ಬ್ರೇಕಿಂಗ್ ನ್ಯೂಸ್
10-12-25 08:45 pm Mangalore Correspondent ಕರಾವಳಿ
ಮಂಗಳೂರು, ಡಿ.10: ಸಾಮಾಜಿಕ ಜಾಲತಾಣದ ಮೇಲೆ ಪೊಲೀಸರ ಹದ್ದಿನ ಕಣ್ಣಿನ ನಡುವೆಯೂ ಕಿಡಿಗೇಡಿಗಳು ಮತ್ತೆ ಪ್ರತೀಕಾರದ ಹತ್ಯೆ ಬಗ್ಗೆ ಪೋಸ್ಟ್ ಹಾಕಿದ್ದು ನಗರದ ಕಂಕನಾಡಿ ನಗರ ಠಾಣೆ ಪೊಲೀಸರು 16 ಇನ್ಸ್ ಟಾ ಗ್ರಾಮ್ ಖಾತೆಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ನಾಲ್ಕು ತಿಂಗಳ ಬಿಡುವಿನ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ದ್ವೇಷದ ಪೋಸ್ಟ್ ಕಾಣಿಸಿಕೊಂಡಿದೆ. 2017ರಲ್ಲಿ ಕೊಲೆಯಾದ ಎಸ್ಡಿಪಿಐ ಕಾರ್ಯಕರ್ತ ಅಶ್ರಫ್ ಕಲಾಯಿ ಹತ್ಯೆಗೆ ಪ್ರತೀಕಾರದ ಸಂದೇಶಗಳನ್ನು ಹಾಕಲಾಗಿದ್ದು, Target 900, Team Target Boys, Immu Bai ಇನ್ಸ್ಟಾಗ್ರಾಮ್ ಪೇಜ್ಗಳಲ್ಲಿ ನಾನಾ ರೀತಿಯ ಪೋಸ್ಟ್ ಮಾಡಲಾಗಿದೆ. ಕಲಾಯಿ ಅಶ್ರಫ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ, ಹಿಂದೂ ಸಂಘಟನೆಯ ಮುಖಂಡ ಭರತ್ ಕುಮ್ಡೇಲ್ ಹತ್ಯೆ ಮಾಡಿಯೇ ತೀರುತ್ತೇವೆಂದು ಎಚ್ಚರಿಕೆ ನೀಡಲಾಗಿದೆ.


Revange Is Loading , Target Set One By One ಎಂಬ ಸಂದೇಶ ಇರುವ ಮತ್ತೊಂದು ಪೋಸ್ಟ್ ಮಾಡಿದ್ದು, ಕೈಯಲ್ಲಿ ತಲವಾರು ಮತ್ತು ಪಿಸ್ತೂಲ್ ಹಿಡಿದು ಮುಖ ಮರೆ ಮಾಚಿರುವ ರೀಲ್ಸ್ ಕೂಡ ಕಾಣಿಸಿಕೊಂಡಿದೆ. ಇತ್ತೀಚೆಗೆ ಕೇರಳದಲ್ಲಿ ಹತ್ಯೆಯಾದ ರೌಡಿಶೀಟರ್ ನೌಫಾಲ್ ಸಾವಿಗೂ ಪ್ರತೀಕಾರ ತೀರಿಸಿಕೊಳ್ಳುವ ಎಚ್ಚರಿಕೆ ನೀಡಲಾಗಿದೆ. ಹಲವು ಪ್ರಕರಣಗಳ ಆರೋಪಿ, ಕೋಕಾ ಏಕ್ಟ್ ನಡಿ ಬಂಧಿಸಲ್ಪಟ್ಟ ಬಜರಂಗದಳ ಕಾರ್ಯಕರ್ತ ಭರತ್ ಕುಮ್ಡೇಲ್ ಸದ್ಯ ಮಂಗಳೂರು ಜೈಲಿನಲ್ಲಿದ್ದಾನೆ.
ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕುವವರ ಮೇಲೆ ನಿಗಾ ಇಡುವ ಸಲುವಾಗಿಯೇ ಎಸ್ಎಎಫ್ ಮಾಡಲಾಗಿದ್ದು ಹಲವಾರು ಪೋಸ್ಟ್ ಕಾಣಿಸಿಕೊಂಡ ಬೆನ್ನಲ್ಲೇ ಆಯುಕ್ತ ಸುಧೀರ್ ರೆಡ್ಡಿ ಸೂಚನೆಯಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕಂಕನಾಡಿ ನಗರ ಠಾಣೆಯಲ್ಲಿ 16 ಇನ್ಸ್ಟಾಗ್ರಾಮ್ ಖಾತೆಗಳನ್ನು ಗುರುತಿಸಿ ಎಫ್ಐಆರ್ ಮಾಡಲಾಗಿದೆ. ಇದಲ್ಲದೆ, ಆಯಕಟ್ಡಿನ ಜಾಗಗಳ ಮೇಲೆ ಹದ್ದಿನ ಕಣ್ಣಿಡಲಾಗಿದ್ದು, ನಟೋರಿಯಸ್ ಗ್ಯಾಂಗ್ಗಳ ಚಲನವಲನಗಳನ್ನೂ ಗಮನಿಸಲಾಗುತ್ತಿದೆ. ಈ ಹಿಂದೆಯೂ ಭರತ್ ಕುಮ್ಡೇಲ್ಗೆ ಸಾಮಾಜಿಕ ತಾಣಗಳ ಮೂಲಕ ಕೊಲೆ ಬೆದರಿಕೆ ಹಾಕಲಾಗಿತ್ತು. BEARY_ROYAL_NAWAB, ಬ್ಯಾರಿ ಟ್ರೋಲರ್, ಮಂಗಳೂರು ಕಿಂಗ್ ಎಂಬ ಹೆಸರಿನ ಪೇಜ್ಗಳ ಮೂಲಕ ಎಚ್ಚರಿಕೆ ಸಂದೇಶಗಳು ಬಂದಿದ್ದವು. ಭರತ್ ಕುಮ್ಡೇಲ್ ರಕ್ತ ಈ ಭೂಮಿಗೆ ಹರಿಸದೆ ನಮಗೆ ಸಮಾಧಾನವಿಲ್ಲ. ನಮ್ಮ ಸಹೋದರ ಅಶ್ರಫ್ ಕಲಾಯಿಯನ್ನು ಮರೆತಿಲ್ಲ, ಪ್ರತಿರೋಧ ಅಪರಾಧವಲ್ಲ ಎಂದು ಪೋಸ್ಟ್ ಮಾಡಲಾಗಿತ್ತು.
ಟಾರ್ಗೆಟ್ ಗ್ರೂಪಿನ ಇಲ್ಯಾಸ್ ಕೊಲೆಯ ಬಳಿಕ ಈ ತಂಡ ಸೈಲೆಂಟ್ ಆಗಿತ್ತು. ಆಬಳಿಕ ದಾವೂದ್ ಈ ತಂಡದ ನೇತೃತ್ವ ವಹಿಸಿದ್ದರೂ ಗ್ರೂಪ್ ಸಕ್ರಿಯ ಆಗಿರಲಿಲ್ಲ. ಇದೀಗ ಟಾರ್ಗೆಟ್ ಗ್ರೂಪ್ ಹೆಸರಲ್ಲಿ ಪೋಸ್ಟ್ ಮಾಡಿದ್ದು ಎಲ್ಲದಕ್ಕೂ ಪ್ರತೀಕಾರ ತೀರಿಸುವ ಸೂಚನೆ ನೀಡಲಾಗಿದೆ. ಕಳೆದ ಮೇ ತಿಂಗಳಲ್ಲಿ ಬಜ್ಪೆಯಲ್ಲಿ ಬಜರಂಗದಳ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆಯೂ ಇದೇ ರೀತಿ ಆಗಿತ್ತು.
Despite strict police monitoring of social media, miscreants have once again posted messages calling for revenge killings. The Kankanady Town Police have registered FIRs against 16 Instagram accounts for publishing provocative and threatening posts.
10-12-25 09:40 pm
HK News Desk
ಬೆಂಗಳೂರಿನಲ್ಲಿ ರಸ್ತೆ ಅಪಘಾತ ; ಆರು ತಿಂಗಳ ಹಿಂದಷ್ಟ...
10-12-25 05:37 pm
ಅಧಿಕಾರ ಹಂಚಿಕೆ ಬಗ್ಗೆ ಗೊಂದಲ ; ಯಾರೂ ಆ ಬಗ್ಗೆ ಮಾತನ...
10-12-25 12:58 pm
ಮಹಿಳಾ ಉದ್ಯೋಗಿಗಳಿಗೆ ಋತುಚಕ್ರ ರಜೆ ; ಹೊಟೇಲುಗಳ ಸಂಘ...
09-12-25 08:56 pm
ಶಾಲಾ ಬಸ್ಸಿನಡಿಗೆ ಬಿದ್ದು ಎಂಟು ವರ್ಷದ ಬಾಲಕಿ ದುರಂತ...
09-12-25 08:53 pm
10-12-25 01:17 pm
HK News Desk
ಮಾಜಿ ಸಿಜೆಐ ಗವಾಯಿಗೆ ಶೂ ಎಸೆದಿದ್ದ ವಕೀಲ ರಾಕೇಶ್ ಕಿ...
09-12-25 11:03 pm
Goa Fire Accident, 23 dead: ಗೋವಾದ ನೈಟ್ಕ್ಲಬ್...
07-12-25 02:04 pm
ಸಂವಿಧಾನ ಪೀಠಿಕೆಯಲ್ಲಿ ಜಾತ್ಯತೀತ, ಸಮಾಜವಾದ ಪದ ಅಗತ್...
07-12-25 12:31 pm
ದೇವಾಲಯದ ಹಣ ದೇವರಿಗೆ ಸೇರಿದ್ದು, ಸಹಕಾರಿ ಬ್ಯಾಂಕುಗಳ...
06-12-25 04:58 pm
10-12-25 08:45 pm
Mangalore Correspondent
“Board Exams Made Easier: AI Shikshak Breaks...
10-12-25 06:01 pm
Mangalore Accident, Gowjee Events owner Death...
10-12-25 04:00 pm
Mangalore, Builder Encroaches Bejai Canal: ಬಿ...
09-12-25 07:30 pm
ರಿಷಬ್ ಶೆಟ್ಟಿ ತೊಡೆಯ ಮೇಲೆ ಮಲಗಿದ ದೈವ ! ಹರಕೆ ನೇಮದ...
09-12-25 05:21 pm
10-12-25 10:14 pm
Udupi Correspondent
ಪುತ್ತೂರಿನಲ್ಲಿ ನಿಲ್ಲಿಸಿದ್ದ ಲಾರಿಯಿಂದ 21 ಲಕ್ಷ ಮೌ...
09-12-25 04:33 pm
ಚಿನ್ನ ಅಡವಿಟ್ಟು ನಕಲಿ ಷೇರು ಮಾರುಕಟ್ಟೆಗೆ 31 ಲಕ್ಷ...
09-12-25 11:58 am
ಗಡಿಭಾಗ ತಲಪಾಡಿಯಲ್ಲಿ ಎಂಡಿಎಂಎ ಡ್ರಗ್ಸ್ ಮಾರಾಟ ; ಎರ...
08-12-25 09:29 pm
ವಿದ್ಯಾರ್ಥಿಗಳಿಗೆ ಡ್ರಗ್ಸ್ ಪೂರೈಸುತ್ತಿದ್ದ ಜಾಲ ; ಸ...
06-12-25 09:52 pm