ಬ್ರೇಕಿಂಗ್ ನ್ಯೂಸ್
27-07-26 09:48 pm HK News Staffer ಕರಾವಳಿ
ಮಂಗಳೂರು, ಜುಲೈ 27: ನೀಟ್ ಪರೀಕ್ಷೆ ಪ್ರಶ್ನೆಪತ್ರಿಕೆ ಲೀಕ್ ಆಗಿದ್ದನ್ನೇ ನೆಪವಾಗಿಸಿ ದೇಶಾದ್ಯಂತ ಹೋರಾಟ ಕೈಗೆತ್ತಿಕೊಂಡು ಯಶ ಸಾಧಿಸಿದ ಕಾಕ್ರೋಚ್ ಜನತಾ ಪಾರ್ಟಿ ಸದ್ಯಕ್ಕೆ ಜಾಗತಿಕ ಮಟ್ಟದಲ್ಲಿ ಟ್ರೆಂಡಿಂಗ್ ನಲ್ಲಿದೆ. ಇದರ ಬೆನ್ನಲ್ಲೇ ಇದೀಗ ಇ20 ಪೆಟ್ರೋಲ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಲಾಗಿದ್ದು, ಇ20 ಜನತಾ ಪಾರ್ಟಿ ಹೆಸರಲ್ಲಿ ಹೊಸತಾಗಿ ಪೇಜ್ ಸೃಷ್ಟಿಸಲಾಗಿದೆ.
ಇನ್ ಸ್ಟಾ ಗ್ರಾಮ್ ಮತ್ತು ಫೇಸ್ ಬುಕ್ ನಲ್ಲಿ ಇ20 ಜನತಾ ಪಾರ್ಟಿ ಕೇರಳ, ಮತ್ತಿತರ ಹೆಸರುಗಳಲ್ಲಿ ಬೇರೆ ಬೇರೆ ರೀತಿಯ ಪೇಜ್ ಸೃಷ್ಟಿಸಲಾಗಿದ್ದು, ಭಾರೀ ಸಂಖ್ಯೆಯಲ್ಲಿ ಜನರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರನ್ನು ಅಣಕಿಸಿ ಪೋಸ್ಟ್ ಕ್ರಿಯೇಟ್ ಮಾಡಲಾಗಿದ್ದು, ಕೇಂದ್ರ ಸರಕಾರ ಜಾರಿಗೆ ತರುತ್ತಿರುವ ಇಥೆನಾಲ್ ಮಿಶ್ರಿತ ಪೆಟ್ರೋಲ್ ಚಾಲ್ತಿಗೆ ತರುವುದನ್ನು ವಿರೋಧಿಸಿ ಅಭಿಯಾನ ಆರಂಭಿಸಲಾಗಿದೆ.
ಎಲ್ಲ ವಾಹನ ಮಾಲೀಕರು ಒಂದಾಗಿ ಈ ಅಭಿಯಾನ ಎತ್ತಿಕೊಂಡರೆ ಹೇಗಿರಬಹುದು, ನಾವೆಲ್ಲ ಒಂದಾಗೋಣ, ದೇಶದಲ್ಲಿ ಹೊಸ ಬದಲಾವಣೆ ತರೋಣ, ಭಾರತ ಹೊಸತನ್ನು ಬಯಸುತ್ತಿದೆ, ನಮ್ಮ ಧ್ವನಿ ಒಂದೇ- ನಮ್ಮ ಬೇಡಿಕೆ ಒಂದೇ, ನಮ್ಮ ಇಂಧನ-ನಮ್ಮದೇ ಆಯ್ಕೆ, ಬಾಯ್ಕಾಟ್ ಇ20 ಪೆಟ್ರೋಲ್ ಎಂಬಿತ್ಯಾದಿ ಹೆಸರಲ್ಲಿ ಪೋಸ್ಟರ್ ಗಳನ್ನು ಮಾಡಲಾಗಿದ್ದು ಯುವ ಜನರನ್ನು ಒಂದುಗೂಡಿಸಲು ಪ್ರೇರಣೆ ನೀಡಲಾಗುತ್ತಿದೆ. ಎಲ್ಲ ಪೋಸ್ಟರ್ ಗಳಲ್ಲೂ ಸಚಿವ ನಿತಿನ್ ಗಡ್ಕರಿಯನ್ನು ವಿಡಂಬನಾತ್ಮಕವಾಗಿ ಚಿತ್ರಿಸಿ ಟೀಕಿಸಲಾಗಿದೆ. ಎರಡು ದಿನದಲ್ಲೇ ಈ ಪೇಜುಗಳಿಗೆ ಎರಡು ಲಕ್ಷಕ್ಕೂ ಹೆಚ್ಚು ಜನರು ಪ್ರತಿಕ್ರಿಯಿಸಿದ್ದಾರೆ.
ಇಥೆನಾಲ್ ಮಿಶ್ರಿತ ಇ20 ಪೆಟ್ರೋಲ್ ತಾಂತ್ರಿಕವಾಗಿ ವಾಹನ ಬಳಕೆಗೆ ಸೂಕ್ತ ಮತ್ತು ಪರಿಸರ ಸ್ನೇಹಿ ಎಂಬುದಾಗಿ ಕೇಂದ್ರ ಸರಕಾರ ಹೇಳುತ್ತಿದ್ದರೆ, ಕೆಲವರು ಈ ಪೆಟ್ರೋಲ್ ಬಳಕೆಯಿಂದ ಮೈಲೇಜ್ ಕಡಿಮೆ ಮತ್ತು ವಾಹನದ ಇಂಜಿನ್ ಗಳಿಗೆ ತೊಂದರೆ ಮಾಡುತ್ತದೆ ಎಂಬ ಟೀಕೆಯೂ ಕೇಳಿಬಂದಿದೆ. ಇಥೆನಾಲ್ ಮಿಶ್ರಿತ ಪೆಟ್ರೋಲಿನಿಂದ ಭಾರತ ಇಂಧನ ಸ್ವಾವಲಂಬನೆ ಗಳಿಸಬಹುದು ಎನ್ನುವ ಮಾತು ಸಚಿವ ಗಡ್ಕರಿಯವರದ್ದು. ಇದಕ್ಕೆ ಅಪಸ್ವರ ಇದ್ದರೂ ಉತ್ತರ ಭಾರತದ ಪ್ರಮುಖ ನಗರಗಳಲ್ಲಿ ಇ20 ಪೆಟ್ರೋಲ್ ಬಳಕೆಯನ್ನು ಜಾರಿಗೆ ತರಲಾಗಿದೆ. ಇದಕ್ಕೆದುರಾಗಿ ಈಗ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದು, ಇಥೆನಾಲ್ ಪೆಟ್ರೋಲ್ ಬಳಕೆ ಬೇಡ ಎನ್ನುವಂತೆ ಆಗ್ರಹ ಮುಂದಿಡಲಾಗಿದೆ. ಅಲ್ಲದೆ, ಇದಕ್ಕಾಗಿ ಸಚಿವ ನಿತಿನ್ ಗಡ್ಕರಿ ತನ್ನ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂಬ ಆಗ್ರಹ ಮಾಡಲಾಗಿದೆ.






ರಿಸರ್ವೇಶನ್ ಹಟಾವೋ ಚಳವಳಿ
ಮತ್ತೊಂದೆಡೆ ಮೀಸಲಾತಿ ವಿರುದ್ಧವೂ ಅಭಿಯಾನ ರೂಪದಲ್ಲಿ ಜಾಲತಾಣಗಳಲ್ಲಿ ಪೋಸ್ಟರ್ ಕಾಣಿಸಿಕೊಂಡಿದೆ. ದೇಶದ ಅಭಿವೃದ್ಧಿಗಾಗಿ ಕೈಜೋಡಿಸಿ, ಮೀಸಲಾತಿ ಹೊಡೆದೋಡಿಸಿ ಎನ್ನುವ ಅರ್ಥ ಬರುವಂತೆ ಹಿಂದಿ ಭಾಷೆಯಲ್ಲಿ ಪೋಸ್ಟ್ ಗಳನ್ನು ಹಾಕಲಾಗಿದೆ. ಇದಕ್ಕಾಗಿ ರಿಸರ್ವೇಶನ್ ಹಟಾವೋ ಎನ್ನುವ ಹೆಸರಲ್ಲಿ ಇನ್ ಸ್ಟಾ ಗ್ರಾಮಿನಲ್ಲಿ ಪೇಜ್ ಗಳನ್ನು ಸೃಷ್ಟಿಸಲಾಗಿದೆ. ಇದು ಉತ್ತರ ಭಾರತದ ಕಡೆಯಿಂದ ಬರುತ್ತಿದ್ದರೆ, ಇ20 ಪೆಟ್ರೋಲ್ ವಿರುದ್ಧ ದಕ್ಷಿಣದ ಕೇರಳ ಕಡೆಯಿಂದ ಅಭಿಯಾನ ಆರಂಭಗೊಂಡಿದೆ. ಜೆನ್ ಝೀ ಯುವಜನರು ಪ್ರಶ್ನೆಪತ್ರಿಕೆ ಲೀಕ್ ಆಗಿರುವುದನ್ನು ವಿರೋಧಿಸಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜಿನಾಮೆ ಪಡೆಯುವಂತೆ ಮಾಡಿದ್ದು ಹೊಸ ರೂಪದ ಚಳವಳಿಗಳಿಗೆ ಪ್ರೇರಣೆ ನೀಡಿದಂತಾಗಿದೆ.
19-08-26 09:55 pm
HK News Staffer
ಬೆಂಗಳೂರಿನಲ್ಲಿ ಎಚ್1ಎನ್1 ಸೋಂಕು ಹೆಚ್ಚಳ ; ಖಾಸಗಿ ಶ...
19-08-26 09:52 pm
ಹನೂರು ಎನ್ಕೌಂಟರ್; ತಮಿಳುನಾಡು ಕ್ಯಾತೆ ಬೆನ್ನಲ್ಲೇ...
19-08-26 05:38 pm
ವಂದೇ ಮಾತರಂ ವಿವಾದ ; ಜೈಲಿಗೆ ಹಾಕಿದ್ರೂ ನಾನು ವಂದೇ...
19-08-26 02:15 pm
ಆಹಾರ ಸುರಕ್ಷತೆಗೆ ಖಾದರ್ ಹೊಸ ಪ್ಲ್ಯಾನ್; ಹೋಟೆಲ್ ಆ...
17-08-26 02:26 pm
20-08-26 10:55 am
HK News Staffer
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
'ಜನ ಗಣ ಮನ' ಗೀತೆಯನ್ನು ಬ್ರಿಟನ್ ರಾಣಿಯ ಹೊಗಳಲು ಬರೆ...
19-08-26 12:10 pm
ಬಿಜೆಪಿಯ ಯುವ ಮೋರ್ಚಾಗೆ ಹೊಸ ಸಾರಥಿ ; ತೇಜಸ್ವಿ ಸೂರ್...
18-08-26 02:42 pm
19-08-26 08:40 pm
HK News Staffer
ಜೈಲಿನ ಜಾಮರ್ ಸಮಸ್ಯೆ ಇತ್ಯರ್ಥಕ್ಕೆ ಕಾಲಮಿತಿ ನಿಗದಿಪ...
19-08-26 04:19 pm
ಕರಾವಳಿಯಲ್ಲಿ ನಾಗರ ಪಂಚಮಿ ಸಂಭ್ರಮ ; ನಾಗಬನ, ನಾಗ ಸ...
17-08-26 05:07 pm
ನಾಗರಪಂಚಮಿ ; ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಸ...
16-08-26 09:33 pm
After Rotten Chicken Scare at KFC, McDonald’s...
16-08-26 08:29 pm
20-08-26 01:58 pm
HK News Staffer
4.91 ಕೋಟಿ ರೂ. ಮೌಲ್ಯದ ನಕಲಿ ಔಷಧಿ ದಂಧೆ ಬಯಲು; ಆಸ...
19-08-26 07:25 pm
ಆಸ್ತಿ ವಿವಾದ ; ಪ್ರಿಯಕರನ ಜೊತೆ ಸೇರಿ ಅಪ್ಪನನ್ನ ಕಲಿ...
18-08-26 10:06 pm
ಮೊಬೈಲ್ ಗೀಳು ಬೇಡ ಎಂದಿದ್ದ ಅಜ್ಜನನ್ನೇ ಕೊಲ್ಲಿಸಿದ 1...
18-08-26 06:02 pm
ಚಿಕ್ಕಬಾಣಾವರ ತಂದೆ, ಮಗು ಸಾವಿಗೆ ರೋಚಕ ಟ್ವಿಸ್ಟ್ ;...
18-08-26 03:00 pm