Kadri Flower Show 2026: ಕದ್ರಿಯಲ್ಲಿ ಫ್ಲವರ್ ಶೋ ಭರಪೂರ ; ಆದರೆ ಶೋಗೆ ಬಂದ ಜನರೆಷ್ಟು? ಕಲೆಕ್ಷನ್ ಆಗಿದ್ದೆಷ್ಟು,.? ಇಲಾಖೆ ಲೆಕ್ಕ ಸ್ವಲ್ಪ ! 

29-01-26 08:37 pm       ಗಿರಿಧರ್ ಶೆಟ್ಟಿ, ಮಂಗಳೂರು   ಕರಾವಳಿ

ತೋಟಗಾರಿಕೆ ಇಲಾಖೆ ಮತ್ತು ಜಿಲ್ಲಾಡಳಿತದ ಜಂಟಿ ಆಶ್ರಯದಲ್ಲಿ ಈ ಬಾರಿ ಕದ್ರಿ ಪಾರ್ಕಿನಲ್ಲಿ ಫಲಪುಷ್ಪ ಪ್ರದರ್ಶನ ಅದ್ದೂರಿಯಾಗಿಯೇ ನಡೆದಿದೆ. ನಾಲ್ಕು ದಿನಗಳ ಶೋದಲ್ಲಿ ಜನಜಂಗುಳಿಯೇ ಏರ್ಪಟ್ಟಿತ್ತು. ಸ್ಟಾಲ್ ಹಾಕಿದವರಿಗೂ ಭರಪೂರ ವ್ಯಾಪಾರ ಆಗಿದೆ. ಹೂವಿನಿಂದ ಮಾಡಿದ್ದ ವಂದೇ ಭಾರತ್ ರೈಲು ಈ ಸಲ ಆಕರ್ಷಕವಾಗಿತ್ತು. 

ಮಂಗಳೂರು, ಜ.29 : ತೋಟಗಾರಿಕೆ ಇಲಾಖೆ ಮತ್ತು ಜಿಲ್ಲಾಡಳಿತದ ಜಂಟಿ ಆಶ್ರಯದಲ್ಲಿ ಈ ಬಾರಿ ಕದ್ರಿ ಪಾರ್ಕಿನಲ್ಲಿ ಫಲಪುಷ್ಪ ಪ್ರದರ್ಶನ ಅದ್ದೂರಿಯಾಗಿಯೇ ನಡೆದಿದೆ. ನಾಲ್ಕು ದಿನಗಳ ಶೋದಲ್ಲಿ ಜನಜಂಗುಳಿಯೇ ಏರ್ಪಟ್ಟಿತ್ತು. ಸ್ಟಾಲ್ ಹಾಕಿದವರಿಗೂ ಭರಪೂರ ವ್ಯಾಪಾರ ಆಗಿದೆ. ಹೂವಿನಿಂದ ಮಾಡಿದ್ದ ವಂದೇ ಭಾರತ್ ರೈಲು ಈ ಸಲ ಆಕರ್ಷಕವಾಗಿತ್ತು. 

ಆದರೆ ಎಷ್ಟು ಜನ ಬಂದಿದ್ದಾರೆಂಬ ಬಗ್ಗೆ ತೋಟಗಾರಿಕೆ ಇಲಾಖೆಯಲ್ಲಿ ಕೇಳಿದರೆ ಲೆಕ್ಕ ತುಂಬ ಕಮ್ಮಿ ಇದೆ. ಇಲಾಖೆಯ ಅಸಿಸ್ಟೆಂಟ್ ಡೈರೆಕ್ಟರ್ ಪ್ರಮೋದ್ ಬಳಿ ಕೇಳಿದಾಗ, 40,256 ಮಂದಿ ಟಿಕೆಟ್ ಪಡೆದು ಹೋಗಿದ್ದಾರೆ. ಉಳಿದಂತೆ ಐದಾರು ಸಾವಿರ ಮಕ್ಕಳು ಬಂದಿರಬಹುದು. ಒಟ್ಟು 50 ಸಾವಿರದಷ್ಟು ಜನ ಬಂದಿರಬಹುದು ಎಂದಿದ್ದಾರೆ.

ಫ್ಲವರ್ ಶೋ ಎಂಟ್ರಿಗೆ ಒಬ್ಬರಿಗೆ 30 ರೂ. ಟಿಕೆಟ್ ಮಾಡಲಾಗಿತ್ತು. ಆದರೂ ಟಿಕೆಟ್ ಪಡೆದೇ ಹೆಚ್ಚಿನ ಜನರು ಎಂಟ್ರಿ ಪಡೆದಿದ್ದಾರೆ. ಮಳಿಗೆಯವರಲ್ಲಿ ಕೇಳಿದರೆ, ನಾಲ್ಕು ದಿನದಲ್ಲಿ ಎರಡು ಲಕ್ಷದಷ್ಟು ಜನ ಬಂದಿರಬಹುದು ಎನ್ನುತ್ತಾರೆ. ಶನಿವಾರ, ಭಾನುವಾರ ಅಂತೂ ಜನ ರಶ್ ಇದ್ದರು. ಆದರೆ ಇಲಾಖೆಯ ಲೆಕ್ಕದಲ್ಲಿ ಕೇವಲ ನಲ್ವತ್ತು ಸಾವಿರ ಅಷ್ಟೇ ಇದೆ.

30 ರೂ.ನಂತೆ ಎರಡು ಲಕ್ಷ ಜನ ಬಂದಿದ್ದರೆ 60 ಲಕ್ಷ ಕಲೆಕ್ಷನ್ ಆಗುತ್ತದೆ. ಒಟ್ಟು 95 ಮಳಿಗೆ ಇದ್ದವು. ಅಲ್ಲದೆ, ಹತ್ತು ಮಂದಿಯ ನರ್ಸರಿ ಇತ್ತು. ಒಂದು ಮಳಿಗೆ ಹಾಕಲು 6 ಸಾವಿರ ಶುಲ್ಕ ಪಡೆಯಲಾಗಿತ್ತು. ಸ್ವಸಹಾಯದ ಸಂಘದ ಮಳಿಗೆಗೆ 2 ಸಾವಿರ ಶುಲ್ಕ ವಿಧಿಸಲಾಗಿತ್ತು. ಮಳಿಗೆ ಮತ್ತು ಜನರ ಎಂಟ್ರಿ ಶುಲ್ಕದ ಕಲೆಕ್ಷನ್ ಎಷ್ಟಾಗಿದೆ ಎನ್ನುವ ಮಾಹಿತಿ ಇಲ್ಲ.

ಕದ್ರಿ ಪಾರ್ಕ್ ನಿರ್ವಹಣೆಗೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ ಇದೆ. ಇದೇ ಸಮಿತಿಯಿಂದ ಫ್ಲವರ್ ಶೋ ಮಾಡಲಾಗುತ್ತದೆ. ಇಲ್ಲಿ ಲೆಕ್ಕಾಚಾರ ತೋಟಗಾರಿಕೆ ಇಲಾಖೆಯದ್ದೇ ಇರುತ್ತದೆ. ಫ್ಲವರ್ ಶೋನಲ್ಲಿ ಉಳಿಕೆಯಾದ ಹಣದಲ್ಲಿ ಕದ್ರಿ ಪಾರ್ಕ್ ನಿರ್ವಹಣೆ ಮಾಡಬಹುದು. ಇದಲ್ಲದೆ, ಪಾರ್ಕ್ ನಲ್ಲಿ ಗಿಡ ನೆಡುವುದಕ್ಕೆ, ಇನ್ನಿತರ ಅಭಿವೃದ್ಧಿ ಕೆಲಸ ಮಾಡುವುದಕ್ಕೆ ಜಿಪಂ ಮತ್ತು ಸಿಎಸ್ಆರ್ ಫಂಡ್ ಬರುತ್ತದೆ. ಅದನ್ನೂ ಅಧಿಕಾರಿಗಳು ಬಳಸಿಕೊಳ್ಳುತ್ತಾರೆ. ಆದರೆ ಅಲ್ಲಿ ನೆಟ್ಟ ಗಿಡಗಳಿಗೆ ನೀರು ಹಾಯಿಸುವುದಕ್ಕೂ ಜನ ಇರುವುದಿಲ್ಲ. ಪಾರ್ಕ್ ನೋಡಿಕೊಳ್ಳಲು ಫುಲ್ ಟೈಮ್ ಸೆಕ್ಯುರಿಟಿಯೂ ಇಲ್ಲ. ರಾತ್ರಿಯಾದರೆ ಹರೆಯದ ಜೋಡಿಗಳು ಪೊದೆಗಳಲ್ಲಿ ಅವಿತುಕೊಳ್ಳುವುದು ನಡೆಯುತ್ತದೆ.

ಎರಡು ವಾರದ ಹಿಂದಷ್ಟೇ ಕದ್ರಿಯಲ್ಲಿ ಕಲಾಪರ್ಬ ಎನ್ನುವ ಮೇಳ ನಡೆದಿತ್ತು. ಮೂರು ದಿನಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಜನ ಭೇಟಿ ನೀಡಿದ್ದಾರೆ. ಎಂಟ್ರಿ ಫ್ರೀ ಇದ್ದುದರಿಂದ ಹೌಸ್ ಫುಲ್ ಆಗಿತ್ತು. ಈ ಬಾರಿ ಫ್ಲವರ್ ಶೋನಲ್ಲಿ ಮಾತ್ರ ಜನರಿಗೆ ಪಾರ್ಕಿಂಗ್ ಶುಲ್ಕವೂ ಹೇರಲಾಗಿತ್ತು. ಇದರಿಂದ ಜನರ ಪಾಲಿಗೆ ಈ ಸಲ ಫ್ಲವರ್ ಶೋ ವಸೂಲಿಯೇ ಆಗಿಹೋಗಿತ್ತು.

Despite heavy crowds and brisk business at the four-day Kadri Flower Show in Mangaluru, the horticulture department reports only around 50,000 visitors, far less than public estimates. With entry fees, stall rentals, and parking charges, the lack of clear revenue disclosure has sparked questions over attendance and collection figures.