ಬ್ರೇಕಿಂಗ್ ನ್ಯೂಸ್
10-01-21 03:22 pm Udupi Correspondent ಕರಾವಳಿ
ಕುಂದಾಪುರ, ಜ.10: ಚಿಕ್ಕಮಗಳೂರಿನ ತರೀಕೆರೆಯಲ್ಲಿ ನಿನ್ನೆ ನಡೆದ ಕಾರುಗಳ ಮುಖಾಮುಖಿ ಡಿಕ್ಕಿ ಅಪಘಾತದಲ್ಲಿ ಕುಂದಾಪುರ ಮೂಲದ ದಂಪತಿ ಸೇರಿ ಮೂವರು ಮೃತಪಟ್ಟಿದ್ದಾರೆ.
ಕಾರು ಚಲಾಯಿಸುತ್ತಿದ್ದ ಕುಂದಾಪುರ ತಾಲೂಕಿನ ಕೋಡಿ ನಿವಾಸಿ ನಾಗೇಂದ್ರ ಶೇರಿಗಾರ್(32), ಅವರ ಸಂಬಂಧಿಕ ಅನಿಲ್ ಶೇರಿಗಾರ್ (35) ಮತ್ತು ಅವರ ಪತ್ನಿ ಸುಜಾತಾ(29) ಮೃತರು.
ತರೀಕೆರೆಯ ರಂಗೇನಹಳ್ಳಿಯ ನೇರ ರಸ್ತೆಯಲ್ಲಿ ಅತಿ ವೇಗವಾಗಿ ಬರುತ್ತಿದ್ದ ಬಿಳಿ ಬಣ್ಣದ ವೆರ್ನಾ ಮತ್ತು ಎರ್ಟಿಕಾ ಕಾರು ಮುಖಾಮುಖಿ ಡಿಕ್ಕಿಯಾಗಿತ್ತು. ತೀವ್ರ ಗಾಯಗೊಂಡ ನಾಗೇಂದ್ರ, ಅನಿಲ್ ಮತ್ತು ಸುಜಾತಾ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈಗ ಮೂವರೂ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅನಿಲ್ ದಂಪತಿಯ ಒಂದೂವರೆ ವರ್ಷದ ಮಗು ಕನ್ನಿಕಾ ಯಾವುದೇ ಅಪಾಯಗಳಿಲ್ಲದೆ ಪಾರಾಗಿದೆ. ಇನ್ನೊಂದು ಕಾರಿನಲ್ಲಿದ್ದ ಕಿರಣ್ ತೀವ್ರ ಗಾಯಗೊಂಡಿದ್ದರೆ, ಅವರ ಜೊತೆಗಿದ್ದ ಅಶ್ವಥ್ ಮತ್ತು ನಾಗರಾಜ್ ಯಾವುದೇ ಅಪಾಯಗಳಿಲ್ಲದೆ ಪಾರಾಗಿದ್ದರು.

ಕುಂದಾಪುರ ಮೂಲದ ನಾಗೇಂದ್ರ ಬೆಂಗಳೂರಿನಲ್ಲಿ ಹೊಟೇಲ್ ಹೊಂದಿದ್ದು, ಕೋಡಿ ಜಟ್ಟಿಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆಯ ನಿಮಿತ್ತ ಊರಿಗೆ ಬಂದಿದ್ದರು. ಅನಿಲ್ ಕೂಡ ಬೆಂಗಳೂರಿನಲ್ಲಿ ಇಲೆಕ್ಟ್ರಿಕಲ್ ಕಂಟ್ರಾಕ್ಟರ್ ಆಗಿದ್ದು, ಇದೇ ವೇಳೆಗೆ ಪತ್ನಿ ಮತ್ತು ಮಗುವಿನ ಜೊತೆ ಊರಿಗೆ ಬಂದಿದ್ದರು. ಅನಿಲ್ ಬೆಂಗಳೂರಿಗೆ ತೆರಳಲು ರೈಲಿನಲ್ಲಿ ಟಿಕೆಟ್ ಮಾಡಿದ್ದು ಹೋಗುವುದಕ್ಕೆ ರೆಡಿಯಾಗಿದ್ದರು. ಇದೇ ವೇಳೆ, ಜೊತೆಯಾಗಿದ್ದ ನಾಗೇಂದ್ರ ಹೇಗೂ ಕಾರಿನಲ್ಲಿ ಒಬ್ಬನೇ ಹೋಗುತ್ತಿದ್ದೇನೆ. ಜೊತೆಗೆ ಬನ್ನಿ ಎಂದು ಅನಿಲ್ ದಂಪತಿಯನ್ನು ಕಾರಿನಲ್ಲಿ ಕರೆದೊಯ್ದಿದ್ದರು ಎಂದು ಕೋಡಿಯ ಕುಟುಂಬಸ್ಥರು ಹೇಳುತ್ತಿದ್ದಾರೆ. ಹೀಗಾಗಿ ಕೋಡಿಯಲ್ಲಿ ಈಗ ಕುಟುಂಬಸ್ಥರು ಶೋಕ ಸಾಗರದಲ್ಲಿ ಮುಳುಗಿದ್ದಾರೆ.
ನಿನ್ನೆ ಸಂಜೆ ವೇಳೆಗೆ ಅಪಘಾತ ನಡೆದಿದ್ದು, ನಾಗೇಂದ್ರ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಸಾವನ್ನಪ್ಪಿದ್ದರೆ, ಮೆಗ್ಗಾನ್ ಆಸ್ಪತ್ರೆಯಲ್ಲಿ ರಾತ್ರಿ ವೇಳೆಗೆ ದಂಪತಿ ಸಾವು ಕಂಡಿದ್ದರು. ಪೋಸ್ಟ್ ಮಾರ್ಟಂ ಬಳಿಕ ಇಂದು ಕುಂದಾಪುರಕ್ಕೆ ಮೃತದೇಹ ರವಾನೆಯಾಗಿದೆ. ತರೀಕೆರೆಯ ಲಕ್ಕವಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅತಿ ವೇಗದ ಚಾಲನೆ ಮೂವರ ಪ್ರಾಣವನ್ನು ಕಸಿದಿದೆ ಎನ್ನುವ ಮಾತನ್ನು ಜನರಾಡಿಕೊಳ್ಳುತ್ತಿದ್ದಾರೆ.
Three people from Kundapur, including a couple, died in a tragic accident that occurred at Rangenahalli of Tarikere in Chikkamagalur district on Saturday, January 9. The couple's young child survived.
26-10-25 07:33 pm
Bangalore Correspondent
ಪ್ರೀತಿ ನೆಪದಲ್ಲಿ ಹಿಂದು ಯುವತಿಗೆ ಮೋಸ ; ಮದುವೆಯಾಗಲ...
25-10-25 09:33 pm
ಸಾರ್ವಜನಿಕರೊಂದಿಗೆ ಮಾತನಾಡುವಾಗ ಒರಟು ಭಾಷೆ ಬೇಡ, ಯಾ...
25-10-25 09:04 pm
"ಎ" ಖಾತೆ ಪರಿವರ್ತಿಸುವ ಸರ್ಕಾರದ ಬೋಗಸ್ ಸ್ಕೀಂ ;...
25-10-25 09:00 pm
ಸಿಎಂ ಬದಲಾವಣೆ ಹೇಳಿಕೆಯ ಬಗ್ಗೆ ಯತೀಂದ್ರನನ್ನು ಕೇಳ್ದ...
24-10-25 09:35 pm
26-10-25 11:01 pm
HK News Desk
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
Vemuri Kaveri Travels Bus Accident, Fire, Ill...
25-10-25 02:28 pm
Kurnool Bus Fire, Accident, Latest News: ಹೈದರ...
24-10-25 05:43 pm
27-10-25 07:24 pm
Mangalore Correspondent
ಹೈಕಮಾಂಡ್ ತೀರ್ಮಾನ ಮಾಡಿದ್ರೆ ಐದು ವರ್ಷ ಸಿಎಂ ಆಗಿರು...
27-10-25 05:56 pm
ಮನವಿ ಕೊಡಲು ಬಂದವರನ್ನು ತಡೆದ ಪೊಲೀಸರು, ಬೆಳ್ತಂಗಡಿ...
27-10-25 04:36 pm
11 ದಿನಗಳಿಂದ ಅರಬ್ಬೀ ಸಮುದ್ರದಲ್ಲಿ ಸಿಕ್ಕಿಬಿದ್ದಿದ್...
26-10-25 04:42 pm
ಮುಸ್ಲಿಂ ಮಹಿಳೆಯರಿಗೆ ಅವಮಾನ ಆರೋಪ ; ಆರೆಸ್ಸೆಸ್ ಮುಖ...
26-10-25 02:12 pm
27-10-25 05:29 pm
HK News Desk
ದುಬೈನಲ್ಲಿ ಕುಳಿತು ಬೆಂಗಳೂರಿನ ಫೈನಾನ್ಸ್ ಕಂಪನಿಗೆ ಕ...
27-10-25 04:04 pm
ಶಬರಿಮಲೆಯಲ್ಲಿ ಕದ್ದ ಚಿನ್ನ ಬಳ್ಳಾರಿ ಜುವೆಲ್ಲರಿಗೆ ಮ...
25-10-25 10:00 pm
SP Arun, Puttur: ಗೋಸಾಗಾಟ ತಡೆದ ಪ್ರಕರಣ ; ಯಾವುದೇ...
25-10-25 02:14 pm
Surathkal Murder Attempt, Arrest, Crime; ಸುರತ...
24-10-25 08:20 pm