ಬ್ರೇಕಿಂಗ್ ನ್ಯೂಸ್
03-01-21 02:36 pm Mangaluru Correspondent ಕರಾವಳಿ
ಪುತ್ತೂರು, ಜ.3: ಮದುವೆ ಸಮಾರಂಭಕ್ಕೆ ತೆರಳುತ್ತಿದ್ದ ಬಸ್ ಪಲ್ಟಿ ಹೊಡೆದ ಪ್ರಕರಣದಲ್ಲಿ ಮೃತರ ಸಂಖ್ಯೆ ಎಂಟಕ್ಕೇರಿದ್ದು ಹತ್ತಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದಾರೆ.
ಪುತ್ತೂರು ತಾಲೂಕಿನ ಈಶ್ವರಮಂಗಲದಿಂದ ಹೊರಟಿದ್ದ ಮದುವೆ ದಿಬ್ಬಣದ ಬಸ್ ನಲ್ಲಿ 63 ಮಂದಿ ಇದ್ದರು. 30 ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಐವರು ಮಧ್ಯಾಹ್ನವೇ ಮೃತಪಟ್ಟಿದ್ದರು ಎನ್ನಲಾಗಿತ್ತು.
ಕೊಡಗು ಜಿಲ್ಲೆಯ ಗಡಿಭಾಗ ಕರಿಕೆ ಬಳಿಯ ಚೆತ್ತುಕಯ ಎಂಬಲ್ಲಿ ಮದುವೆ ಕಾರ್ಯ ಇತ್ತು. ಇದಕ್ಕಾಗಿ ಪುತ್ತೂರಿನ ವಧುವಿನ ಕಡೆಯವರು ಬಸ್ಸಿನಲ್ಲಿ ಹೊರಟಿದ್ದರು. ಬಸ್ ಸುಳ್ಯ ಮೂಲಕ ಕಾಸರಗೋಡು ಜಿಲ್ಲೆಯ ಆಲೆಟ್ಟಿ - ಕಲ್ಲಪಳ್ಳಿ - ಪಾಣತ್ತೂರು ಮಾರ್ಗವಾಗಿ ಕೊಡಗಿನತ್ತ ತೆರಳುತ್ತಿತ್ತು. ಈ ವೇಳೆ, ಚಾಲಕನ ನಿಯಂತ್ರಣ ತಪ್ಪಿದ ಬಸ್ ಪಾಣತ್ತೂರು ಬಳಿ ಪಲ್ಟಿಯಾಗಿದ್ದು ಮನೆಯ ಮೇಲೆ ಬಿದ್ದಿತ್ತು.
ಮೃತರನ್ನು ರಾಜೇಶ್, ರವಿಚಂದ್ರ, ಆದರ್ಶ, ಶ್ರೇಯಸ್, ಸುಮತಿ, ಶಶಿಕುಮಾರ್ ಮತ್ತು ಜಯಲಕ್ಷ್ಮಿ ಎಂದು ಗುರುತಿಸಲಾಗಿದೆ. ಬಸ್ಸಿನಲ್ಲಿ ಫುಲ್ ರಶ್ ಇದ್ದುದರಿಂದ ಅಪಘಾತದಲ್ಲಿ ಹಲವರು ಗಾಯಗೊಂಡಿದ್ದಾರೆ.
EARLIER REPORT: ಮದುವೆ ಸಮಾರಂಭಕ್ಕೆ ತೆರಳುತ್ತಿದ್ದ ಬಸ್ ಪಲ್ಟಿ ಹೊಡೆದ ಪರಿಣಾಮ ಐವರು ಮೃತಪಟ್ಟ ಘಟನೆ ಕಾಸರಗೋಡು ಜಿಲ್ಲೆಯ ಗಡಿಭಾಗ ಪಾಣತ್ತೂರಿನಲ್ಲಿ ನಡೆದಿದೆ.
ಪುತ್ತೂರಿನಿಂದ ಹೊರಟಿದ್ದ ಮದುವೆ ದಿಬ್ಬಣದ ಬಸ್ ನಲ್ಲಿ 60 ಮಂದಿ ಇದ್ದರೆನ್ನಲಾಗುತ್ತಿದ್ದು 30 ಮಂದಿಗೆ ಗಂಭೀರ ಗಾಯಗಳಾಗಿವೆ. ಇಬ್ಬರು ಪುರುಷರು, ಇಬ್ಬರು ಮಹಿಳೆಯರು ಮತ್ತು 11 ವರ್ಷದ ಬಾಲಕ ಸಾವನ್ನಪ್ಪಿದ್ದಾರೆಂದು ಸ್ಥಳೀಯರು ತಿಳಿಸಿದ್ದಾರೆ.
ಕೊಡಗು ಜಿಲ್ಲೆಯ ಗಡಿಭಾಗ ಕರಿಕೆ ಎಂಬಲ್ಲಿ ಮದುವೆ ಕಾರ್ಯ ಇತ್ತು. ಇದಕ್ಕಾಗಿ ಪುತ್ತೂರಿನ ವರನ ಕಡೆಯವರು ಬಸ್ಸಿನಲ್ಲಿ ಹೊರಟಿದ್ದರು. ಬಸ್ ಸುಳ್ಯ ಮೂಲಕ ಕಾಸರಗೋಡು ಜಿಲ್ಲೆಯ ಆಲೆಟ್ಟಿ - ಕಲ್ಲಪಳ್ಳಿ - ಪಾಣತ್ತೂರು ಮಾರ್ಗವಾಗಿ ಕೊಡಗಿನತ್ತ ತೆರಳುತ್ತಿತ್ತು. ಈ ವೇಳೆ, ಚಾಲಕನ ನಿಯಂತ್ರಣ ತಪ್ಪಿದ ಬಸ್ ಪಾಣತ್ತೂರು ಬಳಿ ರಸ್ತೆ ತಿರುವಿನಲ್ಲಿ ಪಲ್ಟಿಯಾಗಿದ್ದು ಮನೆಯ ಮೇಲೆ ಬಿದ್ದಿದೆ.
ಮೃತರು ಪುತ್ತೂರಿನ ನಿವಾಸಿಗಳು ಎನ್ನಲಾಗುತ್ತಿದೆ. ಹಲವಾರು ಮಂದಿ ಗಾಯಗೊಂಡಿದ್ದು ಗಾಯಾಳುಗಳನ್ನು ಕಾಞಂಗಾಡ್ ಮತ್ತು ಕಾಸರಗೋಡಿನ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ.
Five people were killed and several others injured after a bus from Puttur was on its way to wedding function toppled near Panathooru, Kasargod here on Sunday January 3.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 06:49 pm
HK News Desk
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm