ಬ್ರೇಕಿಂಗ್ ನ್ಯೂಸ್
12-01-21 01:59 pm Mangalore Correspondent ಕರಾವಳಿ
ಉಳ್ಳಾಲ, ಜ.12 : ಸೋಮೇಶ್ವರ ಕಡಲ ತೀರಕ್ಕೆ ಇಬ್ಬರು ಗೆಳತಿಯರೊಂದಿಗೆ ವಿಹಾರಕ್ಕೆ ಬಂದಿದ್ದ ಯುವತಿಯೋರ್ವಳು ಸಮುದ್ರಕ್ಕಿಳಿದು ನೀರಾಟ ಆಡುತ್ತಿದ್ದ ವೇಳೆ ಅಪಾಯಕ್ಕೀಡಾಗಿದ್ದು ಸ್ಥಳದಲ್ಲಿದ್ದ ಕರಾವಳಿ ಕಾವಲು ಪಡೆ ಸಿಬ್ಬಂದಿ ರಕ್ಷಿಸಿದ್ದಾರೆ.
ನೀರು ಪಾಲಾಗುತ್ತಿದ್ದ ವೇಳೆ ಸ್ಥಳದಲ್ಲಿದ್ದ ಕರಾವಳಿ ಕಾವಲು ಪಡೆಯ ಜೀವರಕ್ಷಕ ಸಿಬ್ಬಂದಿಗಳಾದ ಅಶೋಕ್ ಸೋಮೇಶ್ವರ ಮತ್ತು ತಂಡದವರು ಆಕೆಯನ್ನು ರಕ್ಷಿಸಿ, ನೀರಿನಿಂದ ಮೇಲಕ್ಕೆ ಎಳೆದು ತಂದಿದ್ದಾರೆ.

ಬೆಂಗಳೂರು ಬೊಮ್ಮ ಸಂದ್ರ ನಿವಾಸಿ ಕೀರ್ತಿ ರಕ್ಷಿಸಲ್ಪಟ್ಟ ಯುವತಿ. ಬೆಂಗಳೂರಿನ ಸ್ನೇಹಿತೆಯರಾದ ತಿಪ್ಪಸಂದ್ರ ನಿವಾಸಿ ಜಯಶ್ರೀ ಮತ್ತು ಇಂದಿರಾನಗರ ನಿವಾಸಿ ಕ್ರಿಯಾ ಜೊತೆ ಸೋಮೇಶ್ವರ ಕಡಲ ತೀರಕ್ಕೆ ಕ್ಯಾಬ್ ಒಂದರಲ್ಲಿ ವಿಹಾರಕ್ಕೆ ಬಂದಿದ್ದರು. ಕೀರ್ತಿ ಸಮುದ್ರಕ್ಕಿಳಿದ್ದು ಆಟವಾಡುತ್ತಿದ್ದ ವೇಳೆ ಬೃಹತ್ ಅಲೆಯೊಂದು ಆಕೆಯನ್ನು ಕೊಚ್ಚಿಕೊಂಡು ಹೋಗಿದೆ.

ಈ ವೇಳೆ ಸ್ಥಳದಲ್ಲಿ ಕರಾವಳಿ ಕಾವಲು ಪಡೆಯ ಸಿಬ್ಬಂದಿ ಜೀವರಕ್ಷಕರಾದ ಅಶೋಕ್ ಸೋಮೇಶ್ವರ, ಕಿರಣ್ ಆಂಟನಿ ಮತ್ತು ಶಿವಪ್ರಸಾದ್ ಅವರು ಸಮವಸ್ತ್ರದಲ್ಲೇ ನೀರಿಗೆ ಧುಮುಕಿ ಕೀರ್ತಿಯನ್ನು ಸಮುದ್ರದಿಂದ ರಕ್ಷಿಸಿ ದಡಕ್ಕೆ ಎಳೆದಿದ್ದಾರೆ. ತೀವ್ರ ಅಸ್ವಸ್ಥಗೊಂಡಿದ್ದ ಕೀರ್ತಿಗೆ ಜೀವರಕ್ಷಕರು ಸೇರಿ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿದ್ದು, ಕೀರ್ತಿ ಚೇತರಿಸಿದ್ದಾರೆ.
ಬೆಂಗಳೂರಿನ ಯುವತಿಯರು ಸುರತ್ಕಲ್ ನಲ್ಲಿ ತಂಗಿದ್ದು ಬಂದ ಕಾರಲ್ಲೇ ಅಲ್ಲಿಗೆ ತೆರಳಿದ್ದಾರೆ.
Karavali Kavalu Pade two personals rescue Girl from drowning in someshwar beach who had come to play with her friends. The girl is a native of Bengaluru.
24-06-26 05:55 pm
HK News Staffer
ಅಡ್ಡ ಮತದಾನ ; ರಾಜ್ಯ ನಾಯಕತ್ವದ ನಿರ್ಲಕ್ಷ್ಯವೇ ಕಾರಣ...
23-06-26 05:58 pm
ಅಡ್ಡ ಮತದಾನ; ಧರ್ಮಸ್ಥಳದಲ್ಲಿ ಶಾಸಕರು ಬಂದು ಆಣೆ ಮಾಡ...
22-06-26 08:18 pm
ವಿಧಾನ ಪರಿಷತ್ ಚುನಾವಣೆಗೂ ಮುನ್ನ ರಹಸ್ಯ ಸಭೆ ; ಬಿಜೆ...
22-06-26 03:44 pm
ಆಸ್ಪತ್ರೆ ಸಿಬ್ಬಂದಿ ಸ್ಪಂದಿಸದಿದ್ದರೆ ಚಿಂತೆ ಬೇಡ ;...
22-06-26 12:51 pm
25-06-26 12:13 pm
HK News Staffer
ಕೂಲ್ ಸಿಟಿ ಯುರೋಪಿನಲ್ಲೀಗ ಬಿಸಿಲ ಹೊಡೆತ ; ಫ್ರಾನ್ಸ್...
24-06-26 01:51 pm
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
ಟಿಎಂಸಿಯಲ್ಲಿ ರಾಜಕೀಯ ಭೂಕಂಪ ; ಮಮತಾ ಬ್ಯಾನರ್ಜಿ ಅಧ...
23-06-26 12:21 pm
ಕತಾರ್ ಕೈಗಾರಿಕಾ ಪ್ರದೇಶದಲ್ಲಿ ಭಾರೀ ಸ್ಫೋಟ ; 54 ಜನ...
22-06-26 12:55 pm
25-06-26 02:39 pm
HK News Staffer
ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ನಿಧನ; ‘ಸಮಾಜ ಕಳೆ...
23-06-26 06:02 pm
ಬಸ್ ಚಲಿಸುತ್ತಿದ್ದಾಗಲೇ ಬಿಪಿ ಲೋ ಆಗಿ ಕುಸಿದ ಚಾಲಕ !...
23-06-26 03:18 pm
ಮುಸ್ಲಿಮರಿಗೆ ಸಚಿವ ಸ್ಥಾನ ; ಕಾಂಗ್ರೆಸಿಗೆ ಓಟ್ ಹಾಕದ...
23-06-26 11:49 am
ಉಡುಪಿ ಕೋರ್ಟ್ಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ; ಕೆ...
22-06-26 05:23 pm
25-06-26 01:00 pm
HK News Staffer
ಹಸೆಮಣೆ ಏರಬೇಕಿದ್ದವಳೇ ಭಾವಿ ಪತಿಯನ್ನು ಫೋಟೊ ಶೂಟ್ ನ...
24-06-26 09:28 pm
30 ಲಕ್ಷ ಸಾಲ, ಲಿವ್-ಇನ್ ಸಂಬಂಧಕ್ಕೆ ಪೋಷಕರ ವಿರೋಧ ;...
24-06-26 08:53 pm
ರಾಮ ಮಂದಿರವನ್ನ ಸ್ಫೋಟಿಸಲು ಪ್ಲಾನ್ ಮಾಡಿದ್ವಿ ! ;...
24-06-26 07:53 pm
ಅಯೋಧ್ಯೆ ರಾಮ ಮಂದಿರ ಹೆಸರಲ್ಲಿ ದೇಣಿಗೆ ; 200 ಕೋಟಿ...
24-06-26 05:57 pm