೊಳಲು, ಸ್ಯಾಕ್ಸೋಫೋನ್, ಗಿಟಾರ್ ಹೀಗೆ ಎಲ್ಲ ರೀತಿಯ ಸಂಗೀತ ಉಪಕರಣಗಳನ್ನು ನುಡಿಸುತ್ತಾರೆ. ಅಲ್ಲದೆ, ತನ್ನದೇ ಆದ ಬ್ಯಾಂಡ್ ಸೆಟ್ ಒಂದನ್ನು ಮಾಡಿದ್ದು ಕಾರ್ಯಕ್ರಮಗಳನ್ನು ನೀಡುತ್ತಾರೆ. ಅಲ್ಲದೆ, ಬಾಲಿವುಡ್ ನಲ್ಲಿಯೂ ಸೋನು ನಿಗಮ್ ಜೊತೆಗೆ ಕೆಲವು ಚಿತ್ರಗಳಿಗೆ ಹಿನ್ನೆಲೆ ಸಂಗೀತಕ್ಕೆ ಕೊಳಲು ವಾದನದ ಸಾಥ್ ನೀಡಿದ್ದಾರೆ.
ಆರು ಸುತ್ತು ಕೊಳಲು ನುಡಿಸುತ್ತ ಅಂಗಾತ ಈಜಾಡುತ್ತ ಸಾಗಿದ ವೇಳೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ತಂಡದವರು ಚಿತ್ರೀಕರಣ ಮಾಡಿದ್ದಾರೆ. ರೆಕಾರ್ಡ್ ತಂಡದ ಮನೀಶ್ ಬಿಷ್ಣೋಯ್ ಉಪಸ್ಥಿತರಿದ್ದು, ರೂಬನ್ ಮಚಾದೋ ಅವರ ಸಾಧನೆಯನ್ನು ಕೊಂಡಾಡಿದರು. ತನಗೂ ಈಜು ಗೊತ್ತಿದೆ, ಆದರೆ ಈಜಾಡುತ್ತ ಕೊಳಲು ನುಡಿಸಿದ್ದನ್ನು ಇದೇ ಮೊದಲು ನೋಡಿದ್ದು ಎಂದು ಹೇಳಿದರು.
ರೂಬನ್ ಮಚಾದೋ ಅವರು ಮಂಗಳೂರಿನ ದೇರೆಬೈಲ್ ನಿವಾಸಿಯಾಗಿದ್ದು ದಾಖಲೆ ಸ್ಥಾಪಿಸಿ ನೀರಿನಿಂದ ಮೇಲೆ ಬರುತ್ತಲೇ ತಂದೆ ರಿಚರ್ಡ್ ಮಚಾದೋ ಆನಂದ ತುಂದಿಲರಾಗಿ ಆಲಿಂಗಿಸಿಕೊಂಡು ಕಣ್ಣೀರು ಹಾಕಿದರು. ಪತ್ನಿ ಅನುಷಾ ಕೂಡ ಕಣ್ಣೀರು ಸುರಿಸಿಕೊಂಡೇ ಆಲಿಂಗಿಸಿದರು. ತಾಯಿ ಜೇನ್ ಮಚಾದೋ ಅವರು ಕೂಡ ಈಜುಗಾರ್ತಿಯಾಗಿದ್ದು ಕೊಳಲನ್ನೂ ನುಡಿಸುತ್ತಾರಂತೆ. ಭಾರತೀಯ ಸಂಗೀತದ ಬಗ್ಗೆ ಅಪ್ಪಟ ಆಸಕ್ತಿ ಬೆಳೆಸಿಕೊಂಡ ಕುಟುಂಬವದು.
ವಿಶೇಷ ಅಂದ್ರೆ, ರೂಬನ್ ಮೂಲತಃ ಈಜು ಪಟುವಲ್ಲ. ಈಗ 29ರ ಹರೆಯದವರಾಗಿದ್ದು 26 ವರ್ಷದ ವರೆಗೂ ನೀರಿಗಿಳಿದವರೇ ಅಲ್ಲವಂತೆ. ಮೂರು ವರ್ಷಗಳ ಹಿಂದೆ ಮಂಗಳಾ ಈಜು ಕೊಳದಲ್ಲಿ ಈಜು ಕಲಿತವರು. ಮೊದಲಿನಿಂದಲೂ ಕೊಳಲಿನ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ ಇವರನ್ನು ಒಂದು ತಿಂಗಳ ಹಿಂದೆ ರೆಕಾರ್ಡ್ ಮಾಡುವತ್ತ ಪ್ರೇರೇಪಿಸಿದವರು ತಂದೆಯಂತೆ. ಕೊಳಲು ನುಡಿಸುತ್ತ ಈಜಾಡಿ ರೆಕಾರ್ಡ್ ಮಾಡಿದರೆ ಹೇಗೆ ಎಂದು ತಂದೆ ರಿಚರ್ಡ್ ಮಚಾದೋ ಪ್ರೋತ್ಸಾಹ ಕೊಟ್ಟಿದ್ದರು. ದಿನವೂ ನಸುಕಿನ ನಾಲ್ಕು ಗಂಟೆಗೆದ್ದು ಕೊಳಲು ನುಡಿಸುತ್ತ ನಿರಂತರ ಅಭ್ಯಾಸದಿಂದ ಈಜಿನೊಂದಿಗೆ ದಾಖಲೆ ಸ್ಥಾಪಿಸುವಂತಾಗಿದೆ ಎಂದು ಸ್ಮರಿಸುತ್ತಾರೆ ರೂಬನ್.
ಇದೇ ವೇಳೆ, ವರ್ಲ್ಡ್ ರೆಕಾರ್ಡ್ ಬಗ್ಗೆ ಅನಿಸಿಕೆ ಹಂಚಿಕೊಂಡ ಅಲೋಶಿಯಸ್ ವಿವಿಯ ಉಪ ಕುಲಪತಿ ಡಾ.ಪ್ರವೀಣ್ ಮಾರ್ಟಿಸ್, ಎರಡು ತಿಂಗಳ ಹಿಂದಷ್ಟೇ ನಮ್ಮಲ್ಲಿ ರೆಮೋನಾ ನೃತ್ಯದಲ್ಲಿ ವಿಶ್ವದಾಖಲೆ ಮಾಡಿದ್ದರು. ಇದೀಗ ನಮ್ಮದೇ ಈಜು ಕೊಳದಲ್ಲಿ ರೂಬನ್ ಮತ್ತೊಂದು ದಾಖಲೆ ಸ್ಥಾಪಿಸಿದ್ದಾರೆ. 140 ವರ್ಷಗಳ ಇತಿಹಾಸ ಇರುವ ನಮ್ಮ ಕಾಲೇಜಿಗೆ ಇದೊಂದು ಹೆಮ್ಮೆ ಎಂದು ಹೇಳಿದರು.
In a truly one-of-a-kind feat, a youth from Mangaluru has entered the Golden Book of World Records for swimming 750 metres while continuously playing the flute — without letting water touch the instrument!
19-07-26 08:34 pm
HK News Desk
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
ನಾಲ್ಕು ತಿಂಗಳಲ್ಲೇ ಅಂತ್ಯಗೊಂಡ ನವಜೀವನ! ಅನಾರೋಗ್ಯದ...
13-07-26 10:21 pm
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
21-07-26 09:03 pm
HK News Staffer
ಧರ್ಮೇಂದ್ರ ಪ್ರಧಾನ್ ರಾಜಿನಾಮೆ ಹೊರತು ಪ್ರತಿಭಟನೆ ನಿ...
21-07-26 06:23 pm
ಮತ್ತೆ ಕೋವಿಡ್ ಸದ್ದು; ಆಂಧ್ರದಲ್ಲಿ RF.5 ರೂಪಾಂತರ ಪ...
20-07-26 03:42 pm
ನೀಟ್ ಪರೀಕ್ಷೆ ಅಕ್ರಮ ; ರಾಜಧಾನಿ ದೆಹಲಿಯಲ್ಲಿ ಬೀದಿಗ...
20-07-26 02:22 pm
ಕೇರಳದಲ್ಲಿ ಫುಟ್ಬಾಲ್ ಜ್ವರ ; ಮಧ್ಯರಾತ್ರಿ ಫೈನಲ್ ವೀ...
19-07-26 09:37 pm
21-07-26 11:02 pm
HK News Desk
ಸಾಣೂರು-ಬಿಕರ್ನಕಟ್ಟೆ ಚತುಷ್ಪಥ ರಸ್ತೆ ಕಾಮಗಾರಿ; ಬನ್...
21-07-26 09:41 pm
ನೀಟ್ ಪರೀಕ್ಷೆ ಅಕ್ರಮ ; ಸೋನಂ ವಾಂಗ್ಚುಕ್ ಹೋರಾಟಕ್ಕೆ...
20-07-26 09:32 pm
ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿ ಬಿದ್ದ ಕಾರು; ಅಪಘ...
20-07-26 03:14 pm
ಲಾವಣ್ಯ ಹತ್ಯೆ ; ಅವನನ್ನ ನಮ್ಮ ಕೈಗೆ ಒಪ್ಪಿಸಿ, ಊರಿನ...
17-07-26 10:25 pm
22-07-26 10:55 am
HK News Staffer
₹200 ಕೋಟಿ ಧರ್ಮಸ್ಥಳ ಕ್ಷೇತ್ರದ ವಿರುದ್ಧ ಷಡ್ಯಂತ್ರ...
22-07-26 10:53 am
Lavanya Murder case: ಲಾವಣ್ಯ ಹತ್ಯೆ ಪ್ರಕರಣ ; ಒಂ...
21-07-26 08:03 pm
ಮ್ಯಾಟ್ರಿಮೋನಿ ಆ್ಯಪ್ನಲ್ಲಿ ಶುರುವಾದ ಪ್ರೀತಿ ; ಮದು...
21-07-26 04:54 pm
Ravi Shetty, Accident, Mangalore: ನಿಯಂತ್ರಣ ತಪ...
21-07-26 12:18 pm