ಬ್ರೇಕಿಂಗ್ ನ್ಯೂಸ್
12-12-25 07:32 pm Mangalore Correspondent ಕರಾವಳಿ
ಮಂಗಳೂರು, ಡಿ.12 : ಕಾಂತಾರ ಖ್ಯಾತಿಯ ನಿರ್ದೇಶಕ ರಿಷಬ್ ಶೆಟ್ಟಿ ವಾರಾಹಿ ಪಂಜುರ್ಲಿಗೆ ಹರಕೆ ನೇಮ ಕೊಟ್ಟಿರುವುದು ಮತ್ತು ಅದರಲ್ಲಿ ದೈವ ನರ್ತಕ ಅತಿರೇಕವಾಗಿ ವರ್ತಿಸಿದ್ದಾರೆಂದು ಸಾಮಾಜಿಕ ಜಾಲತಾಣದಲ್ಲಿ ಟೀಕೆ ಕೇಳಿಬಂದು ವಿವಾದ ರೂಪ ಪಡೆದಿರುವ ವಿಚಾರದಲ್ಲಿ ಸ್ವತಃ ಕದ್ರಿ ಬಾರೆಬೈಲಿನ ಜಾರಂದಾಯ, ಬಂಟ ಮತ್ತು ವಾರಾಹಿ ಪಂಜುರ್ಲಿ ದೈವಸ್ಥಾನ ಆಡಳಿತ ಕಮಿಟಿಯವರು ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗೋಷ್ಟಿ ಕರೆದು ಮಾತನಾಡಿದ ದೈವಸ್ಥಾನದ ಆಡಳಿತ ಕಮಿಟಿಯ ಗೌರವಾಧ್ಯಕ್ಷ ರವಿ ಪ್ರಸನ್ನ, ಹರಕೆ ನೇಮ ಆಗಿರುವ ಬಗ್ಗೆ ನಮಗೆ ಯಾವುದೇ ರೀತಿಯ ಸಂಶಯಗಳಿಲ್ಲ. ದೈವ ನರ್ತನ ಬಗ್ಗೆಯೂ ಆಕ್ಷೇಪ ಇಲ್ಲ. ಆದರೆ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ನಾನಾ ರೀತಿಯ ಟೀಕೆ ಬಂದಿರುವ ಬಗ್ಗೆ ಸ್ಪಷ್ಟನೆ ನೀಡುತ್ತಿದ್ದೇವೆ. ಜಾರಂದಾಯ ಮತ್ತು ಬಂಟ ದೈವಸ್ಥಾನ ಗ್ರಾಮ ದೈವ. ವಾರಾಹಿ ಪಂಜುರ್ಲಿ ಇಲ್ಲಿನ ಆಡಳಿತ ಮೊಕ್ತೇಸರ ಭಟ್ರ ಮನೆತನದ್ದು. ದೈವದ ಅಪ್ಪಣೆಯಂತೆ ಹರಕೆ ನೇಮ ಅರ್ಪಿಸಿದ್ದೇವೆ. ಜಾರಂದಾಯನಿಗೆ ತುಡರ ಬಲಿ, ವಾರಾಹಿ ಪಂಜುರ್ಲಿಗೆ ಹರಕೆ ನೇಮ ಕೊಟ್ಟಿದ್ದೇವೆ. ಕೊಡಿಯೇರಿಸಿ ನಡೆಸಿದ ನೇಮ ಇದಲ್ಲ ಎಂದರು.


ಹಲವಾರು ಹರಕೆ ನೇಮಗಳು ಬಂದಿವೆ, ದೈವ ಚಿತ್ತದಂತೆ ಇದನ್ನು ಹೊಂಬಾಳೆ ಫಿಲಂಸ್ ತಂಡದವರ ನೇಮವನ್ನು ಪಡೆದಿದೆ. ಮುಂದಿನ ಫೆಬ್ರವರಿಯಲ್ಲೂ ಮತ್ತೊಂದು ತಂಡದ ಹರಕೆ ನೇಮ ಇದೆ. ಇಲ್ಲಿನ ಪೂಜಾರಿ ವರ್ಗ, ದೈವ ನರ್ತಕರ ಬಗ್ಗೆ ನಮಗೆ ಯಾವುದೇ ಕಿಂಚಿತ್ತೂ ಆಕ್ಷೇಪ ಇಲ್ಲ. ಇಷ್ಟೆಲ್ಲ ಟೀಕೆ ಬಂದರೂ ನಾವು ಮಾತನಾಡಿಲ್ಲ ಎಂಬ ಅಪವಾದ ಬೇಡ ಎನ್ನುವ ಕಾರಣಕ್ಕೆ ಸ್ಪಷ್ಟನೆ ಕೊಡುತ್ತಿದ್ದೇವೆ. ಈ ರೀತಿಯ ಟೀಕೆ ಬಂದಿರುವುದು ನಮಗೆ ನೋವಾಗಿದೆ, ಭಕ್ತರ ಭಾವನೆಗೆ ಧಕ್ಕೆ ಬಂದಿದೆ ಎಂದು ಹೇಳಿದರು.
ಜಾಲತಾಣ ಮತ್ತು ಮಾಧ್ಯಮದಲ್ಲಿ ಆಗುತ್ತಿರುವ ಬೆಳವಣಿಗೆ ಬಗ್ಗೆ ಕದ್ರಿ ಪೊಲೀಸ್ ಠಾಣೆ ಮತ್ತು ಪೊಲೀಸ್ ಕಮಿಷನರ್ ಗೆ ದೂರು ನೀಡಿದ್ದೇವೆ. ದೈವವೇ ನೋಡಿಕೊಳ್ಳಲಿ ಎಂದು ಇಲ್ಲಿ ಪ್ರಾರ್ಥನೆ ಮಾಡಿದ್ದೇವೆ. ಮಾನನಷ್ಟ ಮೊಕದ್ದಮೆ ಹೂಡುವುದಕ್ಕೂ ಸಿದ್ಧರಿದ್ದೇವೆ ಎಂದು ಹೇಳಿದ ರವಿ ಪ್ರಸನ್ನ, ದೈವಾರಾಧನೆಯ ವಕ್ತಾರನೆಂದು ಹೇಳಿಕೊಳ್ಳುವ ತಮ್ಮಣ್ಣ ಶೆಟ್ಟಿ ತಮ್ಮ ದೈವದ ಬಗ್ಗೆ ನೋಡಿಕೊಳ್ಳಲಿ. ದೈವದ ಕಟ್ಟುಕಟ್ಟಳೆಗಳು ಆಯಾ ಭಾಗದಲ್ಲಿ ಬೇರೆ ಬೇರೆ ಇರುತ್ತವೆ. ಹರಕೆ ನೇಮವನ್ನು ಚೇಳಾಯರಿನಲ್ಲೂ ಕೊಡುವ ಪದ್ಧತಿ ಇದೆ. ಹರಕೆ ನೇಮವೇ ಇಲ್ಲ ಎನ್ನುವುದಕ್ಕೆ ಇವರು ನಮ್ಮ ಕ್ಷೇತ್ರಕ್ಕೆ ಸಂಬಂಧಿಸಿದವರಲ್ಲ. ಇಷ್ಟಕ್ಕೂ ಇಲ್ಲಿ ಗ್ರಾಮ ದೈವ ಜಾರಂದಾಯನಿಗೆ ಅರ್ಪಿಸಿದ ನೇಮ ಅಲ್ಲ. ವಾರಾಹಿ ಪಂಜುರ್ಲಿಗೆ ಎಣ್ಣೆಬೂಳ್ಯ ಕೊಟ್ಟು ಹರಕೆ ನೇಮ ಕೊಟ್ಟಿರುವುದು. ವಾರಾಹಿ ಪಂಜುರ್ಲಿ ಭಟ್ರ ಮನೆಯವರ ದೈವವಾಗಿದ್ದು, ಅದಕ್ಕೆ ನೇಮ ತೆಗೆದುಕೊಳ್ಳುವುದು ಅವರಿಗೆ ಬಿಟ್ಟದ್ದು ಎಂದರು.
ತಮ್ಮಣ್ಣ ಶೆಟ್ಟಿ ಎಲ್ಲಿ ಏನು ಮಾಡಿದ್ದಾರೆಂದು ಗೊತ್ತಿದೆ. ದರ್ಶನ ಕೊಟ್ಟಿದ್ದರ ವಿಡಿಯೋ ಕೂಡ ಇದೆ. ಇವರು ದರ್ಶನ ಮಾಡಲಿಕ್ಕೆ ದೈವ ನರ್ತಕರಾ. ಕೊಂಡಾಣ ಮತ್ತು ಷಣ್ಮುಖ ದೇವಸ್ಥಾನದಲ್ಲಿ ದೇವರ ಬಂಗಾರವನ್ನು ತೆಗೆದು ಅಡವಿಟ್ಟಿದ್ದು ದೈವಾರಾಧನೆಗೆ ಅಪಚಾರ ಆಗುವುದಿಲ್ಲವೇ. ಇವರ ಬಗ್ಗೆ ಹಲವಾರು ಮಂದಿ ಫೋನ್ ಕರೆ ಮಾಡಿ ಹೇಳಿದ್ದಾರೆ. ಇಲ್ಲಿ ದೈವ ನರ್ತಕರು ತೊಡೆಯ ಮಲಗಿದ್ದು ಎನ್ನಲು ಯಾವ ಆಧಾರವೂ ಇಲ್ಲ. ದೈವ ನರ್ತನವೇ ಹಾಗೆ. ನಾವು ಹಿಂದೆಯೂ ಇದೇ ರೀತಿಯ ವರ್ತನೆಯನ್ನು ನೋಡಿದ್ದೇವೆ. ಯಾರೇ ಹರಕೆ ಕೊಟ್ಟರೂ ಇದೇ ರೀತಿ ಪ್ರೀತಿ ತೋರಿಸುತ್ತದೆ. ಹರಕೆ ಕೊಟ್ಟವರನ್ನು ಕೈಹಿಡಿದು ಆಧರಿಸುವುದು ವಾಡಿಕೆ ಎಂದು ಹೇಳಿದರು.
ವಾರಾಹಿ ಪಂಜುರ್ಲಿ ದೈವದ ಹೆಸರು ಬಂದಿದ್ದು ಹೇಗೆ ಎಂದು ಪತ್ರಕರ್ತರೊಬ್ಬರು ಪ್ರಶ್ನೆ ಮಾಡಿದರು. ಈ ಪ್ರಶ್ನೆಗೆ ಸಿಟ್ಟಾದ ರವಿ ಪ್ರಸನ್ನ, ನಿಮ್ಮಲ್ಲೂ ಅನೇಕರು ದೈವಾರಾಧಕರು ಇರಬಹುದು. ಪಂಜುರ್ಲಿಗೆ ಆಯಾ ಪ್ರದೇಶದಲ್ಲಿ ಬೇರೆ ಬೇರೆ ಹೆಸರು ಇರುವುದು ಮತ್ತು ಅದೆಲ್ಲ ಹೇಗೆ ಬಂದಿದೆ ಎನ್ನುವ ಬಗ್ಗೆ ಹೇಳ್ತೀರಾ ಎಂದು ಮರು ಪ್ರಶ್ನೆ ಹಾಕಿದರು. ಅನಾದಿ ಕಾಲದಿಂದ ನಡೆದುಬಂದ ಪರಂಪರೆಯನ್ನು ಪ್ರಶ್ನೆ ಮಾಡುವುದಕ್ಕೆ ಸಾಧ್ಯವಿಲ್ಲ. ಕರಾವಳಿ ಪ್ರದೇಶ ಪರಶುರಾಮ ಸೃಷ್ಟಿ ಎನ್ನುವುದು ಹಿರಿಯರಿಂದ ಬಂದ ನಂಬಿಕೆ. ಪಾಡ್ದನಗಳನ್ನು ಆಧರಿಸಿ ದೈವಗಳ ಆರಾಧನೆ ನಡೆಯುತ್ತದೆ. ಅದನ್ನು ಪ್ರಶ್ನಿಸುತ್ತ ಹೋದರೆ, ದಾಖಲೆ ಕೇಳುತ್ತ ಹೋದರೆ ನಂಬಿಕೆಯ ಮೇಲೆ ಘಾಸಿ ಬರುತ್ತದೆ ವಿನಾ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ ಎಂದು ಹೇಳಿದರು. ಕೊನೆಯಲ್ಲಿ ಟಿವಿ ಮಾಧ್ಯಮಗಳ ಬಗ್ಗೆ ಟೀಕಿಸಿದ್ದು ಕೆಲಹೊತ್ತು ವಾಗ್ವಾದಕ್ಕೂ ಕಾರಣವಾಯಿತು.
ಜಾಲತಾಣದಲ್ಲಿ ಬಂದಿರುವುದಕ್ಕೂ ಟಿವಿ ಮಾಧ್ಯಮಗಳಲ್ಲಿ ಬಂದಿರುವುದಕ್ಕೂ ವ್ಯತ್ಯಾಸ ಇದೆಯೆಂದರೂ ಒಪ್ಪದ ರವಿ ಪ್ರಸನ್ನ, ನಾವು ಸಿನಿಮಾದಲ್ಲಿ ದೈವಾರಾಧನೆ ತೋರಿಸುವ ಬಗ್ಗೆ ಮಾತನಾಡುವುದಿಲ್ಲ. ತಮ್ಮಣ್ಣ ಶೆಟ್ಟಿ ಮಾತನ್ನು ಆಧರಿಸಿ ಸುದ್ದಿ ಮಾಡಿದ್ದೀರಿ, ಅದರ ನೆಪದಲ್ಲಿ ಕ್ಷೇತ್ರಕ್ಕೆ ಅಪಚಾರ ಮಾಡುವ ಕೆಲಸ ಆಗಿದೆ ಎಂದು ಹೇಳಿದರು. ಸುದ್ದಿಗೋಷ್ಟಿಯಲ್ಲಿ ಉಪಾಧ್ಯಕ್ಷ ಅಕ್ಷಿತ್ ಸುವರ್ಣ, ಕದ್ರಿ ದೇವಸ್ಥಾನದ ಕೃಷ್ಣ ಭಟ್, ಚರಣ್ ಕುಮಾರ್ ಇದ್ದರು. ಅಲ್ಲದೆ, ಕ್ಷೇತ್ರದ 50ಕ್ಕೂ ಹೆಚ್ಚು ಭಕ್ತರು ಸ್ಥಳದಲ್ಲಿ ಸೇರಿದ್ದರು.
Amid controversy surrounding Kantara-fame director Rishab Shetty’s Harake/Nema at Varahi Panjurli Daivasthana, and social-media allegations that the Daiva Narthaka behaved “excessively,” the Kadri Barebail Jarandaya, Banta and Varahi Panjurli Daivasthana Administration Committee has issued a strong clarification.
12-12-25 08:47 pm
Bangalore Correspondent
Yatnal, Dk Shivakumar, Vijayendra: ಡಿಕೆ ಸಿಎಂ,...
12-12-25 07:47 pm
ಅಧಿವೇಶನ ಮುಗಿದ ತಕ್ಷಣವೇ ಡಿಕೆಶಿ ಮುಖ್ಯಮಂತ್ರಿಯಾಗುತ...
12-12-25 03:18 pm
ಅಧಿವೇಶನ ಮಧ್ಯೆಯೂ ಡಿಕೆಶಿ ಆಪ್ತ ಶಾಸಕರು, ಸಚಿವರ ಡಿನ...
12-12-25 03:15 pm
ನಾಯಕತ್ವ ಗೊಂದಲ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಮಾತ...
12-12-25 01:36 pm
11-12-25 04:24 pm
HK News Desk
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
ಶಾಲೆಗಳಲ್ಲಿ ವಂದೇ ಮಾತರಂ ಹಾಡುವುದು ಕಡ್ಡಾಯಗೊಳಿಸಿ ;...
10-12-25 10:54 pm
ಭಾರತೀಯರಿಗೆ ಸಂತಸದ ಸುದ್ದಿ ; ಯುನೆಸ್ಕೋ ಪಟ್ಟಿಗೆ ದೀ...
10-12-25 01:17 pm
12-12-25 07:32 pm
Mangalore Correspondent
ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧ ಪೂರೈಕೆ ; ಅಧಿಕ...
12-12-25 02:02 pm
Mangalore Jail Inmate, Death: ಎದೆನೋವು ; ಉಡುಪಿ...
11-12-25 10:55 pm
ದೈವದ ಚಾಕರಿ ಮಾಡುವವರಿಗೆ ಮಾಸಾಶನ, ಸರ್ಕಾರಿ ಸವಲತ್ತು...
11-12-25 04:21 pm
ದ್ವೇಷ ಭಾಷಣ ಪ್ರಕರಣ ; ಕಡೆಗೂ ಆರೆಸ್ಸೆಸ್ ಮುಖಂಡ ಪ್ರ...
10-12-25 11:04 pm
12-12-25 01:58 pm
Mangalore Correspondent
Hassan Crime, Murder: ಸ್ನೇಹಿತನನ್ನು ಪಾರ್ಟಿಗೆ ಕ...
11-12-25 09:53 pm
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm
ಪುತ್ತೂರಿನಲ್ಲಿ ನಿಲ್ಲಿಸಿದ್ದ ಲಾರಿಯಿಂದ 21 ಲಕ್ಷ ಮೌ...
09-12-25 04:33 pm