ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ್ಯ ; ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸೇರಿದ ಬಿಎಸ್ಸಿ ವಿದ್ಯಾರ್ಥಿನಿ ಸುಶ್ರಾವ್ಯಾ 

12-12-25 10:28 pm       Mangalore Correspondent   ಕರಾವಳಿ

ನಗರದ ಸಂತ ಆಗ್ನೇಸ್ ಕಾಲೇಜಿನ (ಸ್ವಾಯತ್ತ) ದ್ವಿತೀಯ ಬಿಎಸ್ಸಿ ವಿದ್ಯಾರ್ಥಿನಿ ಸುಶ್ರಾವ್ಯಾ ನಿರಂತರ ನಾಲ್ಕು ಗಂಟೆಗಳ ಕಾಲ ಸ್ಕೇಟಿಂಗ್  ನೃತ್ಯದ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಮಾಡಿದ್ದಾರೆ. ಡಿ.12ರಂದು ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 12 ಗಂಟೆಯ ವರೆಗೆ ನಿರಂತರ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ನೃತ್ಯ ಪ್ರದರ್ಶನ ನೀಡಿ ತಮ್ಮ ಹೆಸರನ್ನು ವಿಶ್ವ ದಾಖಲೆಗೆ  ಸೇರಿಸಿದ್ದಾರೆ.

ಮಂಗಳೂರು, ಡಿ.12 : ನಗರದ ಸಂತ ಆಗ್ನೇಸ್ ಕಾಲೇಜಿನ (ಸ್ವಾಯತ್ತ) ದ್ವಿತೀಯ ಬಿಎಸ್ಸಿ ವಿದ್ಯಾರ್ಥಿನಿ ಸುಶ್ರಾವ್ಯಾ ನಿರಂತರ ನಾಲ್ಕು ಗಂಟೆಗಳ ಕಾಲ ಸ್ಕೇಟಿಂಗ್  ನೃತ್ಯದ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಮಾಡಿದ್ದಾರೆ. ಡಿ.12ರಂದು ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 12 ಗಂಟೆಯ ವರೆಗೆ ನಿರಂತರ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ನೃತ್ಯ ಪ್ರದರ್ಶನ ನೀಡಿ ತಮ್ಮ ಹೆಸರನ್ನು ವಿಶ್ವ ದಾಖಲೆಗೆ  ಸೇರಿಸಿದ್ದಾರೆ.
 
ಮಂಗಳೂರು ಚಿಲಿಂಬಿಯ ಉದಯ್ ಕುಮಾರ್ ಮತ್ತು ಶಶಿರೇಖಾ ಎಸ್ ಅವರ ಪುತ್ರಿಯಾಗಿರುವ ಸುಶ್ರಾವ್ಯ, ಪ್ರಸುತ್ತ ಸಂತ ಆಗ್ನೆಸ್ ಕಾಲೇಜು (ಸ್ವಾಯತ್ತ) ಮಂಗಳೂರಿನ ದ್ವಿತೀಯ ಬಿ.ಎಸ್ಸಿ ವಿದ್ಯಾರ್ಥಿನಿ. ಸತತ ಪರಿಶ್ರಮ ಮತ್ತು ನಿರಂತರ ಸಾಧನೆಗೆ ಈಗ ಜಾಗತಿಕ ಮನ್ನಣೆ ಲಭಿಸಿದೆ.


 
ಸುಶ್ರಾವ್ಯ ಅವರು ಕಳೆದ 14 ವರ್ಷಗಳಿಂದ ಸ್ಕೇಟಿಂಗ್ ಕ್ಷೇತ್ರದಲ್ಲಿ ಸುಮನ್ ಶ್ರೀಕಾಂತ್ ಇವರ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡುತ್ತಿದ್ದು, ಅದೇ ರೀತಿಯಲ್ಲಿ ಭಾರತೀಯ ಶಾಸ್ತ್ರೀಯ ನೃತ್ಯದ ಜೂನಿಯರ್ ಪರೀಕ್ಷೆಯನ್ನು ಪ್ರತಿಮಾ ಶ್ರೀಧರ್ ಅವರ ಮಾರ್ಗದರ್ಶನದಲ್ಲಿ ಹಾಗೂ ಸೀನಿಯರ್ ಪರೀಕ್ಷೆಯನ್ನು ಸುರೇಶ್ ಅತ್ತಾವರ ಅವರ ಮಾರ್ಗದರ್ಶನದಲ್ಲಿ ಪೂರೈಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಕಲಾತ್ಮಕ ಸ್ಕೇಟಿಂಗ್ ಅನ್ನು ಸ್ವತಃ ಕಲಿತು ಅಭ್ಯಾಸ ಮಾಡುತ್ತಿದ್ದಾರೆ.
 
ಇವರು ತಾಲೂಕು ಮಟ್ಟದ ವಿದ್ಯಾ ಭಾರತೀ ಸ್ಪರ್ಧೆಯಲ್ಲಿ ಮೊದಲ ಸ್ಥಾನದಲ್ಲಿ ವಿಜೇತರಾಗಿದ್ದು, ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡಿದ್ದರು. ಮೀರತ್ ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಎರಡು ಚಿನ್ನ ಹಾಗೂ ಎರಡು ಬೆಳ್ಳಿ ಪದಕಗಳನ್ನು ತಮ್ಮದಾಗಿಸಿದ್ದಾರೆ. ಜೊತೆಗೆ SGFI (School Games Federation of India) ಮಟ್ಟಕ್ಕೂ ಆಯ್ಕೆಯಾಗಿರುವುದು ಇವರ ಸಾಧನೆ.
 
ಇದೇ ರೀತಿಯಲ್ಲಿ, RSFI ಜಿಲ್ಲಾ ಮಟ್ಟದ ಅನೇಕ ಸ್ಪರ್ಧೆಗಳಲ್ಲಿ ಬಹುಮಾನ ಹಾಗೂ ಪ್ರಶಂಸೆಗಳನ್ನು ಪಡೆದು, ರಾಜ್ಯ ಮಟ್ಟಕ್ಕೂ ಆಯ್ಕೆಯಾಗಿದ್ದಾರೆ. ಹಲವಾರು ಕಾರ್ಯಕ್ರಮಗಳಲ್ಲಿ ಇವರನ್ನು ಸನ್ಮಾನಿಸಲಾಗಿದೆ. ಸಂತ ಆಗ್ನೆಸ್ (ಸ್ವಯತ್ತ) ಪದವಿ ಕಾಲೇಜಿನಲ್ಲಿ ನಡೆದ “Agnes Got Talent” ಸ್ಪರ್ಧೆಯಲ್ಲೂ ಸುಶ್ರಾವ್ಯ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.

Sushravya, a second-year B.Sc student of St. Agnes College (Autonomous), Mangaluru, has made her way into the Golden Book of World Records by performing continuous classical dance on skates for four hours.