ಬ್ರೇಕಿಂಗ್ ನ್ಯೂಸ್
04-12-25 06:39 pm Mangalore Correspondent ಕರಾವಳಿ
ಮಂಗಳೂರು, ಡಿ.4 : ಒಂದೊಮ್ಮೆ ತನ್ನದೇ ಚರ್ಚ್ ಕಟ್ಟಿಕೊಂಡು ಪ್ರೊಟೆಸ್ಟಂಟ್ ಆಗಿದ್ದು, ಆನಂತರ ಕೆಥೋಲಿಕ್ ಚರ್ಚ್ ಸೇರ್ಪಡೆಯಾಗಿ ಮಂಗಳೂರಿನ ತೊಕ್ಕೊಟ್ಟು ಡಿವೈನ್ ಪ್ರೇಯರ್ ಸೆಂಟರ್ ನಲ್ಲಿ ಬೋಧಕನಾಗಿ ಪ್ರಾರ್ಥನಾ ಸಭೆಗಳನ್ನು ನಡೆಸುತ್ತಿದ್ದ ಕೇರಳ ಮೂಲದ ಸಜಿತ್ ಜೋಸೆಫ್ ಅವರನ್ನು ಕೇರಳದ ಸಿರಿಯನ್ ಕೆಥೋಲಿಕ್ ಮಲಬಾರ್ ಚರ್ಚ್ ಆಡಳಿತವು ದಿಢೀರ್ ಆಗಿ ಬೋಧಕ ಸ್ಥಾನದಿಂದ ತೆರವು ಮಾಡಿದ್ದು ಆತನನ್ನು ಯಾವುದೇ ಚರ್ಚ್ ಗಳಲ್ಲಿ ಪ್ರಾರ್ಥನೆಗೆ ಬಳಸಿಕೊಳ್ಳದಂತೆ ನಿಷೇಧ ವಿಧಿಸಿದೆ.
ಕಳೆದ ಅಕ್ಟೋಬರ್ ಆರಂಭದಲ್ಲಿ ಈ ಆದೇಶವನ್ನು ಮಾಡಲಾಗಿದ್ದು ಈಗ ಮಂಗಳೂರಿನ ಕೆಥೋಲಿಕ್ ಕ್ರಿಸ್ತಿಯನ್ನರ ನಡುವೆ ಚರ್ಚೆಗೆ ಕಾರಣವಾಗಿದೆ. ಸಜಿತ್ ಜೋಸೆಫ್ ಕೇರಳದ ಆಲುವಾ ಜಿಲ್ಲೆಯ ಮೂಲದ ವ್ಯಕ್ತಿ ಎನ್ನಲಾಗುತ್ತಿದ್ದು ಕೇರಳ ಮತ್ತು ವಿದೇಶಗಳಲ್ಲಿ ತನ್ನದೇ ಆದ ಫಾಲೋವರ್ ಗಳನ್ನು ಹೊಂದಿದ್ದು ಜಾಲತಾಣದಲ್ಲಿಯೂ ಪ್ರಸಿದ್ಧಿಯನ್ನು ಹೊಂದಿದ್ದಾರೆ. ಕೇರಳದ ವಿನ್ಸೆಂಟಿಯನ್ ಧಾರ್ಮಿಕ ಸಂಘದ ಚರ್ಚ್ ಗಳಲ್ಲಿ ಬೋಧಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕೇರಳ ಕ್ರಿಸ್ತಿಯನ್ನರಿಗೆ ಕರಾವಳಿಯಲ್ಲಿ ಬೆಳ್ತಂಗಡಿ ಡಯಾಸಿಸ್ ಪ್ರಮುಖವಾಗಿದ್ದು ತೊಕ್ಕೊಟ್ಟಿನಲ್ಲಿ ಇವರ ಪಂಗಡಕ್ಕೆ ಡಿವೈನ್ ಪ್ರೇಯರ್ ಸೆಂಟರ್ ಅನ್ನುವ ಚರ್ಚ್ ಶಾಖೆ ಇದೆ.

ಸಜಿತ್ ಜೋಸೆಫ್ ಮಾತುಗಳಿಂದ ಪ್ರೇರಿತಗೊಂಡು ಮಂಗಳೂರಿನ ಕೊಂಕಣಿ ಕ್ಯಾಥೊಲಿಕ್ ಕ್ರಿಸ್ತರು ಕೂಡ ಅಲ್ಲಿಗೆ ತೆರಳುತ್ತಿದ್ದರು. ಪ್ರತಿ ತಿಂಗಳಲ್ಲಿ ಒಂದು ಶುಕ್ರವಾರ ಪ್ರಾರ್ಥನಾ ಸಭೆ ಇರುತ್ತಿತ್ತು. ಸಭೆಯಲ್ಲಿ 3-4 ಸಾವಿರ ಜನರು ಸೇರುತ್ತಿದ್ದರು. ಆದರೆ ಈ ನಡುವೆ, ಸಜಿತ್ ಜೋಸೆಫ್ ವಿರುದ್ಧ ಹಲವಾರು ದೂರುಗಳು ಕೇಳಿಬಂದಿದ್ದು ಚರ್ಚ್ ಆಡಳಿತಕ್ಕೂ ದೂರು ಹೋಗಿತ್ತು. ಇದರ ನಡುವೆಯೇ ಸಜಿತ್ ಹಿಂದೊಮ್ಮೆ ಮಾತನಾಡಿದ್ದು ಎನ್ನಲಾದ ವಿಡಿಯೋ ವೈರಲ್ ಆಗಿದ್ದು ಅದರಲ್ಲಿ ತಾನು ಹಿಂದೆ ಪ್ರೊಟೆಸ್ಟಂಟ್ ಆಗಿರುವುದು ಮತ್ತು ತನ್ನದೇ ಚರ್ಚ್ ಹೊಂದಿದ್ದ ವಿಚಾರವನ್ನು ಹೇಳಿರುವುದು ಕೆಥೋಲಿಕ್ ಕ್ರಿಸ್ತಿಯನ್ನರ ತಲೆಗೆ ಹುಳ ಬಿಟ್ಟಂತಾಗಿತ್ತು.
ಸಜಿತ್ ಜೋಸೆಫ್ ಕೆಥೋಲಿಕ್ ಅಲ್ಲ, ಒಬ್ಬ ಪ್ರೊಟೆಸ್ಟಂಟ್. ಆತನ ಪ್ರಾರ್ಥನಾ ಸಭೆಯೂ ಅದೇ ರೀತಿ ಇತ್ತು ಎಂದು ಆಕ್ಷೇಪ ತೆಗೆದು ಚರ್ಚ್ ಆಡಳಿತಕ್ಕೆ ದೂರು ಹೇಳಿಕೊಂಡಿದ್ದರು. ಇದರ ಪರಿಣಾಮ ಕೇರಳದ ವಿನ್ಸೆಂಟಿಯನ್ ಧಾರ್ಮಿಕ ಸಂಘ , ಸಜಿತ್ ಜೋಸೆಫ್ ಅವರನ್ನು ಬೋಧಕ ಹುದ್ದೆಯಿಂದ ಹೊರಗೆ ಹಾಕಿದೆ. ಆದರೆ ಈ ಮಾಹಿತಿ ತಿಳಿಯದ ಅಮಾಯಕ ಜನರು ಸಜಿತ್ ಈಗ ಯಾಕೆ ಬರುತ್ತಿಲ್ಲ ಎಂದು ಕೇಳತೊಡಗಿದ್ದು ಚರ್ಚ್ ಗಳಲ್ಲಿ ಚರ್ಚೆಯ ವಸ್ತುವಾಗಿದೆ.
ಮಾಹಿತಿ ಪ್ರಕಾರ, ಸಜಿತ್ ಜೋಸೆಫ್ ಹೆತ್ತವರು ಕೇರಳದಲ್ಲಿ ರೋಮನ್ ಕೆಥೋಲಿಕ್ ಆಗಿದ್ದವರೇ. ಆದರೆ ಕೆಥೋಲಿಕ್ ಉಪದೇಶ, ನಂಬಿಕೆಗಳಿಗೆ ಹೊರತಾದ ಪ್ರೊಟೆಸ್ಟಂಟ್ ತತ್ವಗಳನ್ನು ನಂಬತೊಡಗಿದ್ದರು. ಇದರಿಂದಾಗಿ ಸಜಿತ್ ಜೋಸೆಫ್ ಅಸೆಂಬ್ಲಿ ಆಫ್ ಗಾಡ್ ಸಭೆಗೆ ಸೇರುವ "ಗ್ರೇಸ್ ಕಮ್ಯುನಿಟಿ ಗ್ಲೋಬಲ್" ಹೆಸರಿನಲ್ಲಿ 2011ರಲ್ಲಿ ಪ್ರತ್ಯೇಕ ಪ್ರಾರ್ಥನಾ ಕೇಂದ್ರ ಮಾಡಿಕೊಂಡಿದ್ದರು. ಇವರು ಬೇರೆ ಬೇರೆ ಕಡೆ ತೆರಳಿ ಪ್ರಾರ್ಥನೆ, ಸಭೆಗಳನ್ನೂ ನಡೆಸುತ್ತಿದ್ದರು. ಈ ಪಂಗಡದ ಜನರು ಮೂರ್ತಿಗಳನ್ನಿಟ್ಟು ಆರಾಧಿಸುತ್ತಿದ್ದುದಕ್ಕೆ ವಿರೋಧಿಸುತ್ತಿದ್ದರು.


2019ರಲ್ಲಿ ಸಜಿತ್ ಜೋಸೆಫ್ ಮತ್ತು ಆತನ ಜೊತೆಗಿದ್ದ 50ರಷ್ಟು ಜನರು ನಾವು ಮತ್ತೆ ಕೆಥೋಲಿಕ್ ಆಗಿರುತ್ತೇವೆಂದು ಹೇಳಿ ಚಾಲಕುಡಿಯ ವಿನ್ಸೆನ್ಶಿಯನ್ ಮಿಶನ್ ಸೆಂಟರ್ ನಲ್ಲಿ ಸೇರಿಕೊಂಡಿದ್ದರು. ಆನಂತರ, ಕೇರಳದ ಸಿರಿಯನ್ ಮಲಬಾರ್ ಪ್ರಾಂತ್ಯದ ಚರ್ಚುಗಳಲ್ಲಿ ಪ್ರಾರ್ಥನೆ, ಬೋಧನೆಗಳನ್ನು ಮಾಡತೊಡಗಿದ್ದರು. ಆದರೆ ಈಗ ಸಜಿತ್ ಬಗ್ಗೆ ದೂರುಗಳು ಕೇಳಿಬಂದಿದ್ದರಿಂದ ಚರ್ಚ್ ಆಡಳಿತವೇ ಇವರನ್ನು ಬೋಧಕ ಹುದ್ದೆಯಿಂದ ತೆಗೆದುಹಾಕಿದೆ. ದೇಶ- ವಿದೇಶಗಳಲ್ಲಿ ಬೋಧಕನಾಗಿದ್ದ ಸಜಿತ್ ಜೋಸೆಫ್ ಕೈಯನ್ನು ಕಟ್ಟಿಹಾಕಿದೆ.


ವಿನ್ಸೆಂಟಿಯನ್ ಚರ್ಚ್ ಆಡಳಿತವು ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದು ತಕ್ಷಣದಿಂದಲೇ ಅನ್ವಯವಾಗುವಂತೆ ಸಜಿತ್ ಜೋಸೆಫ್ ಪ್ರಾರ್ಥನೆ, ಬೋಧನೆಗೆ ನಿಷೇಧ ವಿಧಿಸಿದ್ದಾಗಿ ಹೇಳಿಕೊಂಡಿದೆ. “ಸಮುದಾಯದ ಅನೇಕರು, ಪ್ರಾರ್ಥನಾ ಕೇಂದ್ರದ ಪ್ರಮುಖರು ವಿಡಿಯೋ ಕ್ಲಿಪಿಂಗ್ ಜೊತೆಗೆ ದೂರು ನೀಡಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಸಜಿತ್ ಜೋಸೆಫ್ ಬೋಧನೆಯಲ್ಲಿ ಕೆಥೋಲಿಕ್ ಚರ್ಚ್ ಪ್ರವರ್ತಿಸುವ ಪವಿತ್ರ ವಿಧಿಗಳ ಕುರಿತು ತಪ್ಪು ಸಂದೇಶ ಇರುವುದನ್ನು ಗಮನಿಸಿದ್ದೇವೆ. ತನ್ನ ಬೋಧನೆಯಲ್ಲಿ ಹೊಸ ಮಾದರಿಯ ಮಾರ್ಸಿಯೋನಿಸಮ್ ಬಗ್ಗೆ ಪ್ರಮೋಟ್ ಮಾಡುತ್ತಿದ್ದು, ಇದನ್ನು ಚರ್ಚ್ ಫಾದರ್ ಗಳು ಒಕ್ಕೊರಲಿನಿಂದ ಖಂಡಿಸಿದ್ದಾರೆ.
ಜೀಸಸ್ ಮತ್ತು ಹೀಬ್ರೂ ಬೈಬಲ್ ನಡುವೆ ವ್ಯತ್ಯಾಸ ಇರೋದಾಗಿ ಹೇಳುತ್ತಿದ್ದು, ಜೀಸಸ್ ಬದಲು ತಂದೆಯನ್ನು ಪ್ರೀತಿಸುವಂತೆ ಆತನ ಬೋಧನೆಗಳಿವೆ. ಈ ವ್ಯಕ್ತಿ ಬೈಬಲಿನ ಹಳೆ ಒಡಂಬಡಿಕೆಯನ್ನು ತಪ್ಪಾಗಿ ಅರ್ಥೈಸಿದ್ದಾನೆ. ಈ ಬಗ್ಗೆ ಸೆ.25ರಂದು ಪ್ರೊವಿನ್ಶಿಯಲ್ ಕೌನ್ಸಿಲ್ ಸಭೆ ಕರೆದು ಸಜಿತ್ ಜೋಸೆಫ್ ವಿರುದ್ಧ ನಿರ್ಣಯ ಕೈಗೊಂಡಿದ್ದೇವೆ. ಹೀಗಾಗಿ ಆತನನ್ನು ಯಾವುದೇ ಚರ್ಚ್, ಪ್ರಾರ್ಥನಾ ಕೇಂದ್ರಗಳಲ್ಲಿ ಪ್ರಾರ್ಥನೆ, ಬೋಧನೆ ಅಥವಾ ಇನ್ಯಾವುದೇ ರೀತಿಯ ಧಾರ್ಮಿಕ ಕಾರ್ಯಗಳಿಗೆ ಕರೆಸುವುದನ್ನು ನಿಷೇಧಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
The Kerala Catholic Vincentian Congregation Church has issued an order prohibiting Kerala-based preacher Brother Sajith Joseph from conducting prayers or delivering teachings in any church or prayer centre in Kerala or Karnataka. Brother Sajith, who once founded his own Protestant church before rejoining Catholicism in 2019, had been active for the past five years in Mangalore and Belthangady, drawing thousands to his monthly prayer meetings. The Vincentian Church administration has issued a statement on the matter, declaring that Sajith Joseph has been immediately prohibited from conducting prayers and preaching. “We have taken seriously the complaints submitted by several community members and leaders of the prayer centre, along with video clips,” the statement said.
04-12-25 05:36 pm
HK News Desk
Bagalakote Accident, Four Killed: ಬಾಗಲಕೋಟೆ ;...
03-12-25 03:01 pm
ಜೈಷ್-ಇ-ಮೊಹಮ್ಮದ್ ಹೆಸರಲ್ಲಿ ಬೆಂಗಳೂರು ಏರ್ಪೋರ್ಟ್,...
02-12-25 10:17 pm
ಸಂಪುಟ ಪುನಾರಚನೆಯಾದ್ರೆ ಮುನಿಯಪ್ಪ, ಮಹದೇವಪ್ಪ, ಪರಮೇ...
02-12-25 06:29 pm
ಕೃತಕ ಬುದ್ಧಿಮತ್ತೆ ಎಫೆಕ್ಟ್ ; ಭವಿಷ್ಯದಲ್ಲಿ ಜನರು ಕ...
01-12-25 10:59 pm
04-12-25 05:39 pm
HK News Desk
IndiGo Cancels Nearly 200 Flights Nationwide;...
04-12-25 11:15 am
Nationwide Census: ಎರಡು ಹಂತಗಳಲ್ಲಿ ದೇಶಾದ್ಯಂತ ಜ...
03-12-25 07:19 pm
Jawaharlal Nehru, Babri Masjid, Sardar Patel,...
03-12-25 07:14 pm
ಅಮೆರಿಕದ ಡಾಲರ್ ಎದುರು ನೈಂಟಿ ಕ್ರಾಸ್ ಮಾಡಿದ ರೂಪಾಯಿ...
03-12-25 05:32 pm
04-12-25 06:39 pm
Mangalore Correspondent
ಅಜ್ಜನ ಕೈಹಿಡಿದು ಹೆದ್ದಾರಿ ದಾಟಿ ತಿಂಡಿಗೆ ಹೋಗಿದ್ದ...
04-12-25 12:38 pm
Cm Siddaramaiah Mangalore: ಆಹ್ವಾನ ಇಲ್ಲದೆ ನಾನೇ...
03-12-25 10:35 pm
Mangalore, CM Siddaramaiah, High Court: ಮಂಗಳೂ...
03-12-25 07:23 pm
CM Siddaramaiah, Mangalore, Narayan Guru: ದೇವ...
03-12-25 04:52 pm
04-12-25 04:18 pm
Bangalore Correspondent
ಹೊಸ ವರ್ಷದ ಸಂಭ್ರಮಾಚರಣೆಗೆ ಡ್ರಗ್ಸ್ ಮಾರಾಟ ಮಾಡಲು ಸ...
03-12-25 01:41 pm
ಲೈಂಗಿಕ ಸಮಸ್ಯೆಗಳಿಗೆ ಆಯುರ್ವೇದ ಔಷಧ ನೆಪದಲ್ಲಿ ವಂಚನ...
02-12-25 10:48 pm
ಇನ್ನೋವಾ ಕಾರಿನಲ್ಲಿ ನಾಲ್ಕು ಕರುಗಳನ್ನು ಸಾಗಿಸುತ್ತಿ...
02-12-25 06:37 pm
ರೈಲಿನಲ್ಲಿ ಬಂದು ನಿಲ್ಲಿಸಿದ್ದ ಸ್ಕೂಟರ್ ಕಳವುಗೈದು ಪ...
02-12-25 02:26 pm