ಬ್ರೇಕಿಂಗ್ ನ್ಯೂಸ್
12-01-21 04:18 pm Mangalore Correspondent ಕರಾವಳಿ
ಮಂಗಳೂರು, ಜ.12: ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯ ಮಂದಿರ ನಿರ್ಮಾಣಕ್ಕಾಗಿ ಸಮಸ್ತ ಹಿಂದು ಸಮಾಜದಿಂದ ಧನ ಸಂಗ್ರಹಕ್ಕೆ ವಿಶ್ವ ಹಿಂದು ಪರಿಷತ್ ನಿಶ್ಚಿಯಿಸಿದೆ. ರಾಮನ ಮಂದಿರ ರಾಷ್ಟ್ರ ಮಂದಿರವಾಗಬೇಕು. ಯಾರದೋ ದುಡ್ಡಿನಲ್ಲಿ ಮಂದಿರ ನಿರ್ಮಾಣವಾಗದೆ ಮಂದಿರಕ್ಕಾಗಿ ಹಾರೈಸಿದ ಕೋಟ್ಯಂತರ ಜನರ ನಿಧಿಯಿಂದಲೇ ಮಂದಿರದ ಕಟ್ಟಡ ತಲೆಯೆತ್ತಬೇಕು ಎಂಬ ಸದಾಶಯ ಇದೆ. ಹೀಗಾಗಿ ಮಂಗಳೂರು ವಿಭಾಗದಲ್ಲಿ ಜನವರಿ 15ರಿಂದ ಫೆಬ್ರವರಿ 5ರ ತನಕ ಕಾರ್ಯಕರ್ತರ ಪ್ರತಿ ಮನೆಗೆ ಭೇಟಿ ನೀಡಿ, ನಿಧಿ ಸಂಗ್ರಹ ಮಾಡಲಿದ್ದಾರೆ ಎಂದು ವಿಹಿಂಪ ಪ್ರಾಂತ ಕಾರ್ಯಾಧ್ಯಕ್ಷ ಎಂ.ಬಿ.ಪುರಾಣಿಕ್ ಹೇಳಿದರು.
ಮಂಗಳೂರಿನ ಕದ್ರಿಯಲ್ಲಿರುವ ವಿಹಿಂಪ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿದ ಪುರಾಣಿಕ್, ಸುದೀರ್ಘ ಹೋರಾಟದ ಬಳಿಕ ಅಯೋಧ್ಯೆಯೇ ಶ್ರೀರಾಮನ ಜನ್ಮಸ್ಥಾನವೆಂದು ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟಿದೆ. ಮಂದಿರದ ನಿರ್ಮಾಣಕ್ಕಾಗಿ ನಿಧಿ ಸಂಗ್ರಹ ಮಾಡಲು ಮಂಗಳೂರು ವಿಭಾಗದ ಕಾಸರಗೋಡು, ಕೊಡಗು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಾವಿರಾರು ಕಾರ್ಯಕರ್ತರನ್ನು ನಿಯೋಜಿಸಲಾಗಿದ್ದು, ಮನೆ ಮನೆಗೆ ಬಂದಾಗ ನಿಧಿಸಂಗ್ರಹಕ್ಕೆ ಕೈಜೋಡಿಸಬೇಕು ಎಂದು ವಿನಂತಿ ಮಾಡಿದರು.
ಇದೇ ವೇಳೆ ಮಾತನಾಡಿದ ವಿಹಿಂಪ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್, ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟ ಬಳಿಕ ಕೇಂದ್ರ ಸರಕಾರ ಮತ್ತು ಉತ್ತರ ಪ್ರದೇಶದ ಸರಕಾರಗಳು ಪೂರ್ತಿ ತಮ್ಮ ಖರ್ಚಿನಲ್ಲೇ ಮಂದಿರ ನಿರ್ಮಿಸುವ ಪ್ರಸ್ತಾಪ ಇಟ್ಟಿದ್ದವು. ಅಲ್ಲದೆ, ಎಲ್ ಅಂಡ್ ಟೀ ಕಂಪನಿ ಕೂಡ, ಮಂದಿರವನ್ನು ತಾವೇ ನಿರ್ಮಿಸಿಕೊಡುವ ಇರಾದೆ ವ್ಯಕ್ತಪಡಿಸಿತ್ತು. ಆದರೆ, ಅಯೋಧ್ಯೆಯಲ್ಲಿ ಸೇರಿದ ಹಿಂದು ಸಮಾಜದ ಸಾಧು ಸಂತರು ಶ್ರೀರಾಮನ ಜನ್ಮಸ್ಥಾನದಲ್ಲಿ ನಿರ್ಮಾಣಗೊಳ್ಳುವ ಮಂದಿರ ರಾಷ್ಟ್ರ ಮಂದಿರವಾಗಬೇಕು. ಸರಕಾರವೋ, ಇನ್ನಿತರ ಕಂಪನಿಗಳ ದುಡ್ಡಿನಲ್ಲಿ ಮಂದಿರ ನಿರ್ಮಾಣ ಬೇಡ. ಈ ದೇಶದ ಸಮಸ್ತ ಹಿಂದು ಸಮಾಜವೇ ಸೇರಿ ನಿಧಿ ಸಂಗ್ರಹಿಸಿ ಮಂದಿರ ನಿರ್ಮಿಸಬೇಕೆಂದು ನಿರ್ಧಾರ ಕೈಗೊಂಡರು. ಈ ಹಿನ್ನೆಲೆಯಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಹೆಸರಲ್ಲಿ ದೇಶಾದ್ಯಂತ ನಿಧಿ ಸಂಗ್ರಹ ನಡೆಯಲಿದೆ ಎಂದರು.
ಮಂಗಳೂರು ವಿಭಾಗದ ನಗರ, ವಾರ್ಡ್ ಮಟ್ಟದಲ್ಲಿ ಸುಮಾರು 4 ಸಾವಿರ ಬೂತ್ ಸಮಿತಿಗಳು ರಚನೆಯಾಗಿದ್ದು, ಪ್ರತಿ ಬೂತ್ ನಲ್ಲಿ 5 ಕಾರ್ಯಕರ್ತರ ತಂಡಗಳು ಇರಲಿವೆ. ಕಾರ್ಯಕರ್ತರು ಆಯಾ ಭಾಗದಲ್ಲಿ ಪ್ರತಿ ಮನೆಗೆ ಭೇಟಿ ನೀಡಿ, ನಿಧಿ ಸಂಗ್ರಹ ಮಾಡಲಿದ್ದಾರೆ. ಆಯಾ ದಿನದ ಸಂಗ್ರಹವನ್ನು ಅದೇ ದಿನವೇ ತೀರ್ಥ ಕ್ಷೇತ್ರ ಟ್ರಸ್ಟಿನ ಬ್ಯಾಂಕ್ ಖಾತೆಗಳಿಗೆ ತುಂಬಲಿದ್ದಾರೆ. ರೂ.10, ರೂ.100, ರೂ. ಒಂದು ಸಾವಿರದ ಮುದ್ರಿತ ಕೂಪನ್ ಗಳ ಮೂಲಕ ಧನ ಸಂಗ್ರಹ ನಡೆಯಲಿದೆ. 2000 ಅಥವಾ ಅದಕ್ಕಿಂತ ಹೆಚ್ಚು ಮೊತ್ತವನ್ನು ನೀಡುವ ಭಕ್ತರಿಗೆ ಟ್ರಸ್ಟ್ ಹೆಸರಿನಲ್ಲಿ ರಶೀದಿ ನೀಡಲಾಗುವುದು. ಹೆಚ್ಚಿನ ಮೊತ್ತ ನೀಡಿದವರಿಗೆ ಆದಾಯ ತೆರಿಗೆ ಕಾಯ್ದೆಯಡಿ 80 ಜಿ ಸೆಕ್ಷನ್ ಪ್ರಕಾರ ತೆರಿಗೆ ವಿನಾಯ್ತಿ ಸಿಗಲಿದೆ ಎಂದರು. ಮಂಗಳೂರು ವಿಭಾಗದಲ್ಲಿ ಸುಮಾರು 25 ಕೋಟಿ ರೂಪಾಯಿ ಸಂಗ್ರಹಿಸುವ ಗುರಿಯಿದೆ. ಈಗಾಗಲೇ 250ಕ್ಕೂ ಹೆಚ್ಚು ಜನ ತಲಾ ಒಂದು ಲಕ್ಷದಂತೆ ನೀಡುವುದಾಗಿ ಹೇಳಿದ್ದಾರೆ. ಅದಕ್ಕೂ ಹೆಚ್ಚು ನೀಡುವ ಮಂದಿಯೂ ಇದ್ದಾರೆ. ದೊಡ್ಡ ಮೊತ್ತದ ನಿಧಿ ಸಂಗ್ರಹಕ್ಕೆ ಪ್ರತ್ಯೇಕ ಕಮಿಟಿ ಇರಲಿದೆ ಎಂದು ಶರಣ್ ಪಂಪ್ ವೆಲ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವಿಹಿಂಪ ಪ್ರಾಂತ ಸಂಹ ಕಾರ್ಯದರ್ಶಿ ಕೃಷ್ಣಮೂರ್ತಿ, ಜಿಲ್ಲಾಧ್ಯಕ್ಷ ಗೋಪಾಲ ಕುತ್ತಾರ್, ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್, ವಿಭಾಗ ಸಂಚಾಲಕ ಭುಜಂಗ ಕುಲಾಲ್ ಇದ್ದರು.
Vishwa Hindu Parishad will hold a campaign to raise funds for the construction of Ram Mandir at Ayodhya from January 15 to February 5, informed regional co-secretary Krishna Murthy.
25-11-24 05:51 pm
Bangalore Correspondent
ಮನೆಯೊಂದು ಮೂರು ಬಾಗಿಲು, ಗೆಲುವು ಕಸಿದ ಬಿಜೆಪಿ ಒಳಜಗ...
25-11-24 03:28 pm
Bjp, D K Shivakumar : ಚನ್ನಪಟ್ಟಣ ಗೆಲ್ಲಲು ಬಿಜೆಪ...
24-11-24 08:39 pm
CM Siddaramaiah, BJP, Congress ಆರ್. ಅಶೋಕ್ ಕಾ...
23-11-24 07:43 pm
B Y Vijayendra, DK Shivkumar: ವಿಜಯೇಂದ್ರಗೆ ತೀವ...
23-11-24 02:15 pm
23-11-24 11:07 pm
HK News Desk
ಬಿಜೆಪಿ ‘ಗ್ಯಾರಂಟಿ’ಗೆ ಕೈಹಿಡಿಯದ ಜಾರ್ಖಂಡ್ ಮತದಾರ,...
23-11-24 05:34 pm
ಮಹಾರಾಷ್ಟ್ರದಲ್ಲಿ ಕೇಸರಿ ಕಮಾಲ್ ; ನಿರೀಕ್ಷೆಗೂ ಮೀರಿ...
23-11-24 04:33 pm
ಭಾರೀ ವಿವಾದ ಸೃಷ್ಟಿಸಿದ್ದ 'ಎಮರ್ಜೆನ್ಸಿ' ಚಿತ್ರ ಬಿಡ...
18-11-24 03:54 pm
ಶ್ರದ್ಧಾ ವಾಳ್ಕರ್ ಹತ್ಯೆಗೆ ಸೇಡು ತೀರಿಸಲು ಬಿಷ್ಣೋಯಿ...
18-11-24 01:09 pm
25-11-24 02:44 pm
Mangalore Correspondent
Kukke Subrahmanya Temple, Mangalore: ನ.27ರಿಂದ...
24-11-24 09:13 pm
Hariprasad, Mangalore, Congress: ಮಹಾರಾಷ್ಟ್ರದಲ...
24-11-24 05:16 pm
Naxal Vikram Gowda, Murdeshwar, Mangalore: ಪೊ...
24-11-24 03:21 pm
Mangalore, Someshwara Suicide; ಸೋಮೇಶ್ವರ ರುದ್ರ...
24-11-24 01:18 pm
25-11-24 06:17 pm
HK News Desk
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm
Rowdy sheeter Dawood, Mangalore Crime, Police...
23-11-24 10:49 am
ಟ್ರಾಯ್ ಕಂಪನಿ ಸೋಗಿನಲ್ಲಿ ಕರೆ ; ಅಮೆರಿಕಾದ ಸಾಫ್ಟ್...
22-11-24 10:47 pm
Mangalore crime, Sexual Harrasment, Police: ಮ...
22-11-24 09:37 pm