ಬ್ರೇಕಿಂಗ್ ನ್ಯೂಸ್
02-01-21 12:53 pm Mangalore Correspondent ಕರಾವಳಿ
ಮಂಗಳೂರು, ಜ.2: ಮಂಗಳೂರು ನಗರದ ಎರಡು ದೈವಸ್ಥಾನಗಳ ಕಾಣಿಕೆ ಡಬ್ಬಿಗಳಲ್ಲಿ ಹಿಂದುಗಳನ್ನು ನಿಂದಿಸಿ ನೋಟುಗಳಲ್ಲಿ ಬರೆದು ಹಾಕಿರುವ ಕಿಡಿಗೇಡಿ ಕೃತ್ಯ ಬೆಳಕಿಗೆ ಬಂದಿದೆ.
ಕೊಟ್ಟಾರದ ಕಲ್ಲುರ್ಟಿ ದೈವಸ್ಥಾನ ಮತ್ತು ಅತ್ತಾವರದ ಬಾಬುಗುಡ್ಡೆಯ ಬಬ್ಬುಸ್ವಾಮಿ ದೈವಸ್ಥಾನದ ಕಾಣಿಕೆ ಡಬ್ಬಿಗಳಲ್ಲಿ ವಿಕೃತವಾಗಿ ಬರೆದಿರುವ ನೋಟುಗಳು ಮತ್ತು ಸುದೀರ್ಘ ಪತ್ರವೊಂದು ಸಿಕ್ಕಿದೆ. ನೋಟಿನಲ್ಲಿ ಹಿಂದುಗಳನ್ನು ನಿಂದಿಸಿ ಬರೆಯಲಾಗಿದೆ. 200 ರೂ. ಮತ್ತು ಹತ್ತು ರೂ. ಮುಖಬೆಲೆಯ ಮೂರು ನೋಟುಗಳಲ್ಲಿ ‘ಯೇಸು ಕ್ರಿಸ್ತ ಮಾತ್ರ ದೇವರು, ಹಂದಿಗಳಂತಿರುವ ಹಿಂದುಗಳೇ ಮುಸಲರ ಕೈಗೆ ಸಿಕ್ಕಿಹಾಕಿಕೊಂಡಿದ್ದೀರಿ. ಮುಸಲರನ್ನು, ಹಂದಿಗಳಂತಿರುವ ಹಿಂದುಗಳನ್ನು ಅಟ್ಟಾಡಿಸಿ ಹೊಡೆದು ಕೊಲ್ಲಬೇಕು’ ಎಂಬುದಾಗಿ ಬರೆದು ಕಾಣಿಕೆ ಡಬ್ಬಿಯಲ್ಲಿ ಹಾಕಿದ್ದಾರೆ.
ಅಲ್ಲದೆ, ಅತ್ತಾವರದ ಬಬ್ಬುಸ್ವಾಮಿ ಕಾಣಿಕೆ ಡಬ್ಬಿಯಲ್ಲಿ ಮತ್ತೊಂದು ಸುದೀರ್ಘ ಪತ್ರವೊಂದು ಸಿಕ್ಕಿದೆ. ಅದರ ಆರಂಭದಲ್ಲಿ ‘’ಇದು ಪ್ರಭು ಏಸು ಕ್ರಿಸ್ತನ ಪವರ್ ಫುಲ್ ಪ್ರವಾದಿಗಳ ಪ್ರಕಟಣೆಯಾಗಿದೆ. ಈ ಲೇಖನ ಬರೆದ ಪ್ರವಾದಿ ಕರ್ನಾಟಕದ ಧಾರವಾಡ ಸಮೀಪದ ಕಿತ್ತೂರು ಮೂಲದ ವ್ಯಕ್ತಿಯಾಗಿದ್ದಾನೆ. ಬ್ರಿಟಿಷರನ್ನು ಅತಿ ಹೆಚ್ಚು ಪೀಡಿಸಿದ್ದು ಭಾರತ ಸಂಸ್ಥಾನವಾಗಿದ್ದು ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕೆಂಬುದು ದೇವರ ನಿರ್ಣಯವಾಗಿದೆ.
ಮಂಗಳೂರು ಸಮೀಪದ ಬಿಸಿ ರೋಡ್ ನ ಶ್ರೀರಾಮ ಶಿಲಾ ಮಂದಿರದ ಪ್ರಧಾನ ಅರ್ಚಕರೂ, ಟ್ರಸ್ಟಿಗಳೂ, ಶ್ರೀರಾಮ ವಿದ್ಯಾಸಂಸ್ಥೆಯ ಮಾಲಕರೂ ಆದ ಶ್ರೀ ಶ್ರೀ ಡಾ.ಪಂ. ಪ್ರಭಾಕರ ಭಟ್ಟರ ಪ್ರಕಾರ ಭಾರತ ದೇಶದ ಹಿಂದು ಧರ್ಮವು ಪ್ರಪಂಚದ ಅತಿ ಪವಿತ್ರ ಧರ್ಮ ಎಂಬುದಾಗಿ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಈ ಪವಿತ್ರ ದೇಶದಲ್ಲಿ ಪ್ರಜೆಗಳು ಯಾವ ಸ್ಥಿತಿಯಲ್ಲಿದ್ದಾರೆ ಎಂದರೆ ಶೇ.60 ರಷ್ಟು ಜನರು ಬಡತನ ರೇಖೆಗಿಂತ ಕೆಳಗಿದ್ದಾರೆ. ಅಂದರೆ ಕೇರಾಫ್ ಫುಟ್ಪಾತ್ ನಲ್ಲಿದ್ದಾರೆ. ಶೇ.70ರ ನಷ್ಟು ಜನರು ನಿರಕ್ಷರ ಕುಕ್ಷಿಗಳು ಇದ್ದಾರೆ...
ಮುಂದುವರಿದ ಪತ್ರದಲ್ಲಿ, ಅತಿ ಹೆಚ್ಚು ಆತ್ಮಹತ್ಯೆ ನಡೆಯುವ ದೇಶ, ಪಶ್ಚಿಮಘಟ್ಟಗಳ ನಾಶದ ಬಗ್ಗೆ ಉಲ್ಲೇಖ ಮಾಡಿದ್ದಾನೆ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ವರ್ಷದಲ್ಲಿ 6 ಲಕ್ಷ ಕೋಟಿ ರೂ.ಗಳಷ್ಟು ಮಿಲಿಟರಿಗಾಗಿ ವ್ಯಯ ಮಾಡುತ್ತಿದ್ದಾರೆ. ಸಾರಿಗೆ ಇಲಾಖೆಯಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ನಡೆಯುತ್ತಿದೆ. ಖೋಟಾ ನೋಟು ಚಲಾವಣೆಗೆ ತಂದು ಬೆಂಗಳೂರಿನಂತಹ ನಗರಗಳಲ್ಲಿ 300 ರೂ.ಗೆ ಎರಡು ಸಾವಿರದ ನೋಟು ಮಾರಲ್ಪಡುತ್ತಿದೆ. ಜನಸಾಮಾನ್ಯರಿಗೆ ಈ ರೀತಿಯ ಹಣ, ಮದ್ಯ ಪೂರೈಸಿ ರಾಜಕಾರಣಿಗಳು ಚುನಾವಣೆ ಗೆಲ್ಲುತ್ತಾರೆ. ರಾಜಕಾರಣಿಗಳು, ಶ್ರೀಮಂತರಿಗೆ ಕಾಯಿಲೆ ಬಂದರೆ ಸಿಂಗಾಪುರಕ್ಕೆ ಹೋಗುತ್ತಾರೆ... ಹೀಗೆಲ್ಲಾ ಪತ್ರದಲ್ಲಿ ಬರೆಯಲಾಗಿದೆ. ಅಲ್ಲದೆ, ಪತ್ರದ ಮೂಲೆಯಲ್ಲಿ ನಾವು ಏಸು ಕ್ರಿಸ್ತನ ಹೆಸರಲ್ಲಿ ಹಿಂದುಗಳನ್ನು ಕಳೆದ 15 ವರ್ಷಗಳಿಂದ ಅವಮಾನಿಸುತ್ತಲೇ ಇದ್ದೇವೆ ಎಂದು ಬರೆದಿದ್ದಾರೆ.
ಉದ್ದೇಶಪೂರ್ವಕ ಬರೆದು ಹಾಕಿರುವ ಪತ್ರ ಇದಾಗಿದ್ದು ಕಿಡಿಗೇಡಿಗಳ ಕೃತ್ಯದ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಯೇಸು ಕ್ರಿಸ್ತರ ಹೆಸರಲ್ಲಿ ಯಾರೋ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ ಎನ್ನಲಾಗುತ್ತಿದೆ. ದೈವಸ್ಥಾನದ ಭಕ್ತರು ಈ ವಿಚಾರದ ಬಗ್ಗೆ ದೈವದ ಮುಂದೆ ಪ್ರಾರ್ಥನೆ ಹೇಳಿಕೊಂಡಿದ್ದು ದೇವರೇ ನೋಡಿಕೊಳ್ಳಲಿ. ಆತನಿಗೆ ಒಳ್ಳೆಯ ಬುದ್ಧಿ ಕೊಡುವಂತೆ ಬೇಡಿಕೊಂಡಿದ್ದಾರೆ. ಘಟನೆ ಬಗ್ಗೆ ಇನ್ನೂ ಪೊಲೀಸ್ ದೂರು ದಾಖಲಾಗಿಲ್ಲ.
Letters and Currency Notes showing hatred towards Hindu Religion found in the offering boxes of two temples in Mangalore. Public turn to wrath as the name of Lord Jesus has been misused to create tension in Mangalore.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 10:51 am
Mangalore Correspondent
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
Waqf Protest, Mangalore, Traffic: ಎಪ್ರಿಲ್ 18...
17-04-25 11:06 pm
Karnataka High Court, Waqf protest Mangalore...
17-04-25 10:27 pm
19-04-25 11:01 am
Bangalore Correspondent
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm
Hyderabad Murder, Mother suicide: ತೆಂಗಿನಕಾಯಿ...
18-04-25 08:14 pm
Dead Baby Found, Garbage, Bangalore crime: ಅಪ...
18-04-25 03:41 pm