ಬ್ರೇಕಿಂಗ್ ನ್ಯೂಸ್
27-10-26 01:53 pm HK News Desk ಕರಾವಳಿ
ಮಂಗಳೂರು, ಅ.27 ಉದ್ಯೋಗ ನಿಮಿತ್ತ ಇಸ್ರೇಲ್ ತೆರಳಿದ್ದ ಮಂಗಳೂರಿನ ಯುವಕನೊಬ್ಬ ದಿಢೀರ್ ನಾಪತ್ತೆಯಾಗಿದ್ದು ಕುಟುಂಬಸ್ಥರು ತೀವ್ರ ಆತಂಕಿತರಾಗಿದ್ದಾರೆ.
ಶಕ್ತಿನಗರ ಕಾರ್ಮಿಕ ಕಾಲನಿ ನಿವಾಸಿ ಶೆಡ್ರೆಕ್ ಇಮಾನ್ವೆಲ್ (40) ನಾಪತ್ತೆಯಾದವರು. ಅ.16ರಂದು ಶುಕ್ರವಾರ ರಾತ್ರಿ ಮನೆಯವರ ಜೊತೆಗೆ ವಿಡಿಯೋ ಕರೆಯಲ್ಲಿ ಮಾತನಾಡುತ್ತಿದ್ದಾಗಲೇ ಕರೆ ಕಟ್ ಆಗಿತ್ತು. ಆನಂತರ, ಫೋನ್ ಕರೆಗೆ ಸಿಕ್ಕಿರಲಿಲ್ಲ. ಮರುದಿನವೂ ಫೋನ್ ಕರೆ ಸಿಗಲಿಲ್ಲ. ಹೀಗಾಗಿ ಆತಂಕಗೊಂಡ ಮನೆಯವರು ಅಲ್ಲಿನ ರೂಮ್ ಮೇಟ್ ಜೊತೆಗೆ ಮಾತನಾಡಿದಾಗ, ಕೆಲಸಕ್ಕೂ ಹೋಗಿಲ್ಲ. ರೂಮಿಗೂ ಬಂದಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಇಮಾನ್ಯುವೆಲ್ 2025ರ ಮೇ ತಿಂಗಳಲ್ಲಿ ಇಸ್ರೇಲ್ ತೆರಳಿದ್ದರು. ನಾಪತ್ತೆಯಾದ ಸಂದರ್ಭದಲ್ಲಿ ಬೆಡ್ ಶೆಪಾ ನಗರದ ಪಾರ್ಕ್ ಒಂದರಲ್ಲಿದ್ದರು. ಅಲ್ಲಿಂದ ಫೋನ್ ಕರೆಯಲ್ಲಿದ್ದಾಗಲೇ ನಾಪತ್ತೆಯಾಗಿದ್ದರು. ಮಾಧ್ಯಮದ ಜೊತೆಗೆ ಮಾತನಾಡಿದ ಶೆಡ್ರೆಕ್ ಅವರ ತಾಯಿ ರತ್ನಾ ಅವರು ತನ್ನ ಮಗ ಕಾಣೆಯಾದ ಬಗ್ಗೆ ಹೇಳಿಕೊಂಡು ಕಣ್ಣೀರು ಹಾಕಿದರು. ದಿನವೂ ಬೆಳಗ್ಗೆ, ಸಂಜೆ ಕರೆ ಮಾಡುತ್ತಿದ್ದ. ಶುಕ್ರವಾರ ರಾತ್ರಿ ಮಾತಾಡುತ್ತಿದ್ದಾಗಲೇ ಫೋನ್ ಕಟ್ ಆಯ್ತು. ಮರುದಿನ ಶನಿವಾರ 50 ಸಲ ಫೋನ್ ಮಾಡಿದೆ. ಫೋನ್ ಸಂಪರ್ಕಕ್ಕೆ ಸಿಕ್ಕಿಲ್ಲ. ಪರ್ಸನಲ್ ಸಮಸ್ಯೆ ಏನೂ ಇರಲಿಲ್ಲ. ನಾವು ಇಲ್ಲಿನ ಸಂಸದರು, ಕಮಿಷನರ್ ಜೊತೆಗೆ ಮಾತನಾಡಿ, ಸಹಾಯ ಕೇಳಿದ್ದೇವೆ. ಹೇಗಾದ್ರೂ ಮಾಡಿ ಮಗನನ್ನು ಹುಡುಕಿ ಕೊಡಿ ಎಂದರು.
ಶೆಡ್ರೆಕ್ ಪತ್ನಿ ದೈಜಿ ಮತ್ತು ಇಬ್ಬರು ಸಣ್ಣ ಮಕ್ಕಳನ್ನು ಹೊಂದಿದ್ದಾರೆ. ಅಕ್ಕ ಸವಿತಾ ಅವರು ಇಸ್ರೇಲ್ ನಲ್ಲಿರುವ ತನ್ನ ಸ್ನೇಹಿತರಲ್ಲಿ ಹೇಳಿ ಹುಡುಕಾಟ ಮಾಡಿಸಿದ್ದಾರೆ. ಆದರೂ ಎಲ್ಲಿದ್ದಾರೆಂದು ಪತ್ತೆಯಾಗಿಲ್ಲ. ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಸಂಸದ ಬ್ರಿಜೇಶ್ ಚೌಟ, ಇಸ್ರೇಲ್ ದೂತಾವಾಸಕ್ಕೆ ದೂರು ಸಲ್ಲಿಸಿದ್ದೇವೆ, ಅಲ್ಲಿ ಹುಡುಕಾಟ ನಡೆದಿದ್ದು ಶೀಘ್ರದಲ್ಲೇ ಪತ್ತೆಯಾಗುವ ವಿಶ್ವಾಸ ಇದೆ ಎಂದರು.
27-10-26 01:23 pm
HK News Desk
ದೇವೇಗೌಡ್ರ ಕುಟುಂಬವನ್ನು ಮುಗಿಸಲು ಡಿಕೆಶಿಯಿಂದ 600...
26-10-26 11:55 am
Rahul Gandhi, Siddaramaiah: ಸ್ಟಿಂಗ್ ಆಪರೇಶನ್ ;...
26-10-26 11:53 am
ಸ್ಟಿಂಗ್ ಆಪರೇಶನ್ ; ಕಾಂಗ್ರೆಸ್ ನಾಯಕಿ ಕೃಪಾ ಆಳ್ವಗೆ...
24-10-26 05:35 pm
Parvez dharwad: 40 ದಿನಗಳ ನಿಗೂಢತೆ ಅಂತ್ಯ ; ಡೆತ್...
24-10-26 12:22 pm
25-10-26 09:40 pm
HK News Staffer
ಹಿಂದೂ ರಾಷ್ಟ್ರ ಎಂದರೆ ಮುಸ್ಲಿಮರನ್ನು ಹೊರಗಿಡುವುದಲ್...
21-10-26 04:21 pm
ಫ್ರಾನ್ಸ್, ಬಾಂಗ್ಲಾ ರೀತಿ ಭಾರತದಲ್ಲಿ ಆಗೋದು ಸಾಧ್ಯವ...
20-10-26 01:18 pm
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಾವನ್...
20-10-26 12:41 pm
Annamalai: ತಮಿಳುನಾಡಿನಲ್ಲಿ ಚುನಾವಣಾ ಅಖಾಡಕ್ಕೆ ಅಣ...
14-10-26 04:59 pm
27-10-26 01:53 pm
HK News Desk
ಸೌಜನ್ಯ ಪ್ರಕರಣದ ಎಸ್ಐಟಿ ಮುಖ್ಯಸ್ಥರ ಬದಲಾವಣೆಗೆ ಪಟ್...
26-10-26 03:41 pm
ನವರಾತ್ರಿಗೆ ಯಕ್ಷವೇಷ ಧರಿಸಿ ಗಳಿಸಿದ 2 ಲಕ್ಷ ದೇಣಿಗೆ...
25-10-26 10:26 pm
ಸ್ಟಿಂಗ್ ರಾಜಕೀಯ, ಸಿಎಂ ಬದಲಾವಣೆ ಕಾಂಗ್ರೆಸಿಗೆ ಹಿನ್...
25-10-26 08:25 pm
ಯುಪಿಐ ಮೇಲಿನ ತೆರಿಗೆ ಪ್ರಸ್ತಾಪಕ್ಕೆ ಅಣ್ಣಾಮಲೈ ವಿರೋ...
24-10-26 10:59 pm
26-10-26 09:22 pm
HK News Staffer
ಸಿಎಂ ಡಿಕೆಶಿ ಬಗ್ಗೆ ಲಘು ಹೇಳಿಕೆ ; ನಟ ಧನ್ವೀರ್ ವಿರ...
26-10-26 02:59 pm
Gurudas Shenoy: ಕೋಟದಲ್ಲಿ ಭೀಕರ ಅಪಘಾತ ; ಸೈಕಲ್ ನ...
26-10-26 12:49 pm
ಬೀದರಿನಲ್ಲಿ ಮತ್ತೊಂದು ಎಟಿಎಂ ಕತ್ತರಿಸಿ 23 ಲಕ್ಷ ದರ...
25-10-26 04:33 pm
ಐಷಾರಾಮಿ ಜೀವನಕ್ಕಾಗಿ ಹದಿಹರೆಯದ ಯುವಕರ ದುಷ್ಕೃತ್ಯ ;...
25-10-26 02:49 pm