ಬ್ರೇಕಿಂಗ್ ನ್ಯೂಸ್
07-01-21 11:30 am Mangalore Correspondent ಕರಾವಳಿ
ಮಂಗಳೂರು, ಜ.7 : ತುಳುನಾಡಿನ ಧಾರ್ಮಿಕ ನಂಬಿಕೆಗೆ ಚ್ಯುತಿ ತರುವ ರೀತಿಯಲ್ಲಿ ದೈವಗಳ ಫೋಟೊ, ವೀಡಿಯೊಗಳನ್ನು ಎಡಿಟ್ ಮಾಡಿ ಅಸಂಖ್ಯಾತ ದೈವ ಭಕ್ತರ ಧಾರ್ಮಿಕ ನಂಬಿಕೆಗಳಿಗೆ ನೋವು ಉಂಟು ಮಾಡಲಾಗುತ್ತಿದೆ. ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು "ಯುವ ತುಳುನಾಡ್ ಕುಡ್ಲ" ಸಂಘಟನೆ ಪೊಲೀಸ್ ದೂರು ದಾಖಲಿಸಿದೆ.
ದೈವಗಳ ಪೋಟೊಗಳನ್ನು ಅಸಭ್ಯವಾಗಿ ಎಡಿಟ್ ಮಾಡುವುದು, ದೈವಗಳ ಬಗ್ಗೆ ತಮ್ಮದೇ ಕಲ್ಪನೆಯಲ್ಲಿ ಚಿತ್ರ ಬಿಡಿಸುವುದು, ದೈವ ನರ್ತನಗಳ ವೀಡಿಯೊಗಳಿಗೆ ಸಿನಿಮಾ ಹಾಡುಗಳು, DJ ಹಾಡು ಹಾಕಿ ಎಡಿಟ್ ಮಾಡುವುದು, ಅಗತ್ಯವಿಲ್ಲದ ಭಂಗಿಯಲ್ಲಿ ದೈವದ ಫೋಟೊ ತೆಗೆಯುವುದು, ಸಂದಿ, ಪಾಡ್ದನ, ಬೀರಗಳಲ್ಲಿ ಇಲ್ಲದ ಕಥೆ ಕಟ್ಟಿ ಅದಕ್ಕೆ ತಕ್ಕುದಾದ ವೀಡಿಯೊಗಳನ್ನು ಮಾಡಿ ನಂಬಿಕೆಗೆ ನೋವುಂಟು ಮಾಡುವ ಕೃತ್ಯಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳ ಪೇಜ್, ಗ್ರೂಪ್, ಖಾತೆಗಳ ವಿರುದ್ಧ ದೂರು ಸಲ್ಲಿಸಲಾಗಿದೆ.
ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಯುವ "ತುಳುನಾಡ್ ® ಕುಡ್ಲ" ಸಂಘಟನೆ ಮಂಗಳೂರು ನಗರ ಪೊಲೀಸ್ ಆಯುಕ್ತರು, ಜಿಲ್ಲಾ ಸೈಬರ್ ಕ್ರೈಮ್ ಸ್ಟೇಷನ್ ಹಾಗೂ ಮಂಗಳೂರು ನಗರದ ಪೊಲೀಸ್ ಠಾಣೆಗಳಲ್ಲಿ ಈಗಾಗಲೇ ದೂರು ಸಲ್ಲಿಸಿದೆ.
ಈ ಸಂದರ್ಭ ಸಂಘಟನೆಯ ಅಧ್ಯಕ್ಷ ರೋಶನ್ ರೆನಾಲ್ಡ್, ಗೌರವಾಧ್ಯಕ್ಷ ಯಾದವ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ರಿತೇಶ್ ಡಿಸೋಜ, ಖಜಾಂಚಿ ರಕ್ಷಣ್ ಪೂಜಾರಿ, ಸಂಚಾಲಕ ಸನತ್, ಸದಸ್ಯರಾದ ಸಂತೋಷ್ ಶೆಟ್ಟಿ, ಸುಜಿತ್ ರಾಜ್ ಉಜಿರೆ ಉಪಸ್ಥಿತರಿದ್ದರು.
The police commissioner of Mangalore N Shashi Kumar has warned of strict action against those who Morph Photos of God and hurt religious beliefs.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm