ಬ್ರೇಕಿಂಗ್ ನ್ಯೂಸ್
06-01-21 08:27 pm Mangaluru Correspondent ಕರಾವಳಿ
ಮಂಗಳೂರು, ಜ.6: ನಗರದ ಪಾಂಡೇಶ್ವರದ ರೈಲ್ವೇ ಗೇಟಿನಲ್ಲಿ ರೈಲು ಬಂದಿರಲಿಲ್ಲ. ಬದಲಿಗೆ, ರೈಲಿನ ಮಾದರಿಯಲ್ಲೇ ಮತ್ತೊಂದು ರಸ್ತೆ ದಾಟುತ್ತಿತ್ತು. ಸ್ಥಳೀಯರು ಇದನ್ನು ಗಮನಿಸಿ, ರಸ್ತೆಯನ್ನು ಒಂದು ಕ್ಷಣ ಬಂದ್ ಮಾಡಿದರು.
ರಾತ್ರಿಯಾಗಿದ್ದರಿಂದ ರೈಲು ಬರದೆ ದಿಢೀರ್ ರಸ್ತೆ ಬಂದ್ ಮಾಡಿದ್ದು ವಾಹನ ಸವಾರರಿಗೆ ಕಿರಿಕಿರಿ ಮಾಡಿತ್ತು. ಸಂಜೆಯ ಧಾವಂತದಲ್ಲಿ ಕೆಲವರು ಹಾರ್ನ್ ಮೊಳಗಿಸಿದರು. ಕೆಲವರು ಏನೆಂದು ಮುಂದೆ ಬಂದು ಅಚ್ಚರಿಯಿಂದ ನೋಡುತ್ತಾ ನಿಂತರು. ನಿಂತವರು ಮಾತ್ರ ಅಚ್ಚರಿಗೊಂಡು ಅಲ್ಲಿಂದ ಕದಲಲಿಲ್ಲ !

ಹೌದು.. ಪಾಂಡೇಶ್ವರದ ರೈಲ್ವೇ ಗೇಟಿನಲ್ಲಿ ಬುಧವಾರ ಸಂಜೆ ಏಳು ಗಂಟೆ ಸುಮಾರಿಗೆ ಹೊಸ ಅತಿಥಿ ಬಂದಿತ್ತು. ನಗರದ ಜನರಿಗೆ ಅಪರೂಪದ ಅತಿಥಿ. ಬೃಹತ್ ಗಾತ್ರದ ಹೆಬ್ಬಾವು ರೈಲ್ವೇ ಗೇಟ್ ಮುಂಭಾಗದಲ್ಲೇ ರಸ್ತೆಯನ್ನು ದಾಟಿತ್ತು. ವಾಹನಗಳ ಭರಾಟೆಯ ಮಧ್ಯೆ ಹೆಬ್ಬಾವು ನಿಶ್ಚಿಂತೆಯಿಂದ ರಸ್ತೆ ದಾಟಿತ್ತು. ಇದನ್ನು ಗಮನಿಸಿದ ಕೆಲವರು ರಸ್ತೆ ತೆರವು ಮಾಡಿಕೊಟ್ಟು ಹಾವು ವಾಹನದ ಅಡಿಗೆ ಬೀಳದಂತೆ ನೋಡಿಕೊಂಡರು.
ಹೆಬ್ಬಾವು ನಿಧಾನಕ್ಕೆ ಗಜಗಾಂಭೀರ್ಯದಲ್ಲಿ ರಸ್ತೆ ದಾಟಿ, ಇನ್ನೊಂದು ಬದಿಗೆ ಸರಿಯಿತು. ಜನ ನೋಡುತ್ತಲೇ ಇದ್ದರು. ಹಿಂದೆ ಇದ್ದ ವಾಹನ ಸವಾರರಿಗೆ ವಿಚಾರ ಗೊತ್ತಾಗುವಾಗ ಹಾವು ಕತ್ತಲಲ್ಲಿ ಮರೆಯಾಗಿತ್ತು.
A Huge python snake was found crossing road near Pandeshwar Railway Track blocking road in Mangalore.
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm