ಬ್ರೇಕಿಂಗ್ ನ್ಯೂಸ್
19-08-26 01:06 pm HK News Staffer ದೇಶ - ವಿದೇಶ
ನವದೆಹಲಿ, ಆ.19: ಲಷ್ಕರ್-ಇ-ತೊಯ್ಬಾ ಸಂಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾಶ್ಮೀರಕ್ಕೆ ಕಳುಹಿಸಿದ್ದ ಎಂದು ಪಾಕಿಸ್ತಾನಿ ಧರ್ಮಗುರು ಮೌಲಾನಾ ನಾಸಿರ್ ಮದನಿ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಯೀದ್ ಪರವಾಗಿ ಮಾತನಾಡುವ ವೇಳೆ ಮದನಿ ಈ ಹೇಳಿಕೆ ನೀಡಿದ್ದು, ಕಾಶ್ಮೀರದತ್ತ ಪಾಕಿಸ್ತಾನದಿಂದ ಉಗ್ರರ ರವಾನೆ ಕುರಿತು ಭಾರತ ಹಲವು ವರ್ಷಗಳಿಂದ ಮಾಡುತ್ತಿರುವ ಆರೋಪಕ್ಕೆ ಮತ್ತೊಂದು ಆಧಾರ ಸಿಕ್ಕಿದೆ.
ಬಹವಾಲ್ಪುರದಲ್ಲಿ ಪಾಕಿಸ್ತಾನ್ ಮಾರ್ಕಜಿ ಮುಸ್ಲಿಂ ಲೀಗ್ (PMML) ಆಯೋಜಿಸಿದ್ದ ರ್ಯಾಲಿಯಲ್ಲಿ ಮಾತನಾಡಿದ ಮೌಲಾನಾ ನಾಸಿರ್ ಮದನಿ ಈ ಹೇಳಿಕೆ ನೀಡಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಭಾಷಣದ ವಿಡಿಯೋದಲ್ಲಿ, ಪ್ರಸ್ತುತ ಪಾಕಿಸ್ತಾನದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಹಫೀಜ್ ಸಯೀದ್ ಕೃತ್ಯವನ್ನು ಮದನಿ ಸಮರ್ಥಿಸಿಕೊಂಡಿದ್ದು ಸಯೀದ್ ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ ಎಂದು ಹೇಳಿರುವುದು ದಾಖಲಾಗಿದೆ.
“ಹಫೀಜ್ ಸಯೀದ್ ದೇಶಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿದ್ದಾರೆ. ಇಂದು ಮಾತ್ರ ಜೈಲಿನಲ್ಲಿದ್ದಾರೆ” ಎಂದು ಮದನಿ ಹೇಳಿದ್ದು ಬಳಿಕ “10,000 ಯುವಕರನ್ನು ಕಾಶ್ಮೀರಕ್ಕಾಗಿ ಹಾಗೂ ಪ್ರಾಣ ತ್ಯಾಗಕ್ಕಾಗಿ ಕಳುಹಿಸಿದ್ದರು” ಎಂದು ಹೇಳಿರುವುದು ದಾಖಲಾಗಿದೆ. ಈ ಯುವಕರನ್ನು ‘ಕಮಾಂಡೋಗಳು’ ಎಂದೂ ಮದನಿ ಉಲ್ಲೇಖಿಸಿದ್ದು, ಸಯೀದ್ ಜೈಲಿನಲ್ಲಿರುವಾಗ ಅವರು ಏಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಅವರ ಹೇಳಿಕೆ ಹಫೀಜ್ ಸಯೀದ್ ಹಾಗೂ ಕಾಶ್ಮೀರದತ್ತ ಉಗ್ರರ ಸಾಗಣೆಯ ನಡುವಿನ ನೇರ ಸಂಪರ್ಕವನ್ನು ಸೂಚಿಸುವಂತಿದೆ.
ಹಫೀಜ್ ಸಯೀದ್ ಹಾಗೂ ಲಷ್ಕರ್-ಎ-ತೊಯ್ಬಾ ವಿರುದ್ಧ ಭಾರತ ಹಲವು ವರ್ಷಗಳಿಂದ ಗಂಭೀರ ಆರೋಪಗಳನ್ನು ಮಾಡುತ್ತ ಬಂದಿದೆ. ಭಾರತದಲ್ಲಿ ದಾಳಿಗಳನ್ನು ನಡೆಸಲು ಉಗ್ರರನ್ನು ನೇಮಕ ಮಾಡುವುದು, ತರಬೇತಿ ನೀಡುವುದು ಹಾಗೂ ಅವರಿಗೆ ನೆರವು ಒದಗಿಸುವಲ್ಲಿ ಸಯೀದ್ ಮತ್ತು ಲಷ್ಕರ್-ಎ-ತೊಯ್ಬಾ ಪಾತ್ರವಿದೆ ಎಂದು ಭಾರತ ಆರೋಪಿಸಿತ್ತು. ಹಫೀಜ್ ಸಯೀದ್ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯನ್ನು ಸ್ಥಾಪಿಸಿದ್ದು, ಬಳಿಕ ಜಮಾತ್-ಉದ್-ದವಾ (JuD) ಸಂಘಟನೆಯನ್ನೂ ಸ್ಥಾಪಿಸಿದ್ದಾನೆ. ವಿಶ್ವಸಂಸ್ಥೆ ಹಾಗೂ ಅಮೆರಿಕ ಸಯೀದ್ನನ್ನು ಭಯೋತ್ಪಾದಕ ಎಂದು ಗುರುತಿಸಿದ್ದಲ್ಲದೆ, ಆತನ ಬಗ್ಗೆ ಮಾಹಿತಿ ನೀಡುವವರಿಗೆ ಅಮೆರಿಕ 1 ಕೋಟಿ ಡಾಲರ್ ಬಹುಮಾನ ಘೋಷಿಸಿದೆ.
🚨LeT’s Naseer Madani Returns to Stage After Heart Attack, Claims Hafiz Saeed Sent 10,000 Terrorists to Kashmir
— Kashmir Conflict Stories (@ConflictStories) August 17, 2026
This is the same Maulvi Naseer Madani who suffered a severe heart attack a few days ago but, unfortunately, somehow survived.
Yet, on 14 August, he was seen shouting… https://t.co/JIR4cVJeBv pic.twitter.com/sCp6sZiBuY
09-09-26 10:52 am
HK News Staffer
ಕಳಸದಲ್ಲಿ ರಸ್ತೆ ಅವ್ಯವಸ್ಥೆಯ ಎಫೆಕ್ಟ್: ‘ಹುಡುಗ-ಹು...
08-09-26 02:24 pm
ಐಪಿಎಸ್ ಅಧಿಕಾರಿಗಳ ಭರ್ಜರಿ ವರ್ಗಾವಣೆ: ಮಂಗಳೂರು ಡಿಸ...
07-09-26 01:33 pm
ಜೆನ್ ಜೀಗಳಿಗೆ ಕಾಂಗ್ರೆಸ್ ಸಿದ್ಧಾಂತ, ಜಾತ್ಯತೀತ ಭಾವ...
05-09-26 04:53 pm
400 ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ ; ಪ್ರತಿ ಹ...
02-09-26 05:06 pm
05-09-26 11:55 am
HK News Staffer
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
10-09-26 10:27 am
HK News Staffer
ತುಳು ಮಂಗಳೂರಿಗರ ‘ರಾಷ್ಟ್ರಭಾಷೆ’ ; ಕರಾವಳಿಯ ಮೊದಲ ಸ...
09-09-26 09:04 pm
ಬಾರ್ಕೂರಿನಲ್ಲಿ ಅಪರೂಪದ ಸಿಡಿತಲೆ ವೀರಗಲ್ಲು ಪತ್ತೆ ;...
09-09-26 03:29 pm
ಮಂಗಳೂರಿನಲ್ಲಿ ಸಂಪುಟ ಸಭೆ ; ಪುತ್ತೂರಿನಲ್ಲಿ ಆಯುರ್ವ...
09-09-26 02:03 pm
ಮಂಗಳೂರು ರೈಲ್ವೇ ಆಡಳಿತಾತ್ಮಕ ವರ್ಗಾವಣೆ ಪ್ರಕ್ರಿಯೆ...
08-09-26 05:20 pm
09-09-26 08:16 pm
HK News Staffer
ಬೆಳ್ಳಾರೆ ಸರ್ಕಾರಿ ಬಾಲಕಿಯರ ಹಾಸ್ಟೆಲ್ನಲ್ಲಿ ಬಟ್ಟೆ...
09-09-26 07:45 pm
ಮನದಲ್ಲೂ ಹುಲಿ, ಡಿಪಿಯಲ್ಲೂ ಹುಲಿ ; ಕೊನೆಗೆ ಅದೇ ಹುಲ...
09-09-26 07:44 pm
ಹೆಂಡತಿ ಅಡುಗೆ ಮಾಡಲ್ಲ, ಅತಿಯಾಗಿ ಮೊಬೈಲ್ ಫೋನ್ ಬಳಸು...
09-09-26 06:20 pm
8 ತಿಂಗಳ ಬಳಿಕ ನಾಪತ್ತೆಯಾಗಿದ್ದ ಬೆಂಗಳೂರು ಪಿಯು ವಿದ...
09-09-26 12:16 pm