ಬ್ರೇಕಿಂಗ್ ನ್ಯೂಸ್
21-01-26 06:18 pm Mangalore Correspondent ಕರಾವಳಿ
ಮಂಗಳೂರು, ಜ.21 : ಸ್ವಚ್ಛತೆ, ತ್ಯಾಜ್ಯ ಮುಕ್ತ ಗ್ರಾಮ, ಪರಿಸರ ಸ್ನೇಹಿ ಆಡಳಿತದಿಂದ ಗಮನ ಸೆಳೆದಿರುವ ದಕ್ಷಿಣ ಕನ್ನಡ ಜಿಲ್ಲೆಯ ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಅವರು ದೆಹಲಿಯಲ್ಲಿ ನಡೆಯಲಿರುವ 76ನೇ ಗಣರಾಜ್ಯೋತ್ಸವ ಪಥಸಂಚಲನಕ್ಕೆ ವಿಶೇಷ ಆಹ್ವಾನಿತರಾಗಿ ಆಯ್ಕೆಯಾಗಿದ್ದಾರೆ.
ಜನವರಿ 26ರಂದು ನವದೆಹಲಿಯಲ್ಲಿ ನಡೆಯುವ ಗಣರಾಜ್ಯ ಕಾರ್ಯಕ್ರಮಕ್ಕೆ ಕರ್ನಾಟಕದಿಂದ ಆಯ್ಕೆಯಾದ ಐದು ಗ್ರಾಮ ಪಂಚಾಯತ್ ಅಧ್ಯಕ್ಷರ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯ ತ್ರಿವೇಣಿ ಪಲ್ಲತ್ತಾರು ಒಬ್ಬರು. ಎರಡು ವರ್ಷಗಳಿಂದ ಒಳಮೊಗ್ರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮನೆ ಮನೆ ಕಸ ಸಂಗ್ರಹಣೆ ಹಾಗೂ ವೈಜ್ಞಾನಿಕ ಕಸದ ವಿಂಗಡಣೆ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಾಗಿದೆ. ಒಣ ಕಸವನ್ನು ವಿಂಗಡಿಸಿ ಕೆದಂಬಾಡಿಯಲ್ಲಿರುವ ತ್ಯಾಜ್ಯ ನಿರ್ವಹಣಾ ಘಟಕ (ಮೆಟಿರಿಯಲ್ ರಿಕವರಿ ಫೆಸಿಲಿಟಿ)ಗೆ ಸಾಗಿಸಲಾಗುತ್ತಿದ್ದು, ಹಸಿ ಕಸವನ್ನು ಗ್ರಾಮದಲ್ಲೇ ಕಾಂಪೋಸ್ಟ್ ಘಟಕದಲ್ಲಿ ಸಂಸ್ಕರಿಸಲಾಗುತ್ತಿದೆ. ಸಂಜೀವಿನಿ ಮಹಿಳಾ ಸ್ವಸಹಾಯ ಸಂಘದ ಸದಸ್ಯೆಯರು ಪಂಚಾಯತ್ ಒದಗಿಸಿದ ವಾಹನದ ಮೂಲಕ ಕಸ ವಿಂಗಡಣೆ ಮತ್ತು ಸಂಗ್ರಹಣೆಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ.

ಸ್ವಚ್ಛತೆ ಕೇವಲ ಯೋಜನೆಯಲ್ಲ, ಜನ ಚಳವಳಿಯಾಗಬೇಕು ಎಂಬ ನಿಟ್ಟಿನಲ್ಲಿ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಿದ್ದಾರೆ. ಪಂಚಾಯತ್ ಸ್ವಚ್ಛತಾ ಸಮಿತಿ, ಸ್ವಸಹಾಯ ಸಂಘಗಳು ಹಾಗೂ ಗ್ರಾಮಸ್ಥರ ಮೂಲಕ ಕಸದ ವಿಲೇವಾರಿ ನಡೆಯುತ್ತಿದೆ. ಒಳಮೊಗ್ರು ಗ್ರಾಮದಲ್ಲಿ ಹೊಸ ಗ್ರಾಮ ಪಂಚಾಯತ್ ಕಟ್ಟಡ, ಘನ ತ್ಯಾಜ್ಯ ಸಂಗ್ರಹ ಘಟಕ ಸ್ಥಾಪನೆ, ಕೆರೆಗಳ ಅಭಿವೃದ್ಧಿ, ಜಲ ಜೀವನ್ ಮಿಷನ್ ಅಡಿ ಪ್ರತಿ ಮನೆಗೂ ಕುಡಿಯುವ ನೀರಿನ ಸಂಪರ್ಕ, ವೈಯಕ್ತಿಕ ಶೌಚಾಲಯಗಳ ನಿರ್ಮಾಣ ಹಾಗೂ ಒಳಚರಂಡಿ ವ್ಯವಸ್ಥೆ ಜಾರಿಗೆ ಬಂದಿವೆ. ಈ ಸಾಧನೆಗಳು ಸರ್ಕಾರದ ಮಟ್ಟದಲ್ಲಿ ಮೆಚ್ಚುಗೆಗೆ ಪಾತ್ರವಾಗಿವೆ.
ಇತ್ತೀಚೆಗೆ ಆರಂಭಿಸಿದ 'ಸ್ವಚ್ಛ ಮನೆ – ಸ್ವಚ್ಛ ಗ್ರಾಮ' ಅಭಿಯಾನದಡಿ ಗ್ರಾಮದಲ್ಲಿನ 75 ಶೇಕಡಕ್ಕಿಂತ ಹೆಚ್ಚು ಕುಟುಂಬಗಳು ಕಸ ವಿಂಗಡಿಸಿ ನೀಡುವುದಾಗಿ ಮತ್ತು ಶೌಚಾಲಯ ಬಳಕೆಯನ್ನು ಸಮರ್ಪಕವಾಗಿ ಮತ್ತು ಕಡ್ಡಾಯವಾಗಿ ಪಾಲಿಸುವುದಾಗಿ ಘೋಷಣೆ ನೀಡಿದ್ದಾರೆ. ಇದಲ್ಲದೆ, ತ್ರಿವೇಣಿ ಪಲ್ಲತ್ತಾರು ಅವರು ಸ್ವತಃ ಸ್ವಸಹಾಯ ಸಂಘದ ಪ್ರತಿನಿಧಿಯೂ ಆಗಿದ್ದಾರೆ. ಪತಿ ಪ್ರವೀಣ್ ಉದ್ಯಮಿಯಾಗಿದ್ದು, ಪ್ರಸ್ತುತ ತ್ರಿವೇಣಿ ಪತಿ, ಪುತ್ರಿ ಸ್ಮೃತಿ ಮತ್ತು ಪುತ್ರ ಸೃಜನ್ ಅವರೊಂದಿಗೆ ಪಲ್ಲತ್ತಾರಿನಲ್ಲಿ ವಾಸವಿದ್ದಾರೆ.
Recognised for her leadership in cleanliness, zero-waste village initiatives and eco-friendly governance, Triveni Pallatharu, President of Innomogru Gram Panchayat in Dakshina Kannada district, has been selected as a special invitee to the 76th Republic Day parade to be held in New Delhi.
21-01-26 01:31 pm
HK News Desk
ರಾಯಚೂರಿನಲ್ಲಿ ಭೀಕರ ಅಪಘಾತ ; ಬೊಲೆರೋ - ಪಿಕ್ಅ...
21-01-26 12:30 pm
ಬಾರ್ ಲೈಸನ್ಸ್ ನೀಡಲು 1.5 ಕೋಟಿ ಲಂಚ ; 25 ಲಕ್ಷ ರೂ....
20-01-26 02:15 pm
ರಾಸಲೀಲೆಯ ಬಿರುಗಾಳಿ ಬೆನ್ನಲ್ಲೇ ರಾಮಚಂದ್ರ ರಾವ್ ತಲ...
20-01-26 12:20 pm
ಮೈಸೂರಿನಿಂದ ಮಂತ್ರಾಲಯಕ್ಕೆ ತೆರಳುತ್ತಿದ್ದ ಸುಗಮ ಬಸ್...
20-01-26 12:18 pm
21-01-26 11:10 am
HK News Desk
KSRTC Hikes Kasaragod Mangaluru: ಕುಂಬಳೆ ಟೋಲ್...
20-01-26 07:04 pm
ಬಸ್ಸಿನಲ್ಲಿ ಲೈಂಗಿಕ ಕಿರುಕುಳ ಎಂದು ವಿಡಿಯೋ ; ನೊಂದು...
19-01-26 11:03 pm
A.R. Rahmans Communal Bias: ‘ಕಮ್ಯುನಲ್ ಕಾರಣಕ್ಕ...
18-01-26 08:20 pm
ಗ್ರೀನ್ಲ್ಯಾಂಡ್ ವಶಕ್ಕೆ ವಿರೋಧ ; ನ್ಯಾಟೋ ಮಿತ್ರ ರಾ...
18-01-26 06:03 pm
21-01-26 06:18 pm
Mangalore Correspondent
ಬಂಗ್ಲೆಗುಡ್ಡೆ ಕಾಡಿನಲ್ಲಿ ಸಿಕ್ಕಿದ ಏಳು ಅಸ್ಥಿಪಂಜರಗ...
21-01-26 11:53 am
158 ವರ್ಷಗಳ ಇತಿಹಾಸವುಳ್ಳ ದೇಶದ ಮೊದಲ ಮಂಗಳೂರು ಟೈಲ್...
20-01-26 10:59 pm
ಪಾಂಡೇಶ್ವರ ಲೆವೆಲ್ ಕ್ರಾಸಿಂಗ್ ನಿಂದ ಟ್ರಾಫಿಕ್ ಸಮ...
20-01-26 10:33 pm
ರಿಯಲ್ ಎಸ್ಟೇಟ್ ಉದ್ಯಮಿ ಹಠಾತ್ತನೆ ಹೃದಯಾಘಾತಕ್ಕೆ ಬಲ...
20-01-26 10:00 pm
20-01-26 07:51 pm
Bangalore Correspondent
ಸಿಎಂ ಕ್ಲಾಸ್ ಬೆನ್ನಲ್ಲೇ ಅಲರ್ಟ್ ಆದ ಬೆಂಗಳೂರು ಖಾಕಿ...
20-01-26 05:01 pm
100ಕ್ಕೂ ಹೆಚ್ಚು ಜನರನ್ನು ಹನಿಟ್ರ್ಯಾಪ್ ಬಲೆಗೆ ಬೀಳ...
19-01-26 10:20 pm
ಹುಣಸೂರು ಸ್ಕೈ ಗೋಲ್ಡ್ ಜುವೆಲ್ಲರಿ ದರೋಡೆ ; ಬಿಹಾರ ಮ...
19-01-26 04:16 pm
ದೆಹಲಿ ಮೆಟ್ರೋ ರೈಲಿನಲ್ಲಿ ಅಮೆರಿಕ ಮೂಲದ ಮಹಿಳೆಗೆ ಲೈ...
19-01-26 03:38 pm