Sullia News: ಸುಳ್ಯ ; ತಡರಾತ್ರಿ ಮೀನು ಹಿಡಿಯಲು ಹೋಗಿದ್ದ ವೇಳೆ ವಿದ್ಯುತ್ ತಂತಿ ತುಳಿದು ಇಬ್ಬರು ಯುವಕರು ಸಾವು, ಹಂದಿಗೆ ಇಟ್ಟಿದ್ದ ಬೇಲಿಯಿಂದ ದುರಂತ ! 

13-10-26 02:54 pm       HK News Staffer   ಕರಾವಳಿ

ಮೀನು ಹಿಡಿಯಲು ಹೋಗಿದ್ದ ಸಂದರ್ಭದಲ್ಲಿ ಹಂದಿಗೆ ಇಟ್ಟಿದ್ದ ವಿದ್ಯುತ್ ತಂತಿಯನ್ನು ತುಳಿದು ಇಬ್ಬರು ಯುವಕರು ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಮದ ಬೊಮ್ಮೆಟ್ಟಿ ಎಂಬಲ್ಲಿ ನಡೆದಿದೆ. 

ಪುತ್ತೂರು, ಅ.13: ಮೀನು ಹಿಡಿಯಲು ಹೋಗಿದ್ದ ಸಂದರ್ಭದಲ್ಲಿ ಹಂದಿಗೆ ಇಟ್ಟಿದ್ದ ವಿದ್ಯುತ್ ತಂತಿಯನ್ನು ತುಳಿದು ಇಬ್ಬರು ಯುವಕರು ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಮದ ಬೊಮ್ಮೆಟ್ಟಿ ಎಂಬಲ್ಲಿ ನಡೆದಿದೆ. 

ಬೊಮ್ಮೆಟ್ಟಿ ನಿವಾಸಿ ಗಣೇಶ್ (38) ಮತ್ತು ಅವರ ಭಾವ ಬೆಳ್ತಂಗಡಿ ಮೂಲದ ಭರತ್(32)  ಮೃತಪಟ್ಟವರು. ಗಣೇಶ್ ಅವರ ಅಕ್ಕನ ಮಗ ಇನ್ನೊಬ್ಬ ಬಾಲಕ ಅಪಾಯದಿಂದ ಪಾರಾಗಿದ್ದಾನೆ. ಬಾಲಕನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಂಬಂಧಿಕರು ಬಂದಿದ್ದಾರೆಂದು ಸೋಮವಾರ ರಾತ್ರಿ ಮನೆ ಪಕ್ಕದ ತೋಡಿಗೆ ಮೀನು ಹಿಡಿಯಲು ಹೋಗಿದ್ದರು.‌  ಈ ವೇಳೆ, ಹಂದಿಗೆ ಹಾಕಿದ್ದ ವಿದ್ಯುತ್ ತಂತಿಯನ್ನು ತುಳಿದ ಇಬ್ಬರು ಕೂಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 

ಬೆಳ್ಳಾರೆ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿದ್ದು ಪರಿಶೀಲನೆ ನಡೆಸಿದ್ದಾರೆ. ತಂತಿ ಬೇಲಿಗೆ ನೇರವಾಗಿ ವಿದ್ಯುತ್ ಕೊಟ್ಟಿರುವುದು ಮಹಾಪರಾಧವಾಗಿದ್ದು ಪೊಲೀಸರು ಕ್ರಮ ಜರುಗಿಸುವ ಸಾಧ್ಯತೆಯಿದೆ. ವಿದ್ಯುತ್ ವೋಲ್ಟೇಜ್ ಕಡಿಮೆಗೊಳಿಸಿ ಅಥವಾ ಸೋಲಾರ್ ವಿದ್ಯುತ್ ಮಾತ್ರ ತಂತಿ ಬೇಲಿಗೆ ನೀಡಲು ಅವಕಾಶ ಇದೆ.