ಬ್ರೇಕಿಂಗ್ ನ್ಯೂಸ್
27-08-26 10:59 pm HK News Desk ಕರಾವಳಿ
ಮಂಗಳೂರು, ಆ.27: ನೀರುಮಾರ್ಗದ ಜಿ.ಆರ್ ಆಸ್ಪತ್ರೆಯಲ್ಲಿ ನರ್ಸ್ ಆಗಿರುವ ಇಬ್ಬರು ಯುವತಿಯರಿಗೆ ಮುಸ್ಲಿಂ ಯುವಕನೊಬ್ಬ ಅವಾಚ್ಯವಾಗಿ ಬೈದು ಕಿರುಕುಳ ನೀಡಿದ ಘಟನೆ ನಡೆದಿದ್ದು, ಈ ಬಗ್ಗೆ ಯುವತಿಯರು ಪ್ರತ್ಯೇಕ ಎರಡು ಠಾಣೆಯಲ್ಲಿ ದೂರು ನೀಡಿದ್ದಾರೆ. ಸಂತ್ರಸ್ತ ಯುವತಿ ನೀಡಿದ ದೂರಿನಂತೆ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಆಗಸ್ಟ್ 12ರಂದು ಘಟನೆ ನಡೆದಿದ್ದು, ಕೇರಳದ ಯುವತಿ ತನ್ನ ಜೊತೆಗೇ ನರ್ಸ್ ಆಗಿರುವ ಪುತ್ತೂರು ಮೂಲದ ಯುವತಿಯ ಮನೆಯಲ್ಲಿದ್ದಾಗ ಮೂಡಿಗೆರೆ ಮೂಲದ ನೌಶಾದ್ ಎಂಬ ಯುವಕ ಬಂದಿದ್ದು ಅಲ್ಲಿ ಗಲಾಟೆ ಎಬ್ಬಿಸಿದ್ದ. ಅಲ್ಲದೆ, ಪುತ್ತೂರಿನ ಯುವತಿಗೆ ಕರೆ ಮಾಡಿ ಅವಾಚ್ಯ ಪದಗಳಿಂದ ನಿಂದಿಸಿದ್ದ. ತನ್ನ ಗೆಳತಿಯೂ ಆಗಿರುವ ಕೇರಳದ ಯುವತಿಯನ್ನು ಕೊಲ್ಲುವುದಾಗಿಯೂ ನೌಶಾದ್ ಬೆದರಿಸಿದ್ದ. ಈ ಬಗ್ಗೆ ಕೇರಳದ ಯುವತಿ ಪಾಂಡೇಶ್ವರ ಮಹಿಳಾ ಠಾಣೆಗೆ ದೂರು ನೀಡಿದ್ದಳು. ತನಗೆ ಕರೆ ಮಾಡಿ ನಿಂದಿಸಿದ ಬಗ್ಗೆ ಪುತ್ತೂರಿನ ಯುವತಿ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಳು.

ಆದರೆ ಫೋನಲ್ಲಿ ಸಂಪರ್ಕಿಸಿ ಬೈದಿರುವುದಕ್ಕೆ ರೆಕಾರ್ಡ್ ಇದ್ದರೂ, ಅದು ದೊಡ್ಡ ಅಪರಾಧ ಅಲ್ಲ ಎನ್ನುವ ರೀತಿ ಪರಿಗಣಿಸಿರುವ ಪೊಲೀಸರು ಆತನನ್ನು ಬಂಧಿಸಿರಲಿಲ್ಲ. ನೋಟೀಸ್ ಕೊಟ್ಟು ಠಾಣೆಗೆ ಬರುವಂತೆ ತಿಳಿಸಿದ್ದರೂ ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಂಡಿದ್ದ. ಈ ನಡುವೆ, ವಿಶ್ವ ಹಿಂದು ಪರಿಷತ್- ಬಜರಂಗದಳ ನಾಯಕರು ಆರೋಪಿ ನೌಶಾದ್ ಬಂಧನಕ್ಕೆ ಒತ್ತಾಯಿಸಿದ್ದರು. ಇದಲ್ಲದೆ, ಸುದ್ದಿಗೋಷ್ಟಿ ನಡೆಸಿದ ಸಂತ್ರಸ್ತ ಪುತ್ತೂರಿನ ಯುವತಿ ಮತ್ತು ಬಜರಂಗದಳ ಪ್ರಮುಖ ಪ್ರದೀಪ್ ಸರಿಪಲ್ಲ ಇನ್ನಿತರರು ಆರೋಪಿ ನೌಶಾದ್ ಕ್ರಿಮಿನಲ್ ಹಿನ್ನೆಲೆಯವನಾಗಿದ್ದು, ಪೊಲೀಸರು ಮೃದು ಧೋರಣೆ ತೋರುತ್ತಿದ್ದಾರೆ. ಅಲ್ಲದೆ, ಆಸ್ಪತ್ರೆ ಮ್ಯಾನೇಜರ್ ಜಿಶಾನ್ ಎನ್ನುವಾತ ಇಬ್ಬರು ಯುವತಿಯರನ್ನು ಅವಾಚ್ಯ ಪದಗಳಿಂದ ನಿಂದಿಸಿ, ನೌಶಾದ್ ವಿರುದ್ಧ ದೂರು ನೀಡಿದ್ದಕ್ಕೆ ಪ್ರತಿಯಾಗಿ ಬೆದರಿಕೆಯೊಡ್ಡಿ ಕೆಲಸಕ್ಕೆ ರಾಜಿನಾಮೆ ನೀಡುವಂತೆ ಮಾಡಿದ್ದಾನೆ. ಆಮೂಲಕ ಆರೋಪಿ ನೌಶಾದ್ ಪರ ವಹಿಸಿದ್ದು ಪ್ರಕರಣದಲ್ಲಿ ಆತನನ್ನೂ ಸೇರಿಸಿ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇದರ ಬೆನ್ನಲ್ಲೇ ಪಾಂಡೇಶ್ವರ ಪೊಲೀಸ್ ಠಾಣೆಗೆ ಆರೋಪಿ ನೌಶಾದ್ ಶರಣಾಗಿದ್ದು, ಆತನನ್ನು ಪೊಲೀಸರು ಮುಚ್ಚಳಿಕೆ ಬರೆಸಿ ಜಾಮೀನಿನಲ್ಲಿ ಕಳಿಸಿದ್ದಾರೆ. ಬಜರಂಗದಳ ಸಂಘಟನೆಯ ಬಗ್ಗೆ ಮತ್ತು ಹಿಂದು ಯುವತಿಯರ ಬಗ್ಗೆ ಅವಾಚ್ಯ ರೀತಿಯಲ್ಲಿ ನಿಂದಿಸಿರುವ ಆಡಿಯೋ ರೆಕಾರ್ಡ್ ಗಳಿದ್ದು, ಜಾಲತಾಣದಲ್ಲಿ ವೈರಲ್ ಆಗಿದ್ದರೂ ಕ್ರಿಮಿನಲ್ ಹಿನ್ನೆಲೆಯ ನೌಶಾದ್ ಬಂಧನ ಆಗಿರಲಿಲ್ಲ. ಇದೀಗ ಬಂಧನಕ್ಕಾಗಿ ಆಗ್ರಹಿಸಿದ ಬೆನ್ನಲ್ಲೇ ಶರಣಾಗುವಂತೆ ಮಾಡಿ ಮುಚ್ಚಳಿಕೆ ಬರೆಸಿ ಕಳುಹಿಸಿದ್ದಾರೆ ಎನ್ನುವ ಮಾಹಿತಿ ಇದೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಕಮಿಷನರ್ ಸುಧೀರ್ ರೆಡ್ಡಿ, ಬಿಎನ್ಎಸ್ ಸೆಕ್ಷನ್ 35 ಪ್ರಕಾರ ನಾವು ಆರೋಪಿಗೆ ನೋಟಿಸ್ ನೀಡಿದ್ದು, ಆತ ಹಾಜರಾಗದೇ ಇದ್ದರೆ ಅರೆಸ್ಟ್ ಮಾಡಬೇಕಾಗುತ್ತದೆ. ಕಾನೂನು ಪ್ರಕಾರ ನಾವು ಕ್ರಮ ಜರುಗಿಸುತ್ತೇವೆ. ಹಾಗಂತ, ಯಾರದೋ ಭಾವನೆಗೆ ತಕ್ಕಂತೆ, ಇನ್ಯಾರದ್ದೋ ಒತ್ತಡಕ್ಕಾಗಿ ಆರೋಪಿಯನ್ನು ಅರೆಸ್ಟ್ ಮಾಡುವುದಕ್ಕಾಗಲ್ಲ. ನಾವು ನಮ್ಮ ಕರ್ತವ್ಯ ಮಾಡುತ್ತೇವೆ. ಆದರೆ ಪ್ರತಿ ಬಾರಿಯೂ ಇನ್ನೊಂದು ಸಮುದಾಯದವರು ಅಪರಾಧ ಮಾಡಿದಾಗ ಎತ್ತಿ ತೋರಿಸುವುದು ಮಾತ್ರ ಇಲ್ಲಿ ಪುನರಾವರ್ತನೆಯಾಗುತ್ತೆ ಬಿಟ್ಟರೆ, ಎರಡೂ ಕಡೆಯವರು ತಮ್ಮವರ ತಪ್ಪಿನ ಬಗ್ಗೆ ಮೌನ ವಹಿಸುವುದು ನಡೆಯುತ್ತದೆ. ಕಾನೂನು ಪಾಲನೆಯಲ್ಲಿ ಇದು ಸರಿಯಾದ ಕ್ರಮ ಅಲ್ಲ ಎಂದು ಹೇಳಿದ್ದಾರೆ.
20-09-26 07:13 pm
HK News Staffer
ಗಣೇಶ ಶೋಭಾಯಾತ್ರೆಯಲ್ಲಿ ಪ್ರಚೋದನಕಾರಿ ಭಾಷಣ ; ಮಸೀದಿ...
20-09-26 03:32 pm
ವಂದೇ ಮಾತರಂ ಎರಡೇ ಚರಣ ; ತೀರ್ಥಹಳ್ಳಿಯಲ್ಲಿ ಸಿಎಂ ಡಿ...
19-09-26 05:44 pm
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
19-09-26 05:40 pm
HK News Staffer
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
19-09-26 09:54 pm
HK News Staffer
ಬೆಳ್ಳಂಬೆಳಗ್ಗೆ ಮೀನುಗಾರಿಕಾ ಬಂದರಿಗೆ ಸಿಎಂ ಡಿಕೆಶಿ...
19-09-26 10:11 am
ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ ; 32,611 ಕೋಟ...
18-09-26 07:30 pm
Puttur Medical College, Dakshina Kannada, Man...
18-09-26 06:08 pm
Tulu second official language: ತುಳುನಾಡಿನ ದಶಕಗ...
18-09-26 04:46 pm
20-09-26 04:39 pm
HK News Staffer
Bengluru, Crime: ಬೆಂಗಳೂರು ; ಮಧ್ಯರಾತ್ರಿ ಹೋಟೆಲ್...
20-09-26 02:16 pm
ಹುಬ್ಬಳ್ಳಿಯಲ್ಲಿ ಗ್ಯಾಸ್ ಸೋರಿಕೆ ದುರಂತ: ಸಿಲಿಂಡರ್...
20-09-26 01:01 pm
ಪತಿಯೊಂದಿಗೆ ಜಗಳದ ಸಿಟ್ಟಿನಲ್ಲಿ ಇಬ್ಬರು ಮಕ್ಕಳನ್ನು...
19-09-26 09:57 pm
ಕೋಕಾ ಜಾಮೀನು ಬೆನ್ನಲ್ಲೇ ರೌಡಿಶೀಟರ್ ಭರತ್ ಕುಮ್ಡೇಲು...
19-09-26 09:48 pm