ಬ್ರೇಕಿಂಗ್ ನ್ಯೂಸ್
08-01-21 10:45 pm Mangaluru Correspondant ಕರಾವಳಿ
ಕೊಣಾಜೆ, ಜ.8: ಯುವ ಕಾಂಗ್ರೆಸ್ ಗಾದಿಯ ರಾಜ್ಯಾಧ್ಯಕ್ಷ ಚುನಾವಣೆಗೆ ಸ್ಪರ್ಧಿಸುತ್ತಿರುವ ಬೆಂಗಳೂರಿನ ಶಾಸಕ ಎನ್.ಎ.ಹ್ಯಾರಿಸ್ ಪುತ್ರ ಮಹಮ್ಮದ್ ನಲಪ್ಪಾಡ್ ಪರ ಪ್ರಚಾರಕ್ಕೆ ಬಂದ ಬೆಂಗಳೂರಿನ ಬೆಂಬಲಿಗರು ಮಕ್ಕಳನ್ನು ಅಪಹರಿಸಿದ್ದಾರೆಂಬ ವದಂತಿ ಕೇಳಿಬಂದು ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಸಂಗ ನಡೆದಿದೆ.
ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಹುದ್ದೆಗೆ ಮಹಮ್ಮದ್ ನಲಪ್ಪಾಡ್ ಸ್ಪರ್ಧಿಸುತ್ತಿದ್ದು, ಇದರ ಹಿನ್ನಲೆಯಲ್ಲಿ ಮುಡಿಪು ಭಾಗಕ್ಕೆ ಮಹಮ್ಮದ್ ಪರವಾಗಿ ಚುನಾವಣಾ ಪ್ರಚಾರಕ್ಕೆ ಬೆಂಗಳೂರಿನ ಯುವ ಕಾಂಗ್ರೆಸ್ ಕಾರ್ಯಕರ್ತರು ಆಗಮಿಸಿದ್ದರು. ಈ ವೇಳೆ ಮಹಮ್ಮದ್ ಹ್ಯಾರಿಸ್ ಬೆಂಬಲಿಗರು ದೇರಳಕಟ್ಟೆ ಜಂಕ್ಷನ್ ನಲ್ಲಿ ಹಾಟ್ ಚಿಪ್ಸ್ ಸೆಂಟರಲ್ಲಿ ಉಪಹಾರ ಮುಗಿಸಿ ಹೊರ ಬರುತ್ತಿದ್ದ ವೇಳೆ ಹೊರಗಿದ್ದ ಇಬ್ಬರು ಮಕ್ಕಳಿಗೆ ಚಾಕಲೇಟು ನೀಡಲು ಹೋಗಿದ್ದರು. ಈ ಸಂದರ್ಭದಲ್ಲಿ ಒಂದು ಮಗು ಜೋರಾಗಿ ಕಿರುಚಿದ್ದು ಸ್ಥಳೀಯರು ವಿಚಾರಿಸಲು ಬಂದಾಗ ಬೆಂಗಳೂರಿನ ಯುವ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಎರಡು ಕಾರಲ್ಲಿ ಬೆಂಗಳೂರಿಗೆ ತಡಬಡಾಯಿಸಿ ಅಲ್ಲಿಂದ ಹೊರಟಿದ್ದರು.
ಇದರಿಂದ ಸಂಶಯಗೊಂಡು ಅವರನ್ನು ಸ್ಥಳೀಯರು ಬೆನ್ನತ್ತಿದ್ದು ನಾಟೆಕಲ್ ನಲ್ಲಿ ಅಡ್ಡ ಹಾಕಿ ಕೊಣಾಜೆ ಠಾಣೆಗೆ ಒಪ್ಪಿಸಿದ್ದಾರೆ. ಪೊಲೀಸರು ವಿಚಾರಣೆ ನಡೆಸಿದಾಗ ಸತ್ಯಾಂಶ ಬಯಲಾಗಿದ್ದು, ಮಕ್ಕಳ ಅಪಹರಣ ವಿಚಾರ ಸುಳ್ಳಾಗಿದೆ. ಕೇವಲ ವದಂತಿ ಕೇಳಿ ಸ್ಥಳೀಯರು ಉದ್ರಿಕ್ತರಾಗಿದ್ದರು ಅನ್ನೋದು ತಿಳಿದುಬಂದಿದೆ.
ಮಹಮ್ಮದ್ ನಲಪ್ಪಾಡ್ ಬೆಂಬಲಿಗರ ಕಾರಿನ ಹಿಂಭಾಗ ದಲ್ಲಿ ಮಹಮ್ಮದ್ ಅವರ ಭಾವಚಿತ್ರದ ಸ್ಟಿಕ್ಕರ್ ಅಂಟಿಸಿದ್ದರೆನ್ನಲಾಗಿದೆ. ಘಟನೆಯ ಲಾಭವೆತ್ತಲೆಂದೇ ಕೊಣಾಜೆ ಠಾಣೆಯಲ್ಲಿ ಕೆಲ ಕಾಲ ಜನಜಂಗುಳಿ ಜಮಾವಣೆಯಾಗಿದ್ದು ಪೊಲೀಸರು ಜನರನ್ನು ಚದುರಿಸಿದ್ದಾರೆ.
Supporters of Mohammed Haris Nalapad who is contesting elections for the post of Youth Congress state president are facing allegations of kidnapping a child in Konaje, Mangalore.
24-08-26 03:16 pm
HK News Staffer
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
ದೇಶದ ರಾಜಕೀಯದಲ್ಲಿ ಬಹುದೊಡ್ಡ ಬಿರುಗಾಳಿ; ವಿರುದ್ಧ ಧ...
21-08-26 03:42 pm
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
24-08-26 06:25 pm
HK News Staffer
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
ಅಡಿಕೆ ಎಲೆ ಚುಕ್ಕಿ ರೋಗ ನಿಯಂತ್ರಣಕ್ಕೆ ಸಿಪಿಸಿಆರ್ ಐ...
24-08-26 04:11 pm
ಎಂಆರ್ ಪಿಎಲ್ ನಲ್ಲಿ 26 ಇಂಜಿನಿಯರಿಂಗ್ ಹುದ್ದೆಗಳ ಭರ...
24-08-26 01:13 pm
ಹಲ್ಲೆಗೀಡಾದವರ ಮೇಲೆ ಕೊಲೆಯತ್ನ ಕೇಸು ಹಾಕಿದ್ದಾರೆ, ಹ...
23-08-26 06:17 pm
24-08-26 09:06 pm
HK News Staffer
ಸಾವಿರಾರು ಕೋಟಿ ವಂಚಕ, ಶಿವಂ ಅಸೋಸಿಯೇಟ್ಸ್ ಮಾಲೀಕ ಶಿ...
24-08-26 07:04 pm
ಚಿಕ್ಕಮಗಳೂರಿನಲ್ಲಿ ಈದ್ ಮೆರವಣಿಗೆ ಸಿದ್ಧತೆ ; ಬೃಹತ್...
24-08-26 02:35 pm
ಕುಂಬಳೆಯ ಮುಸ್ಲಿಂ ವ್ಯಾಪಾರಿಗೆ ಹನಿಟ್ರ್ಯಾಪ್ ; ವಿಡಿ...
24-08-26 02:25 pm
ನದಿಗೆ ಬಿದ್ದ ಫುಟ್ಬಾಲ್ ಹೆಕ್ಕಲು ಹೋಗಿ ಜೀವ ಕಳಕೊಂಡ...
24-08-26 01:03 pm