ಬ್ರೇಕಿಂಗ್ ನ್ಯೂಸ್
10-10-26 03:21 pm HK News Staffer ಕರಾವಳಿ
ಮಂಗಳೂರು, ಅ.10: ಪಿಲಿಕುಳ ನಿಸರ್ಗಧಾಮಕ್ಕೆ ಒಳಪಟ್ಟ ಭೂಮಿಯನ್ನು ಮುಸ್ಲಿಮರ ದಫನ ಕಾರ್ಯಕ್ಕೆಂದು ಜಿಲ್ಲಾಡಳಿತ ಮಂಜೂರು ಮಾಡಿರುವುದು ಹಿಂದು ಸಂಘಟನೆಗಳ ವಿರೋಧಕ್ಕೆ ಕಾರಣವಾಗಿದ್ದು ಅ.12ರಂದು ಮೂಡುಶೆಡ್ಡೆ ಗ್ರಾಮ ಪಂಚಾಯತ್ ಮುಂದೆ ಪ್ರತಿಭಟನೆಗೆ ಸಜ್ಜಾಗಿವೆ. ದೈವಸ್ಥಾನ, ಜೈನ ಬಸದಿ ಬಳಿಯಲ್ಲೇ ಮುಸ್ಲಿಮರ ದಫನ ಕಾರ್ಯಕ್ಕೆ ಭೂಮಿ ನೀಡಿರುವುದು ಹಿಂದುಗಳ ಭಾವನೆಗೆ ಧಕ್ಕೆಯಾಗಿಸಿದೆ ಎಂದು ಆರೋಪ ಕೇಳಿಬಂದಿದೆ.
ಮಂಗಳೂರು ಹೊರವಲಯದ ಮೂಡುಶೆಡ್ಡೆ ಗ್ರಾಮ ಪಂಚಾಯತ್ ಒಳಪಟ್ಟ ಬೊಟ್ಟ ಎಂಬಲ್ಲಿ ಮುಸ್ಲಿಂ ದಫನ ಕಾರ್ಯಕ್ಕೆ ಎರಡು ಎಕರೆಯಷ್ಟು ಭೂಮಿ ನೀಡಲಾಗಿದೆ. ಕಳೆದ 28 ವರ್ಷಗಳಿಂದ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಅಧೀನದಲ್ಲಿದ್ದ ಭೂಮಿಯನ್ನು ಎದ್ರುಪದವಿನ ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಹೆಸರಲ್ಲಿ ಹಸ್ತಾಂತರಿಸಲಾಗಿದೆ. ಮೂಡುಶೆಡ್ಡೆ ಗ್ರಾಮ ಪಂಚಾಯತ್ ಸಭೆಯಲ್ಲಿ ನಿರ್ಣಯ ಕೈಗೊಳ್ಳದೆ ಈ ಆದೇಶ ಮಾಡಿರುವುದು ಗ್ರಾಮಸ್ಥರ ವಿರೋಧಕ್ಕೆ ಕಾರಣವಾಗಿದೆ.


ಕಳೆದ ಜೂನ್ 20ರಂದು ಮಸೀದಿಗೆ ಜಾಗ ಹಸ್ತಾಂತರಿಸುವಂತೆ ಮಂಗಳೂರು ತಹಶೀಲ್ದಾರ್ ಆದೇಶ ಮಾಡಿದ್ದಾರೆ. ಆದರೆ ಸದ್ರಿ ಜಾಗ ಬೊಟ್ಟ ಮನೆತನದ ಧರ್ಮ ದೈವಗಳ ಸ್ಥಾನದ ಸಮೀಪವಿದ್ದು ಇಲ್ಲಿ ಶವಗಳ ದಫನ ನಡೆದರೆ ದೈವಗಳ ಆರಾಧನೆಗೆ ಭಂಗವಾಗುತ್ತದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಹಸೀಲ್ದಾರ್ ಈ ಆದೇಶ ವಾಪಸ್ ಪಡೆದು ಕಬರಸ್ಥಾನಕ್ಕೆ ಬೇರೆ ಕಡೆ ಜಾಗ ನೀಡುವಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಅಗ್ರಹಿಸಿದ್ದಾರೆ.
30 ವರ್ಷಗಳ ಹಿಂದೆ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಸಂದರ್ಭದಲ್ಲಿ ಸ್ಥಳೀಯ ಕೃಷಿಕರು ತಮ್ಮ ಕುಮ್ಕಿ ಭೂಮಿಯನ್ನು ಬಿಟ್ಟುಕೊಟ್ಟಿದ್ದರು. ಇದೀಗ ಏಕಾಏಕಿ ಪಿಲಿಕುಳದ ಅದೇ ಭೂಮಿಯನ್ನು ಸ್ಥಳೀಯವಾಗಿ ಮಸೀದಿ, ಮುಸ್ಲಿಮರ ಮನೆಗಳು ಇಲ್ಲದಿದ್ದರೂ, ಮುಸ್ಲಿಮರಿಗೆ ಹಸ್ತಾಂತರ ಮಾಡಿರುವುದು ಆಕ್ಷೇಪಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಸ್ಥಳದಲ್ಲಿದ್ದ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ನಾಮಫಲಕ ತೆರವು ಮಾಡಿದ್ದು ಅದರ ಬದಲಿಗೆ ಮದರಸಕ್ಕೆ ಸೇರಿದ ಜಾಗ ಎಂದು ಬೋರ್ಡ್ ಹಾಕಲಾಗಿದೆ. ಕಬರಸ್ಥಾನಕ್ಕೆ ಬೇರೆ ಜಾಗ ನೀಡುವಂತೆ ಮೂಡುಶೆಡ್ಡೆ ಗ್ರಾಮಸ್ಥರು ಅ.12ರಂದು ಬೃಹತ್ ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಹಿಂದೂ ಸಂರಕ್ಷಣಾ ಸಮಿತಿಯ ಹೆಸರಲ್ಲಿ ಮೂಡುಶೆಡ್ಡೆ ಚಲೋಗೆ ಕರೆ ನೀಡಲಾಗಿದೆ.
ಮಸೀದಿಗೇ ಸೇರಿತ್ತು ಜಾಗ..!
ಹಿಂದು ಸಂಘಟನೆಗಳ ಆಕ್ಷೇಪಕ್ಕೆ ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದರಸದ ಮಾಜಿ ಅಧ್ಯಕ್ಷ ಸೈಫುದ್ದೀನ್ ವಿರೋಧ ವ್ಯಕ್ತಪಡಿಸಿದ್ದು ಕಬರಸ್ಥಾನ ಉದ್ದೇಶಕ್ಕೆ ಜಿಲ್ಲಾಡಳಿತ ನೀಡಿರುವ ಜಮೀನು ಮಸೀದಿಗೆ ಸೇರಿದ್ದಾಗಿದ್ದು 1992 ರಲ್ಲೇ ಆ ಜಮೀನನ್ನು ಕಬರಸ್ಥಾನಕ್ಕೆ ನೀಡಲಾಗಿತ್ತು. 1993ರಲ್ಲಿ ಜಮೀನಿಗೆ ಆರ್ ಟಿ ಸಿ ಮಾಡಿದ್ದು 1994 ರಲ್ಲಿ ವಕ್ಫ್ ಹೆಸರಿಗೆ ರಿಜಿಸ್ಟರ್ ಮಾಡಲಾಗಿದೆ. ಅದೇ ಜಮೀನಿನಲ್ಲಿ ಹಿಂದೆಯೂ ಐದಾರು ದಫನ್ ಕಾರ್ಯಗಳನ್ನು ನಡೆಸಲಾಗಿದೆ. ನಂತರ ಆ ಜಮೀನನ್ನು ಪಿಲಿಕುಳಕ್ಕೆ ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಈ ವಿಚಾರವನ್ನು ಹಿಂದೆ ಬಂದು ಹೋದ ಹಲವು ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗಿತ್ತು. ಈಗ ಅದೇ ಹಿಂದಿನ ಜಮೀನನ್ನು ಮತ್ತೆ ಕಬರಸ್ಥಾನಕ್ಕೆ ಜಿಲ್ಲಾಡಳಿತ ನೀಡಿದೆ. ಇಲ್ಲಿ ದೇವಸ್ಥಾನ ಮತ್ತು ಮಸೀದಿಗೆ 500 ಮೀಟರ್ ಹೆಚ್ಚಿನ ಅಂತರ ಇದೆ. ಇಲ್ಲಿ ಯಾವುದೇ ರೀತಿಯಲ್ಲಿ ಹಿಂದೂ ಭಾವನೆಗಳಿಗೆ ಧಕ್ಕೆಯಾಗುತ್ತಿಲ್ಲ. ವಿನಾಕಾರಣ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
30-10-26 08:26 pm
HK News
ಸ್ಟಿಂಗ್ ಪ್ರಕರಣಕ್ಕೆ ಟ್ವಿಸ್ಟ್ ; ಕೇಂದ್ರ ಸಚಿವ ಕುಮ...
30-10-26 05:15 pm
ರಾಜ್ಯದ ಜನತೆಗೆ ಮತ್ತೆ ದರ ಏರಿಕೆ ಶಾಕ್ ; ನಂದಿನಿ ಹಾ...
29-10-26 08:21 pm
'ಮೈಸೂರು ಅರಮನೆ ಸರ್ಕಾರಕ್ಕೆ ಸೇರಿದ್ದು' ತನ್ನ ಹೇಳಿಕ...
28-10-26 10:52 pm
ವಿಧಾನ ಪರಿಷತ್ತಿನ ನಾಲ್ಕು ಸ್ಥಾನಕ್ಕೆ ಚುನಾವಣೆ ; ನಾ...
27-10-26 09:47 pm
29-10-26 09:28 pm
HK News Staffer
ಆಡಳಿತ ಬದಲಾವಣೆ ಉದ್ದೇಶದ ಹಿಂಸಾತ್ಮಕ ಪ್ರತಿಭಟನೆಗಳಲ್...
29-10-26 08:23 pm
'ಮೋದಿ ಅಪ್ಪನೂ ಜೈಲಿಗೆ ಹೋಗಬೇಕಾಗುತ್ತೆ!' ; ವಿವಾದಕ್...
25-10-26 09:40 pm
ಹಿಂದೂ ರಾಷ್ಟ್ರ ಎಂದರೆ ಮುಸ್ಲಿಮರನ್ನು ಹೊರಗಿಡುವುದಲ್...
21-10-26 04:21 pm
ಫ್ರಾನ್ಸ್, ಬಾಂಗ್ಲಾ ರೀತಿ ಭಾರತದಲ್ಲಿ ಆಗೋದು ಸಾಧ್ಯವ...
20-10-26 01:18 pm
03-11-26 11:41 am
HK News Staffer
ಸುರತ್ಕಲ್ ಪೊಲೀಸರ ಕಿರುಕುಳಕ್ಕೆ ಬೇಸತ್ತು ಮೀನುಗಾರ ಆ...
02-11-26 09:47 pm
ಆಳ ಸಮುದ್ರದಲ್ಲಿ ನೀರಿಗೆ ಬಿದ್ದು ಅಪಾಯಕ್ಕೀಡಾದ ಮೀನು...
02-11-26 05:34 pm
ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರಾಜ್ಯೋತ್ಸವ ; ಆರಿಫ್...
01-11-26 10:49 pm
ಮಂಗಳೂರಿನ ಮಂಜುಗಡ್ಡೆ ತಯಾರಿಕಾ ಘಟಕಕ್ಕೆ ಆಹಾರ ಸುರಕ್...
01-11-26 10:13 pm
03-11-26 10:44 am
HK News Staffer
15 ಲಕ್ಷ ಮೌಲ್ಯದ ಎಂಡಿಎಂಎ ಡ್ರಗ್ಸ್ ಸಮೇತ ಖತರ್ನಾಕ್...
02-11-26 09:48 pm
ಬೈಕಂಪಾಡಿಯಲ್ಲಿ ಲಾರಿ- ಸ್ಕೂಟರ್ ಡಿಕ್ಕಿ ; ಸವಾರ ತೀವ...
02-11-26 09:44 pm
ಕಾಪುವಿನ ಹೋಂಸ್ಟೇ ಮೇಲೆ ದುಷ್ಕರ್ಮಿಗಳ ದಾಳಿ: ಕಟ್ಟಡ...
02-11-26 11:31 am
ಪ್ರೀತಿಸುತ್ತಿದ್ದ ಯುವತಿಯ ಖಾಸಗಿ ಫೋಟೊ ಜಾಲತಾಣದಲ್ಲಿ...
01-11-26 04:08 pm