ಬ್ರೇಕಿಂಗ್ ನ್ಯೂಸ್
16-01-21 01:05 pm Udupi Correspondent ಕರಾವಳಿ
ಉಡುಪಿ, ಜ.16: ದೈತ್ಯ ವೇಷಗಳನ್ನು ಧರಿಸಿ, ಅಸಹಾಯಕ ಮಕ್ಕಳಿಗಾಗಿ ನಿಧಿ ಸಂಗ್ರಹಿಸಿ ಹೆಸರಾಗಿದ್ದ ಸಮಾಜ ಸೇವಕ ರವಿ ಕಡಪಾಡಿಯವರು ಇದೀಗ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ 25 ಲಕ್ಷ ರೂ. ಗೆದ್ದುಕೊಂಡಿದ್ದಾರೆ. ಅಲ್ಲದೆ ಆ ಮೊತ್ತವನ್ನೂ ಸಮಾಜ ಸೇವೆಗೆ ಮೀಸಲಿಟ್ಟಿದ್ದಾರೆ.
ಶುಕ್ರವಾರ ರಾತ್ರಿ ಪ್ರಸಾರವಾದ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದ ಕರ್ಮವೀರ್ ಸ್ಪೆಷಲ್ ಎಪಿಸೋಡ್ ವಿಭಾಗದಲ್ಲಿ ರವಿ ಕಟಪಾಡಿ ಭಾಗವಹಿಸಿದ್ದರು. ಅವರ ಜೊತೆ ಇನ್ನೊಬ್ಬ ಸಮಾಜಸೇವಕ ಅಂಬಾ ಬೆಹಾನ್ ಕೂಡ ಭಾಗವಹಿಸಿದ್ದು, ಜಂಟಿಯಾಗಿ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
ಆರಂಭಿಕ ಏಳು ಪ್ರಶ್ನೆಗಳಿಗೆ ರವಿಯವರು ಉತ್ತರಿಸಿದರೆ, ನಂತರದ ಪ್ರಶ್ನೆಗಳಿಗೆ ಅಂಬಾ ಉತ್ತರ ನೀಡಿದರು. ಹಿರಿಯ ನಟ ಅನುಪಮ್ ಖೇರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಸಹಕರಿಸಿದರು.
ರವಿ ಕಡಪಾಡಿಯವರು ಕಳೆದ ಆರು ವರ್ಷಗಳಿಂದ ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ದೈತ್ಯ ವೇಷಗಳನ್ನು ಹಾಕಿ, ಜನರನ್ನು ರಂಜಿಸುವುದಲ್ಲದೆ ಅದರಿಂದ ಬಂದ ನಿಧಿಯನ್ನು ಬಡ ಮಕ್ಕಳಿಗಾಗಿ ವಿನಿಯೋಗಿಸುತ್ತಿದ್ದರು. ರವಿಯವರ ಮಾನವೀಯ ಸೇವೆಯನ್ನು ಗುರುತಿಸಿ, ಹಿಂದಿ ವಾಹಿನಿ ಜನಪ್ರಿಯ ಕಾರ್ಯಕ್ರಮದಲ್ಲಿ ಅವಕಾಶ ನೀಡಿತ್ತು.
ದೈತ್ಯ ವೇಷಗಳನ್ನು ಹಾಕಿ, ಮಕ್ಕಳ ಕಲ್ಯಾಣಕ್ಕಾಗಿ ಸಮಾಜ ಸೇವೆ ಮಾಡುವ ರವಿ ಕಟಪಾಡಿಯವರನ್ನು ಕಾರ್ಯಕ್ರಮದಲ್ಲಿ ಪ್ರಶಂಸಿಸಿದ ಅಮಿತಾಬ್ ಬಚ್ಚನ್, ದರಿಯಾ ದಿಲ್ ದಾನವ್ ಬಿರುದು ನೀಡುವುದಾಗಿ ಘೋಷಿಸಿದ್ದು ವಿಶೇಷವಾಗಿತ್ತು.
Social worker Ravi Katapadi from Udupi wins 25 Lakhs on ‘Karamveer Special’ episode of popular Hindi game show ‘Kaun Banega Crorepati’ (KBC).
10-05-25 12:40 pm
Bangalore Correspondent
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
10-05-25 07:25 pm
HK News Desk
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
ಯುದ್ಧ ಸಮಸ್ಯೆಗೆ ಪರಿಹಾರ ಅಲ್ಲ, ಮಾತುಕತೆಯಿಂದ ಬಗೆಹರ...
09-05-25 06:49 pm
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm