ಬ್ರೇಕಿಂಗ್ ನ್ಯೂಸ್
02-01-21 08:11 pm Mangaluru Correspondent ಕರಾವಳಿ
ಮಂಗಳೂರು, ಜ.2: ಬಿಜೆಪಿ ಪಕ್ಷದ ಬಗ್ಗೆ ಟೀಕಿಸಿ ಬರೆದಿದ್ದ ಮಹಿಳೆಯೊಬ್ಬರನ್ನು ಅವಾಚ್ಯವಾಗಿ ನಿಂದಿಸಿ, ಗ್ಯಾಂಗ್ ರೇಪ್ ಮಾಡಬೇಕು ಎಂದು ಫೇಸ್ಬುಕ್ ನಲ್ಲಿ ಕರೆ ಕೊಟ್ಟ ವಿಚಾರದ ಬಗ್ಗೆ ಮಂಗಳೂರಿನ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಮ್ಯುನಿಸ್ಟ್ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತೆ ಆಗಿರುವ ಮಂಗಳೂರಿನ ಮಹಿಳೆಯೊಬ್ಬರು, ಫೇಸ್ಬುಕ್ ನಲ್ಲಿ ಬಿಜೆಪಿ ಪಕ್ಷದ ಕುರಿತ ಪರ- ವಿರೋಧ ಚರ್ಚೆಯಲ್ಲಿ ತನ್ನ ಅಭಿಪ್ರಾಯ ಹಾಕಿದ್ದರು. ಎಸ್ ಡಿಪಿಐ ವಿಜಯೋತ್ಸವದಲ್ಲಿ ಪಾಕ್ ಪರ ಘೋಷಣೆ ಕೇಳಿಬಂದಿದ್ದ ಹಿನ್ನೆಲೆ ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರಕಾರ ಇರುವಾಗ ಎಸ್ ಡಿಪಿಐಯನ್ನು ನಿಷೇಧ ಯಾಕೆ ಮಾಡಿಲ್ಲ. ಬಿಜೆಪಿಯವರ ಕುತಂತ್ರಕ್ಕೆ ಎಸ್ ಡಿಪಿಐ ಬೇಕು, ಇದರಿಂದ ಅವರಿಗೆ ಲಾಭ ಇದೆ ಎಂದು ಟೀಕಿಸಿದ್ದರು.


ಚರ್ಚೆಯಲ್ಲಿ ಮಹಿಳೆ ತನ್ನ ಅಭಿಪ್ರಾಯ ಹೇಳಿಕೊಂಡಿದ್ದರು ಅಷ್ಟೇ. ಆದರೆ, ಇದಕ್ಕೆ ಪ್ರತಿಕ್ರಿಯಿಸಿದ ಬಾಬುರಾವ್ ಸರ್ದೇಸಾಯಿ ಎಂಬ ಹೆಸರಿನಲ್ಲಿ ಖಾತೆ ಹೊಂದಿರುವ ವ್ಯಕ್ತಿ ಅವಾಚ್ಯ ಪದಗಳಿಂದ ಮಹಿಳೆಯನ್ನು ನಿಂದಿಸಿದ್ದಾನೆ. ಅಲ್ಲದೆ, ಇನ್ನಿತರ ತನ್ನ ಸ್ನೇಹಿತರಿಗೆ ಈಕೆಯನ್ನು ಸಾಮೂಹಿಕ ಅತ್ಯಾಚಾರ ಮಾಡಬೇಕೆಂದು ಹೇಳಿದ್ದಾನೆ. ಈ ಬಗ್ಗೆ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಆತನಿಗೆ ಟ್ಯಾಗ್ ಮಾಡಿ ಬರೆದಿದ್ದು ಪ್ರಧಾನಿ ಮೋದಿಯನ್ನು ಅನುಸರಿಸುವ ಮಂದಿ ಇಷ್ಟು ಕೀಳು ಮಟ್ಟಕ್ಕೆ ಇಳಿಯಬಾರದು ಎಂದಿದ್ದಾರೆ.
ಬಾಬುರಾವ್ ಸರ್ದೇಸಾಯಿ ಬಿಜೆಪಿ ಕಾರ್ಯಕರ್ತನೇ, ಮೋದಿ ಅಭಿಮಾನಿಯೇ, ತಾನು ಎಲ್ಲಿಯವನು ಎಂಬ ಬಗ್ಗೆ ಪ್ರೊಫೈಲ್ ನಲ್ಲಿ ಹಾಕಿಕೊಂಡಿಲ್ಲ. ಈ ವಿಚಾರದ ಬಗ್ಗೆ ಮುನೀರ್ ಕಾಟಿಪಳ್ಳ ಮತ್ತು ಸ್ನೇಹಿತರು ಮಹಿಳೆಯ ಜೊತೆ ಸೇರಿ ಮಂಗಳೂರಿನ ಸೈಬರ್ ಕ್ರೈಮ್ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ.
Social Activist of Mangalore Threatened of Gang Rape on social media for sharing her political view on BJP party. A case has been filed at the Cybercrime police station.
24-08-26 03:16 pm
HK News Staffer
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
ದೇಶದ ರಾಜಕೀಯದಲ್ಲಿ ಬಹುದೊಡ್ಡ ಬಿರುಗಾಳಿ; ವಿರುದ್ಧ ಧ...
21-08-26 03:42 pm
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
24-08-26 06:25 pm
HK News Staffer
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
ಅಡಿಕೆ ಎಲೆ ಚುಕ್ಕಿ ರೋಗ ನಿಯಂತ್ರಣಕ್ಕೆ ಸಿಪಿಸಿಆರ್ ಐ...
24-08-26 04:11 pm
ಎಂಆರ್ ಪಿಎಲ್ ನಲ್ಲಿ 26 ಇಂಜಿನಿಯರಿಂಗ್ ಹುದ್ದೆಗಳ ಭರ...
24-08-26 01:13 pm
ಹಲ್ಲೆಗೀಡಾದವರ ಮೇಲೆ ಕೊಲೆಯತ್ನ ಕೇಸು ಹಾಕಿದ್ದಾರೆ, ಹ...
23-08-26 06:17 pm
24-08-26 09:06 pm
HK News Staffer
ಸಾವಿರಾರು ಕೋಟಿ ವಂಚಕ, ಶಿವಂ ಅಸೋಸಿಯೇಟ್ಸ್ ಮಾಲೀಕ ಶಿ...
24-08-26 07:04 pm
ಚಿಕ್ಕಮಗಳೂರಿನಲ್ಲಿ ಈದ್ ಮೆರವಣಿಗೆ ಸಿದ್ಧತೆ ; ಬೃಹತ್...
24-08-26 02:35 pm
ಕುಂಬಳೆಯ ಮುಸ್ಲಿಂ ವ್ಯಾಪಾರಿಗೆ ಹನಿಟ್ರ್ಯಾಪ್ ; ವಿಡಿ...
24-08-26 02:25 pm
ನದಿಗೆ ಬಿದ್ದ ಫುಟ್ಬಾಲ್ ಹೆಕ್ಕಲು ಹೋಗಿ ಜೀವ ಕಳಕೊಂಡ...
24-08-26 01:03 pm